Just In
- 42 min ago
ಭಾರತದಲ್ಲಿ ಸೆಲ್ಟೊಸ್ ಫೇಸ್ಲಿಫ್ಟ್ ಆವೃತ್ತಿಯ ಬಿಡುಗಡೆಗಾಗಿ ಸಿದ್ದವಾದ ಕಿಯಾ ಮೋಟಾರ್ಸ್
- 10 hrs ago
ಕೋವಿಡ್ ವ್ಯಾಕ್ಸಿನ್ ಸಾಗಾಣಿಕೆಗಾಗಿ ಹೊಸ ಮಾದರಿಯ ಟ್ರಕ್ ಸಿದ್ದಪಡಿಸಿದ ಭಾರತ್ ಬೆಂಝ್
- 11 hrs ago
ಮೊದಲ ವರ್ಷದ ಸಂಭ್ರಮ- ಟಾಟಾ ನೆಕ್ಸಾನ್ ಇವಿ ಖರೀದಿ ಮೇಲೆ ಹೊಸ ಆಫರ್
- 12 hrs ago
ಸ್ಥಗಿತವಾಯ್ತು ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಮತ್ತು ಸ್ಟ್ರೀಟ್ ರಾಡ್ ಬೈಕುಗಳು
Don't Miss!
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- News
ಭಾರತವನ್ನು ಸಂಜೀವಿನಿ ಹೊತ್ತು ತರುವ ಹನುಮಂತನಿಗೆ ಹೋಲಿಸಿದ ಬ್ರೆಜಿಲ್ ಅಧ್ಯಕ್ಷ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Sports
ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಕಾರ್ ರ‍್ಯಾಲಿ 2021: ಅತಿ ದೊಡ್ಡ ಮೋಟಾರ್‌ಸ್ಪೋರ್ಟ್ ರ‍್ಯಾಲಿಯಲ್ಲಿ ಭಾಗಿಯಾಗುತ್ತಿಲ್ಲ ಟಿವಿಎಸ್
2021ರ ಡಕಾರ್ ರ‍್ಯಾಲಿಯು ಮುಂದಿನ ತಿಂಗಳು ಜನವರಿ 3ರಿಂದ 15ರ ವರೆಗೆ ನಡೆಲಿದ್ದು, 43ನೇ ಮೋಟಾರ್‌ಸ್ಪೋರ್ಟ್ ರ‍್ಯಾಲಿಯಲ್ಲಿ ಟಿವಿಎಸ್ ರೇಸಿಂಗ್ ತಂಡವು ಭಾಗಿಯಾಗುತ್ತಿಲ್ಲ ಎನ್ನುವ ವರದಿ ಭಾರತೀಯ ಮೋಟಾರ್ ಸ್ಪೋರ್ಟ್ ಪ್ರಿಯರಲ್ಲಿ ನಿರಾಸೆ ಉಂಟು ಮಾಡಿದೆ.

ಹೌದು, ಸತತ ಆರು ವರ್ಷಗಳಿಂದ ಡಕಾರ್ ರ‍್ಯಾಲಿಯಲ್ಲಿ ಭಾಗಿಯಾಗುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದ ಟಿವಿಎಸ್ ರೇಸಿಂಗ್ ತಂಡವು 2021ರ ಆವೃತ್ತಿಯಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದು, ಈ ಕುರಿತಂತೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ. ಡಕಾರ್ ರ‍್ಯಾಲಿಯಲ್ಲಿ ಭಾಗಿಯಾಗದಿದ್ದರೂ ಖಾಸಗಿಯಾಗಿ ಭಾಗಿಯಾಗುತ್ತಿರುವ ತನ್ನ ಹಳೆಯ ಸ್ಪರ್ಧಿಗಳಿಗೆ ಪ್ರಾಜೋಕತ್ವವನ್ನು ಮುಂದುವರಿಸಲಿದೆ.

ಟಿವಿಎಸ್ ರೇಸಿಂಗ್ ತಂಡವನ್ನು ಪ್ರತಿನಿಧಿಸುತ್ತಿದ್ದ ಹರಿತ್ ನೋವಾ ಅವರಿಗೆ ಪ್ರಾಯೋಜಕತ್ವ ಮುಂದುವರಿಸಲಿರುವ ಟಿವಿಎಸ್ ರೇಸಿಂಗ್ ತಂಡವು ತಾಂತ್ರಿಕವಾಗಿ ಯಾವುದೇ ರೀತಿಯಲ್ಲಿ ಭಾಗಿಯಾಗುವುದಿಲ್ಲ ಸ್ಪಷ್ಟಪಡಿಸಿದ್ದು, ಶೆರ್ಕೊ ರ್ಯಾಲಿ ಫ್ಯಾಕ್ಟರಿ ತಂಡದೊಂದಿಗೆ ಸಹಭಾಗೀತ್ವಕ್ಕೆ ಬ್ರೇಕ್ ಹಾಕುವ ಮುನ್ಸೂಚನೆ ನೀಡಿದೆ.

ಈ ಹಿಂದಿನ ಡಕಾರ್ ರ‍್ಯಾಲಿಯಲ್ಲಿ ಸಹಭಾಗೀತ್ವದಲ್ಲಿ ಭಾಗಿಯಾಗುತ್ತಿದ್ದ ಟಿವಿಎಸ್ ರೇಸಿಂಗ್ ಮತ್ತು ಶೆರ್ಕೊ ರ್ಯಾಲಿ ಫ್ಯಾಕ್ಟರಿ ತಂಡಗಳು ಈ ಬಾರಿ ಯಾವುದೇ ಯೋಜನೆ ರೂಪಿಸದಿರುವುದು ಸಹಭಾಗೀತ್ವಕ್ಕೆ ಬ್ರೇಕ್ ಹಾಕುವ ಮುನ್ಸೂಚನೆ ನೀಡಿದ್ದು, ಟಿವಿಎಸ್ ತಂಡವು ಹರಿತ್ ನೋವಾ ಅವರಿಗೆ ಮಾತ್ರ ಪ್ರಾಯೋಜಕತ್ವ ನೀಡುತ್ತಿರುವುದು ಕೂಡಾ ಚರ್ಚೆಗೆ ಕಾರಣವಾಗಿದೆ.

ಡಕಾರ್ ರ‍್ಯಾಲಿಯಲ್ಲಿ ಟಿವಿಎಸ್‌ನಿಂದ ಹರಿತ್ ನೋವಾ ಮತ್ತು ಶೆರ್ಕೊ ರ್ಯಾಲಿ ಫ್ಯಾಕ್ಟರಿ ತಂಡದಿಂದ ಲೊರೆಂಜೊ ಸ್ಯಾಂಟೊಲಿನಿ ಮತ್ತು ರುಯಿ ಗೊನ್ಕಾಲ್ವ್ಸ್ ಭಾಗಿಯಾಗುತ್ತಿದ್ದ ಸಂದರ್ಭದಲ್ಲಿ ಪೂರ್ಣಪ್ರಮಾಣದ ಪ್ರಮಾಣದ ಪ್ರಾಯೋಜಕತ್ವ ವಹಿಸುತ್ತಿದ್ದ ಎರಡು ಕಂಪನಿಗಳು ಇದೀಗ ಪ್ರತ್ಯೇಕವಾಗಿ ಪ್ರಾಯೋಜಕತ್ವ ನೀಡುತ್ತಿದ್ದು, ಖಾಸಗಿ ತಂಡವಾದರೂ ಶೆರ್ಕೊ ಟಿವಿಎಸ್ ಆರ್‌ಟಿಆರ್ 450 ರ‍್ಯಾಲಿ ಮೋಟಾರ್‌ಸೈಕಲ್ ಅನ್ನು ಸವಾರಿ ಮಾಡಲಿದ್ದಾರೆ.

ಇನ್ನು ಸೌದಿ ಅರೇಬಿಯಾದ ಜಿದ್ದಾದಿಂದ ಆರಂಭಗೊಳ್ಳಲಿರುವ 2021ರ ಡಕಾರ್ ರ‍್ಯಾಲಿಯು ಒಟ್ಟು 7,646 ಕಿ.ಮೀ ಅಂತರವನ್ನು ಒಳಗೊಂಡಿದ್ದು, ಜಿದ್ದಾದಿಂದ ಆರಂಭವಾಗಿ ಕೊನೆಗೆ ಜಿದ್ದಾದದಲ್ಲೇ ಕೊನೆಗೊಳ್ಳಲಿದೆ.

ಒಟ್ಟು 12 ಹಂತಗಳನ್ನು ಒಳಗೊಂಡಿರುವ ಡಕಾರ್ ರ‍್ಯಾಲಿಯಲ್ಲಿ ವಿವಿಧ ಮೋಟಾರ್‌ಸ್ಪೋರ್ಟ್ ತಂಡಗಳಿಂದ ಸಾವಿರಾರು ಸ್ಪರ್ಧಿಗಳು ಭಾಗಿಯಾಗುತ್ತಿದ್ದು, ಜನವರಿ 3ಕ್ಕೆ ಮೊದಲ ಹಂತದ ಸ್ಪರ್ಧೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

2021ರ ಡಕಾರ್ ರ‍್ಯಾಲಿಯಲ್ಲಿ ರೇಸ್ ಎಡಿಷನ್‌ನಲ್ಲಿರುವ ಒಟ್ಟು 108 ವಿವಿಧ ಮಾದರಿಯ ಬೈಕ್ ಮಾದರಿಗಳು, 21 ಕ್ವಾಡ್ರಿಸೈಕಲ್, 124 ಕಾರುಗಳು ಮತ್ತು 42 ಟ್ರಕ್ ಮಾದರಿಗಳು ಭಾಗಿಯಾಗಲಿದ್ದು, ಒಟ್ಟು 7,646 ಕಿ.ಮೀ ಅಂತರದಲ್ಲಿ 4,767 ಕಿ.ಮೀ ಪ್ರಯಾಣವು ವಿಶೇಷ ವಿಭಾಗವಾಗಿರುತ್ತದೆ.

2020ರ ಡಕಾರ್ ರ‍್ಯಾಲಿ ಆವೃತ್ತಿಗಿಂತಲೂ 2021ರ ಡಕಾರ್ ರ‍್ಯಾಲಿ ಆವೃತ್ತಿಯು ಪ್ರಯಾಣದ ದೂರವನ್ನು 300ಕಿ.ಮೀ ಕಡಿತ ಮಾಡಲಾಗಿದ್ದು, ನಾಲ್ಕನೇ ಸುತ್ತಿನ 2021ರ ಡಕಾರ್ ರ‍್ಯಾಲಿಯಲ್ಲಿ ಅತಿ ಉದ್ದದ ಮಾರ್ಗವಾಗಿದೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಎಸ್ಐ ಸರ್ಟಿಫೈಡ್ ಟ್ರೆಡ್ ಹೆಲ್ಮೆಟ್ ಬಿಡುಗಡೆ

ನಾಲ್ಕನೇ ಸುತ್ತಿನಲ್ಲಿನ ಸ್ಪರ್ಧೆಗಾಗಿ 813 ಕಿ.ಮೀ ಪ್ರಯಾಣ ಮಾಡಬೇಕಿದ್ದು, 2021ರ ಡಕಾರ್ ರ‍್ಯಾಲಿ ಆವೃತ್ತಿಯಲ್ಲಿ ಈ ಬಾರಿ 26 ರೇಸ್ ವಾಹನಗಳನ್ನು ಡಕಾರ್ ಕ್ಲಾಸಿಕ್ ವಿಭಾಗದಲ್ಲಿ ಸೇರ್ಪಡೆಗೊಳಿಸಲಾಗಿದೆ. ಕಠಿಣ ಸ್ಪರ್ಧೆಯಲ್ಲಿ ಭಾಗಿಯಾಗಲು ಈಗಾಗಲೇ ಸಾವಿರಾರು ಸ್ಪರ್ಧೆಗಳು ಸಿದ್ದವಾಗಿದ್ದು, ಪ್ರತಿಯೊಂದು ಆಟೋ ಉತ್ಪಾದನಾ ಕಂಪನಿಗಳಿಗೂ ಇದು ತಮ್ಮ ರೇಸಿಂಗ್ ಮಾದರಿಗಳ ಬಲಾಬಲ ಪ್ರದರ್ಶನಕ್ಕೆ ಪ್ರಮುಖ ವೇದಿಕೆಯಾಗಿದೆ.