ಬಹುನಿರೀಕ್ಷಿತ ಟ್ರೈಡೆಂಟ್ ಬೈಕಿನ ವಿನ್ಯಾಸ ಬಹಿರಂಗಪಡಿಸಿದ ಟ್ರಯಂಫ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟ್ರಯಂಫ್, ಟ್ರೈಡೆಂಟ್ ಎಂಬ ಹೊಸ ಬೈಕನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹೊಸ ಟ್ರೈಡೆಂಟ್ ಬೈಕನ್ನು ಟ್ರಯಂಫ್ ಕಂಪನಿಯು ಮುಂದಿನ ವರ್ಷದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ.

ಬಹುನಿರೀಕ್ಷಿತ ಟ್ರೈಡೆಂಟ್ ಬೈಕಿನ ವಿನ್ಯಾಸ ಬಹಿರಂಗಪಡಿಸಿದ ಟ್ರಯಂಫ್

ಹೊಸ ಟ್ರಯಂಫ್ ಟ್ರೈಡೆಂಟ್ ಮಿಡಲ್ ವೇಟ್ ರೋಡ್‌ಸ್ಟರ್ ಆಗಿರುತ್ತದೆ. ಈ ಬೈಕ್ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಸರಣಿಯ ಕೆಳಗಿನ ಸ್ಥಾನದಲ್ಲಿರುತ್ತದೆ. ಟ್ರಯಂಫ್ ಟ್ರೈಡೆಂಟ್ ವಿನ್ಯಾಸ ಮೂಲಮಾದರಿಯನ್ನು ಲಂಡನ್ ಡಿಸೈನ್ ಮ್ಯೂಸಿಯಂನಲ್ಲಿ ಬಹಿರಂಗಪಡಿಸಲಾಗಿದೆ. ಬ್ರಿಟನ್ ದೇಶದಲ್ಲಿ ಟ್ರಯಂಫ್‌ನ ಸಮರ್ಪಿತ ತಂಡವು ನಾಲ್ಕು ವರ್ಷಗಳ ಕಾಲ ಪರಿಶ್ರಮಿಸಿ ವಿನ್ಯಾಸಗೊಳಿಸಲಾಗಿದೆ. ಲಂಡನ್ ಡಿಸೈನ್ ಮ್ಯೂಸಿಯಂನಲ್ಲಿ ಪ್ರದರ್ಶಿಸಿರುವುದು ಮೂಲಮಾದರಿಯಾಗಿದೆ.

ಬಹುನಿರೀಕ್ಷಿತ ಟ್ರೈಡೆಂಟ್ ಬೈಕಿನ ವಿನ್ಯಾಸ ಬಹಿರಂಗಪಡಿಸಿದ ಟ್ರಯಂಫ್

ಹೊಸ ಟ್ರಯಂಫ್ ಟ್ರೈಡೆಂಟ್ ಅನ್ನು ಹಿಂಕ್ಲೆ ವಿನ್ಯಾಸ ತಂಡವು ರೂಪಿಸಿದೆ ಮತ್ತು ಅಭಿವೃದ್ಧಿಪಡಿಸಿದೆ, ಇಟಾಲಿಯನ್ ಡಿಸೈನರ್ ರೊಡಾಲ್ಫೊ ಫ್ರಾಸ್ಕೋಲಿಯಿಂದ ಹೆಚ್ಚುವರಿ ಸ್ಟೈಲಿಂಗ್ ಇನ್ ಫುಟ್ ಅನ್ನು ಅಭಿವೃದ್ಧಿಪಡಿಸಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಬಹುನಿರೀಕ್ಷಿತ ಟ್ರೈಡೆಂಟ್ ಬೈಕಿನ ವಿನ್ಯಾಸ ಬಹಿರಂಗಪಡಿಸಿದ ಟ್ರಯಂಫ್

ಅವರು ಟ್ರಯಂಫ್ ಟೈಗರ್ 900 ಬೈಕನ್ನು ಕೂಡ ವಿನ್ಯಾಸಗೊಳಿಸಿದ್ದಾರೆ, ಟ್ರೈಡೆಂಟ್ ವಿನ್ಯಾಸದ ಮೂಲಮಾದರಿಯು ಟ್ರಯಂಫ್‌ಗಾಗಿ ಒಂದು ಉತ್ತೇಜಕ ಅಧ್ಯಾಯದ ಆರಂಭವನ್ನು ನೀಡಬಹುದು.

ಬಹುನಿರೀಕ್ಷಿತ ಟ್ರೈಡೆಂಟ್ ಬೈಕಿನ ವಿನ್ಯಾಸ ಬಹಿರಂಗಪಡಿಸಿದ ಟ್ರಯಂಫ್

ಬಿಡುಗಡೆಯಾಗಲಿರುವ ಟ್ರೈಡೆಂಟ್ ಬೈಕ್ ರೋಮಾಂಚಕಾರಿ ವಿನ್ಯಾಸವನ್ನು ಹೊಂದಿದೆ, ಈ ಹೊಸ ಟ್ರೈಡೆಂಟ್ ಬೈಕ್ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು. ಹೊಸ ಟ್ರಯಂಫ್ ಟ್ರೈಡೆಂಟ್ ಬೈಕಿನಲ್ಲಿ 650 ಸಿಸಿ ಎಂಜಿನ್ ಅನ್ನು ಅಳವಡಿಸಬಹುದು. ಟ್ರಯಂಫ್ ಟ್ರೈಡೆಂಟ್ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಮಾದರಿಗಳ ಅಲ್ಯೂಮಿನಿಯಂ ಫ್ರೇಮ್‌ ಅನ್ನು ಹೊಂದಿರಬಹುದು.

MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಬಹುನಿರೀಕ್ಷಿತ ಟ್ರೈಡೆಂಟ್ ಬೈಕಿನ ವಿನ್ಯಾಸ ಬಹಿರಂಗಪಡಿಸಿದ ಟ್ರಯಂಫ್

ಈ ಹೊಸ ಟ್ರಯಂಫ್ ಟ್ರೈಡೆಂಟ್ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಬಿ650ಆರ್, ಕವಾಸಕಿ ಝಡ್650 ಮತ್ತು ಯಮಹಾ ಎಂಟಿ-07 ಬೈಕುಗಳಿಗೆ ಪೈಪೋಟಿಯನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಬಹುನಿರೀಕ್ಷಿತ ಟ್ರೈಡೆಂಟ್ ಬೈಕಿನ ವಿನ್ಯಾಸ ಬಹಿರಂಗಪಡಿಸಿದ ಟ್ರಯಂಫ್

ಹೊಸ ಟ್ರಯಂಫ್ ಟ್ರೈಡೆಂಟ್ ಬೈಕನ್ನು ಥೈಲ್ಯಾಂಡ್‌ನ ಟ್ರಯಂಫ್‌ನ ಉತ್ಪಾದನಾ ಕೇಂದ್ರದಲ್ಲಿ ತಯಾರಿಸಲಾಗುತ್ತದೆ. ಟ್ರೈಡೆಂಟ್ ಎಂಬ ಹೆಸರಿನ ಹಿಂದೆ ಒಂದು ರೋಚಕ ಇತಿಹಾಸವಿದೆ. 1968 ರಿಂದ 1975 ರವರೆಗೆ ಟ್ರೈಡೆಂಟ್ ಎಂಬ ಹಳೆಯ ಐಕಾನಿಕ್ ಬೈಕಿನ ಉತ್ಪಾದನೆಯಲ್ಲಿತ್ತು.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಹುನಿರೀಕ್ಷಿತ ಟ್ರೈಡೆಂಟ್ ಬೈಕಿನ ವಿನ್ಯಾಸ ಬಹಿರಂಗಪಡಿಸಿದ ಟ್ರಯಂಫ್

ಅದೇ ಐಕಾನಿಕ್ ಬೈಕಿನ ಹೆಸರಿನಲ್ಲಿ ಟ್ರಯಂಫ್ ಕಂಪನಿಯು ಹೊಸ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹಳೆಯ ಟ್ರೈಡೆಂಟ್ ಬೈಕಿನಲ್ಲಿ 740ಸಿಸಿ, ಏರ್-ಕೂಲ್ಡ್, ಓವರ್‌ಹೆಡ್ ವಾಲ್ವ್ ಸ್ಟ್ರೈಟ್-ಥ್ರೀ ಎಂಬ ಎಂಜಿನ್ ಅನ್ನು ಹೊಂದಿತ್ತು. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 58 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತಿತ್ತು.

ಬಹುನಿರೀಕ್ಷಿತ ಟ್ರೈಡೆಂಟ್ ಬೈಕಿನ ವಿನ್ಯಾಸ ಬಹಿರಂಗಪಡಿಸಿದ ಟ್ರಯಂಫ್

ಈ ಹೊಸ ಟ್ರೈಡೆಂಟ್ ಬೈಕನ್ನು ಟ್ರಯಂಫ್ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಟ್ರಯಂಫ್ ಟ್ರೈಡೆಂಟ್ ಬೈಕ್ ಜಪಾನ್ ಮೂಲದ ರೋಡ್‌ಸ್ಟರ್ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Triumph Trident Design Prototype Unveiled. Read In Kannada.
Story first published: Tuesday, August 25, 2020, 20:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X