ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಫ್ 750 ಜಿಎಸ್, ಎಫ್ 850 ಜಿಎಸ್ ಬೈಕ್‌ಗಳು

ಜಮರ್ನಿ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ 2022ರ ಎಫ್ 750 ಜಿಎಸ್ ಮತ್ತು ಎಫ್ 850 ಜಿಎಸ್ ಬೈಕ್‌ಗಳನ್ನು ಅನಾವರಣಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಫ್ 750 ಜಿಎಸ್ ಮತ್ತು ಎಫ್ 850 ಜಿಎಸ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಫ್ 750 ಜಿಎಸ್, ಎಫ್ 850 ಜಿಎಸ್ ಬೈಕ್‌ಗಳು

ಬಿಎಂಡಬ್ಲ್ಯು ಎಫ್ 750 ಜಿಎಸ್ ಮತ್ತು ಎಫ್ 850 ಜಿಎಸ್ ಬೈಕ್‌ಗಳು ಈ ಹಿಂದೆ ಬಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿತ್ತು. ಆದರೆ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾದ ಬಳಿಕ ಈ ಬೈಕ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. 2022ರ ಬಿಎಂಡಬ್ಲ್ಯು ಎಫ್ 750 ಜಿಎಸ್ ಮತ್ತು ಎಫ್ 850 ಜಿಎಸ್ ಬೈಕ್‌ಗಳು ಹೊಸ ಬಣ್ಣದ ಆಯೆಯನ್ನು ಪಡೆದುಕೊಂಡಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಫ್ 750 ಜಿಎಸ್, ಎಫ್ 850 ಜಿಎಸ್ ಬೈಕ್‌ಗಳು

2022ರ ಬಿಎಂಡಬ್ಲ್ಯು ಎಫ್ 750 ಜಿಎಸ್ ಮತ್ತು ಎಫ್ 850 ಜಿಎಸ್ ಬೈಕ್‌ಗಳು ಹೊಸ ಟ್ರಿಪಲ್ ಬ್ಲ್ಯಾಕ್ ಬಣ್ಣದ ಜೊತೆಗೆ ಮತ್ತು ಹ್ಯಾಂಡ್ ಪ್ರೊಟೆಕ್ಟರ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತವೆ. ಈ ಎರಡು ಬೈಕ್‌ಗಳಲ್ಲಿ 40 ವರ್ಷಗಳ ಜಿಎಸ್ 'ಬಣ್ಣದ ಯೋಜನೆಯನ್ನು ನಿಲ್ಲಿಸಲಾಗಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಫ್ 750 ಜಿಎಸ್, ಎಫ್ 850 ಜಿಎಸ್ ಬೈಕ್‌ಗಳು

ಎಫ್ 850 ಜಿಎಸ್ ಬೈಕ್ ಹೊಸ ಟ್ರಿಪಲ್ ಬ್ಲ್ಯಾಕ್ ಬಣ್ಣವನ್ನು ಸಹ ಪಡೆಯುತ್ತದೆ. '40 ವರ್ಷಗಳ ಜಿಎಸ್ 'ಬಣ್ಣದ ಯೋಜನೆ ಮತ್ತು ಐಸ್ ಗ್ರೇ ಆಯ್ಕೆಯೊಂದಿಗೆ ಕಪ್ಪು ಐಸ್ ಗ್ರೇ ಬಣ್ಣವನ್ನು ಸ್ಥಗಿತಗೊಳಿಸಲಾಗಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಫ್ 750 ಜಿಎಸ್, ಎಫ್ 850 ಜಿಎಸ್ ಬೈಕ್‌ಗಳು

2022ರ ಬಿಎಂಡಬ್ಲ್ಯು ಎಫ್ 750 ಜಿಎಸ್ ಮತ್ತು ಎಫ್ 850 ಜಿಎಸ್ ಬೈಕ್‌ಗಳಲ್ಲಿ ಒಂದೇ ರೀತಿಯ 853 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಯುರೋ-5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಫ್ 750 ಜಿಎಸ್, ಎಫ್ 850 ಜಿಎಸ್ ಬೈಕ್‌ಗಳು

ಈ ಎಂಜಿನ್ 7,500 ಆರ್‌ಪಿಎಂನಲ್ಲಿ 76.4 ಬಿಹೆಚ್‌ಪಿ ಮತ್ತು 6,000 ಆರ್‌ಪಿಎಂನಲ್ಲಿ 83 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಫ್ 750 ಜಿಎಸ್, ಎಫ್ 850 ಜಿಎಸ್ ಬೈಕ್‌ಗಳು

ಬಿಎಂಡಬ್ಲ್ಯು ಎಫ್ 750 ಜಿಎಸ್ ಬೈಕ್ ರೋಡ್-ಆಧಾರಿತ ಟೂರಿಂಗ್ ಬೈಕ್ ಆಗಿದ್ದೂ, 850 ಜಿಎಸ್ ಸ್ಪೋಕ್ಡ್ ವ್ಹೀಲ್ ಗಳು ಮತ್ತು ಆಫ್-ರೋಡ್ ಗಾಗಿ ಹೆಚ್ಚಿನ ಫೀಚರ್ ಗಳೊಂದಿಗ್ ಬರುತ್ತದೆ. ಎಫ್ 850 ಜಿಎಸ್ ಅಡ್ವಂಚರ್ ಬೈಕ್ ದೊಡ್ಡ ಫ್ಯೂಯಲ್ ಟ್ಯಾಂಕ್, ಆಫ್-ರೋಡ್ ಬಯಾಸ್ಡ್ ಟೈರ್ ಮತ್ತು ಎಲೆಕ್ಟ್ರಾನಿಕ್ ರೈಡಿಂಗ್ ಏಡ್ಸ್ನ ಹೆಚ್ಚಿನ ತಂತ್ರಜ್ಙಾನಗಳನ್ನು ಒಳಗೊಂಡಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಫ್ 750 ಜಿಎಸ್, ಎಫ್ 850 ಜಿಎಸ್ ಬೈಕ್‌ಗಳು

ಬಿಎಂಡಬ್ಲ್ಯು ಮೋಟೊರಾಡ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇತ್ತೀಚೆಗೆ ಬಿಎಂಡಬ್ಲ್ಯು ಹೊಸ ಮ್ಯಾಕ್ಸಿ ಸ್ಕೂಟರ್‌ನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಬಿಎಂಡಬ್ಲ್ಯು ಮ್ಯಾಕ್ಸಿ ಸ್ಕೂಟರ್‌ನ ಹೆಸರು ಮತ್ತು ವಿವರಗಳನ್ನು ಕಂಪನಿಯು ಇನ್ನೂ ಬಹಿರಂಗಪಡಿಸದಿದ್ದರೂ, ಬಿಎಂಡಬ್ಲ್ಯು ಹೊಸ ಮಾಕ್ಸಿ ಸ್ಕೂಟರ್ ಸಿ 400 ಜಿಟಿ ಮಾದರಿಯಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಎಫ್ 750 ಜಿಎಸ್, ಎಫ್ 850 ಜಿಎಸ್ ಬೈಕ್‌ಗಳು

2022ರ ಬಿಎಂಡಬ್ಲ್ಯು ಎಫ್ 750 ಜಿಎಸ್ ಮತ್ತು ಎಫ್ 850 ಜಿಎಸ್ ಬೈಕ್‌ಗಳು ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಪಡೆದುಕೊಂಡಿಲ್ಲ. ಈ ಹೊಸ ಬೈಕ್‌ಗಳು ಈ ವರ್ಷದ ಅಂತ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
2022 BMW F 750 GS, F 850 GS Revealed. Read In Kannada.
Story first published: Friday, July 23, 2021, 10:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X