Just In
- 30 min ago
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- 2 hrs ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 4 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 14 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
Don't Miss!
- News
ವಿಜಯನಗರ ಜಿಲ್ಲೆ; ಮೇಲುಸ್ತುವಾರಿಗೆ ಐಎಎಸ್ ಅಧಿಕಾರಿ ನೇಮಕ
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನ್ಯಾಷನಲ್ ಡ್ರ್ಯಾಗ್ ರೇಸಿಂಗ್: 2020ರ ಆವೃತ್ತಿಯನ್ನು ಗೆದ್ದ ಕನ್ನಡಿಗ ಹೇಮಂತ್ ಮುದ್ದಪ್ಪ!
ಕೋವಿಡ್ 19 ಪರಿಣಾಮ ಕಳೆದ ವರ್ಷದ ಬಹುತೇಕ ಮೋಟಾರ್‌ಸ್ಪೋರ್ಟ್ ಕಾರ್ಯಕ್ರಮಗಳನ್ನು ಸುರಕ್ಷಾ ದೃಷ್ಠಿಯಿಂದ ರದ್ದುಗೊಳಿಸಲಾಗಿತ್ತು. ಇದೀಗ ಪರಿಸ್ಥಿತಿ ಸುಧಾರಣೆಗೊಂಡಿರುವ ಹಿನ್ನಲೆಯಲ್ಲಿ ಇತ್ತೀಚೆಗೆ 2020ರ ರಾಷ್ಟ್ರೀಯ ಮಟ್ಟದ ಡ್ರ್ಯಾಗ್ ರೇಸಿಂಗ್ ಚಾಂಪಿಯಶಿಷ್ ಅನ್ನು ಚೆನ್ನೈನಲ್ಲಿರುವ ಎಂಎಂಆಟಿ(ಮದ್ರಾಸ್ ಮೋಟಾರ್ ರೇಸಿಂಗ್ ಟ್ರ್ಯಾಕ್) ಆಯೋಜಿಸಲಾಗಿತ್ತು.

2020ರ ಮಧ್ಯಂತರದಲ್ಲಿ ಆಯೋಜನೆಗೊಳ್ಳಬೇಕಿದ್ದ ಕಳೆದ ವರ್ಷದ ರಾಷ್ಟ್ರೀಯ ಮಟ್ಟದ ಡ್ರ್ಯಾಗ್ ರೇಸಿಂಗ್ ಚಾಂಪಿಯಶಿಷ್ ಅನ್ನು ತಡವಾಗಿ ಆಯೋಜನೆ ಮಾಡಲಾಗಿದ್ದು, ನಿನ್ನಯಷ್ಟೇ ಫೈನಲ್ ಹಂತದ ಡ್ರ್ಯಾಗ್ ರೇಸಿಂಗ್ ಪೂರ್ಣಗೊಳ್ಳವುದರೊಂದಿಗೆ ಕನ್ನಡಿಗ ಹೇಮಂತ್ ಮುದ್ದಪ್ಪ ಸತತ ನಾಲ್ಕನೇ ಬಾರಿಗೆ ನ್ಯಾಷನಲ್ ಡ್ರ್ಯಾಗ್ ರೇಸಿಂಗ್ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡರು. ಹಾಗಾದ್ರೆ 2020ರ ನ್ಯಾಷನಲ್ ಡ್ರ್ಯಾಗ್ ರೇಸಿಂಗ್‌ನಲ್ಲಿ ಭಾಗಿಯಾಗಿದ್ದ ತಂಡಗಳು ಯಾವವು? ಡ್ರ್ಯಾಗ್ ರೇಸಿಂಗ್ ಹಂತಗಳು ಎಷ್ಟು? ಎನ್ನುವುದನ್ನು ಇಲ್ಲಿ ನೋಡೋಣ.

ದೇಶಾದ್ಯಂತ ಆಯೋಜನೆಗೊಳ್ಳುವ ಪ್ರಮುಖ ಡ್ರ್ಯಾಗ್ ರೇಸಿಂಗ್ ಚಾಂಪಿಯನ್‌ಶಿಷ್‌ಗಳಲ್ಲಿ ಎಂಎಂಎಸ್‌ಸಿ ಎಫ್ಎಂಎಸ್‌ಸಿಐ ಆಯೋಜಿಸಲು ರೇಸಿಂಗ್ ಭಾರೀ ಜನಪ್ರಿಯತೆ ಹೊಂದಿದ್ದು, ಚೆನ್ನೈನಲ್ಲಿರುವ ಎಂಎಂಆಟಿ(ಮದ್ರಾಸ್ ಮೋಟಾರ್ ರೇಸಿಂಗ್ ಟ್ರ್ಯಾಕ್) ಆಯೋಜಿಸಲಾಗುತ್ತದೆ.

1051ಸಿಸಿ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹೇಮಂತ್ ಮುದ್ದಪ್ಪ ಅವರು 2020ರ ಆವೃತ್ತಿಯ ಸೇರಿ ಸತತ ನಾಲ್ಕನೇ ಬಾರಿಗೆ ನ್ಯಾಷನಲ್ ಡ್ರ್ಯಾಗ್ ರೇಸಿಂಗ್ ಚಾಂಪಿಯನ್ ಪಟ್ಟವನ್ನು ಪಡೆದುಕೊಳ್ಳುತ್ತಿದ್ದು, ಎರಡನೇ ಸ್ಥಾನವನ್ನು ಬಾಬಾ ಸತಾಗೋಪನ್ ಮತ್ತು ಮೂರನೇ ಸ್ಥಾನವನ್ನು ಹಫೀಜುಲ್ಲಾ ಖಾನ್ ಪಡೆದುಕೊಂಡರು.

ಚಾಂಪಿಯನ್‌ಶಿಪ್ ಪಟ್ಟ ಪಡೆದುಕೊಂಡ ಹೇಮಂತ್ ಮುದ್ದಪ್ಪ ಅವರು ಬಿಎಂಡಬ್ಲ್ಯು ಎಸ್1000ಆರ್ ಬೈಕ್ ಮೂಲಕ 302 ಮೀಟರ್ ದೂರವನ್ನು ಕೇವಲ 7.87 ಸೇಕೆಂಡುಗಳಲ್ಲಿ ಪೂರ್ಣಗೊಳಿಸಿದರೆ, ಎರಡನೇ ಸ್ಥಾನದಲ್ಲಿದ್ದ ಬಾಬಾ ಸತಾಗೋಪನ್ ಅವರು 8.26 ಸೇಕೆಂಡುಗಳಲ್ಲಿ ಮತ್ತು ಮೂರನೇ ಸ್ಥಾನದಲ್ಲಿದ್ದ ಹಫೀಜುಲ್ಲಾ ಖಾನ್ 8.36 ಸೇಕೆಂಡುಗಳಲ್ಲಿ ನಿಗದಿತ ಟ್ರ್ಯಾಕ್ ಪೂರ್ಣಗೊಳಿಸಿದರು.

ಹೇಮಂತ್ ಮುದ್ದಪ್ಪ ಅವರ ಬಿಎಂಡಬ್ಲ್ಯು ಎಸ್1000ಆರ್ ಬೈಕಿನ ಎಂಜಿನ್ ಅನ್ನು ಬೆಂಗಳೂರಿನ ಮಂತ್ರಾ ರೇಸಿಂಗ್ ವಿಭಾಗದ ಶರಣ್ ಪ್ರತಾಪ್ ತಂಡವು ವಿಶೇಷವಾಗಿ ರೇಸಿಂಗ್ ಉದ್ದೇಶಕ್ಕಾಗಿ ವಿಶೇಷವಾಗಿ ಟ್ಯೂನ್ ಅಪ್ ಮಾಡಿದ್ದು, 850 ಸಿಸಿ ಯಿಂದ 1050 ವಿಭಾಗದಲ್ಲೂ ಕೂಡಾ ಹೇಮಂತ್ ಮುದ್ದಪ್ಪ ಅವರೇ ಸುಜುಕಿ ಹಯಾಬುಸಾ ಮೂಲಕ 8.07 ಸೇಕೆಂಡುಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

2020ರ ಆವೃತ್ತಿಯ ನ್ಯಾಷನಲ್ ಡ್ರ್ಯಾಗ್ ರೇಸಿಂಗ್‌ನಲ್ಲಿ ಒಟ್ಟು 8 ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, 1ನೇ ಹಂತದಲ್ಲಿ 1051 ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ, 2ನೇ ಹಂತದಲ್ಲಿ 815 ಸಿಸಿಯಿಂದ 1050 ಸಿಸಿ, ಮೂರನೇ ಹಂತದಲ್ಲಿ 361ಸಿಸಿ ಯಿಂದ 550 ಸಿಸಿ, ನಾಲ್ಕನೇ ಹಂತದಲ್ಲಿ 226 ಸಿಸಿಯಿಂದ 360 ಸಿಸಿ, ಐದನೇ ಹಂತದಲ್ಲಿ 165 ಸಿಸಿ ಮೇಲ್ಪಟ್ಟ, ಆರನೇ ಹಂತದಲ್ಲಿ ಮಹಿಳಾ ವಿಭಾಗ(165 ಸಿಸಿ ಮೇಲ್ಪಟ್ಟ), ಎಳನೇ ಹಂತದಲ್ಲಿ 165 ಸಿಸಿ ಮೇಲ್ಪಟ್ಟ(2 ಸ್ಟ್ರೋಕ್) ಎಂಟನೇ ಹಂತದಲ್ಲಿ 130 ಸಿಸಿ ಮೇಲ್ಪಟ್ಟ(2 ಸ್ಟ್ರೋಕ್) ಬೈಕ್ ರೇಸಿಂಗ್ ಆಯೋಜಿಸಲಾಗಿತ್ತು.

ವಿವಿಧ ವಿಭಾಗಗಳಲ್ಲಿನ ಚಾಂಪಿಯನ್ಸ್
1051 ಸಿಸಿ ಮೇಲ್ಪಟ್ಟ ಬೈಕ್ ವಿಭಾಗದಲ್ಲಿ ಹೇಮಂತ್ ಮುದ್ದಪ್ಪ(ಮಂತ್ರಾ ರೇಸಿಂಗ್), 815ಸಿಸಿಯಿಂದ 1050 ಸಿಸಿ ಬೈಕ್ ವಿಭಾಗದಲ್ಲಿ ಹೇಮಂತ್ ಮುದ್ದಪ್ಪ(ಮಂತ್ರಾ ರೇಸಿಂಗ್), 361 ಸಿಸಿಯಿಂದ 550 ಸಿಸಿ ಬೈಕ್ ವಿಭಾಗದಲ್ಲಿ ಅಯಾಜ್ (ಖಾಸಗಿ ತಂಡ), 226 ಸಿಸಿಯಿಂದ 360 ಸಿಸಿ ವಿಭಾಗದಲ್ಲಿ ಜೆ. ಭರತ್ ರಾಜ್(ರೊಲೆಕ್ಸ್ ರಾಕರ್ಸ್ ರೇಸಿಂಗ್) ವಿಜಯಶಾಲಿಯಾದರು.

ತದನಂತರ 165 ಸಿಸಿ ಮೇಲ್ಪಟ್ಟ ವಿಭಾಗದಲ್ಲಿ ಜೆ. ಭರತ್ ರಾಜ್(ರೊಲೆಕ್ಸ್ ರಾಕರ್ಸ್ ರೇಸಿಂಗ್) , 165 ಸಿಸಿ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ ಅನಾ ಜೆನ್ನಿಫರ್ (ಸ್ಪಾರ್ಕ್ಸ್ ರೇಸಿಂಗ್), 2-ಸ್ಟ್ರೋಕ್ 165 ಸಿಸಿ ವರೆಗಿನ ವಿಭಾಗದಲ್ಲಿ ಅಯಾಜ್ (ಖಾಸಗಿ ತಂಡ) ಮತ್ತು 2-ಸ್ಟ್ರೋಕ್ 130 ಸಿಸಿ ವರೆಗಿನ ವಿಭಾಗದಲ್ಲಿ ಮೊಹಮ್ಮದ್ ರಫೀಕ್ (2 ಎಸ್) ಪ್ರಥಮ ಸ್ಥಾನ ಪಡೆದುಕೊಂಡರು.

2020ರ ರಾಷ್ಟ್ರೀಯ ಡ್ರ್ಯಾಗ್ ರೇಸಿಂಗ್ ಚಾಂಪಿಯಶಿಷ್‌ನಲ್ಲಿ ಈ ಬಾರಿ ಬಹುತೇಕ ಬೆಂಗಳೂರು ಮೂಲದ ಸ್ಪರ್ಧಿಗಳೇ ವಿಜಯಶಾಲಿಗಳಾಗಿದ್ದು, ಕನ್ನಡಿಗ ಹೇಮಂತ್ ಮುದ್ದಪ್ಪ ಅವರು ಸತತ ನಾಲ್ಕು ವರ್ಷಗಳಲ್ಲಿ ಮೊದಲ ಹಂತದ ಡ್ರ್ಯಾಗ್ ರೇಸಿಂಗ್‌ನಲ್ಲಿ ಪ್ರಥಮ ಸ್ಥಾನದಲ್ಲಿ ಮುಂದುವರೆದಿರುವುದು ವಿಶೇಷವಾಗಿತ್ತು.