ಸ್ಟಾರ್ಟ್ಅಪ್ ಕಂಪನಿಯಲ್ಲಿ ಹೂಡಿಕೆ ಮಾಡಿದ ಹೀರೋ ಮೊಟೊಕಾರ್ಪ್‌ ಅಧ್ಯಕ್ಷ

ಹೀರೋ ಮೊಟೊಕಾರ್ಪ್‌ ಅಧ್ಯಕ್ಷರಾದ ಪವನ್ ಮುಂಜಾಲ್ ವಾಹನಗಳ ದುರಸ್ತಿ ಹಾಗೂ ಸರ್ವೀಸ್ ಸ್ಟಾರ್ಟ್ಅಪ್ ಕಂಪನಿಯಾದ ಗೊಮೆಕಾನಿಕ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಪವನ್ ಮುಂಜಾಲ್ ಖಾಸಗಿಯಾಗಿ ಹೂಡಿಕೆ ಮಾಡಿದ್ದು, ಈ ಹೂಡಿಕೆಯಲ್ಲಿ ಹೀರೋ ಮೊಟೊಕಾರ್ಪ್‌ನ ಯಾವುದೇ ಪಾತ್ರವಿಲ್ಲ.

ಸ್ಟಾರ್ಟ್ಅಪ್ ಕಂಪನಿಯಲ್ಲಿ ಹೂಡಿಕೆ ಮಾಡಿದ ಹೀರೋ ಮೊಟೊಕಾರ್ಪ್‌ ಅಧ್ಯಕ್ಷ

ಪವನ್ ಮುಂಜಾಲ್ ಎಷ್ಟು ಮೊತ್ತವನ್ನು ಹೂಡಿಕೆ ಮಾಡಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಈ ಹೂಡಿಕೆಯನ್ನು ಕಂಪನಿಯ ವಿಸ್ತರಣೆ ಹಾಗೂ ತಾಂತ್ರಿಕ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಗೊಮೆಕಾನಿಕ್‌ ಹೇಳಿದೆ. ಗೊಮೆಕಾನಿಕ್, ಭಾರತದಲ್ಲಿ ಕಾರು ಹಾಗೂ ಬೈಕುಗಳನ್ನು ಮನೆಗಳಿಂದ ಪಿಕಪ್ ಮಾಡಿ ಸರ್ವೀಸ್ ಮಾಡುತ್ತದೆ. ಹಲವಾರು ಕಂಪನಿಗಳು ಸಾಂಸ್ಥಿಕ ಹೂಡಿಕೆಯ ಮೂಲಕ ಗೊಮೆಕಾನಿಕ್‌ನಲ್ಲಿ ಹೂಡಿಕೆ ಮಾಡಿವೆ. ಪವನ್ ಮುಂಜಾಲ್‌ರವರ ಅನುಭವವು ಕಂಪನಿಗೆ ಪ್ರಯೋಜನವನ್ನು ನೀಡಲಿದೆ ಎಂದು ಗೊಮೆಕಾನಿಕ್ ಹೇಳಿದೆ.

ಸ್ಟಾರ್ಟ್ಅಪ್ ಕಂಪನಿಯಲ್ಲಿ ಹೂಡಿಕೆ ಮಾಡಿದ ಹೀರೋ ಮೊಟೊಕಾರ್ಪ್‌ ಅಧ್ಯಕ್ಷ

ಈ ಹೂಡಿಕೆಯೊಂದಿಗೆ, ಗೊಮೆಕಾನಿಕ್ ತಾಂತ್ರಿಕ ಅಭಿವೃದ್ಧಿ, ನವೀಕರಣ ಹಾಗೂ ವಿಸ್ತರಣೆಯತ್ತ ಗಮನ ಹರಿಸಲಿದೆ. ಗೊಮೆಕಾನಿಕ್ ಕಂಪನಿಯನ್ನು 2016ರಲ್ಲಿ ಕುಶಾಲ್ ಕಾರ್ವಾ, ಅಮಿತ್ ಭಾಸಿನ್, ರಿಷಭ್ ಕಾರ್ವಾ ಹಾಗೂ ನಿತಿನ್ ರಾಣಾ ಎಂಬುವವರು ಸ್ಥಾಪಿಸಿದರು. ಕಂಪನಿಯು ಟೆಕ್ನಾಲಜಿ ಆಧಾರಿತ ಕಾರು ಸರ್ವೀಸ್‌ಗಳನ್ನು ನೀಡುತ್ತದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸ್ಟಾರ್ಟ್ಅಪ್ ಕಂಪನಿಯಲ್ಲಿ ಹೂಡಿಕೆ ಮಾಡಿದ ಹೀರೋ ಮೊಟೊಕಾರ್ಪ್‌ ಅಧ್ಯಕ್ಷ

ಇತರ ಸರ್ವೀಸ್ ಸೆಂಟರ್‌ಗಳಿಗಿಂತ 40%ನಷ್ಟು ಕಡಿಮೆ ಬೆಲೆಗೆ ವಾಹನಗಳನ್ನು ಸರ್ವೀಸ್ ಮಾಡಲಾಗುತ್ತದೆ ಎಂದು ಗೊಮೆಕಾನಿಕ್ ಕಂಪನಿಯು ಹೇಳಿಕೊಂಡಿದೆ. ಕಂಪನಿಯು ದೇಶದಲ್ಲಿರುವ ಹಲವಾರು ಬಿಡಿಭಾಗ ತಯಾರಕ ಕಂಪನಿಗಳಿಂದ ವಾಹನಗಳ ಬಿಡಿಭಾಗ ಹಾಗೂ ಉಪಕರಣಗಳನ್ನು ಖರೀದಿಸುತ್ತದೆ.

ಸ್ಟಾರ್ಟ್ಅಪ್ ಕಂಪನಿಯಲ್ಲಿ ಹೂಡಿಕೆ ಮಾಡಿದ ಹೀರೋ ಮೊಟೊಕಾರ್ಪ್‌ ಅಧ್ಯಕ್ಷ

ಗೊಮೆಕಾನಿಕ್ ಕಂಪನಿಯು ಸದ್ಯಕ್ಕೆ ಬೆಂಗಳೂರು, ದೆಹಲಿ-ಎನ್‌ಸಿಆರ್, ಹೈದರಾಬಾದ್, ಮುಂಬೈ, ಪುಣೆ, ಚೆನ್ನೈ, ಅಹಮದಾಬಾದ್, ಪುಣೆ ಹಾಗೂ ಚಂಡೀಗಢ ನಗರಗಳಲ್ಲಿ 280ಕ್ಕೂ ಹೆಚ್ಚು ಕಾರು ದುರಸ್ತಿ ಹಾಗೂ ಸರ್ವೀಸ್ ಸೆಂಟರ್‌ಗಳನ್ನು ಹೊಂದಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸ್ಟಾರ್ಟ್ಅಪ್ ಕಂಪನಿಯಲ್ಲಿ ಹೂಡಿಕೆ ಮಾಡಿದ ಹೀರೋ ಮೊಟೊಕಾರ್ಪ್‌ ಅಧ್ಯಕ್ಷ

ಕರೋನಾ ವೈರಸ್ ಹಿನ್ನೆಲೆಯಲ್ಲಿ ಹೀರೋ ಮೊಟೊಕಾರ್ಪ್ ಕಂಪನಿಯು ವಾಹನಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡಲು ಮುಂದಾಗಿದೆ. ಇತ್ತೀಚೆಗಷ್ಟೇ ಹೀರೋ ಮೊಟೊಕಾರ್ಪ್ಆನ್‌ಲೈನ್ ಮಾರಾಟಕ್ಕಾಗಿ ಇ-ಶಾಪ್ ಅನ್ನು ಆರಂಭಿಸಿದೆ. ಇದರಡಿಯಲ್ಲಿ ಕಂಪನಿಯು ಆನ್‌ಲೈನ್‌ನಲ್ಲಿ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ.

ಸ್ಟಾರ್ಟ್ಅಪ್ ಕಂಪನಿಯಲ್ಲಿ ಹೂಡಿಕೆ ಮಾಡಿದ ಹೀರೋ ಮೊಟೊಕಾರ್ಪ್‌ ಅಧ್ಯಕ್ಷ

ಇ-ಶಾಪ್ ಡಿಜಿಟಲ್ ಪ್ಲಾಟ್‌ಫಾರ್ಮ್‌ ಮೂಲಕ ಬುಕ್ಕಿಂಗ್ ಮಾಡುವುದು ಸೇರಿದಂತೆ ಪಾವತಿ, ಹಣಕಾಸು ಹಾಗೂ ಡೋರ್ ಡೆಲಿವರಿಯನ್ನು ಸಹ ಒದಗಿಸಲಾಗುತ್ತದೆ. ಕರೋನಾ ವೈರಸ್ ಹರಡುವ ಭೀತಿಯಿಂದಾಗಿ ಗ್ರಾಹಕರು ಶೋರೂಂಗಳಿಗೆ ಬರುತ್ತಿಲ್ಲ. ಈ ಕಾರಣಕ್ಕೆ ಗ್ರಾಹಕರಿಗೆ ಡಿಜಿಟಲ್ ಮಾರಾಟದ ಮೂಲಕ ವಿತರಣೆಯನ್ನು ನೀಡಲಾಗುತ್ತಿದೆ.

Most Read Articles

Kannada
English summary
Hero Motocorp Chairman invests in startup vehicle repair company. Read in Kannada.
Story first published: Friday, June 19, 2020, 15:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X