Just In
Don't Miss!
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕಿನಂತೆ ಮಾಡಿಫೈಗೊಂಡ ಬುಲೆಟ್
ಸೂಪರ್‍ಬೈಕ್ ಖರೀದಿಸಬೇಕೆಂಬುದು ಹಲವು ಯುವಕರ ಕನಸಾಗಿರುತ್ತದೆ. ಆದರೆ ಸೂಪರ್‍ಬೈಕ್‍ಗಳು ಕೈಗೆಟುಕುವ ದರದಲ್ಲಿ ಲಭಿಸುವುದಿಲ್ಲ. ಇದರಿಂದಾಗಿ ಹಲವು ಜನರ ಕನಸು ಕನಸಾಗಿಯೇ ಉಳಿಯುತ್ತದೆ.

ಇದರಿಂದ ಹಲವಾರು ಜನರು ಸೂಪರ್‍ಬೈಕಿನ ಮಾದರಿಯಲ್ಲಿ ತಮ್ಮ ಸಾಮಾನ್ಯ ಬೈಕ್ ಅನ್ನು ಮಾಡಿಫೈ ಮಾಡಲು ಬಯಸುತ್ತಾರೆ. ಇದೇ ರೀತಿಯಲ್ಲಿ ದೆಹಲಿ ಬಿಟ್ಟೂ ಬೈಕ್ ಕಸ್ಟಮ್ಸ್ , ಸಾಮಾನ್ಯ ಬೈಕನ್ನು ದುಬಾರಿ ಬೈಕಿನ ಮಾದರಿಯಲ್ಲಿ ಮಾಡಿಫೈ ಮಾಡುತ್ತದೆ. ಇದೀಗ ದೆಹಲಿಯ ಬಿಟ್ಟೂ ಬೈಕ್ ಅವರು ರಾಯಲ್ ಎನ್‍ಫೀಲ್ಡ್ ಬುಲೆಟ್ ಅನ್ನು ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕ್ ಮಾದರಿಯಲ್ಲಿ ಮಾಡಿಫೈಗೊಳಿಸಿದ್ದಾರೆ.

ಇವರು ಈ ಹಿಂದೆ ಬಜಾಜ್ ಡೋಮಿನಾರ್ 400 ಬೈಕನ್ನು ಸುಜುಕಿ ಹಯಬುಸಾ ಬೈಕಾಗಿ ಮಾಡಿಫೈಗೊಳಿಸಿದ್ದರು. ಹಲವಾರು ವಾಹನ ಪ್ರಿಯರು ದುಬಾರಿ ವಾಹನಗಳ ಮಾದರಿಯಲ್ಲಿ ತಮ್ಮ ವಾಹನಗಳನ್ನು ಮಾಡಿಫೈಗೊಳಿಸಲು ಬಯಸುತ್ತಾರೆ.

ಇನ್ನು ಹಲವು ಯುವಕರಿಗೆ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕನ್ನು ಹೊಂದುವ ಕನಸಿದೆ. ಆದರೆ ಈ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕಿನ ಬೆಲೆಯು ಬರೊಬ್ಬರಿ ರೂ.20 ಲಕ್ಷಗಳಾಗಿದೆ.

ಇದರಿಂದಾಗಿ ದೆಹಲಿಯ ಈ ಕಸ್ಟಮ್ಸ್ ಅವರು ದುಬಾರಿ ಬೈಕ್‍ಗಳಂತೆ ಮಾಡಿಫೈ ಮಾಡುತ್ತಾರೆ. ಇದರಿಂದಾಗಿ ದುಬಾರಿ ಬೈಕ್ ಕ್ರೇಜ್ ಇರುವವರಿಗೆ ಇದು ಒಂದು ಉತ್ತಮ ಆಯ್ಕೆಯಾಗಿದೆ.ಮಾಡಿಫೈ ಮಾಡಲಾದ ಈ ಬೈಕಿನಲ್ಲಿ ಫ್ಯಾಟ್ ಬಾಯ್ ಬೈಕಿನ ಬಾಡಿಯನ್ನು ಅಳವಡಿಸಲಾಗಿದೆ.

ಈ ಬೈಕ್ ನೋಡಿದರೆ ಇದು ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕ್ ಎಂದು ಯಾರಿಗೂ ಗುರುತಿಸಲು ಸಾಧ್ಯವಾಗದ ಮಟ್ಟಿಗೆ ಈ ಬೈಕನ್ನು ಮಾಡಿಫೈ ಮಾಡಲಾಗಿದೆ. ಈ ಬೈಕಿನ ಎಂಜಿನ್‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಅದೇ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕಿನ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿ ಅಳವಡಿಸಿರುವ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕಿನ ಎಂಜಿನ್ ಅದೇ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಬೈಕಿನಲ್ಲಿ 1745 ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 65 ಬಿಹೆಚ್‍ಪಿ ಪವರ್ ಮತ್ತು 144 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 6 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕ್ 500 ಸಿಸಿ ಮತ್ತು 350 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್ 346 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ 4 ಸ್ಟ್ರೋಕ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5,250 ಆರ್‍ಪಿಎಂನಲ್ಲಿ 19.8 ಬಿಹೆಚ್‍ಪಿ ಪವರ್ ಮತ್ತು 4,000 ಆರ್‍ಪಿಎಂನಲ್ಲಿ 28 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬುಲೆಟ್ 500 ಬೈಕಿನಲ್ಲಿರುವ 499 ಸಿಸಿ ಎಂಜಿನ್ 5,250 ಆರ್‍ಪಿಎಂನಲ್ಲಿ 27.2 ಬಿಹೆಚ್‍ಪಿ ಪವರ್ ಮತ್ತು 4,000 ಆರ್‍ಪಿಎಂನಲ್ಲಿ 41.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುತ್ತಿರುವುದರಿಂದ ಒಂದು ದಶಕಗಳ ಕಾಲ ಭಾರತದಲ್ಲಿ ಪಾರುಪತ್ಯ ಮೆರೆದ ರಾಯಲ್ ಎನ್‍ಫೀಲ್ಡ್ 500 ಸಿಸಿ ಸೆಗ್‍ಮೆಂಟ್‍ನ ಬೈಕ್‍ಗಳು ಇತಿಹಾಸ ಪುಟ ಸೇರಿವೆ.