ತಮಿಳುನಾಡು ಪಾಲಾದ ಓಲಾ ಇವಿ ಸ್ಕೂಟರ್ ಉತ್ಪಾದನಾ ಘಟಕ

ಆಟೋ ಉತ್ಪಾದನಾ ಕ್ಷೇತ್ರಕ್ಕೆ ಅಧಿಕೃತವಾಗಿ ಪ್ರವೇಶಿಸಿರುವ ಕ್ಯಾಬ್ ಸೇವೆಗಳ ಕಂಪನಿಯಾದ ಓಲಾ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆದಲ್ಲೂ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ವಿಶ್ವದಲ್ಲೇ ಅತಿ ಇವಿ ವಾಹನಗಳ ಉತ್ಪಾದನಾ ಘಟಕ ತೆರೆಯುವ ಅಂತಿಮ ಹಂತದ ಸಿದ್ದತೆಯಲ್ಲಿದೆ.

ತಮಿಳುನಾಡು ಪಾಲಾದ ಓಲಾ ಇವಿ ಸ್ಕೂಟರ್ ಉತ್ಪಾದನಾ ಘಟಕ

2021-22 ಹಣಕಾಸು ವರ್ಷದಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಸಿದ್ದತೆಯಲ್ಲಿರುವ ಓಲಾ ಕಂಪನಿಯು ಭಾರತದಲ್ಲೇ ಉತ್ಪಾದನಾ ಘಟಕ ನಿರ್ಮಾಣ ಮಾಡುತ್ತಿದ್ದು, ಹೊಸ ಯೋಜನೆಗಾಗಿ ನೇದರ್ಲ್ಯಾಂಡ್ ಮೂಲದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯೊಂದಿಗೆ ಜೊತೆಗೂಡಿ ಬೃಹತ್ ಯೋಜನೆಗೆ ಚಾಲನೆ ನೀಡಿದೆ. ಹೊಸ ಯೋಜನೆ ಅಡಿಯಲ್ಲಿ ವಿವಿಧ ರೇಂಜ್ ಮಾದರಿಯ ಹಲವು ಎಲೆಕ್ಟ್ರಿಕ್ ಉತ್ಪಾದನೆ ಮಾಡಿರುವ ಓಲಾ ಕಂಪನಿಯು ಭಾರತೀಯ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ತವಕದಲ್ಲಿದೆ.

ತಮಿಳುನಾಡು ಪಾಲಾದ ಓಲಾ ಇವಿ ಸ್ಕೂಟರ್ ಉತ್ಪಾದನಾ ಘಟಕ

ಹೆಚ್ಚುತ್ತಿರುವ ಇಂಧನ ಬೆಲೆಗಳ ಪರಿಣಾಮ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಆಟೋ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಪರಿಚಯಿಸುತ್ತಿವೆ.

ತಮಿಳುನಾಡು ಪಾಲಾದ ಓಲಾ ಇವಿ ಸ್ಕೂಟರ್ ಉತ್ಪಾದನಾ ಘಟಕ

ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಈಗಾಗಲೇ ಸಾಂಪ್ರಾದಾಯಿಕ ವಾಹನಗಳನ್ನು ಮಾರಾಟ ಮಾಡುತ್ತಿರುವ ಕಂಪನಿಗಳಿಂತಲೂ ಸ್ಟಾರ್ಟ್ ಅಪ್ ಕಂಪನಿಗಳೇ ಹೆಚ್ಟಿನ ಮಟ್ಟದಲ್ಲಿ ಗ್ರಾಹಕರ ಗಮನಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಈಗಾಗಲೇ ಹಲವಾರು ಸ್ಟಾರ್ಟ್-ಅಪ್ ಕಂಪನಿಗಳು ವಿವಿಧ ಮಾದರಿಯ ಇವಿ ವಾಹನಗಳನ್ನು ಮಾರಾಟ ಮಾಡುವ ಮೂಲಕ ಮುನ್ನಡೆ ಸಾಧಿಸುತ್ತಿವೆ.

ತಮಿಳುನಾಡು ಪಾಲಾದ ಓಲಾ ಇವಿ ಸ್ಕೂಟರ್ ಉತ್ಪಾದನಾ ಘಟಕ

ಈ ನಿಟ್ಟಿನಲ್ಲಿ ಹೊಸ ಪಯತ್ನಕ್ಕೆ ಕೈ ಹಾಕಿರುವ ದೇಶದ ಅತಿ ದೊಡ್ಡ ಕ್ಯಾಬ್ ಸೇವಾ ಕಂಪನಿಯಾದ ಓಲಾ ಕೂಡಾ ಇದೀಗ ಆಟೋ ಉತ್ಪಾದನಾ ಉದ್ಯಮದಲ್ಲಿ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗಿದ್ದು, ವಿಶ್ವದಲ್ಲೇ ಅತಿ ದೊಡ್ಡಇವಿ ಸ್ಕೂಟರ್ ನಿರ್ಮಾಣ ಘಟಕವನ್ನು ಭಾರತದಲ್ಲಿ ತೆರೆಯುವ ಯೋಜನೆಗೆ ಅಂತಿಮ ಒಪ್ಪಿಗೆ ಸೂಚಿಸಿದೆ. ಹೊಸ ವಾಹನ ಉತ್ಪಾದನಾ ಘಟಕವು ತಮಿಳುನಾಡಿನಲ್ಲಿ ಆರಂಭವಾಗುವುದು ಬಹುತೇಕ ಖಚಿತವಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಕೂಡಾ ಪೂರ್ಣಗೊಂಡಿದೆ.

ತಮಿಳುನಾಡು ಪಾಲಾದ ಓಲಾ ಇವಿ ಸ್ಕೂಟರ್ ಉತ್ಪಾದನಾ ಘಟಕ

ಹೊಸ ಯೋಜನೆ ಕುರಿತಂತೆ ತಮಿಳುನಾಡು ಸರ್ಕಾರದೊಂದಿಗೆ ಅಂತಿಮ ಹಂತದ ಪತ್ರ ವ್ಯವಹಾರ ಪೂರ್ಣಗೊಳಿಸಿರುವ ಓಲಾ ಕಂಪನಿಯು ಹೊಸ ವಾಹನ ಘಟಕ ನಿರ್ಮಾಣದ ಬಗೆಗೆ ಸಂತಸ ವ್ಯಕ್ತಪಡಿಸಿದ್ದು, ಹೊಸ ಯೋಜನೆ ಕುರಿತಾಗಿ ಶೀಘ್ರದಲ್ಲೇ ಮತ್ತಷ್ಟು ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಮಾಧ್ಯಮ ಸಂದರ್ಶನವೊಂದರಲ್ಲಿ ಮಾಹಿತಿ ಬಿಚ್ಚಿಟ್ಟಿದೆ.

ತಮಿಳುನಾಡು ಪಾಲಾದ ಓಲಾ ಇವಿ ಸ್ಕೂಟರ್ ಉತ್ಪಾದನಾ ಘಟಕ

ಮಾಹಿತಿಗಳ ಪ್ರಕಾರ, ಓಲಾ ಕಂಪನಿಯು ಹೊಸ ಘಟಕವನ್ನು ಆರಂಭಿಕವಾಗಿ 100 ಎಕರೆ ವ್ಯಾಪ್ತಿಯಲ್ಲಿ ಹೊಸ ಘಟಕಕ್ಕೆ ಚಾಲನೆ ನೀಡಲಿದ್ದು, ಇದಕ್ಕಾಗಿ ಓಲಾ ಕಂಪನಿಯು ಆರಂಭಿಕ ಬಂಡವಾಳವಾಗಿ ರೂ. 2,400 ಕೋಟಿ ಹೂಡಿಕೆ ಮಾಡುತ್ತಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ತಮಿಳುನಾಡು ಪಾಲಾದ ಓಲಾ ಇವಿ ಸ್ಕೂಟರ್ ಉತ್ಪಾದನಾ ಘಟಕ

ಯೋಜನೆ ಆರಂಭದ ನಂತರ ಬಂಡವಾಳದ ಪ್ರಮಾಣವು ಮತ್ತಷ್ಟು ಹೆಚ್ಚಳವಾಗಲಿದ್ದು, ಹೊಸ ಘಟಕದ ಮೂಲಕ ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನಿರ್ಮಾಣ ಮಾಡುವ ಗುರಿಹೊಂದಲಾಗಿದೆ. ಈ ಮೂಲಕ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶದೊಂದಿಗೆ ಸುಮಾರು 10 ಸಾವಿರ ಪ್ರತ್ಯೇಕ್ಷ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ.

ತಮಿಳುನಾಡು ಪಾಲಾದ ಓಲಾ ಇವಿ ಸ್ಕೂಟರ್ ಉತ್ಪಾದನಾ ಘಟಕ

ಹೊಸ ಉತ್ಪಾದನಾ ಘಟಕ ತೆರೆಯುವ ಕುರಿತಂತೆ ಈ ಮೊದಲು ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದ ಓಲಾ ಕಂಪನಿಯು ಅಂತಿಮವಾಗಿ ತಮಿಳುನಾಡು ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ತಮಿಳುನಾಡು ಪಾಲಾದ ಓಲಾ ಇವಿ ಸ್ಕೂಟರ್ ಉತ್ಪಾದನಾ ಘಟಕ

ಓಲಾ ಜೊತೆಗೂಡಿರುವ ಎಟರ್ಗೋ ಕಂಪನಿಯು ಈಗಾಗಲೇ ಯುರೋಪಿನ ಪ್ರಮುಖ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯೊಂದಿಗೆ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಮಾರಾಟಮಾಡುತ್ತಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಆ್ಯಪ್‌ಸ್ಕೂಟರ್ ಮಾದರಿಯನ್ನು ಭಾರತದಲ್ಲೂ ಬಿಡುಗಡೆ ಮಾಡಲು ಸಿದ್ದತೆ ನಡೆಸಲಾಗುತ್ತಿದೆ.

ತಮಿಳುನಾಡು ಪಾಲಾದ ಓಲಾ ಇವಿ ಸ್ಕೂಟರ್ ಉತ್ಪಾದನಾ ಘಟಕ

ಎಟರ್ಗೋ ಆ್ಯಪ್‌ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 240 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ತೆಗೆದುಹಾಕಬಹುದಾದ ಬ್ಯಾಟರಿ ಸೌಲಭ್ಯದೊಂದಿಗೆ ಕೇವಲ 3 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

ತಮಿಳುನಾಡು ಪಾಲಾದ ಓಲಾ ಇವಿ ಸ್ಕೂಟರ್ ಉತ್ಪಾದನಾ ಘಟಕ

ಜೊತೆಗೆ ಸಿಟಿ ರೈಡಿಂಗ್‌ಗಾಗಿ ಅತ್ಯುತ್ತಮ ವಿನ್ಯಾಸ ಪಡೆದುಕೊಂಡಿರುವ ಎಟರ್ಗೋ ಆ್ಯಪ್‌ಸ್ಕೂಟರ್ ಮಾದರಿಯು ಕನೆಕ್ಟೆಡ್ ಫೀಚರ್ಸ್‌ನೊಂದಿಗೆ ಗರಿಷ್ಠ ಸುರಕ್ಷತೆ ಒದಗಿಸಲಿದ್ದು, ಪ್ರತಿ ಗಂಟೆಗೆ 45 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಅತ್ಯುತ್ತಮ ರೈಡಿಂಗ್ ಅನುಭವ ಒದಗಿಸಲಿದೆ.

ತಮಿಳುನಾಡು ಪಾಲಾದ ಓಲಾ ಇವಿ ಸ್ಕೂಟರ್ ಉತ್ಪಾದನಾ ಘಟಕ

ಇದೇ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನೇ ಇದೀಗ ಓಲಾ ಕಂಪನಿಯು ಸಹಭಾಗೀತ್ವದ ಯೋಜನೆ ಅಡಿ ಭಾರತದಲ್ಲೇ ನಿರ್ಮಾಣ ಮಾಡಿ ಮಾರಾಟ ಮಾಡಲಿದ್ದು, ಮಾಹಿತಿಗಳ ಓಲಾ ಹೊಸ ಸ್ಕೂಟರ್ ಮಾದರಿಯು 2021ರ ಆರಂಭದಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ತಮಿಳುನಾಡು ಪಾಲಾದ ಓಲಾ ಇವಿ ಸ್ಕೂಟರ್ ಉತ್ಪಾದನಾ ಘಟಕ

ಇದಲ್ಲದೆ ಓಲಾ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ನಾಲ್ಕು ಚಕ್ರದ ಮಧ್ಯಮ ಕ್ರಮಾಂಕದ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಸಹ ಅಭಿವೃದ್ದಿಗೊಳಿಸುವ ಯೋಜನೆಯಲ್ಲಿದ್ದು, ಈ ಮೂಲಕ ಆಟೋ ಉದ್ಯಮದಲ್ಲಿ ಓಲಾ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

Most Read Articles

Kannada
Read more on ಓಲಾ ola
English summary
Ola announces plans to set up world’s largest scooter factory in Tamil Nadu. Read in Kannada.
Story first published: Monday, December 14, 2020, 17:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X