ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‍‍ಗಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಟಿವಿಎಸ್ ಜೂಪಿಟರ್

ಭಾರತದ ಕಂಪನಿಯಾದ ತಮಿಳುನಾಡಿನಲ್ಲಿ ಉತ್ಪಾದನಾ ಘಟಕವನ್ನು ಹೊಂದಿರುವ ಟಿವಿ‍ಎಸ್ ಕಂಪನಿಯು ತನ್ನ ಸರಣಿಯಲ್ಲಿರುವ ವಾಹನಗಳನ್ನು ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಅಪ್‍‍‍ಗ್ರೇಡ್‍‍ಗೊಳಿಸುತ್ತಿದೆ.

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‍‍ಗಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಟಿವಿಎಸ್ ಜೂಪಿಟರ್

ಟಿವಿ‍ಎಸ್ ಕಂಪನಿಯು 2019ರ ನವೆಂಬರ್ ತಿಂಗಳಿನಲ್ಲಿ ಜೂಪಿಟರ್ ಕ್ಲಾಸಿಕ್ ಸ್ಕೂಟರ್ ಅನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಿತ್ತು. ಈ ಸ್ಕೂಟರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 67,911 ಗಳಾಗಿದೆ. ಈಗ ಮೂಲ ಮಾದರಿಯ ಜೂಪಿಟರ್ ಹಾಗೂ ಜೂಪಿಟರ್ ಝಡ್‍ಎಕ್ಸ್ ಸ್ಕೂಟರ್‍‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‍‍ಗಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಟಿವಿಎಸ್ ಜೂಪಿಟರ್

ಮೂಲ ಮಾದರಿಯ ಜೂಪಿಟರ್ ಸ್ಕೂಟರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 61,449ಗಳಾದರೆ, ಜೂಪಿಟರ್ ಝಡ್‍ಎಕ್ಸ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 63,449ಗಳಾಗಿದೆ. ಈ ಸ್ಕೂಟರ್ ಅನ್ನು ಜೂಪಿಟರ್ ಸ್ಕೂಟರಿಗೆ ಪೈಪೋಟಿಯನ್ನು ನೀಡುತ್ತಿರುವ ಹೋಂಡಾ ಆಕ್ಟಿವಾ 6ಜಿ ಸ್ಕೂಟರಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‍‍ಗಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಟಿವಿಎಸ್ ಜೂಪಿಟರ್

ಟಿವಿ‍ಎಸ್ ಕಂಪನಿಯು ಹೊಸೂರಿನಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ. ಟಿವಿ‍ಎಸ್ ಕಂಪನಿಯ ಬಹುತೇಕ ಎಲ್ಲಾ ವಾಹನಗಳನ್ನು ಈ ಘಟಕದಲ್ಲಿಯೇ ಉತ್ಪಾದಿಸಲಾಗುತ್ತದೆ. ಪ್ರಪಂಚದ ವಿವಿಧ ದೇಶಗಳಿಗೆ ಇಲ್ಲಿಂದಲೇ ವಾಹನಗಳನ್ನು ರಫ್ತು ಮಾಡಲಾಗುತ್ತದೆ.

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‍‍ಗಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಟಿವಿಎಸ್ ಜೂಪಿಟರ್

ಹಲವು ವಿಧದ ಪರೀಕ್ಷೆಗಳ ನಂತರ ಈ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಟಿವಿ‍ಎಸ್ ಕಂಪನಿಯು ಈ ಸ್ಕೂಟರ್ ಅನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಿದೆ. ಹೆಚ್ಚು ಫೀಚರ್‍‍ಗಳನ್ನು ಹೊಂದಿರುವ ಕಾರಣಕ್ಕೆ ಈ ಸ್ಕೂಟರ್ ಮಾರುಕಟ್ಟೆಯಲ್ಲಿರುವ ಸ್ಕೂಟರ್‍‍ನಂತೆ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆಯುವ ಸಾಧ್ಯತೆಗಳಿವೆ.

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‍‍ಗಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಟಿವಿಎಸ್ ಜೂಪಿಟರ್

ಈ ಸ್ಕೂಟರಿನ ಬೆಲೆಯು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಆಕ್ಟಿವಾ ಸ್ಕೂಟರಿಗಿಂತ ಕಡಿಮೆಯಾಗಿದೆ. ಬಿ‍ಎಸ್ 6 ಎಂಜಿನ್ ಹೊಂದಿರುವ ಜೂಪಿಟರ್ ಸ್ಕೂಟರಿನ ಬೆಲೆಯು ಬಿ‍ಎಸ್ 4 ಎಂಜಿನ್‍‍ನ ಜೂಪಿಟರ್ ಸ್ಕೂಟರಿಗಿಂತ ಹೆಚ್ಚಾಗಿದೆ.

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‍‍ಗಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಟಿವಿಎಸ್ ಜೂಪಿಟರ್

ಬಿ‍ಎಸ್ 6 ಎಂಜಿನ್ ಹೊಂದಿರುವ ಸ್ಕೂಟರ್‍‍ನಲ್ಲಿ ಲುಕ್, ಕಾಸ್ಮೆಟಿಕ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಇವುಗಳ ಜೊತೆಗೆ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್ ಹಾಗೂ ಟೇಲ್‍‍ಲ್ಯಾಂಪ್‍‍ಗಳನ್ನು ನೀಡಲಾಗಿದೆ.

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‍‍ಗಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಟಿವಿಎಸ್ ಜೂಪಿಟರ್

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಗಿರುವ ಈ ಸ್ಕೂಟರ್ ಬಿ‍ಎಸ್ 4 ಎಂಜಿನ್ ಹೊಂದಿದ್ದ ಸ್ಕೂಟರಿಗೆ ಹೋಲಿಸಿದರೆ ಹೆಚ್ಚು ಎಕಾನಮಿಯಾಗಿದ್ದು, ಕಡಿಮೆ ಮಾಲಿನ್ಯವನ್ನುಂಟು ಮಾಡುತ್ತದೆ. ಈ ಸ್ಕೂಟರಿನಲ್ಲಿ ಹೊಸ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅಳವಡಿಸಲಾಗಿದೆ.

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‍‍ಗಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಟಿವಿಎಸ್ ಜೂಪಿಟರ್

ಟಿವಿ‍ಎಸ್ ಕಂಪನಿಯ ಇಕೊ ಥ್ರಸ್ಟ್ ಟೆಕ್ನಾಲಜಿಯೊಂದಿಗಿರುವ ಎಫ್‍‍ಐ ಸಿಸ್ಟಂ 15% ಹೆಚ್ಚು ಫ್ಯೂಯಲ್ ಎಫಿಶಿಯನ್ಸಿ ನೀಡುತ್ತದೆ. ಈ ಸ್ಕೂಟರಿನಲ್ಲಿರುವ 110 ಸಿಸಿಯ ಬಿ‍ಎಸ್6 ಎಂಜಿನ್ 7.4 ಬಿ‍‍ಹೆಚ್‍‍ಪಿ ಪವರ್ ಹಾಗೂ 8 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‍‍ಗಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಟಿವಿಎಸ್ ಜೂಪಿಟರ್

ಬಿ‍ಎಸ್ 4 ಎಂಜಿನ್ 7.9 ಬಿ‍‍ಹೆಚ್‍‍ಪಿ ಪವರ್ ಹಾಗೂ 8.4 ಎನ್‍ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಟಿವಿ‍ಎಸ್ ಜೂಪಿಟರ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 6ಜಿ, ಹೀರೊ ಮೆಸ್ಟ್ರೋ ಎಡ್ಜ್ ಹಾಗೂ ಸುಜುಕಿ ಆಕ್ಸೆಸ್ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
TVS Jupiter BS6 cheaper than Honda Activa-6G. Read in Kannada.
Story first published: Tuesday, February 4, 2020, 16:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X