ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಹೋಂಡಾ ಗ್ರೋಮ್

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ 2022ರ ಗ್ರೋಮ್ ಮಿನಿ ಬೈಕನ್ನು ಅನಾವರಣಗೊಳಿಸಿದೆ. ಹಲವಾರು ನವೀಕರಣಗಳೊಂದಿಗೆ ಈ ಹೊಸ ಹೋಂಡಾ ಗ್ರೋಮ್ ಮಿನಿ ಬೈಕ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಹೋಂಡಾ ಗ್ರೋಮ್

ಹೋಂಡಾ ತನ್ನ ಗ್ರೋಮ್ ಮಿನಿ ಬೈಕನ್ನು 2014ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು. ಹೋಂಡಾ ಕಂಪನಿಯು 7,50,000 ಕ್ಕಿಂತಲೂ ಹೆಚ್ಚು ಗ್ರೋಮ್ ಮಿನಿ-ಬೈಕ್‌ಗಳನ್ನು ಮಾರಾಟ ಮಾಡಿದೆ. ವಿಶ್ವದಾದ್ಯಂತ ಈ ಹೋಂಡಾ ಗ್ರೋಮ್ ಮಿನಿ ಬೈಕಿಗೆ ತನ್ನದೇ ಆದ ಅಭಿಮಾನಿ ವರ್ಗವನ್ನು ಹೊಂದಿದೆ. ಮೂರನೇ ತಲೆಮಾರಿನ 2022ರ ಗ್ರೋಮ್ ಮಿನಿ ಬೈಕನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಹೋಂಡಾ ಕಂಪನಿಯು ಸಜ್ಜಾಗುತ್ತಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಹೋಂಡಾ ಗ್ರೋಮ್

ಆದರೆ ಹೊಸ ಹೋಂಡಾ ಗ್ರೋಮ್ ಮಿನಿ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದಿಲ್ಲ. ಈ ಹೊಸ ಹೋಂಡಾ ಗ್ರೋಮ್ ಮಿನಿ ಬೈಕಿಗೆ ಐದು-ಸ್ಪೀಡ್ ಗೇರ್‌ಬಾಕ್ಸ್ ಅನ್ನು ನೀಡಿದೆ. ಹಿಂದಿನ ಮಾದರಿಗಳು 4-ಸ್ಫೀಡ್ ಗೇರ್‌ಬಾಕ್ಸ್ ಅನ್ನು ಹೊಂದಿತ್ತು.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಹೋಂಡಾ ಗ್ರೋಮ್

ಇನ್ನು 2022ರ ಹೋಂಡಾ ಗ್ರೋಮ್ ಮಿನಿ ಬೈಕಿನಲ್ಲಿ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಇದು 5.5 ಲೀಟರ್‌ನಿಂದ 6 ಲೀಟರ್‌ಗೆ ಹೆಚ್ಚಿಸಲಾಗಿದೆ. ಮೊದಲಿಗಿಂತ ಹೆಚ್ಚು ಆರಾಮದಾಯಕವಾದ ಗ್ರೋಮ್ ಸವಾರಿ ಮಾಡಲು ಸೀಟನ್ನು ನವೀಕರಿಸಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಹೋಂಡಾ ಗ್ರೋಮ್

2022ರ ಗ್ರೋಮ್ ಮಿನಿ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ನ್ನು ಸಹ ಪಡೆಯುತ್ತದೆ, ಇದು ಗೇರ್ ಪೊಸಿಷನ್ ಇಂಡಿಕೇಟರ್ ಸೇರಿದಂತೆ ಹೆಚ್ಚಿನ ಮಾಹಿತಿಗಳನ್ನು ನೀಡುತ್ತದೆ. ಗ್ರೋಮ್ ಎಸ್ಪಿ ಆವೃತ್ತಿಯಲ್ಲಿ, ಎಬಿಎಸ್ ಅನ್ನು ಸಹ ನೀಡಲಾಗುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಹೋಂಡಾ ಗ್ರೋಮ್

ಜೊತೆಗೆ ವ್ಹೀಲ್ ಗಳು ಮತ್ತು ಫೋರ್ಕ್‌ಗಳು ಹೊಸ ಪರ್ಲ್ ವೈಟ್ ಬಣ್ಣವನ್ನು ಹೊಂದಿದೆ. ಹೆಚ್ಚುವರಿಯಾಗಿ ಕ್ವೀನ್ ಬೀ ಯೆಲ್ಲೋ, ಮ್ಯಾಟ್ ಬ್ಲ್ಯಾಕ್ ಮೆಟಾಲಿಕ್ ಮತ್ತು ಕ್ಯಾಂಡಿ ಬ್ಲೂ ಬಣ್ಣಗಳನ್ನು ಸೇರಿವೆ. ಉಳಿದಂತೆ ಹಿಂದಿನ ಮಾದರಿಯಂತೆ ಇರುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಹೋಂಡಾ ಗ್ರೋಮ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಸತತ ಏಳನೇ ತಿಂಗಳು ಮಾರಾಟದಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಹೊಂಡಾ ಕಂಪನಿಯು ದೇಶಿಯ ಮಾರಾಟದಲ್ಲಿ ಶೇ.31 ರಷ್ಟು ಬೆಳವಣಿಗೆಯನ್ನು ಕಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಹೋಂಡಾ ಗ್ರೋಮ್

2021ರ ಫೆಬ್ರವರಿ ತಿಂಗಳಲ್ಲಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು 4,11,578 ದ್ವಿಚಕ್ರ ವಾಹನಗಳ ಮಾರಾಟಗೊಳಿಸಿವೆ. ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ 3,15,285 ದ್ವಿಚಕ್ರ ವಾಹನಗಳನ್ನು ಹೋಂಡಾ ಮಾರಾಟಗೊಳಿಸಿತು. ಭಾರತದಿಂದ ಹೋಂಡಾ ಕಂಪನಿಯು 31,118 ಯುನಿಟ್ ಗಳನ್ನು ರಫ್ತು ಮಾಡಿದೆ. ರಫ್ತಿನಲ್ಲಿ ಹೋಂಡಾ ಕಂಪನಿಯು ಶೇ.16 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಹೋಂಡಾ ಗ್ರೋಮ್

ಇನ್ನು 2022ರ ಹೋಂಡಾ ಗ್ರೋಮ್ ಮಿನಿ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆಯೇ ಎಂಬ ಬಗ್ಗೆ ಹಲವುಊಹಾಪೋಹಗಳಿತ್ತು. ಆದರೆ ವರದಿಗಳ ಪ್ರಕಾರ, ಈ ಹೊಸ ಹೋಂಡಾ ಗ್ರೋಮ್ ಮಿನಿ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗುವ ಸಾಧ್ಯತೆಯಿಲ್ಲ.

Most Read Articles

Kannada
English summary
2022 Honda Grom Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X