ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಜಿ 310 ಟ್ವಿನ್ ಬೈಕುಗಳು

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು 2021ರ ಜಿ 310 ಆರ್ ನೇಕೆಡ್ ಸ್ಟ್ರೀಟ್ ಫೈಟರ್ ಮತ್ತು ಜಿ 310 ಜಿಎಸ್ ಬೈಕುಗಳನ್ನು ಈ ವರ್ಷದ ಆರಂಭದಲ್ಲಿ ಯುರೋಪಿನಲ್ಲಿ ಬಿಡುಗಡೆಗೊಳಿಸಿದ್ದರು. ಈ ಹೊಸ ಬಿಎಂಡಬ್ಲ್ಯು ಜಿ 310 ಟ್ವಿನ್ ಬೈಕುಗಳು ಭಾರತದಲ್ಲಿಯು ಕೂಡ ಬಿಡುಗಡೆಯಾಗಲಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಜಿ 310 ಟ್ವಿನ್ ಬೈಕುಗಳು

ಭಾರತದಲ್ಲಿ ಈ ಬಿಎಂಡಬ್ಲ್ಯು ಜಿ 310 ಟ್ವಿನ್ ಬೈಕುಗಳ ಉತ್ಪಾದನೆಯನ್ನು ಪ್ರಾರಂಭಿಸಲಿದೆ. ಆದರೆ ಭಾರತದಲ್ಲಿ ಕೊರೊನಾ ಭೀತಿ ಇರುವುದರಿಂದ ಭಾರತದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲು ವಿಳಂಬವಾಗಿದೆ. ಭಾರತದಲ್ಲಿ ಕೆಲವು ಬದಲಾವಣೆಗಳನ್ನು ನಡೆಸಿ ಬಿಡುಗಡೆಗೊಳಿಸಬಹುದು. ಭಾರತದಲ್ಲಿ ಇತ್ತೀಚೆಗೆ ಹೊಸ ಬಿಎಂಡಬ್ಲ್ಯು ಜಿ 310 ಆರ್ ನೇಕೆಡ್ ಸ್ಟ್ರೀಟ್ ಫೈಟರ್ ಮತ್ತು ಜಿ 310 ಜಿಎಸ್ ಬೈಕುಗಳು ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ. ಈ ಬಿಎಂಡಬ್ಲ್ಯು ಟ್ವಿನ್ ಬೈಕುಗಳು ಸ್ಪಾಟ್ ಟೆಸ್ಟ್ ನಡೆಸುತ್ತಿರುವು ನಡೆಸುತ್ತಿರುವ ಚಿತ್ರಗಳು ಆನ್‍ಲೈನ್ ನಲ್ಲಿಬಹಿರಂಗವಾಗಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಜಿ 310 ಟ್ವಿನ್ ಬೈಕುಗಳು

ಇದರಲ್ಲಿ ಹೊಸ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ನವೀಕರಿಸಿದ ಫ್ಯೂಯಲ್ ಟ್ಯಾಂಕ್ ಮತ್ತು ರೇಡಿಯೇಟರ್ ಜೊತೆಗೆ ಹೊಸ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಹೊಸ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಹೆಚ್ಚಿನ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಜಿ 310 ಟ್ವಿನ್ ಬೈಕುಗಳು

ಈ ಹೊಸ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಕೆಟಿಎಂ 390 ಡ್ಯೂಕ್ ಬೈಕಿಗೆ ಪೈಪೋಟಿಯನ್ನು ನೀಡುತ್ತದೆ. ಇನ್ನು 2021 ಬಿಎಂಡಬ್ಲ್ಯು ಜಿ 310 ಜಿಎಸ್ ಅಡ್ವೆಂಚರ್ ಟೂರರ್ ಬೈಕ್ ಕೂಡ ಹೊಸ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಜಿ 310 ಟ್ವಿನ್ ಬೈಕುಗಳು

ಈ ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನಲ್ಲಿ ಸ್ಪೋರ್ಟಿಯರ್ ನಿಲುವನ್ನು ಹೊಂದಲು ಬಿಎಂಡಬ್ಲ್ಯು ವಿನ್ಯಾಸಕರು ಟೂರರ್‌ನ ಸೆಮಿ-ಫೇರಿಂಗ್ ಅನ್ನು ಹೆಚ್ಚಿಸಿದ್ದಾರೆ. ಈ ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕೆಟಿಎಂ 390 ಅಡ್ವೆಂಚರ್ ಬೈಕಿಗೆ ಪೈಪೋಟಿಯನ್ನು ನೀಡುತ್ತದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಜಿ 310 ಟ್ವಿನ್ ಬೈಕುಗಳು

ಬಿಎಂಡಬ್ಲ್ಯು ಟ್ವಿನ್ ಬೈಕುಗಳು 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಬಹುದು. ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಕಂಪನಿಯು ಈ ಟ್ವಿನ್ ಬೈಕುಗಳನ್ನು ಯುರೋ 5 ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಜಿ 310 ಟ್ವಿನ್ ಬೈಕುಗಳು

ಭಾರತದಲ್ಲಿ ಬಿಡುಗಡೆಯಾಗಲಿರುವ ಬಿಎಂಡಬ್ಲ್ಯು ಟ್ವಿನ್ ಬೈಕುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ, ಹೊಸ ಟ್ವಿನ್ ಬೈಕುಗಳು ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಪವರ್ ಫುಲ್ ಆಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಂಡಬ್ಲ್ಯು ಜಿ 310 ಟ್ವಿನ್ ಬೈಕುಗಳು 33.6 ಬಿಹೆಚ್‍ಪಿ ಪವರ್ ಮತ್ತು 28 ಎನ್‌ಎಂ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ, ಆದರೆ ಹೊಸ ಬಿಎಂಡಬ್ಲ್ಯು ಜಿ 310 ಟ್ವಿನ್ ಬೈಕುಗಳ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಬಹಿರಂಗವಾಗಿಲ್ಲ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಜಿ 310 ಟ್ವಿನ್ ಬೈಕುಗಳು

ಪ್ರಸ್ತುತ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನ ಬೆಲೆಯು ರೂ.3.49 ಲಕ್ಷಗಳಾದರೆ, ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಬೆಲೆ ರೂ.2.99 ಲಕ್ಷಗಳಾಗಿದೆ. ಆದರೆ ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕುಗಳ ಬೆಲೆಯು ತುಸು ದುಬಾರಿಯಾಗಿರಬಹುದು ಎಂದು ನಿರೀಕ್ಶಿಸುತ್ತೇವೆ.

Most Read Articles

Kannada
English summary
2021 BMW G 310 GS Spied In India As Launch Nears Details. Read In Kannada.
Story first published: Friday, July 3, 2020, 12:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X