ಎಂಟ್ರಿ ಲೆವೆಲ್ ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಾರ್ಲೆ ಡೇವಿಡ್‍‍ಸನ್

ಹಾರ್ಲೆ ಡೇವಿಡ್‍‍ಸನ್ ಕಂಪನಿಯು ತನ್ನ ಸಣ್ಣ ಸಾಮರ್ಥ್ಯದ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಎಂಟ್ರಿ ಲೆವೆಲ್ ಬೈಕ್ 338 ಸಿಸಿಯ ಎಂಜಿನ್ ಹೊಂದಿದೆ. ಈ ಬೈಕ್ ಅನ್ನು 2020ರ ಜೂನ್‍‍ನಲ್ಲಿ ಬಿಡುಗಡೆಗೊಳಿಸಲಾಗುವುದು.

ಎಂಟ್ರಿ ಲೆವೆಲ್ ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಾರ್ಲೆ ಡೇವಿಡ್‍‍ಸನ್

ಬೆನೆಟ್ಸ್.ಕೊ.ಯುಕೆ ವರದಿಗಳ ಪ್ರಕಾರ, ಅಮೇರಿಕಾ ಮೂಲದ ಹಾರ್ಲೆ ಡೇವಿಡ್‍‍ಸನ್ ಕಂಪನಿಯು ಚೀನಾ ಮೂಲದ ಕಿಯಾಂಗ್‍‍ಜಿಯಾಂಗ್ ಕಂಪನಿಯ ಸಹಭಾಗಿತ್ವದಲ್ಲಿ ಈ ಬೈಕ್ ಅನ್ನು ಅಭಿವೃದ್ಧಿಪಡಿಸಿದೆ. ಕಿಯಾಂಜಿಯಾಂಗ್ ಬೆನೆಲ್ಲಿಯ ಮೂಲ ಕಂಪನಿಯಾಗಿದೆ. ಹಾರ್ಲೆ-ಡೇವಿಡ್‍‍ಸನ್ ಬಿಡುಗಡೆಗೊಳಿಸಲಿರುವ ಹೊಸ ಬೈಕಿನ 338 ಸಿಸಿಯ ಎಂಜಿನ್, ಚಾಸೀಸ್ ಹಾಗೂ ಇತರ ಬಿಡಿಭಾಗಗಳನ್ನು ಬೆನೆಲ್ಲಿ ಕಂಪನಿಯು ಒದಗಿಸಲಿದೆ.

ಎಂಟ್ರಿ ಲೆವೆಲ್ ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಾರ್ಲೆ ಡೇವಿಡ್‍‍ಸನ್

ಹೊಸ ಹಾರ್ಲೆ-ಡೇವಿಡ್‍‍ಸನ್‍‍ನ 338 ಸಿಸಿ ಬೈಕ್ ಅನ್ನು ಚೀನಾದಲ್ಲಿ ತಯಾರಿಸಲಾಗುವುದು. ಭಾರತವೂ ಸೇರಿದಂತೆ ವಿಶ್ವದ ವಿವಿಧ ದೇಶಗಳಿಗೆ ರಫ್ತು ಮಾಡಲಾಗುವುದು. ಹಾರ್ಲೆ ಡೇವಿಡ್‍‍ಸನ್ 338 ಸಿಸಿ ಬೈಕ್ ಅನ್ನು ಸಿಕೆಡಿ ಯುನಿಟ್ ಆಗಿ ಆಮದು ಮಾಡಿಕೊಂಡು ಗುರ್‍‍ಗಾಂವ್‌ನಲ್ಲಿರುವ ಕಂಪನಿಯ ಘಟಕದಲ್ಲಿ ಅಸೆಂಬ್ಲ್ ಮಾಡಲಾಗುವುದು.

ಎಂಟ್ರಿ ಲೆವೆಲ್ ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಾರ್ಲೆ ಡೇವಿಡ್‍‍ಸನ್

ಇದರಿಂದಾಗಿ ಹಾರ್ಲೆ ಡೇವಿಡ್‍‍‍ಸನ್ ಕಂಪನಿಯ ಎಂಟ್ರಿ ಲೆವೆಲ್ ಬೈಕ್ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಲಿದೆ. ಹಾರ್ಲೆ-ಡೇವಿಡ್‍‍ಸನ್ ಕಂಪನಿಯ ಹೊಸ ಎಂಟ್ರಿ ಲೆವೆಲ್ ಬೈಕ್ ಬೆನೆಲ್ಲಿಯೊಂದಿಗೆ ಪವರ್‌ಟ್ರೇನ್ ಹಂಚಿಕೊಳ್ಳಲಿದೆ. ಹೊಸ ಬೈಕು ಬೆನೆಲ್ಲಿ 302 ಎಸ್‌ ಬೈಕಿನಲ್ಲಿರುವಂತಹ ಎಂಜಿನ್ ಅನ್ನು ಹೊಂದಲಿದೆ.

ಎಂಟ್ರಿ ಲೆವೆಲ್ ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಾರ್ಲೆ ಡೇವಿಡ್‍‍ಸನ್

ಬೆನೆಲ್ಲಿ 302 ಎಸ್ ಬೈಕಿನಲ್ಲಿ ಅಳವಡಿಸಲಾಗಿರುವ 300 ಸಿಸಿ ಪ್ಯಾರಲೆಲ್ ಟ್ವಿನ್ ಎಂಜಿನ್‌ 11,000 ಆರ್‌ಪಿಎಂನಲ್ಲಿ 37.5 ಬಿಹೆಚ್‌ಪಿ ಪವರ್ ಹಾಗೂ 9,750 ಆರ್‌ಪಿಎಂನಲ್ಲಿ 25.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಆರು ಸ್ಫೀಡಿನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

ಎಂಟ್ರಿ ಲೆವೆಲ್ ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಾರ್ಲೆ ಡೇವಿಡ್‍‍ಸನ್

ಹಾರ್ಲೆ ಡೇವಿಡ್‍‍ಸನ್ ಕಂಪನಿಯು ಹೊಸ ಬೈಕಿನ ಹೆಸರು ಸೇರಿದಂತೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‍‍ಫೀಲ್ಡ್ ಕಂಪನಿಯ 350 ಬೈಕ್‍‍ಗಳಿಗೆ, ಜಾವಾ ಬೈಕ್‍‍ಗಳಿಗೆ ಹಾಗೂ ಬೆನೆಲ್ಲಿ ಇಂಪಿರಿಯಲ್ 400 ಬೈಕಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Harley-Davidson Entry-Level Motorcycle Launch Details Confirmed: Will Rival Royal Enfield In India - Read in Kannada
Story first published: Thursday, January 9, 2020, 16:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X