ಕರೋನಾ ವೈರಸ್: ಪರಿಹಾರ ನಿಧಿಗೆ ದೇಣಿಗೆ ನೀಡಿದ ಯಮಹಾ ಕಂಪನಿ ಸಿಬ್ಬಂದಿ

ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ಯಮಹಾ ಮೋಟಾರ್ ಇಂಡಿಯಾ ನೌಕರರು ತಮ್ಮ ಒಂದು ದಿನದ ಸಂಬಳವನ್ನು ಸಂಗ್ರಹಿಸಿ ಒಟ್ಟು ರೂ.61.5 ಲಕ್ಷ ದೇಣಿಗೆ ನೀಡಿದ್ದಾರೆ. ಯಮಹಾ ಕಂಪನಿಯು ಇಂದು ಈ ಬಗ್ಗೆ ಮಾಹಿತಿ ನೀಡಿದೆ.

ಕರೋನಾ ವೈರಸ್: ಪರಿಹಾರ ನಿಧಿಗೆ ದೇಣಿಗೆ ನೀಡಿದ ಯಮಹಾ ಕಂಪನಿ ಸಿಬ್ಬಂದಿ

ಈ ದೇಣಿಗೆಯಲ್ಲಿ ತಮಿಳುನಾಡು ಸರ್ಕಾರಕ್ಕೆ ರೂ.25 ಲಕ್ಷ, ಉತ್ತರ ಪ್ರದೇಶ ಸರ್ಕಾರಕ್ಕೆ ರೂ.25 ಲಕ್ಷ ಹಾಗೂ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ರೂ.11.5 ಲಕ್ಷ ನೀಡಲಾಗುವುದು. ದೇಣಿಗೆ ನೀಡಿದವರಲ್ಲಿ ಖಾಯಂ ನೌಕರರು, ಕಾರ್ಮಿಕ ವರ್ಗದ ಅಧಿಕಾರಿಗಳು, ಬ್ಲೂ ಕಾಲರ್ ಉದ್ಯೋಗಿಗಳು, ತಮಿಳುನಾಡಿನ ಕಾಂಚೀಪುರಂ, ಉತ್ತರ ಪ್ರದೇಶದ ಸೂರಜ್‌ಪುರ ಹಾಗೂ ಹರಿಯಾಣದ ಫರಿದಾಬಾದ್ ಘಟಕಗಳ ನೌಕರರು ಸೇರಿದ್ದಾರೆ ಎಂದು ಹೇಳಲಾಗಿದೆ.

ಕರೋನಾ ವೈರಸ್: ಪರಿಹಾರ ನಿಧಿಗೆ ದೇಣಿಗೆ ನೀಡಿದ ಯಮಹಾ ಕಂಪನಿ ಸಿಬ್ಬಂದಿ

ಕರೋನಾ ವೈರಸ್ ವಿರುದ್ಧ ಹೋರಾಡಲು ಚೆನ್ನೈನಲ್ಲಿರುವ ಕಾರ್ಪೊರೇಟ್ ಕಚೇರಿಗಳು ಹಾಗೂ ಭಾರತದಾದ್ಯಂತವಿರುವ ಫೀಲ್ಡ್ ಆಫೀಸ್‌ಗಳು ದೇಣಿಗೆ ನೀಡಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಯಮಹಾ ಮೋಟಾರ್ ಇಂಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಟೇಕಿರೊ ಹೆನ್ಮಿರವರು ಇದೊಂದು ಜಾಗತಿಕ ಬಿಕ್ಕಟ್ಟಾಗಿದೆ. ಜಾಗತಿಕ ಕಂಪನಿಯಾಗಿ ಯಮಹಾ ಕಂಪನಿಯ ಪಾತ್ರವು ದೊಡ್ಡದಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್: ಪರಿಹಾರ ನಿಧಿಗೆ ದೇಣಿಗೆ ನೀಡಿದ ಯಮಹಾ ಕಂಪನಿ ಸಿಬ್ಬಂದಿ

ಇಂತಹ ಸಮಯದಲ್ಲಿ, ಕೋವಿಡ್ -19 ನಮ್ಮನ್ನು ಒಗ್ಗೂಡಿಸಿದೆ. ಇದು ಎಲ್ಲರಿಗೂ ಮುಖ್ಯ ಎಂದು ಯಮಹಾ ಭಾವಿಸುತ್ತದೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ನಾವು ಸರ್ಕಾರದ ಜೊತೆಗೆ ಕೈಜೋಡಿಸಬೇಕು ಎಂದು ಅವರು ಹೇಳಿದರು.

ಕರೋನಾ ವೈರಸ್: ಪರಿಹಾರ ನಿಧಿಗೆ ದೇಣಿಗೆ ನೀಡಿದ ಯಮಹಾ ಕಂಪನಿ ಸಿಬ್ಬಂದಿ

ಯಮಹಾ ಕಂಪನಿಯು ಇತ್ತೀಚೆಗಷ್ಟೇ ತನ್ನ ಎರಡು ಬೈಕ್‌ಗಳಾದ ಬಿಎಸ್ 6 ಎಫ್‌ಝಡ್ 25 ಹಾಗೂ ಎಫ್‌ಝಡ್ಎಸ್ 25 ಬೈಕ್‌ಗಳ ಟೀಸರ್‌ಗಳನ್ನು ಬಿಡುಗಡೆಗೊಳಿಸಿತ್ತು. ಈ ಎರಡೂ ಬೈಕ್‌ಗಳ ಮಾಹಿತಿಯನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ನೀಡಲಾಗಿದೆ. ಲಾಕ್‌ಡೌನ್ ಮುಗಿದ ನಂತರ ಈ ಎರಡೂ ಬೈಕುಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್: ಪರಿಹಾರ ನಿಧಿಗೆ ದೇಣಿಗೆ ನೀಡಿದ ಯಮಹಾ ಕಂಪನಿ ಸಿಬ್ಬಂದಿ

ಹೊಸ ಬಿಎಸ್ 6 ಎಫ್‌ಝಡ್ 25 ಹಾಗೂ ಎಫ್‌ಝಡ್ಎಸ್ 25 ಬೈಕ್‌ಗಳಲ್ಲಿರುವ ಎಂಜಿನ್‌ಗಳ ಬಗ್ಗೆ ಹೇಳುವುದಾದರೆ ಈ ಬಿಎಸ್ 6 ನಿಯಮಗಳಿಗೆ ತಕ್ಕಂತೆ ಈ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. 249 ಸಿಸಿ ಏರ್-ಕೂಲ್ಡ್, ಎಸ್‌ಒಹೆಚ್‌ಸಿ, 4 ಸ್ಟ್ರೋಕ್ ಸಿಗ್ನಲ್ ಸಿಲಿಂಡರ್‌ನ ಎಂಜಿನ್‌ಗಳು ಇಂಜೆಕ್ಷನ್ ಟೆಕ್ನಾಲಜಿಯನ್ನು ಹೊಂದಿವೆ.

ಕರೋನಾ ವೈರಸ್: ಪರಿಹಾರ ನಿಧಿಗೆ ದೇಣಿಗೆ ನೀಡಿದ ಯಮಹಾ ಕಂಪನಿ ಸಿಬ್ಬಂದಿ

ಈ ಎರಡೂ ಯಮಹಾ ನೇಕೆಡ್ ಬೈಕ್‌ಗಳಲ್ಲಿ ಪರಿಷ್ಕರಿಸಿದ ಬೈ ಫಂಕ್ಷನಲ್ ಎಲ್‌ಇಡಿ ಹೆಡ್‌ಲೈಟ್, ಎಲ್‌ಇಡಿ ಡೇ-ಟೈಮ್ ರನ್ನಿಂಗ್ ಲ್ಯಾಂಪ್, ಮೊದಲಿಗಿಂತ ಶಾರ್ಪ್ ಆದ ವಿನ್ಯಾಸ, ಮಲ್ಟಿ-ಫಂಕ್ಷನ್ ಎಲ್‌ಸಿಡಿ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್, ಅಂಡರ್‌ಕೌಪ್ಲಿಂಗ್ ಹಾಗೂ ಮಿಡ್‌ಶಿಪ್ ಮಫ್ಲರ್ ಕವರ್‌ಗಳನ್ನು ಅಳವಡಿಸಲಾಗಿದೆ.

Most Read Articles

Kannada
Read more on ಯಮಹಾ yamaha
English summary
Yamaha India employees donates 61.5 lakhs to fight coronavirus. Read in Kannada.
Story first published: Saturday, May 9, 2020, 18:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X