ಅಕ್ಟೋಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ 2020ರ ಅಕ್ಟೋಬರ್ ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ, ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಕಳೆದ ತಿಂಗಳು ಒಟ್ಟು 76,865 ಯುನಿಟ್‌ಗಳನ್ನು ಮಾರಾಟ ಮಾಡಿವೆ.

ಅಕ್ಟೋಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಕಳೆದ ತಿಂಗಳು ನಡೆದ ಒಟ್ಟು ಮಾರಾಟದಲ್ಲಿ 67,225 ಯುನಿಟ್‌ಗಳು ದೇಶೀಯ ಮಾರುಕಟ್ಟೆಯಿಂದ ಮಾರಾಟವಾದರೆ ಬಂದಿರುವುದಕ್ಕೆ ಎಂದು ಕಂಪನಿ ತಿಳಿಸಿದೆ. ಉಳಿದ 9,640 ಯುನಿಟ್‌ಗಳು ರಫ್ತು ಮಾಡಲಾಗಿದೆ. ಇದನ್ನು 2019ರ ಅಕ್ಟೋಬರ್‌ ತಿಂಗಳ ಮಾರಾಟವನ್ನು ಈ ವರ್ಷದ ಅದೇ ಅವಧಿಗೆ ಹೋಲಿಸಿದರೆ ಶೇ.15 ರಷ್ಟು ಹೆಚ್ಚಳವಾಗಿದೆ. ಸುಜುಕಿ ಬೈಕುಗಳು ಮತ್ತು ಸ್ಕೂಟರ್ ಗಳು ಬಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿವೆ.

ಅಕ್ಟೋಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ಉಪಾಧ್ಯಕ್ಷ ದೇವಶಿಶ್ ಹಂಡಾ ಮಾತನಾಡಿ, ಸುಜುಕಿಯ ಬೆಳವಣಿಗೆಯು ಅಕ್ಟೋಬರ್ ತಿಂಗಳಲ್ಲೂ ಮುಂದುವರೆದಿದೆ. ಈ ಹಬ್ಬದ ಸೀಸನ್ ನಲ್ಲಿ ನಾವು ತಿಂಗಳಿಗೆ 3% ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ಸಾಧಿಸಿದ್ದೇವೆ ಎಂದು ಹೇಳಿದರು.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಅಕ್ಟೋಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ಬರ್ಗ್‌ಮನ್ ಸ್ಟ್ರೀಟ್ 125 ಸ್ಕೂಟರ್ ಅನ್ನು ಹೊಸ ಬಣ್ಣದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಕಂಪನಿಯು ಈ ಸ್ಕೂಟರಿಗೆ ಪರ್ಲ್ ಸುಜುಕಿ ಮೀಡಿಯಮ್ ಬ್ಲೂ ಎಂಬ ಹೆಸರನ್ನಿಟ್ಟಿದೆ.

ಅಕ್ಟೋಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಬರ್ಗ್‌ಮನ್ ಸ್ಟ್ರೀಟ್ 125 ಬ್ಲೂ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.79,700ಗಳಾಗಿದೆ. ಸುಜುಕಿ ಬರ್ಗ್‌ಮನ್ ಸ್ಟ್ರೀಟ್ 125 ತನ್ನ ಸ್ಟೈಲಿಂಗ್‌ಗೆ ಹೆಸರುವಾಸಿಯಾಗಿದೆ. ಇದು ಈ ಸೆಗ್ ಮೆಂಟಿನಲ್ಲಿರುವ ಅತಿದೊಡ್ಡ ಸ್ಕೂಟರ್‌ಗಳಲ್ಲಿ ಒಂದಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಅಕ್ಟೋಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಇದರೊಂದಿಗೆ ಸುಜುಕಿ ಜಪಾನ್ ಮೂಲದ ಬೈಕ್ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ಜಿಕ್ಸರ್ ಸರಣಿಯ ಬೈಕುಗಳನ್ನು ಹೊಸ ಬಣ್ಣದ ಆಯ್ಕೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.

ಅಕ್ಟೋಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಜಾಗತಿಕವಾಗಿ ಸುಜುಕಿ ಮೋಟಾರ್‌ಸೈಕಲ್ ತನ್ನ ಜನಪ್ರಿಯ ಜಿಕ್ಸರ್ ಬ್ರ್ಯಾಂಡ್‌ನ 100ನೇ ವಾರ್ಷಿಕೋತ್ಸವದ ಭಾಗವಾಗಿ ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಸುಜುಕಿ ಜಿಕ್ಸರ್ ಎಸ್‌ಎಫ್ 250 ಬೈಕ್ ಇದೀಗ ಹೊಸ ಟ್ರೈಟಾನ್ ಬ್ಲೂ/ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅಕ್ಟೋಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಈ ಬ್ಲೂ ಮತ್ತು ಸಿಲ್ವರ್ ಬಣ್ಣದ ಆಯ್ಕೆಯು 1960ರ ಸುಜುಕಿ ಆರಂಭಿಕ ಗ್ರ್ಯಾಂಡ್ ಪ್ರಿಕ್ಸ್ ಮಾದರಿಗಳನ್ನು ನೆನಪಿಸುತ್ತದೆ. ಮತ್ತೊಂದೆಡೆ ಜಿಕ್ಸರ್ 250 ನೇಕೆಡ್ ಬೈಕ್ ನವೀಕರಿಸಿದ ಗ್ರಾಫಿಕ್ಸ್‌ನೊಂದಿಗೆ ಹೊಸ ಮೆಟಾಲಿಕ್ ಟ್ರೈಟಾನ್ ಬ್ಲೂ ಶೇಡ್ ಬಣ್ಣವನ್ನು ಹೊಂದಿದೆ.

ಅಕ್ಟೋಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್‌ಸೈಕಲ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಪರಿಚಯಿಸಲಾದ ಮಾದರಿಗಳಿಗೆ ಸುಜುಕಿ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ. ತಮ್ಮ ಜನಪ್ರಿಯ ಮಾದರಿಗಳ ಹೊಸ ನವೀಕರಣಗಳು ಮುಂಬರುವ ತಿಂಗಳುಗಳಲ್ಲಿಯೂ ಮಾರಾಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಕಂಪನಿಯು ಆಶಿಸುತ್ತಿದೆ.

Most Read Articles

Kannada
English summary
Suzuki Registers A 3% Growth In Yearly Sales. Read In Kannada.
Story first published: Saturday, November 7, 2020, 12:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X