ಸ್ಮಾರ್ಟ್ ಫೀಚರ್ ಹೊಂದಿರುವ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಇವೆ ಇಂಡಿಯಾ

ಇವೆ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಆಟ್ರಿಯೊ ಹಾಗೂ ಅಹಾವಾ ಎಂಬ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ. ಆಟ್ರಿಯೊ ಸ್ಕೂಟರ್‌ ಪೂರ್ತಿಯಾಗಿ ಚಾರ್ಜ್ ಆದ ನಂತರ 90ರಿಂದ 100 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಇವೆ ಕಂಪನಿ ಹೇಳಿದೆ.

ಸ್ಮಾರ್ಟ್ ಫೀಚರ್ ಹೊಂದಿರುವ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಇವೆ ಇಂಡಿಯಾ

ಇನ್ನು ಅಹಾವಾ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 60ರಿಂದ 70 ಕಿ.ಮೀಗಳವರೆಗೆ ಚಲಿಸುತ್ತದೆ. ಇವೆ ಆಟ್ರಿಯೊ ಸ್ಕೂಟರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.64,900ಗಳಾಗಿದ್ದರೆ, ಅಹಾವಾ ಸ್ಕೂಟರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.55,900ಗಳಾಗಿದೆ. ಕಂಪನಿಯು ಆಧುನಿಕ ಫೀಚರ್ ಗಳೊಂದಿಗೆ ಈ ಎರಡೂ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ.

ಸ್ಮಾರ್ಟ್ ಫೀಚರ್ ಹೊಂದಿರುವ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಇವೆ ಇಂಡಿಯಾ

ಈ ಎರಡೂ ಸ್ಕೂಟರ್‌ಗಳು ಬ್ಯಾಟರಿಯ ಮೇಲೆ 1 ವರ್ಷದ ವಾರಂಟಿ ಜೊತೆಗೆ ಕಸ್ಟಮರ್ ಸರ್ಪೋರ್ಟ್ ಗಾಗಿ 5 ವರ್ಷಗಳ ವಾರಂಟಿಯನ್ನು ಹೊಂದಿವೆ. ಇವೆ ಆಟ್ರಿಯೊ ಸ್ಕೂಟರಿನಲ್ಲಿ ಜಿಯೋ ಟ್ಯಾಗಿಂಗ್, ಫೆನ್ಸಿಂಗ್, ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್, ರಿಮೋಟ್ ಲಾಕಿಂಗ್‌ನಂತಹ ಹಲವು ಸ್ಮಾರ್ಟ್ ಫೀಚರ್ ಗಳನ್ನು ನೀಡಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸ್ಮಾರ್ಟ್ ಫೀಚರ್ ಹೊಂದಿರುವ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಇವೆ ಇಂಡಿಯಾ

ಇವೆ ಕಂಪನಿಯ ಪ್ರಕಾರ ಈ ಸ್ಕೂಟರ್ ಚಲಾಯಿಸಲು ಒಂದು ಕಿ.ಮೀಗೆ ಕೇವಲ 15 ಪೈಸೆ ವೆಚ್ಚವಾಗುತ್ತದೆ. ಈ ಸ್ಕೂಟರ್ ಪರಿಸರ ಸ್ನೇಹ ಮಾತ್ರವಲ್ಲದೇ ಇಂಧನಕ್ಕಾಗಿ ಖರ್ಚು ಮಾಡಿದ ಹಣವನ್ನು ಸಹ ಉಳಿಸುತ್ತದೆ.

ಸ್ಮಾರ್ಟ್ ಫೀಚರ್ ಹೊಂದಿರುವ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಇವೆ ಇಂಡಿಯಾ

ಕಂಪನಿಯು ಈ ಸ್ಕೂಟರ್‌ಗಳ ಖರೀದಿಗೆ ಸುಲಭವಾದ ಹಣಕಾಸು ಆಯ್ಕೆಗಳನ್ನು ಪರಿಚಯಿಸಿದೆ. ಆಟ್ರಿಯೊ ಮಾದರಿಯನ್ನು ಡ್ಯುಯಲ್ ಟೋನ್ ಬ್ಲಾಕ್, ರೆಡ್ ಹಾಗೂ ಮೊನೊಟೋನ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸ್ಮಾರ್ಟ್ ಫೀಚರ್ ಹೊಂದಿರುವ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಇವೆ ಇಂಡಿಯಾ

ಅಹಾವಾ ಸ್ಕೂಟರಿನಲ್ಲಿ 250 ವ್ಯಾಟ್ ನ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ. ಈ ಮಾದರಿಯಲ್ಲಿ ಕಂಪನಿಯು ಎಲ್ಲಾ ರೀತಿಯ ಸ್ಮಾರ್ಟ್ ಫೀಚರ್ ಗಳನ್ನು ಅಳವಡಿಸಿದೆ. ಈ ಸ್ಕೂಟರ್ ಅನ್ನು ಬ್ಲೂ ಬ್ಲಾಕ್ ಹಾಗೂ ರೆಡ್ ಬ್ಲಾಕ್ ಎಂಬ ಎರಡು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಸ್ಮಾರ್ಟ್ ಫೀಚರ್ ಹೊಂದಿರುವ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಇವೆ ಇಂಡಿಯಾ

ಕಂಪನಿಯು ದೇಶಾದ್ಯಂತ 52 ಮಾರಾಟಗಾರರನ್ನು ಹೊಂದಿದ್ದು, ಮುಂದಿನ ವರ್ಷ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಜನರಿಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಗಳ ಖರೀದಿಯನ್ನು ಸುಲಭವಾಗಿಸಲು ಇವೆ ಇಂಡಿಯಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಾಲಿತ ಇಎಂಐ ಹಣಕಾಸು ಸಂಸ್ಥೆಯಾದ ಜೆಸ್ಟ್‌ಮನಿ ಜೊತೆಗೆ ಪಾಲುದಾರಿಕೆಯನ್ನು ಹೊಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸ್ಮಾರ್ಟ್ ಫೀಚರ್ ಹೊಂದಿರುವ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಇವೆ ಇಂಡಿಯಾ

ಈ ಪಾಲುದಾರಿಕೆಯ ಮೂಲಕ ಗ್ರಾಹಕರು ಕೈಗೆಟುಕುವ ಇಎಂಐ ಆಯ್ಕೆಯ ಮೂಲಕ ಇವೆ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಖರೀದಿಸಬಹುದು.ಜೆಸ್ಟ್‌ಮನಿಯ ಹಣಕಾಸು ಆಯ್ಕೆಯ ಸಹಾಯದಿಂದ ಗ್ರಾಹಕರು ಸಿಬಿಲ್ ಸ್ಕೋರ್ ಹೊಂದಿರದ ವಾಹನಗಳನ್ನು ಸಹ ಖರೀದಿಸಲು ಸಾಧ್ಯವಾಗುತ್ತದೆ.

ಸ್ಮಾರ್ಟ್ ಫೀಚರ್ ಹೊಂದಿರುವ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಇವೆ ಇಂಡಿಯಾ

ಈ ಹಣಕಾಸು ಸೇವೆಯನ್ನು ಪಡೆಯುವ ಪ್ರಕ್ರಿಯೆಯು ಕಾಗದರಹಿತವಾಗಿದ್ದು, ಆನ್‌ಲೈನ್ ಅಥವಾ ಸ್ಮಾರ್ಟ್‌ಫೋನ್ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಗ್ರಾಹಕರು ಆನ್‌ಲೈನ್‌ನಲ್ಲಿ ಕೆವೈಸಿಯ ಔಪಚಾರಿಕತೆಯನ್ನು ಪೂರ್ಣಗೊಳಿಸಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸ್ಮಾರ್ಟ್ ಫೀಚರ್ ಹೊಂದಿರುವ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಇವೆ ಇಂಡಿಯಾ

3, 6 ಅಥವಾ 12 ತಿಂಗಳ ಇಎಂಐ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇವೆ ಇಂಡಿಯಾ ಪೂರ್ವ ಭಾರತದಲ್ಲಿರುವ ಮೊದಲ ವಾಹನ ಕಂಪನಿಯಾಗಿದೆ. ಈ ಕಂಪನಿಯ ಪ್ರಧಾನ ಕಚೇರಿ ಒಡಿಶಾದಲ್ಲಿದೆ.

ಸ್ಮಾರ್ಟ್ ಫೀಚರ್ ಹೊಂದಿರುವ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ ಇವೆ ಇಂಡಿಯಾ

ಇವೆ ಇಂಡಿಯಾ ದೇಶಾದ್ಯಂತ 63 ಡೀಲರ್'ಗಳ ನೆಟ್'ವರ್ಕ್ ಅನ್ನು ಹೊಂದಿದೆ. ಮುಂದಿನ ವರ್ಷ 200 ವಿವಿಧ ಸ್ಥಳಗಳಲ್ಲಿ ಮತ್ತಷ್ಟು ಡೀಲರ್ ಗಳನ್ನು ತೆರೆಯಲು ಬಯಸಿದೆ. ಇವೆ ಇಂಡಿಯಾ ಕಂಪನಿಯು ದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸುತ್ತದೆ. ಇವೆ ಸ್ಕೂಟರ್‌ಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಸ್ಮಾರ್ಟ್ ಬ್ಯಾಟರಿ ಮ್ಯಾನೇಜ್‌ಮೆಂಟ್‌ನಂತಹ ಹೊಸ ಫೀಚರ್ ಗಳಿವೆ. ಕಂಪನಿಯು ಪ್ಲಗ್ ಆಂಗೊ ಬ್ರಾಂಡ್ ಅಡಿಯಲ್ಲಿ ಚಾರ್ಜಿಂಗ್ ಸ್ಟೇಷನ್ ಗಳನ್ನು ನಿರ್ಮಿಸುತ್ತಿದೆ.

Most Read Articles

Kannada
English summary
Eeve India launches new electric scooters with smart features. Read in Kannada.
Story first published: Tuesday, December 15, 2020, 20:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X