ನೇಪಾಳದಲ್ಲಿಯೂ ಬಿಡುಗಡೆಯಾಗಲಿವೆ ಜಾವಾ ಬೈಕುಗಳು

ಖ್ಯಾತ ಬೈಕ್ ತಯಾರಕ ಕಂಪನಿಯಾದ ಜಾವಾ ಮೋಟಾರ್‌ಸೈಕಲ್ ಹಲವು ವರ್ಷಗಳ ನಂತರ 2018ರಲ್ಲಿ ದೇಶಿಯ ಮಾರುಕಟ್ಟೆಗೆ ಮತ್ತೆ ಕಾಲಿಟ್ಟಿತು. ಜಾವಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಜಾವಾ ಸ್ಟ್ಯಾಂಡರ್ಡ್, ಜಾವಾ 42 ಹಾಗೂ ಜಾವಾ ಪೆರಾಕ್ ಎಂಬ ಮೂರು ಮಾದರಿಯ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ.

ನೇಪಾಳದಲ್ಲಿಯೂ ಬಿಡುಗಡೆಯಾಗಲಿವೆ ಜಾವಾ ಬೈಕುಗಳು

ಕೆಲವು ದಿನಗಳ ಹಿಂದಷ್ಟೇ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಂಗಸಂಸ್ಥೆಯಾದ ಜಾವಾ ಮೋಟಾರ್‌ಸೈಕಲ್, ಯುರೋಪಿಯನ್ ಮಾರುಕಟ್ಟೆಯಲ್ಲಿ ತನ್ನ ವ್ಯವಹಾರವನ್ನು ಆರಂಭಿಸಲು ಮುಂದಾಗಿದೆ ಎಂದು ವರದಿಗಳಾಗಿದ್ದವು. ಇತ್ತೀಚಿನ ಮಾಹಿತಿಯ ಪ್ರಕಾರ ಜಾವಾ ಮೋಟಾರ್‌ಸೈಕಲ್ ನಮ್ಮ ನೆರೆ ರಾಷ್ಟ್ರ ನೇಪಾಳದಲ್ಲಿ ಡೀಲರ್ ಶಿಪ್ ಗಳನ್ನು ತೆರೆಯಲು ಮುಂದಾಗಿದೆ.

ನೇಪಾಳದಲ್ಲಿಯೂ ಬಿಡುಗಡೆಯಾಗಲಿವೆ ಜಾವಾ ಬೈಕುಗಳು

ಜಾವಾ ಮೋಟಾರ್‌ಸೈಕಲ್ ನೇಪಾಳದಲ್ಲಿ ಡೀಲರ್ ಶಿಪ್ ಗಳನ್ನು ತೆರೆಯಲು ಅರ್ಜಿಗಳನ್ನು ಆಹ್ವಾನಿಸಿದೆ. ಆರಂಭಿಕ ಹಂತದಲ್ಲಿ ಕಂಪನಿಯು ನೇಪಾಳದಲ್ಲಿ ಜಾವಾ ಸ್ಟ್ಯಾಂಡರ್ಡ್ ಹಾಗೂ ಜಾವಾ 42 ಬೈಕುಗಳನ್ನು ಮಾತ್ರ ಮಾರಾಟ ಮಾಡಲಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ನೇಪಾಳದಲ್ಲಿಯೂ ಬಿಡುಗಡೆಯಾಗಲಿವೆ ಜಾವಾ ಬೈಕುಗಳು

ಜಾವಾ 42 ಬೈಕ್ ಅನ್ನು ನೇಪಾಳದಲ್ಲಿ ನೆಬ್ಯುಲಾ ಬ್ಲೂ, ಕಾಮೆಟ್ ರೆಡ್, ಸ್ಟ್ರೈಟ್ಲೈಟ್ ಬ್ಲೂ, ಲುಮೋಸ್ ಲೈಮ್, ಹಲ್ಲಾಸ್ ಟೀಲ್ ಹಾಗೂ ಗ್ಯಾಲಕ್ಸಿಯ ಮ್ಯಾಟ್ ಎಂಬ 6 ಬಣ್ಣಗಳಲ್ಲಿ ಮಾರಾಟ ಮಾಡಲಿದೆ.

ನೇಪಾಳದಲ್ಲಿಯೂ ಬಿಡುಗಡೆಯಾಗಲಿವೆ ಜಾವಾ ಬೈಕುಗಳು

ಇನ್ನು ಜಾವಾ ಸ್ಟ್ಯಾಂಡರ್ಡ್ ಬೈಕ್ ಅನ್ನು ಬ್ಲಾಕ್, ಗ್ರೇ ಹಾಗೂ ಮರೂನ್ ಎಂಬ ಮೂರು ಬಣ್ಣಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಇನ್ನು ಜಾವಾ ಮೋಟಾರ್‌ಸೈಕಲ್ ಕಂಪನಿಯು ನೇಪಾಳದಲ್ಲಿ ಜಾವಾ ಪೆರಾಕ್ ಬೈಕ್ ಅನ್ನು ಮಾರಾಟ ಮಾಡುವ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ನೇಪಾಳದಲ್ಲಿಯೂ ಬಿಡುಗಡೆಯಾಗಲಿವೆ ಜಾವಾ ಬೈಕುಗಳು

ಈ ವರ್ಷದ ಮೇ ತಿಂಗಳಿನಲ್ಲಿ ಜಾವಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಬೈಕುಗಳನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿಯೂ ಮಾರಾಟ ಮಾಡುವುದಾಗಿ ತಿಳಿಸಿತ್ತು. ಯುರೋಪ್ ಮಾರುಕಟ್ಟೆಗೆ ಅನುಸಾರವಾಗಿ ಈ ಬೈಕ್‌ಗಳಲ್ಲಿ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗುವುದು.

ನೇಪಾಳದಲ್ಲಿಯೂ ಬಿಡುಗಡೆಯಾಗಲಿವೆ ಜಾವಾ ಬೈಕುಗಳು

ಆದರೆ ಬೈಕುಗಳ ವಿನ್ಯಾಸ ಹಾಗೂ ಸ್ಟೈಲಿಂಗ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುತ್ತಿಲ್ಲ. ದೇಶಿಯ ಮಾರುಕಟ್ಟೆಯಲ್ಲಿರುವ ಜಾವಾ ಸ್ಟ್ಯಾಂಡರ್ಡ್ ಹಾಗೂ ಜಾವಾ 42 ಬೈಕುಗಳಲ್ಲಿ 293 ಸಿಸಿಯ ಲಿಕ್ವಿಡ್ ಕೂಲ್ಡ್ ಡಿಒಹೆಚ್‌ಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ನೇಪಾಳದಲ್ಲಿಯೂ ಬಿಡುಗಡೆಯಾಗಲಿವೆ ಜಾವಾ ಬೈಕುಗಳು

ಈ ಎಂಜಿನ್ 27 ಬಿಹೆಚ್‌ಪಿ ಪವರ್ ಹಾಗೂ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜಾವಾ ಸ್ಟ್ಯಾಂಡರ್ಡ್ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.1.73 ಲಕ್ಷಗಳಾದರೆ, ಜಾವಾ 42 ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.1.6 ಲಕ್ಷಗಳಾಗಿದೆ. ಜಾವಾ ಕಂಪನಿಯು ನೇಪಾಳದಲ್ಲಿ ಮಾರಾಟವಾಗುವ ಜಾವಾ ಬೈಕುಗಳ ಬೆಲೆಯನ್ನು ಬಹಿರಂಗಪಡಿಸಿಲ್ಲ.

Most Read Articles

Kannada
English summary
Jawa motorcycles to start dealerships in Nepal market. Read in Kannada.
Story first published: Friday, August 7, 2020, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X