ಬಹಿರಂಗವಾಯ್ತು ಬಿ‍ಎಸ್ 6 ಕೆಟಿ‍ಎಂ 390 ಡ್ಯೂಕ್ ಬೆಲೆ

ಭಾರತದಲ್ಲಿ ಹೊಸ ಬಿ‍ಎಸ್ 6 ಮಾಲಿನ್ಯ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍‍ಡೇಟ್‍‍ಗೊಳಿಸುತ್ತಿವೆ.

ಬಹಿರಂಗವಾಯ್ತು ಬಿ‍ಎಸ್ 6 ಕೆಟಿ‍ಎಂ 390 ಡ್ಯೂಕ್ ಬೆಲೆ

ಇದರಿಂದ ಕೆಟಿ‍ಎಂ ಕಂಪನಿಯು ಸಹ ಹೊರತಾಗಿಲ್ಲ. ಕೆಟಿ‍ಎಂ ಕಂಪನಿಯು ಈ ಮೊದಲು ತನ್ನ 390 ಅಡ್ವೆಂಚರ್ ಬೈಕ್ ಅನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿತ್ತು. ಈಗ ಡ್ಯೂಕ್ 390 ಬೈಕ್ ಅನ್ನು ಸಹ ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಲು ಮುಂದಾಗಿದೆ.

ಬಹಿರಂಗವಾಯ್ತು ಬಿ‍ಎಸ್ 6 ಕೆಟಿ‍ಎಂ 390 ಡ್ಯೂಕ್ ಬೆಲೆ

ಕೆಲ ದಿನಗಳ ಹಿಂದೆ ಕೆಟಿಎಂ ಕಂಪನಿಯು ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಡ್ಯೂಕ್ 250 ಬೈಕಿನ ಬೆಲೆಯನ್ನು ಬಹಿರಂಗಪಡಿಸಿತ್ತು. ಈಗ ಹೊಸ ಡ್ಯೂಕ್ 390 ಬೈಕಿನ ಬೆಲೆಯನ್ನು ಬಹಿರಂಗಪಡಿಸಿದೆ. ಜಿಗ್‍‍ವ್ಹೀಲ್‍ ವರದಿಗಳ ಪ್ರಕಾರ ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.2.52 ಲಕ್ಷಗಳಾಗಿದೆ.

ಬಹಿರಂಗವಾಯ್ತು ಬಿ‍ಎಸ್ 6 ಕೆಟಿ‍ಎಂ 390 ಡ್ಯೂಕ್ ಬೆಲೆ

ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಡ್ಯೂಕ್ 390 ಬೈಕಿನ ಬೆಲೆಯು ಬಿ‍ಎಸ್ 4 ಎಂಜಿನ್ ಹೊಂದಿರುವ ಬೈಕಿನ ಬೆಲೆಗಿಂತ ರೂ.5,000 ಹೆಚ್ಚಾಗಿರಲಿದೆ. ಹೊಸ ಡ್ಯೂಕ್ 390 ಬೈಕಿನಲ್ಲಿ ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗುವುದು.

ಬಹಿರಂಗವಾಯ್ತು ಬಿ‍ಎಸ್ 6 ಕೆಟಿ‍ಎಂ 390 ಡ್ಯೂಕ್ ಬೆಲೆ

ಹೊಸ ಡ್ಯೂಕ್ 390 ಬೈಕ್ ಅನ್ನು ಗ್ರೇ ಬಣ್ಣದಲ್ಲಿ ಬಿಡುಗಡೆಗೊಳಿಸಲಾಗುವುದು. ಬಿ‍ಎಸ್ 4 ಹಾಗೂ ಬಿ‍ಎಸ್ 6 ಬೈಕುಗಳಲ್ಲಿರುವ ಪ್ರಮುಖ ವ್ಯತ್ಯಾಸವೆಂದರೆ ಬಿ‍ಎಸ್ 6 ಬೈಕ್‍‍ಗಳಲ್ಲಿ ಕ್ವಿಕ್ ಶಿಫ್ಟರ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಈ ಫೀಚರ್ ಅನ್ನು ಆರ್‍‍ಸಿ 390 ಬೈಕಿನಲ್ಲಿಯೂ ಸಹ ನೀಡಲಾಗುವುದು.

ಬಹಿರಂಗವಾಯ್ತು ಬಿ‍ಎಸ್ 6 ಕೆಟಿ‍ಎಂ 390 ಡ್ಯೂಕ್ ಬೆಲೆ

ಸದ್ಯಕ್ಕೆ ಹೊಸ ಡ್ಯೂಕ್ 390 ಬಿ‍ಎಸ್ 6 ಬೈಕಿನ ಎಂಜಿನ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿಲ್ಲ. ಆದರೆ ಬಿ‍ಎಸ್ 4 ಎಂಜಿನ್ ಹಾಗೂ ಬಿ‍ಎಸ್ 6 ಎಂಜಿನ್‍‍ಗಳ ಮಧ್ಯೆ ಹೆಚ್ಚಿನ ವ್ಯತ್ಯಾಸಗಳಿರುವುದಿಲ್ಲವೆಂದು ಹೇಳಲಾಗಿದೆ.

ಬಹಿರಂಗವಾಯ್ತು ಬಿ‍ಎಸ್ 6 ಕೆಟಿ‍ಎಂ 390 ಡ್ಯೂಕ್ ಬೆಲೆ

ಹೊಸ ಡ್ಯೂಕ್ 390 ಬೈಕಿನಲ್ಲಿ 390 ಅಡ್ವೆಂಚರ್ ಬೈಕಿನಲ್ಲಿ ಅಳವಡಿಸಲಾಗಿರುವ 373 ಸಿಸಿಯ ಅಪ್‍‍ಡೇಟೆಡ್ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 42.9 ಬಿ‍‍ಹೆಚ್‍‍ಪಿ ಪವರ್ ಹಾಗೂ 37 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಹಿರಂಗವಾಯ್ತು ಬಿ‍ಎಸ್ 6 ಕೆಟಿ‍ಎಂ 390 ಡ್ಯೂಕ್ ಬೆಲೆ

ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಡ್ಯೂಕ್ 390 ಬೈಕ್ ಹೆಚ್ಚು ಕಡಿಮೆ ಬಿಎಸ್ 4 ಎಂಜಿನ್ ಹೊಂದಿರುವ ಡ್ಯೂಕ್ 390 ಬೈಕಿನಲ್ಲಿರುವ ಫೀಚರ್‍‍ಗಳನ್ನೇ ಹೊಂದಿರಲಿದೆ. ಇವುಗಳಲ್ಲಿ ಸಸ್ಪೆಂಷನ್ ಹಾಗೂ ಬ್ರೇಕ್‍‍ಗಳೂ ಸಹ ಸೇರಿವೆ.

ಬಹಿರಂಗವಾಯ್ತು ಬಿ‍ಎಸ್ 6 ಕೆಟಿ‍ಎಂ 390 ಡ್ಯೂಕ್ ಬೆಲೆ

ಇದರ ಜೊತೆಗೆ ಹೊಸ ಡ್ಯೂಕ್ 390 ಬೈಕಿನಲ್ಲಿ, 390 ಅಡ್ವೆಂಚರ್ ಬೈಕಿನಲ್ಲಿರುವಂತಹ ಎಲೆಕ್ಟ್ರಾನಿಕ್ ಪ್ಯಾಕೇಜ್ ಅಳವಡಿಸಲಾಗುವುದು.

Most Read Articles

Kannada
Read more on ಕೆಟಿಎಂ ktm
English summary
KTM 390 Duke BS6 price update revealed. Read in Kannada.
Story first published: Thursday, January 23, 2020, 15:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X