ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ

ಹೀರೋ ಮೋಟೊಕಾರ್ಪ್ ಕಂಪನಿಯು ಪ್ಲೆಷರ್ ಪ್ಲಸ್ ಪ್ಲಾಟಿನಂ ಎಡಿಷನ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.60,950 ಗಳಾಗಿದೆ.

ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ

ಹೊಸ ಪ್ಲೆಷರ್ ಪ್ಲಸ್ ಪ್ಲಾಟಿನಂ ಎಡಿಷನ್ ಸ್ಕೂಟರ್ ಹಲವಾರು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ. ಜೊತೆಗೆ ಕೆಲವು ಹೆಚ್ಚುವರಿ ಫೀಚರ್ ಗಳನ್ನು ಸಹ ಪಡೆದುಕೊಂಡಿದೆ. ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಹೊಸ ಮ್ಯಾಟ್ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ಇದರ ಆಕರ್ಷಕ ವಿನ್ಯಾಸದಿಂದ ಮತ್ತಷ್ಟು ಐಷಾರಾಮಿ ಲುಕ್ ಅನ್ನು ನೀಡುತ್ತದೆ.

ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ

ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಹೊಸ ಮಿರರ್ ಗಳು, ಮಫ್ಲರ್ ಪ್ರೊಟೆಕ್ಟರ್ ಮತ್ತು ಹ್ಯಾಂಡಲ್‌ಬಾರ್ ತುದಿಗಳಲ್ಲಿ ಕ್ರೋಮ್ ಸೇರ್ಪಡೆಯಾಗಿದೆ. ಇದು ಫೆಂಡರ್ ಪಟ್ಟೆಗಳನ್ನು ಸಹ ಹೊಂದಿದೆ, ಇದು ಅದರ ಸ್ಟೈಲಿಂಗ್ ಅಂಶವನ್ನು ಮತ್ತಷ್ಟು ಹೆಚ್ಚಿಸುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ

ಇದು ಮೊದಲಿಗಿಂತ ಹೆಚ್ಚು ಆಕರ್ಷಕವಾಗಿದೆ. ಕಾಸ್ಮೆಟಿಕ್ ನವೀಕರಣಗಳ ಹೊರತಾಗಿ, ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಲೋ ಫ್ಯೂಯಲ್ ಇಂಡಿಕೇಟರ್, ಹಿಂಬಂದಿ ಪ್ರಯಾಣಿಕರಿಗೆ ಬ್ಯಾಕ್ ರೆಸ್ಟ್, ಯಲ್-ಟೋನ್ ಸೀಟ್ ಅಪ್ಹೋಲ್ಸ್ಟರಿ, ವೈಟ್ ರಿಮ್ ಟೇಪ್ ಮತ್ತು 3ಡಿ ಲೋಗೋ ಬ್ಯಾಡ್ಜಿಂಗ್ ಅನ್ನು ಹೊಂದಿದೆ.

ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ

ಸ್ಕೂಟರ್ ಬಿಡುಗಡೆ ಸಂದರ್ಭದಲ್ಲಿ, ಹೀರೋ ಮೋಟೊಕಾರ್ಪ್ ಸೇಲ್ಸ್ ವಿಭಾಗದ ಮುಖ್ಯಸ್ಥ ನವೀನ್ ಚೌಹಾನ್ ಅವರು ಮಾತನಾಡಿ, "ಐಕಾನಿಕ್ ಪ್ಲೆಷರ್ ಗ್ರಾಹಕರ ಮೆಚ್ಚಿನ ಬ್ರ್ಯಾಂಡ್ ಆಗಿದೆ. ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಆಕರ್ಷಕ ವಿನ್ಯಾಸದೊಂದಿಗೆ ನಮ್ಮ ಸ್ಕೂಟರ್ ಪೋರ್ಟ್ಫೋಲಿಯೊವನ್ನು ಮತಷ್ಟು ಬಲಪಡಿಸುತ್ತದೆ ಎಂದು ಹೇಳಿದರು.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ

ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಸ್ಟ್ಯಾಂಡರ್ಡ್ ಆವೃತ್ತಿಗೆ ಹೋಲುತ್ತದೆ. ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ನಲ್ಲಿ 110ಸಿಸಿ ಫ್ಯೂಯಲ್ ಇಂಜೆಕ್ಟ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8 ಬಿಹೆಚ್‍ಪಿ ಪವರ್ ಮತ್ತು 8.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ

ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಶೇ.10ರಷ್ಟು ಮೈಲೇಜ್ ಹೆಚ್ಚು ನೀಡುತ್ತದೆ. ಸಸ್ಪೆಂಕ್ಷನ್ ಮತ್ತು ಬ್ರೇಕಿಂಗ್ ಸೇರಿದಂತೆ ಸ್ಕೂಟರ್‌ನಲ್ಲಿರುವ ಇತರ ಯಾಂತ್ರಿಕ ಭಾಗಗಳು ಸಹ ಸ್ಟ್ಯಾಂಡರ್ಡ್ ಮಾದರಿಗಳಿಂದ ಬದಲಾಗುವುದಿಲ್ಲ ಎಂದು ಹೇಳಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ

ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಇತ್ತೀಚೆಗೆ ಬಿಡುಗಡೆಯಾದ ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್ ಎರಡು ಕೂಡ ವಿಶೇಷ ಆವೃತ್ತಿಗಳಾಗಿದೆ. ಎರಡೂ ಸ್ಕೂಟರ್ ಮಾದರಿಗಳು ಆಯಾ ವಿಭಾಗಗಳಲ್ಲಿ ಜನಪ್ರಿಯ ಮಾದರಿಗಳಾಗಿವೆ ಈ ಎರಡು ಸ್ಕೂಟರ್ ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ

ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಭಾರತೀಯ ಮಾರುಕಟ್ಟೆಯ 110 ಸಿಸಿ ಸ್ಕೂಟರ್ ವಿಭಾಗದಲ್ಲಿ ಜನಪ್ರಿಯ ಕೊಡುಗೆಯಾಗಿದೆ. ಈ ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 6ಜಿ, ಟಿವಿಎಸ್ ಜೂಪಿಟರ್ ಪೈಪೋಟಿ ನೀಡುತ್ತದೆ.

Most Read Articles

Kannada
English summary
Hero Pleasure+ Platinum Scooter Launched In India. Read In Kannada.
Story first published: Friday, October 16, 2020, 14:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X