ಬಿಡುಗಡೆಯಾಯ್ತು 2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕ್

ಹಾರ್ಲೆ ಡೇವಿಡ್ಸನ್ ಇಂಡಿಯಾ ಕಂಪನಿಯು ತನ್ನ 2020ರ ಫ್ಯಾಟ್ ಬಾಯ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. 2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.18.25 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು 2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕ್

2020ರ ಫ್ಯಾಟ್ ಬಾಯ್ ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಸ್ಟ್ಯಾಂಡರ್ಡ್ ಮಿಲ್ವಾಕೀ 107 ಎಂಜಿನ್ ಮತ್ತು ಇನ್ನೊಂದು ಹೆಚ್ಚು ಪವರ್‍ ಫುಲ್ ಮಿಲ್ವಾಕೀ 114 ವೆರಿಯೆಂಟ್ ಆಗಿದೆ. ಹೆಚ್ಚು ಪವರ್‌ಫುಲ್ ಎಂಜಿನ್ ಹೊಂದಿರುವ ಸ್ಟ್ಯಾಂಡರ್ಡ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.20.10 ಲಕ್ಷಗಳಾಗಿದೆ. 2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು 2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕ್

ಮುಂದಿನ ಏಪ್ರಿಲ್ ತಿಂಗಳಲ್ಲಿ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗಲಿದೆ. 2020ರ ಫ್ಯಾಟ್ ಬಾಯ್ ಬೈಕನ್ನು ಈ ಹೊಸ ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಹೊಸ ಬೈಕಿನಲ್ಲಿ ಹೆಚ್-ಡಿ ಯ ಎಲೆಕ್ಟ್ರಾನಿಕ್ ಸೀಕ್ವೆನ್ಶಿಯಲ್ ಪೋರ್ಟ್ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಆದರೆ ಈ ಮಾಹಿತಿಯನ್ನು ಹಾರ್ಲೆ ಡೇವಿಡ್ಸನ್ ತಮ್ಮ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ತಿಳಿಸಲಾಗಿಲ್ಲ.

ಬಿಡುಗಡೆಯಾಯ್ತು 2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕ್

2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೇಸ್ ವೆರಿಯೆಂಟ್‍ನಲ್ಲಿ 1.745 ಸಿಸಿ ವಿ-ಟ್ವಿನ್ ಏರ್-ಕೂಲ್ಡ್, ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 3000 ಆರ್‌ಪಿಎಂನಲ್ಲಿ 144 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು 2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕ್

ಇನ್ನು 2020ರ ಫ್ಯಾಟ್ ಬಾಯ್ ಸ್ಟ್ಯಾಂಡರ್ಡ್ ವೆರಿಯೆಂಟ್‍ನಲ್ಲಿ 1,868 ಸಿಸಿ ವಿ-ಟ್ವಿನ್ ಏರ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 156 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು 2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕ್

ಹೊಸ ಹಾರ್ಲೆ-ಡೇವಿಡ್ಸನ್ ಫ್ಯಾಟ್ ಬಾಯ್ ವಿನ್ಯಾಸವು ಅದರ ಹಿಂದಿನ ಮಾದರಿಗೆ ಹೋಲುವಂತಿದೆ. 2020ರ ಫ್ಯಾಟ್ ಬಾಯ್ ಬೈಕ್ 2,370 ಎಂಎಂ ಉದ್ದ ಮತ್ತು 670 ಎಂಎಂ ಸೀಟರ್ ಎತ್ತರವನ್ನು ಹೊಂದಿದೆ. ಈ ಹೊಸ ಬೈಕ್ 1665 ಎಂಎಂ ವ್ಹೀಲ್‍ಬೇಸ್ ಅನ್ನು ಹೊಂದಿದೆ. ಇನ್ನು ಈ ಬೈಕ್ 115 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು 2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕ್

2020ರ ಫ್ಯಾಟ್ ಬಾಯ್ ಬೈಕಿನ ಎರಡು ರೂಪಾಂತರಗಳು ಕೂಡ ಅತ್ಯಾಕರ್ಷಕ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಮಿಲ್ವಾಕೀ 107 ಬೇಸ್ ವೆರಿಯೆಂಟ್ ಐದು ರೀತಿಯ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ಬ್ಲ್ಯಾಕ್, ಸ್ಪ್ರೂಸ್, ಬಾರ್ರಾಕುಡಾ ಸಿಲ್ವರ್, ರಿವರ್ ರಾಕಿ ಗ್ರೇ/ವಿವಿದ್ ಬ್ಲ್ಯಾಕ್ & ಬಾರ್ರಾಕುಡಾ ಸಿಲ್ವರ್/ಬ್ಲ್ಯಾಕ್ ಡೆನಿಮ್ ಬಣ್ಣಗಳಾಗಿವೆ.

ಬಿಡುಗಡೆಯಾಯ್ತು 2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕ್

ಇನ್ನು ಟಾಪ್ ವೆರಿಯೆಂಟ್ ಮೂರು ರೀತಿಯ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇದು ಸ್ಟಿಲೆಟ್ಟೊ ರೆಡ್, ಮಿಡ್ನೈಟ್ ಬ್ಲೂ ಮತ್ತು ಜೆಫ್ರ್ ಬ್ಲೂ / ಬ್ಲ್ಯಾಕ್ ಸುಂಗ್ಲೋ ಬಣ್ಣಗಳಾಗಿದೆ.

ಬಿಡುಗಡೆಯಾಯ್ತು 2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕ್

ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಕಂಪನಿಯ ದೀರ್ಘ ಕಾಲದಿಂದಲೂ ಜನಪ್ರಿಯ ಮಾದರಿಯಾಗಿದೆ. 2020ರ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಕ್ಲಾಸಿಕ್ ಅಮೇರಿಕನ್ ವಿನ್ಯಾಸವನ್ನು ಹೊಂದಿದೆ.ಇದು ಲಾಂಗ್ ಡ್ರೈವ್‍ಗೂ ಇದು ಉತ್ತಮ ಆಯ್ಕೆಯಾಗಿದೆ.

Most Read Articles

Kannada
English summary
2020 Harley-Davidson Fat Boy Launched. Read in Kannada.
Story first published: Friday, March 27, 2020, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X