ಹೊಸ ತಲೆಮಾರಿನ ಮೊದಲ ಬೈಕ್ ಅನಾವರಣಗೊಳಿಸಿದ BSA Motorcycles

ಕೆಲವು ದಿನಗಳ ಹಿಂದಷ್ಟೇ ಬಿ‌ಎಸ್‌ಎ ಮೋಟಾರ್‌ಸೈಕಲ್ಸ್ (BSA Motorcycles) ಕಂಪನಿಯು ತನ್ನ ಪುನರಾಗಮನವನ್ನು ಸಾಮಾಜಿಕ ಮಾಧ್ಯಮದ ಮೂಲಕ ಅಧಿಕೃತವಾಗಿ ಪ್ರಕಟಿಸಿತ್ತು. ಈಗ ಕಂಪನಿಯು ತನ್ನ ಮೊದಲ ಬೈಕ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಬರ್ಮಿಂಗ್ಹ್ಯಾಮ್ ಸ್ಮಾಲ್ ಆರ್ಮ್ಸ್ ಅಥವಾ ಬಿ‌ಎಸ್‌ಎ, ಕ್ಲಾಸಿಕ್ ಲೆಜೆಂಡ್ಸ್ ಒಡೆತನದ ಹೊಸ ತಲೆಮಾರಿನ ತನ್ನ ಮೊದಲ ಬೈಕ್ ಅನ್ನು ಅನಾವರಣಗೊಳಿಸಿದೆ.

ಹೊಸ ತಲೆಮಾರಿನ ಮೊದಲ ಬೈಕ್ ಅನಾವರಣಗೊಳಿಸಿದ BSA Motorcycles

ಈ ಮೂಲಕ ಕಂಪನಿಯು ಅಧಿಕೃತವಾಗಿ ತನ್ನ ಪುನರುಜ್ಜೀವನಕ್ಕೆ ಮುಂದಾಗಿದೆ. ಹೊಸ ಬಿ‌ಎಸ್‌ಎ ಮೋಟಾರ್‌ಸೈಕಲ್ ಅನ್ನು ಇಂಗ್ಲೆಂಡಿನ ಬರ್ಮಿಂಗ್ಹ್ಯಾಮ್ ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ಕಂಪನಿಯು ಈ ಹೊಸ ಬಿ‌ಎಸ್‌ಎ ಮೋಟಾರ್‌ಸೈಕಲ್ ಅನ್ನು ಗೋಲ್ಡ್‌ಸ್ಟಾರ್ 650 ಹೆಸರಿನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಬೈಕ್ ಡಿಸೆಂಬರ್ 4ರಿಂದ 12ರವರೆಗೆ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿರುವ ಮುಂಬರುವ ಮೋಟಾರ್‌ಸೈಕಲ್ ಲೈವ್ ಶೋನಲ್ಲಿ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳಲಿದೆ.

ಹೊಸ ತಲೆಮಾರಿನ ಮೊದಲ ಬೈಕ್ ಅನಾವರಣಗೊಳಿಸಿದ BSA Motorcycles

ಬಿ‌ಎಸ್‌ಎ ಗೋಲ್ಡ್‌ಸ್ಟಾರ್ 650 ಬೈಕ್ ಸಿಂಗಲ್ ಸಿಲಿಂಡರ್ 650 ಸಿಸಿ ಎಂಜಿನ್ ಅನ್ನು ಹೊಂದಿರಲಿದೆ. ಈ ಬೈಕ್ ಇಂಗ್ಲೆಂಡ್ ಹಾಗೂ ಇನ್ನಿತರ ಮಾರುಕಟ್ಟೆಗಳಲ್ಲಿ ರಾಯಲ್ ಎನ್‌ಫೀಲ್ಡ್ 650 ಟ್ವಿನ್‌ ಬೈಕುಗಳಿಗೆ ಪೈಪೋಟಿ ನೀಡಲಿದೆ. ಅಂದ ಹಾಗೆ ಬಿ‌ಎಸ್‌ಎ ಮೋಟಾರ್‌ಸೈಕಲ್ಸ್ ಮಾರಾಟವು 1970 ರ ದಶಕದಲ್ಲಿ ನಿಂತುಹೋಯಿತು. ಆದರೆ 2016 ರಿಂದ ಬಿ‌ಎಸ್‌ಎ ಪ್ರಾಜೆಕ್ಟ್‌ನ ಉಸ್ತುವಾರಿ ವಹಿಸಿರುವ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ಸ್ ಈ ಕಂಪನಿಯನ್ನು ಪುನರುಜ್ಜೀವನಗೊಳಿಸುತ್ತಿದೆ.

ಹೊಸ ತಲೆಮಾರಿನ ಮೊದಲ ಬೈಕ್ ಅನಾವರಣಗೊಳಿಸಿದ BSA Motorcycles

ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ಬಿ‌ಎಸ್‌ಎ ಮೋಟಾರ್ ಸೈಕಲ್ಸ್ ಅನ್ನು ಸುಮಾರು ರೂ. 28 ಕೋಟಿಗಳಿಗೆ ಸ್ವಾಧೀನಪಡಿಸಿಕೊಂಡಿದೆ. ಈ ಪ್ರಕಟಣೆಯೊಂದಿಗೆ ಕ್ಲಾಸಿಕ್ ಲೆಜೆಂಡ್ಸ್ ತನ್ನ ಹೊಸ ಬೈಕ್ ಅನ್ನು ಸಿದ್ಧಪಡಿಸಿದೆ. ಈ ಬೈಕ್ ಅನ್ನು ಭಾರತದ ಪುಣೆಯಲ್ಲಿ ಹಲವು ಬಾರಿ ಪರೀಕ್ಷಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಹಲವು ಚಿತ್ರಗಳು ಬಹಿರಂಗವಾಗಿವೆ.

ಹೊಸ ತಲೆಮಾರಿನ ಮೊದಲ ಬೈಕ್ ಅನಾವರಣಗೊಳಿಸಿದ BSA Motorcycles

ಈ ಬೈಕ್‌ ಅನ್ನು ಕಂಪನಿಯು ಭಾರತದಲ್ಲಿರುವ ತನ್ನ ಪಿತಾಂಪುರ್ ಉತ್ಪಾದನಾ ಘಟಕದಲ್ಲಿ ಉತ್ಪಾದಿಸುವ ಸಾಧ್ಯತೆಗಳಿವೆ. ಈ ಬೈಕಿನ ರಫ್ತು ಮುಂದಿನ ವರ್ಷದ ಆರಂಭದಿಂದ ಆರಂಭವಾಗುತ್ತದೆ. ಕ್ಲಾಸಿಕ್ ಲೆಜೆಂಡ್ಸ್, ಆಕ್ಸ್‌ಫರ್ಡ್‌ಶೈರ್‌ನ ಬ್ಯಾನ್‌ಬರಿಯಲ್ಲಿ ತಂತ್ರಜ್ಞಾನ ಹಾಗೂ ವಿನ್ಯಾಸ ಕೇಂದ್ರವನ್ನು ಸ್ಥಾಪಿಸಿದೆ. ಮಿಡ್‌ಲ್ಯಾಂಡ್ಸ್‌ನಲ್ಲಿರುವ ಬಿ‌ಎಸ್‌ಎ ಘಟಕದಲ್ಲಿ ಹೊಸ ಬೈಕ್ ಗಳನ್ನು ಜೋಡಿಸಲಾಗಿದೆ.

ಹೊಸ ತಲೆಮಾರಿನ ಮೊದಲ ಬೈಕ್ ಅನಾವರಣಗೊಳಿಸಿದ BSA Motorcycles

ಈ ಹೊಸ ಬಿ‌ಎಸ್‌ಎ ಬೈಕ್, ಪ್ರೀಮಿಯಂ ಬೈಕ್ ಸೆಗ್ ಮೆಂಟಿನಲ್ಲಿ ಸ್ಥಾನ ಪಡೆಯಲಿದೆ. ಇದು ಹಳೆಯ ಬಿ‌ಎಸ್‌ಎ ಬೈಕಿನ ಪಾತ್ರದೊಂದಿಗೆ ಕ್ಲಾಸಿಕ್ ವಿನ್ಯಾಸವನ್ನು ಹೊಂದಿದೆ. ಆದರೆ ಆಧುನಿಕ ಅಂಡರ್‌ಪಿನ್ನಿಂಗ್‌ಗಳನ್ನು ಹೊಂದಿದೆ. ಇದನ್ನು ಮೊದಲು ಇಂಗ್ಲೆಂಡಿನಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಭಾರತದಲ್ಲಿಯೂ ಈ ಬೈಕ್ ಅನ್ನು ಮಾರಾಟ ಮಾಡುವ ಸಾಧ್ಯತೆಗಳಿವೆ.

ಹೊಸ ತಲೆಮಾರಿನ ಮೊದಲ ಬೈಕ್ ಅನಾವರಣಗೊಳಿಸಿದ BSA Motorcycles

ಈ ಹೊಸ 650 ಸಿಸಿ ಬೈಕ್ ರೆಟ್ರೊ ಥೀಮ್ ಅನ್ನು ಮುಂದುವರಿಸುತ್ತದೆ. ಈ ಬೈಕಿನಲ್ಲಿ ಇಂಟಿಗ್ರೇಟೆಡ್ ಡಿ‌ಆರ್‌ಎಲ್, ಎಲ್‌ಇಡಿ ಟೇಲ್ ಲ್ಯಾಂಪ್‌, ಟಿಯರ್ ಡ್ರಾಪ್ ಶೇಪಿನ ಫ್ಯೂಯಲ್ ಟ್ಯಾಂಕ್, ಅಗಲವಾದ ಸೆಟ್ ಹ್ಯಾಂಡಲ್‌ಬಾರ್‌ ಹೊಂದಿರುವ ರೌಂಡ್ ಹೆಡ್‌ಲ್ಯಾಂಪ್ ಅನ್ನು ನೀಡಲಾಗಿದೆ. ಈ ಬೈಕಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಅಗಲವಾದ ಫೆಂಡರ್‌ಗಳನ್ನು ಸಹ ನೀಡಲಾಗಿದೆ.

ಹೊಸ ತಲೆಮಾರಿನ ಮೊದಲ ಬೈಕ್ ಅನಾವರಣಗೊಳಿಸಿದ BSA Motorcycles

ಈ ಬೈಕ್ ಪಿರೆಲ್ಲಿ ಟಯರ್‌ಗಳೊಂದಿಗೆ ಸ್ಪೋಕ್ಡ್ ವ್ಹೀಲ್ ವ್ರಾಪ್ ಗಳನ್ನು ಹೊಂದಿದೆ. ಈ ಬೈಕಿನಲ್ಲಿ ಹೆಡ್‌ಲ್ಯಾಂಪ್‌ಗಳಿಂದ, ಫ್ಯೂಯಲ್ ಟ್ಯಾಂಕ್‌ನಿಂದ, ಎಕ್ಸಾಸ್ಟ್ ಪೈಪ್ ಹಾಗೂ ಎಂಜಿನ್ ಕೇಸಿಂಗ್‌ವರೆಗೆ ಕ್ರೋಮ್‌ ಅನ್ನು ವ್ಯಾಪಕವಾಗಿ ಬಳಸಲಾಗಿದೆ. ಈ ಬೈಕಿನಲ್ಲಿರುವ ಉದ್ದ ಸೀಟ್ ಹಾಗೂ ನೇರ ಸವಾರಿ ಸ್ಥಾನವು ಅದರ ರೆಟ್ರೊ ಥೀಮ್ ಅನ್ನು ಪ್ರತಿಬಿಂಬಿಸುತ್ತದೆ.

ಹೊಸ ತಲೆಮಾರಿನ ಮೊದಲ ಬೈಕ್ ಅನಾವರಣಗೊಳಿಸಿದ BSA Motorcycles

ಇನ್ನು ಹೊಸ ಬಿ‌ಎಸ್‌ಎ ಗೋಲ್ಡ್‌ಸ್ಟಾರ್‌ ಬೈಕಿನಲ್ಲಿರುವ 650 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 47 ಬಿ‌ಹೆಚ್‌ಪಿ ಪವರ್ ಹಾಗೂ 40 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಭವಿಷ್ಯದ ಮಾಲಿನ್ಯ ಹೊರಸೂಸುವಿಕೆ ನಿಯಮಗಳನ್ನು ಅನುಸರಿಸಲು ಈ ಎಂಜಿನ್ ಅನ್ನು ಲಿಕ್ವಿಡ್ ಕೂಲ್ ಆಗಿಡಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಬಿಎಸ್‌ಎ ಮೋಟಾರ್‌ಸೈಕಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹೊಸ ಖಾತೆಗಳನ್ನು ತೆರೆದು ತನ್ನ ಪುನರಾಗಮನದ ಬಗ್ಗೆ ಘೋಷಿಸಿತ್ತು.

ಹೊಸ ತಲೆಮಾರಿನ ಮೊದಲ ಬೈಕ್ ಅನಾವರಣಗೊಳಿಸಿದ BSA Motorcycles

ಇದರ ಜೊತೆಗೆ ಕಂಪನಿಯು ತನ್ನ ಹೊಸ ಲೋಗೋವನ್ನು ಸಹ ಶೇರ್ ಮಾಡಿತ್ತು. ಇಂಗ್ಲೆಂಡ್ ಸರ್ಕಾರವು ಈಗಾಗಲೇ ಕ್ಲಾಸಿಕ್ ಲೆಜೆಂಡ್ಸ್‌ ಕಂಪನಿಗೆ 4.6 ಮಿಲಿಯನ್ ಯುರೋ ಅಂದರೆ ಸುಮಾರು ರೂ. 45.2 ಕೋಟಿ ಅನುದಾನವನ್ನು ನೀಡಿದೆ. ಇದು ಕೋವೆಂಟ್ರಿ ಬಳಿಯ ಬ್ಯಾನ್‌ಬರಿಯಲ್ಲಿ ಆರ್ ಅಂಡ್ ಡಿ ಕೇಂದ್ರವನ್ನು ತೆರೆಯಲು ಅಗತ್ಯವಿರುವ ಅರ್ಧದಷ್ಟು ಮೊತ್ತವಾಗಿದೆ. ಇದರಿಂದ ಸುಮಾರು 255 ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಹೊಸ ತಲೆಮಾರಿನ ಮೊದಲ ಬೈಕ್ ಅನಾವರಣಗೊಳಿಸಿದ BSA Motorcycles

ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳೊಂದಿಗೆ ಬೈಕ್‌ಗಳನ್ನು ಅಭಿವೃದ್ಧಿಪಡಿಸಲು ಈ ಘಟಕವನ್ನು ಪ್ರತ್ಯೇಕವಾಗಿ ಬಳಸಲಾಗುವುದು. ಇವುಗಳಲ್ಲಿ ಮೊದಲ ಬೈಕ್ ಮುಂದಿನ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಬರ್ಮಿಂಗ್ಹ್ಯಾಮ್ ಸ್ಮಾಲ್ ಆರ್ಮ್ಸ್ ಅರ್ಥಾತ್ ಬಿಎಸ್‌ಎ ಕಂಪನಿಯನ್ನು 1861 ರಲ್ಲಿ ಬರ್ಮಿಂಗ್ಹ್ಯಾಮ್'ನ ಸ್ಮಾಲ್ ಹೀತ್'ನಲ್ಲಿ ಶಸ್ತ್ರಾಸ್ತ್ರ ಉತ್ಪಾದನಾ ಘಟಕವಾಗಿ ಆರಂಭಿಸಲಾಯಿತು.

ಹೊಸ ತಲೆಮಾರಿನ ಮೊದಲ ಬೈಕ್ ಅನಾವರಣಗೊಳಿಸಿದ BSA Motorcycles

ಸ್ಮಾಲ್ ಹೀತ್‌ನ ಸೆಟ್ಟಿಂಗ್ ಅನ್ನು ಜನಪ್ರಿಯ ಬಿ‌ಬಿ‌ಸಿ ನೆಟ್‌ವರ್ಕ್ ಶೋ ಪೀಕಿ ಬ್ಲೈಂಡರ್ಸ್‌ನಲ್ಲಿ ತೋರಿಸಲಾಗಿದೆ. ಕಂಪನಿಯು 1910 ರಲ್ಲಿ ಮೋಟಾರ್‌ಸೈಕಲ್‌ಗಳ ಉತ್ಪಾದನೆಯನ್ನು ಆರಂಭಿಸಿತು. ನಂತರ 1960ರ ದಶಕದ ಮಧ್ಯಭಾಗದವರೆಗೆ ಜನಪ್ರಿಯತೆಯನ್ನು ಹೊಂದಿತ್ತು. ಜಪಾನ್ ಕಂಪನಿಗಳು ಮಾರುಕಟ್ಟೆಯನ್ನು ಪ್ರವೇಶಿಸಿದ ನಂತರ ಮಾರಾಟದಲ್ಲಿ ಕುಸಿತ ದಾಖಲಿಸಿದ ಕಾರಣ 1972 ರಲ್ಲಿ ಕಂಪನಿಯ ಎಲ್ಲಾ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕಾಯಿತು.

Most Read Articles

Kannada
English summary
Bsa motorcycles unveils its first bike in england details
Story first published: Friday, December 3, 2021, 19:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X