ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಮ್ಯಾಕ್ಸಿಸ್

ಮ್ಯಾಕ್ಸಿಸ್ ಟಯರ್ಸ್ ಕಂಪನಿಯು ತನ್ನ ಎಂ 922 ಎಫ್ ಸರಣಿಯ ಟಯರ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಎಂ 922 ಎಫ್ ಟಯರ್‌ಗಳನ್ನು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗಾಗಿ ತಯಾರಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಮ್ಯಾಕ್ಸಿಸ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗಾಗಿಯೇ ಎಂ 992 ಎಫ್ ಟಯರ್ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮ್ಯಾಕ್ಸಿಸ್ ಟಯರ್ಸ್ ಕಂಪನಿ ಹೇಳಿದೆ. ಈ ಹೊಸ ಟಯರ್ ಮಾದರಿಯು ಟ್ಯೂಬ್‌ಲೆಸ್ ಆಗಿದ್ದು, 12 ಇಂಚಿನ ರಿಮ್ ಗಾತ್ರದಲ್ಲಿ ಮಾತ್ರ ಲಭ್ಯವಿರಲಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಮ್ಯಾಕ್ಸಿಸ್

ಈ ಟಯರ್ ಗಳನ್ನು 90 / 90-12 ಹಾಗೂ 120 / 70-12 ಎಂಬ ಎರಡು ವಿಭಿನ್ನ ಸೆಕ್ಷನ್ ಗಳಲ್ಲಿ ಮಾರಾಟ ಮಾಡಲಾಗುವುದು. ಈ ಟಯರ್‌ಗಳು ಕ್ರಮವಾಗಿ 'ಜೆ' (100 ಕಿ.ಮೀ / ಗಂ) / 44 ಹಾಗೂ 'ಎಲ್' (120 ಕಿ.ಮೀ) / 51 ವೇಗದ ರೇಟಿಂಗ್ ಸೂಚಿಗಳನ್ನು ಹೊಂದಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಮ್ಯಾಕ್ಸಿಸ್

ಹೊಸ ಟಯರ್ ಮಾದರಿಯನ್ನು ವಿಭಿನ್ನವಾದ ರಬ್ಬರ್ ಕಾಂಪೋಸಿಟ್ ಬಳಸಿ ತಯಾರಿಸಲಾಗಿದೆ. ಈ ಸಾಲಿನಲ್ಲಿರುವ ಇತರ ಮಾದರಿಗಳಿಗೆ ಹೋಲಿಸಿದರೆ ಈ ಟಯರ್ ಗಳು ಹಗುರವಾಗಿರುತ್ತವೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಮ್ಯಾಕ್ಸಿಸ್

ಈ ಟಯರ್ ಗಳು ಕಡಿಮೆ ರೋಲಿಂಗ್ ರೆಸಿಸ್ಟೆನ್ಸ್ ಹೊಂದಿವೆ. ಈ ರೆಸಿಸ್ಟೆನ್ಸ್ ಟಯರ್ ಗಳ ಬಾಳಿಕೆ ಅವಧಿಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಕಡಿಮೆ ರೋಲಿಂಗ್ ರೆಸಿಸ್ಟೆನ್ಸ್ ಅಳವಡಿಸಲಾಗಿರುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಮ್ಯಾಕ್ಸಿಸ್

ಇದರಿಂದಾಗಿ ಟಯರ್ ಹಾಗೂ ರಸ್ತೆಗಳ ಸರ್ಫೆಸ್ ನಡುವಿನ ಘರ್ಷಣೆ ಕಡಿಮೆಯಾಗಿ ಕಾರ್ಯಾಚರಣೆಯು ಸುಗಮವಾಗುತ್ತದೆ. ಕಂಪನಿಯು ಹೊಸ ಎಂ 922 ಎಫ್ ಟಯರ್ ಮೇಲಿನ ಗ್ರಿಪ್ ಗುಣಮಟ್ಟವನ್ನು ಕಡಿಮೆ ಮಾಡಿಲ್ಲ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಮ್ಯಾಕ್ಸಿಸ್

ಈ ಟಯರ್ ಗಳಲ್ಲಿರುವ ಲ್ಯಾಟರಲ್ ಗ್ರೂವ್ ಗಳು ಒಣ ಹಾಗೂ ತೇವವಾಗಿರುವ ರಸ್ತೆಗಳಲ್ಲಿ ಹೆಚ್ಚಿನ ಗ್ರಿಪ್ ನೀಡುತ್ತವೆ. ಕಾಂಟ್ಯಾಕ್ಟ್ ಪ್ಯಾಚ್ ಟಯರ್‌ನಿಂದ ಸುಧಾರಿತ ಗ್ರಿಪ್ ಗೆ ಒಂದೇ ಸಹಾಯವಾಗಿ ಉಳಿದಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಮ್ಯಾಕ್ಸಿಸ್

ಟಯರ್‌ನಲ್ಲಿ ಮಾಡಿರುವ ಎಲ್ಲಾ ಬದಲಾವಣೆಗಳು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೆಚ್ಚು ಪ್ರತಿರೋಧವಿಲ್ಲದೆ ರಸ್ತೆಗಳಲ್ಲಿ ಸುಗಮವಾಗಿ ಪ್ರಯಾಣಿಸಲು ನೆರವಾಗುತ್ತವೆ. ಕಡಿಮೆ ರೆಸಿಸ್ಟೆನ್ಸ್ ವಿದ್ಯುತ್ ಮೋಟರ್‌ಗಳಿಂದ ಉತ್ತಮ ಶಕ್ತಿಯನ್ನು ಬಳಸುವುದಕ್ಕೆ ಸಮನಾಗಿರುತ್ತದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಮ್ಯಾಕ್ಸಿಸ್

ಇದು ಕಡಿಮೆ ಮೆಕಾನಿಕಲ್ ನಷ್ಟಗಳೊಂದಿಗೆ ಸುಧಾರಿತ ಸವಾರಿ ಶ್ರೇಣಿಗೆ ಅನುವಾದಿಸುತ್ತದೆ. ಎಂ 922 ಎಫ್ ದ್ವಿಚಕ್ರ ವಾಹನ ಟಯರ್‌ಗಳಿಗಾಗಿ ಮ್ಯಾಕ್ಸಿಸ್ ಕಂಪನಿಯು ಈ ಸೆಗ್ ಮೆಂಟಿನಲ್ಲಿಯೇ ಅತ್ಯುತ್ತಮ ಎನ್ನಬಹುದಾದ 5 + 1 ವಾರಂಟಿಯನ್ನು ನೀಡುತ್ತದೆ. ಕಂಪನಿಯು ಎಂ 922 ಎಫ್ ಟಯರ್ ಗಳ ಬೆಲೆಯನ್ನು ಇನ್ನೂ ಪ್ರಕಟಿಸಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಮ್ಯಾಕ್ಸಿಸ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಹಲವು ಹೊಸ ವಾಹನಗಳು ಈ ಸೆಗ್ ಮೆಂಟಿನಲ್ಲಿ ಬಿಡುಗಡೆಯಾಗುತ್ತಿವೆ. ಈ ಕಾರಣಕ್ಕೆ ಆಟೋಮೊಬೈಲ್ ಬಿಡಿಭಾಗ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೊಂದುವಂತಹ ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸುತ್ತಿವೆ.

Most Read Articles

Kannada
English summary
Maxxis launches M 922 F Tyres for electric two wheelers. Read in Kannada.
Story first published: Tuesday, November 3, 2020, 12:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X