ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ನೀಡುವ ಬಜೆಟ್ ಬೆಲೆಯ ಬೌನ್ಸ್ ಇವಿ ಸ್ಕೂಟರ್ ಟಿವಿಸಿ ಬಿಡುಗಡೆ

ಬೌನ್ಸ್ ಕಂಪನಿಯು ತನ್ನ ಹೊಚ್ಚ ಹೊಸ ಇನ್ಪಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯೊಂದಿಗೆ ಟಿವಿ ಜಾಹೀರಾತನ್ನು ಸಹ ಪ್ರಕಟಗೊಳಿಸಲಾಗಿದೆ.

ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ನೀಡುವ ಬಜೆಟ್ ಬೆಲೆಯ ಬೌನ್ಸ್ ಇವಿ ಸ್ಕೂಟರ್ ಟಿವಿಸಿ ಬಿಡುಗಡೆ

ಹೊಸ ಬೌನ್ಸ್ ಇನ್ಪಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಬೌನ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಕೂಟರ್ ಅನ್ನು ಬ್ಯಾಟರಿ ರಹಿತ ಮತ್ತು ಬ್ಯಾಟರಿ ಸಹಿತ ಮಾರಾಟ ಆರಂಭಿಸಿದೆ. ಸದ್ಯಕ್ಕೆ ಇವಿ ಸ್ಕೂಟರ್ ಬಿಡುಗಡೆಯೊಂದಿಗೆ ರೂ. 499 ಮುಂಗಡ ಪಾವತಿಯೊಂದಿಗೆ ಬುಕ್ಕಿಂಗ್ ಆರಂಭಿಸಲಾಗಿದ್ದು, ಹೊಸ ಸ್ಕೂಟರ್ ಮುಂಬರುವ 2022ರ ಮಾರ್ಚ್‌ನಲ್ಲಿ ಗ್ರಾಹಕರ ಕೈಸೇರಲಿದೆ.

ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ನೀಡುವ ಬಜೆಟ್ ಬೆಲೆಯ ಬೌನ್ಸ್ ಇವಿ ಸ್ಕೂಟರ್ ಟಿವಿಸಿ ಬಿಡುಗಡೆ

ಬೌನ್ಸ್ ಕಂಪನಿಯು ಬ್ಯಾಟರಿ ವಿನಿಯಮ ಮತ್ತು ಸೇವೆಗಳನ್ನು ಪರಿಚಯಿಸಿಸುವುದರಿಂದ ಹೊಸ ಸ್ಕೂಟರಿನ ಶೇ.40 ನಷ್ಟು ಬೆಲೆ ಕಡಿಮೆ ಮಾಡಲು ಸಹಕಾರಿಯಾಗಿದ್ದು, ಹೊಸ ಆಯ್ಕೆಯಿಂದ ಗ್ರಾಹಕರು ಸ್ವಂತಕ್ಕೆ ಬ್ಯಾಟರಿ ಖರೀದಿಸಬಹುದು ಇಲ್ಲವೇ ಬ್ಯಾಟರಿ ವಿನಿಮಯ ಕೇಂದ್ರದಲ್ಲಿ ಚಂದಾದಾರಿಕೆ ಆಧಾರದ ಮೇಲೆ ಬ್ಯಾಟರಿ ವಿನಿಯಮ ಮಾಡಿಕೊಳ್ಳಬಹುದಾಗಿದೆ.

ಹೀಗಾಗಿ ಬೌನ್ಸ್ ಕಂಪನಿಯು ಪರಿಚಯಿಸಿರುವ ಹೊಸ ಇನ್ಪಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 45,099(ಬ್ಯಾಟರಿ ಮತ್ತು ಚಾರ್ಜರ್ ರಹಿತ) ಬೆಲೆ ಹೊಂದಿದ್ದು, ಬ್ಯಾಟರಿ ಜೋಡಣೆ ಹೊಂದಿರುವ ಬೌನ್ಸ್ ಇವಿ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 68,999 ಬೆಲೆ ಹೊಂದಿದೆ.

ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ನೀಡುವ ಬಜೆಟ್ ಬೆಲೆಯ ಬೌನ್ಸ್ ಇವಿ ಸ್ಕೂಟರ್ ಟಿವಿಸಿ ಬಿಡುಗಡೆ

ಹೊಸ ಸ್ಕೂಟರ್ ಮಾದರಿಯು ಹೆಚ್ಚುವರಿ ಸಬ್ಸಡಿ ಹೊಂದಿರುವ ದೆಹಲಿ, ಗುಜರಾತ್, ಕರ್ನಾಟಕ, ದೆಹಲಿ, ಮಾಹಾರಾಷ್ಟ್ರ ಮತ್ತು ರಾಜಸ್ತಾನ ರಾಜ್ಯಗಳನ್ನು ಹೊರತುಪಡಿಸಿ ಇನ್ನುಳಿದ ರಾಜ್ಯಗಳಲ್ಲಿ ತುಸು ದುಬಾರಿಯಾಗಲಿದ್ದು, ಮೇಲೆ ನಮೂದಿಸಲಾದ ರಾಜ್ಯಗಳನ್ನು ಹೊರತುಪಡಿಸಿ ಇನ್ನುಳಿದ ರಾಜ್ಯಗಳಲ್ಲಿ ಹೊಸ ಸ್ಕೂಟರ್ ಬೆಲೆಯು ರೂ. 79,999 ದರ ಹೊಂದಿದೆ.

ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ನೀಡುವ ಬಜೆಟ್ ಬೆಲೆಯ ಬೌನ್ಸ್ ಇವಿ ಸ್ಕೂಟರ್ ಟಿವಿಸಿ ಬಿಡುಗಡೆ

ಗುಜರಾತ್‌ನಲ್ಲಿ ಇತರೆ ರಾಜ್ಯಗಳಿಂತಲೂ ಹೆಚ್ಚಿನ ಮಟ್ಟದ ಸಬ್ಸಡಿ ಲಭ್ಯವಿದ್ದು, ಬ್ಯಾಟರಿ ರಹಿತವಾಗಿರುವ ಬೌನ್ಸ್ ಸ್ಕೂಟರ್ ಆರಂಭಿಕವಾಗಿ ಈ ರಾಜ್ಯದಲ್ಲಿ ಮಾತ್ರ ರೂ. 36 ಸಾವಿರ ಹೊಂದಿದೆ. ಹಾಗೆಯೇ ಬ್ಯಾಟರಿ ಸಹಿತ ಮಾದರಿಯ ಗುಜರಾತ್‌ನಲ್ಲಿ ರೂ. 59 ಸಾವಿರ ಬೆಲೆ ಹೊಂದಿದೆ. ಇನ್ನುಳಿದ ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳ ಸಬ್ಸಡಿ ಆಧರಿಸಿ ಬೆಲೆ ನಿರ್ಧಾರವಾಗಲಿದ್ದು, ಬೌನ್ಸ್ ಇವಿ ಸ್ಕೂಟರ್ ಮಾದರಿಯು ಅತ್ಯುತ್ತಮ ಬೆಲೆ ಪಡೆದುಕೊಂಡಿರುವ ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದೆ.

ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ನೀಡುವ ಬಜೆಟ್ ಬೆಲೆಯ ಬೌನ್ಸ್ ಇವಿ ಸ್ಕೂಟರ್ ಟಿವಿಸಿ ಬಿಡುಗಡೆ

ಇನ್ನು ಬೌನ್ಸ್ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಯಲ್ಲಿ 2kWh ಲೀಥಿಯಂ ಅಯಾನ್ ಬ್ಯಾಟರಿ ಅಳಡಿಸಿದ್ದು, ಅತ್ಯುತ್ತಮ ರೈಡಿಂಗ್ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ನೀಡುವ ಬಜೆಟ್ ಬೆಲೆಯ ಬೌನ್ಸ್ ಇವಿ ಸ್ಕೂಟರ್ ಟಿವಿಸಿ ಬಿಡುಗಡೆ

ಹೊಸ ಇವಿ ಸ್ಕೂಟರ್‌ನಲ್ಲಿ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟಾರ್ ಮೂಲಕ ಕೇವಲ 8 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿಂದ 40 ಕಿ.ಮೀ ವೇಗ ಪಡೆದುಕೊಳ್ಳಬಹುದಾಗಿದ್ದು, ಹೊಸ ಸ್ಕೂಟರ್‌ನಲ್ಲಿ ಪ್ರತಿ ಗಂಟೆಗೆ ಗರಿಷ್ಠ 65 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಡ್ರ್ಯಾಗ್ ಮತ್ತು ರಿವರ್ಸ್ ರೈಡ್ ಮೋಡ್ ನೀಡಲಾಗಿದೆ.

ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ನೀಡುವ ಬಜೆಟ್ ಬೆಲೆಯ ಬೌನ್ಸ್ ಇವಿ ಸ್ಕೂಟರ್ ಟಿವಿಸಿ ಬಿಡುಗಡೆ

ಜೊತೆಗೆ ಬೌನ್ಸ್ ಕಂಪನಿಯು ಹೊಸ ಸ್ಕೂಟರ್ ಮೇಲೆ ಸ್ಟ್ಯಾಂಡರ್ಡ್ ಆಗಿ 3 ವರ್ಷ ಅಥವಾ 50 ಸಾವಿರ ಕಿ.ಮೀ ತನಕ ವಾರಂಟಿ ಘೋಷಣೆ ಮಾಡಿದ್ದು, ಶೋರೂಂಗಳ ಬದಲಾಗಿ ಕಂಪನಿಯು ಸಂಪೂರ್ಣವಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಸ್ಕೂಟರ್ ಮಾರಾಟ ಮತ್ತು ಗ್ರಾಹಕರ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸಲಿದೆ.

ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ನೀಡುವ ಬಜೆಟ್ ಬೆಲೆಯ ಬೌನ್ಸ್ ಇವಿ ಸ್ಕೂಟರ್ ಟಿವಿಸಿ ಬಿಡುಗಡೆ

ಹೊಸ ಇವಿ ಸ್ಕೂಟರ್ ಮಾದರಿಯಲ್ಲಿ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಿದ್ದು, ರೌಂಡ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ರೆಟ್ರೊ-ಶೈಲಿಯ ಫ್ರಂಟ್ ಫೆಂಡರ್, ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್, ಸಿಂಗಲ್ ಪೀಸ್ ಸೀಟ್, 12 ಇಂಚಿನ ಸ್ಪೋರ್ಟಿ ಅಲಾಯ್ ವ್ಹೀಲ್ಸ್, ಪ್ರಮುಖ ಗ್ರ್ಯಾಬ್ ರೈಲ್ ಮತ್ತು ಹರಿತವಾದ ಟೈಲ್ ಲ್ಯಾಂಪ್‌ನಂತಹ ವೈಶಿಷ್ಟ್ಯತೆಗಳೊಂದಿಗೆ ಏರೋಡೈನಾಮಿಕ್ ಪ್ರೊಫೈಲ್ ಹೊಂದಿದೆ.

ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ನೀಡುವ ಬಜೆಟ್ ಬೆಲೆಯ ಬೌನ್ಸ್ ಇವಿ ಸ್ಕೂಟರ್ ಟಿವಿಸಿ ಬಿಡುಗಡೆ

ಹಾಗೆಯೇ ಹೊಸ ಇವಿ ಸ್ಕೂಟರ್‌ನಲ್ಲಿ 12 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೊರೇಜ್, ಹೈ ಎಂಡ್ ಸ್ಕೂಟರ್‌ಗಳಲ್ಲಿ ಕಂಡುಬರುವ ಕ್ಯಾನ್ಬಸ್ ಜೊತೆ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫ್ರಂಟ್ ಸಸ್ಷೆಂಷನ್ ಹಾಗೂ ಹಿಂಬದಿಯಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಹೊಂದಿದೆ.

ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ನೀಡುವ ಬಜೆಟ್ ಬೆಲೆಯ ಬೌನ್ಸ್ ಇವಿ ಸ್ಕೂಟರ್ ಟಿವಿಸಿ ಬಿಡುಗಡೆ

ಬೌನ್ಸ್ ಸ್ಕೂಟರ್‌ನಲ್ಲಿ ಸುರಕ್ಷತೆಗಾಗಿ ಓವರ್/ಅಂಡರ್ ವೊಲ್ಟೇಜ್ ಪ್ರೊಟೆಕ್ಷನ್, ಸೈಡ್ ಸ್ಟ್ಯಾಂಡ್ ಸೆನ್ಸಾರ್, ಬ್ಯಾಟರಿ ಮತ್ತು ಮೋಟಾರ್ ಕಂಟ್ರೋಲರ್, ವಿಸಿಯು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಸ್ಕೂಟರ್ ಚಾಲನೆಯನ್ನು ಸರಳಗೊಳಿಸುವ ಕನೆಕ್ಟೆಡ್ ಫೀಚರ್ಸ್, ಆಂಟಿ ಥೆಪ್ಟ್ ಅಲಾರಾಂ ಸೌಲಭ್ಯ ಹೊಂದಿದೆ.

ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ನೀಡುವ ಬಜೆಟ್ ಬೆಲೆಯ ಬೌನ್ಸ್ ಇವಿ ಸ್ಕೂಟರ್ ಟಿವಿಸಿ ಬಿಡುಗಡೆ

ಇದರೊಂದಿಗೆ ಹೊಸ ಸ್ಕೂಟರ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಸ್ಪೋರ್ಟಿ ರೆಡ್, ಸ್ಪಾರ್ಕಲ್ ಬ್ಲ್ಯಾಕ್, ಪರ್ಲ್ ವೈಟ್, ಡಿಸ್ಯಾಟ್ ಸಿಲ್ವರ್ ಮತ್ತು ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಪ್ರಮುಖ ಇವಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ನೀಡುವ ಬಜೆಟ್ ಬೆಲೆಯ ಬೌನ್ಸ್ ಇವಿ ಸ್ಕೂಟರ್ ಟಿವಿಸಿ ಬಿಡುಗಡೆ

ಇದರೊಂದಿಗೆ ಬೌನ್ಸ್ ಕಂಪನಿಯು ಈ ಬ್ಯಾಟರಿ ಸೌಲಭ್ಯಕ್ಕಾಗಿ ವಿನಿಮಯ ಕೇಂದ್ರಗಳನ್ನು ತೆರೆಯುತ್ತಿದ್ದು, ವಿನಿಮಯ ಕೇಂದ್ರಗಳು ಶಾಪಿಂಗ್ ಕಾಂಪ್ಲೆಕ್ಸ್‌, ಮಾಲ್‌, ಕಾರ್ಪೊರೇಟ್ ಕಚೇರಿ, ಮೆಟ್ರೋ ನಿಲ್ದಾಣಗಳು, ಪಾರ್ಕಿಂಗ್ ವಲಯ ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ಲಭ್ಯವಿರಲಿವೆ.

ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ನೀಡುವ ಬಜೆಟ್ ಬೆಲೆಯ ಬೌನ್ಸ್ ಇವಿ ಸ್ಕೂಟರ್ ಟಿವಿಸಿ ಬಿಡುಗಡೆ

ಇದೇ ಕಾರಣಕ್ಕಾಗಿ ಬೌನ್ಸ್ ಕಂಪನಿಯು ತನ್ನ ಗ್ರಾಹಕರಿಗೆ ಬ್ಯಾಟರಿ ಇಲ್ಲದೆ ಸ್ಕೂಟರ್ ಅನ್ನು ಖರೀದಿಸುವ ಅವಕಾಶ ನೀಡಿದ್ದು, ಬ್ಯಾಟರಿ ಸೌಲಭ್ಯಕ್ಕಾಗಿ ಗ್ರಾಹಕರು ಪ್ರತ್ಯೇಕವಾಗಿ ವಿನಿಯಮ ಕೇಂದ್ರಗಳೊಂದಿಗೆ ಚಂದಾದಾರಿಕೆ ಪಡೆದುಕೊಂಡು ಬ್ಯಾಟರಿ ವಿನಿಯಮ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿಯೇ ಪ್ರತ್ಯೇಕ ಆ್ಯಪ್ ಅಭಿವೃದ್ದಿಪಡಿಸಿರುವ ಬೌನ್ಸ್ ಕಂಪನಿಯು ಬ್ಯಾಟರಿ ವಿನಿಯಮ ಮತ್ತು ಸೇವೆಗಳನ್ನು ಸರಳಗೊಳಿಸಿದ್ದು, ಇದು ಇವಿ ಸ್ಕೂಟರ್ ಮಾಲೀಕತ್ವ ಮತ್ತಷ್ಟು ಸುಲಭಗೊಳಿಸಲಿದೆ.

Most Read Articles

Kannada
Read more on ಬೌನ್ಸ್ bounce
English summary
Bounce release new tvc of infinity e1 electric scooter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X