Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಹೀರೋ ಲೆಕ್ಟ್ರೋ ಎಫ್6ಐ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ
ಹೀರೋ ಸೈಕಲ್ಸ್ ತನ್ನ ಹೊಸ ಲೆಕ್ಟ್ರೋ ಎಫ್6ಐ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಲೆಕ್ಟ್ರೋ ಎಫ್6ಐ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ.

ಈ ಹೊಸ ಹೀರೋ ಲೆಕ್ಟ್ರೋ ಎಫ್6ಐ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್ ಬೆಲೆಯು ರೂ.49,000 ಗಳಾಗಿದೆ. ಈ ಹೊಸ ಹೀರೋ ಲೆಕ್ಟ್ರೋ ಎಫ್6ಐ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್ ಎಲ್ಲಾ ಡೀಲರುಗಳ ಬಳಿ ಲಭ್ಯವಿರುತ್ತದೆ. ಈ ಹೊಸ ಹೀರೋ ಲೆಕ್ಟ್ರೋ ಎಫ್6ಐ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್ ಅನ್ನು ಖರೀದಿಸಲು ಆನ್‌ಲೈನ್‌ನಲ್ಲಿ ಅಥವಾ ಯಾವುದೇ ಬ್ರಾಂಡ್‌ನ ಆಫ್‌ಲೈನ್ ಡೀಲರುಗಳ ಬಳಿ ರೂ.5,000 ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಇನ್ನು ಹೊಸ ಹೀರೋ ಲೆಕ್ಟ್ರೋ ಎಫ್6ಐ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್ ಹಳದಿ/ಕಪ್ಪು ಮತ್ತು ಕೆಂಪು/ಕಪ್ಪು ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಸೈಕಲ್ ಎತ್ತರಕ್ಕೆ ಹೊಂದಾಣಿಕೆ ಮಾಡಬಹುದಾದ ಸೀಟ್, ಲೈಟ್-ವೈಟ್ ಅಲಾಯ್ ವ್ಹೀಲ್ಸ್, ಕೆಂಡ ಟಯರ್, ಸ್ಮಾರ್ಟ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಫ್ರಂಟ್ ಮತ್ತು ರಿಯರ್ ಲ್ಯಾಂಪ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿವೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಹೀರೋ ಲೆಕ್ಟ್ರೋ ಎಫ್6ಐ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್ ಚಕ್ರದ ಹೈಲೈಟ್ ಅದರ ಡಿಟ್ಯಾಚೇಬಲ್ ಬ್ಯಾಟರಿಯಾಗಿರಬೇಕು ಅದು ಫ್ರೇಮ್‌ನಲ್ಲಿರುತ್ತದೆ. ವರ್ಧಿತ ಅನುಕೂಲಕ್ಕಾಗಿ ಬ್ಯಾಟರಿ ಪ್ಯಾಕ್ ಅನ್ನು ತೆಗೆದುಹಾಕಬಹುದು ಮತ್ತು ಪ್ರತ್ಯೇಕವಾಗಿ ಚಾರ್ಜ್ ಕೂಡ ಮಾಡಬಹುದಾಗಿದೆ.

ಬ್ಯಾಟರಿ ಪ್ಯಾಕ್ ಅನ್ನು ಐಪಿ67 ವಾಟರ್ ಮತ್ತು ದೂಳು ನಲ್ಲಿ ಹಳಾಗದಂತೆ ಅಭಿವೃದ್ದಿಪಡಿಸಿದ್ದಾರೆ. ಈ ಬ್ಯಾಟರಿ ಪ್ಯಾಕ್ 250ವ್ಯಾಟ್ ಲೆಕ್ಟ್ರಿಕ್ ಮೋಟರ್‌ಗೆ ಪವರ್ ನೀಡುತ್ತದೆ. ಎರಡೂ ವ್ಹೀಲ್ ಗಳಲ್ಲಿ ಥ್ರೊಟಲ್ ಅನ್ನು ಹೊಂದಿದೆ. ಒಂದೇ ಬ್ಯಾಟರಿ ಚಾರ್ಜ್‌ನಲ್ಲಿ ಗರಿಷ್ಠ 50 ಕಿ.ಮೀ ವರೆಗೆ ಚಲಿಸಬಹುದು. ಲೆಕ್ಟ್ರೋ-ಪೆಡಲ್ ತಂತ್ರದ ಸಂಯೋಜನೆಯನ್ನು ಬಳಸಿಕೊಂಡು ರೇಂಜ್ 10 ಕಿಲೋಮೀಟರ್ ಹೆಚ್ಚಾಗುತ್ತದೆ.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಇನ್ನು ಹೊಸ ಹೀರೋ ಲೆಕ್ಟ್ರೋ ಎಫ್6ಐ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್ 25 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಏಳು-ಸ್ಪೀಡ್ ಶಿಮಾನೋ ಆಲ್ಟಸ್ ಗೇರ್‌ಬಾಕ್ಸ್ ಸಹಾಯದಿಂದ ಹಿಂದಿನ ಚಕ್ರಗಳಿಂದ ಚಾಲನೆ ಮಾಡಲಾಗುತ್ತದೆ.

ಹೊಸ ಹೀರೋ ಲೆಕ್ಟ್ರೋ ಎಫ್6ಐ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್ ಬ್ಲೂಟೂತ್ ಕನೆಕ್ಟಿವಿಟಿಯನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಫೀಚರ್ ಅನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಗಳಿಗಾಗಿ ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಅನ್ನು ಸಹ ಒಳಗೊಂಡಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಹೀರೋ ಲೆಕ್ಟ್ರೋ ಎಫ್6ಐ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್‌ನಲ್ಲಿ ಸುಗಮ ಸವಾರಿಗಾಗಿ ಟೆಲಿಸ್ಕೋಪಿಕ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇನ್ನು ಹೀರೋ ಲೆಕ್ಟ್ರೋ ಎಫ್ 6ಐ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್‌ನ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಇದಲ್ಲದೆ, ಹೀರೋ ಲೆಕ್ಟ್ರೋ ಎಫ್6ಐ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್‌ನಲ್ಲಿ ಆರ್‌ಎಫ್‌ಐಡಿ ಸೆಕ್ಯೂರಿಟಿ ಟ್ಯಾಗ್ ಶಕ್ತಗೊಂಡ ಲಾಕ್ ಅನ್ನು ಕೂಡ ನೀಡಲಾಗುತ್ತದೆ. ಇನ್ನು ಈ ಹೊಸ ಹೀರೋ ಎಲೆಕ್ಟ್ರಿಕ್ ಸೈಕಲ್ ಆಕರ್ಷಕ ಲುಕ್ ಅನ್ನು ಹೊಂದಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೀರೋ ಲೆಕ್ಟ್ರೊದ ಸಿಇಒ ಆದಿತ್ಯ ಮುಂಜಾಲ್ ಅವರು ಮಾತನಾಡಿ, ಎಫ್6ಐ ನಮ್ಮ ನಿರಂತರವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಸೈಕಲ್ ವಿಭಾಗಕ್ಕೆ ಒಂದು ರೋಮಾಂಚಕ ಮತ್ತು ಅದ್ಭುತವಾದ ಹೊಸ ಮಾದರಿಯ ಸೇರ್ಪಡೆಯಾಗಿದೆ.

ಹೈ-ಎಂಡ್ ಬೈಕಿಂಗ್ ವಿಭಾಗಗಳ ಬೇಡಿಕೆ ಇತ್ತೀಚಿನ ದಿನಗಳಲ್ಲಿ ಗಗನಕ್ಕೇರಿರುವ ನಿರ್ಣಾಯಕ ಸಮಯದಲ್ಲಿ ನಾವು ಇದನ್ನು ಪರಿಚಯಿಸಿದ್ದೇವೆ. ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಇ-ಸೈಕಲ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಮಧ್ಯೆ ಹೊಸ ಎಫ್6ಐ ಉತ್ತಮ ಯಶಸ್ವಿಯಾಗಲಿದೆ ಎಂದು ಹೇಳಿದರು.

ಹೀರೋ ಲೆಕ್ಟ್ರೋ ಎಫ್6ಐ ಸ್ಮಾರ್ಟ್ ಇ-ಸೈಕಲ್‌ಗಳು ಕಡಿಮೆ-ವೆಚ್ಚದ ನಿರ್ವಹಣೆಗಾಗಿ ಹೆಚ್ಚು ಜನಪ್ರಿಯವಾಗುತ್ತಿವೆ. ಪ್ರೀಮಿಯಂ ಇ-ಸೈಕಲ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ಈ ಹೊಸ ಲೆಕ್ಟ್ರೋ ಎಫ್ 6ಐ ಸ್ಮಾರ್ಟ್ ಎಲೆಕ್ಟ್ರಿಕ್ ಸೈಕಲ್ ಹೆಚ್ಚಾಗಿ ಸಿಟಿ ಗ್ರಾಹಕರ ಗಮನಸೆಳೆಯಬಹುದು.