Just In
- 5 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 6 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 6 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 6 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಕಾರ್ ರ‍್ಯಾಲಿ 2021: ಒಂಬತ್ತನೇ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ ಹರಿತ್ ನೋವಾ
ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 2021ರ ಡಕಾರ್ ರ‍್ಯಾಲಿಯು ಒಂಬತ್ತನೇ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಪ್ರತಿ ಹಂತವು ಕೂಡಾ ಭಾರೀ ಪೈಪೋಟಿಯೊಂದಿಗೆ ಮುಂದುವರಿಯುತ್ತಿದೆ. ಕಳೆದ ವರ್ಷದ ವಿಜೇತ ತಂಡದ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರೈಡರ್‌ಗಳು ಪ್ರಸಕ್ತ ವರ್ಷದ ಪ್ರತಿ ಹಂತದ ರ‍್ಯಾಲಿಯಲ್ಲೂ ಅಬ್ಬರಿಸುತ್ತಿದ್ದಾರೆ.

ಪ್ರಸಕ್ತ ವರ್ಷದ 43ನೇ ಆವೃತ್ತಿಯ ಡಕಾರ್ ರ‍್ಯಾಲಿಯು ಈ ತಿಂಗಳ 15ರ ತನಕ ನಡೆಯಲಿದ್ದು, ಒಟ್ಟು 12 ಹಂತಗಳನ್ನು ಒಳಗೊಂಡಿರುವ ಡಕಾರ್ ರ‍್ಯಾಲಿಯಲ್ಲಿ ಇದೀಗ ಒಂಬತ್ತು ಹಂತಗಳನ್ನು ಪೂರ್ಣಗೊಳಿಸಿದೆ. ನಿಯೊಮ್ ನಗರದಿಂದ ಆರಂಭವಾಗಿದ್ದ ಒಂಬತ್ತನೇ ಹಂತದ ರ‍್ಯಾಲಿಯು ಕೊನೆಗೆ ನಿಯೊಮ್ ನಗರಕ್ಕೆಯೇ ಬಂದು ತಲುಪಬೇಕಿತ್ತು. ಒಟ್ಟು 579 ಕಿ.ಮೀ ಒಳಗೊಂಡಿದ್ದ ಒಂಬತ್ತನೇ ಹಂತದಲ್ಲಿ 465ಕಿ.ಮೀ ವಿಶೇಷ ಮಾರ್ಗವೆಂದು ಘೋಷಣೆ ಮಾಡಲಾಗಿತ್ತು.

ಒಂಬತ್ತನೇ ಹಂತದ ರ‍್ಯಾಲಿಯಲ್ಲಿ ಕೆಂಪು ಸಮುದ್ರದ ತಟದಲ್ಲಿ ಆರಂಭವಾಗುವುದರೊಂದಿಗೆ ಶೇ. 85ರಷ್ಟು ಮಾರ್ಗವು ಮರಳುಗಾಡಿನಿಂದ ಕೂಡಿದ್ದರೆ ಇನ್ನುಳಿದ ಶೇ. 15ರಷ್ಟು ರೈಡಿಂಗ್ ಮಾರ್ಗವು ಮಣ್ಣುಮಿಶ್ರಿತ ರಸ್ತೆ ಮತ್ತು ಮಣ್ಣು ದಿಣ್ಣೆಗಳಿಂದ ಒಳಗೊಂಡಿತ್ತು.

43ನೇ ಆವೃತ್ತಿಯ ಡಕಾರ್ ರ‍್ಯಾಲಿಯ ಪ್ರತಿ ಹಂತದಲ್ಲೂ ಕೂಡಾ ವಿಪರೀತವಾದ ಧೂಳಿನ ಸಮಯಸ್ಯೆಯು ಬೈಕ್ ರೈಡರ್‌ಗಳಿಗೆ ಕಠಿಣ ಸವಾಲಾಗಿ ಪರಿಣಮಿಸುತ್ತಿದ್ದು, ಒಂಬತ್ತನೇ ಹಂತದಲ್ಲೂ ಕೂಡಾ ಹಲವು ರೈಡರ್ ರ‍್ಯಾಲಿಯನ್ನು ಅರ್ಧಕ್ಕೆ ಮೊಟಕುಗೊಳಿಸುವಂತಾಯಿತು.

ಮರಳು ಮಿಶ್ರಿಣ ಧೂಳಿನ ಹೊಡೆತಕ್ಕೆ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡದ 2019ರ ಡಕಾರ್ ರ‍್ಯಾಲಿಯ ಚಾಂಪಿಯನ್ ಟೊಬಿ ಪ್ರೈಸ್ ಕೂಡಾ ಹೊರ ನಡೆದರು. ಇದರ ನಡುವೆ 43ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿನ ಪ್ರತಿ ಹಂತದಲ್ಲೂ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಮಾನ್ಸ್ಟರ್ ಎನರ್ಜಿ ಹೋಂಡಾ ಮತ್ತು ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.

ಬಂಬತ್ತನೇ ಹಂತದ ರ‍್ಯಾಲಿಯಲ್ಲಿ ಅಬ್ಬರಿಸಿರುವ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ಕೆವಿನ್ ಬೆನವಿಡ್ಸ್ ಮೊದಲ ಸ್ಥಾನವನ್ನು ಪಡೆದರೆ ಎರಡನೇ ಸ್ಥಾನವನ್ನು ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರಿಕಿ ಬ್ರಾಬಿಕ್ ಮತ್ತು ಮೂರನೇ ಸ್ಥಾನವನ್ನು ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ಮತ್ತೊಬ್ಬ ರೈಡರ್ ಜೋಸ್ ಇಗ್ನಾಸಿಯೊ ಕಾರ್ನೆಜೊ ಫ್ಲೋರಿಮೊ ಅಗ್ರಸ್ಥಾನದಲ್ಲಿದ್ದಾರೆ.

ಒಂಬತ್ತನೇ ಹಂತದ ರ‍್ಯಾಲಿಯಿಂದ ಹೊರಗೂಳಿದರೂ ಕೆಟಿಎಂ ಫ್ಯಾಕ್ಟರಿ ತಂಡದ ಟೊಬಿ ಪ್ರೈಸ್ ಬೋರ್ಟ್ 43ನೇ ಆವೃತ್ತಿಯ ಡಕಾರ್ ರ‍್ಯಾಲಿಯ ಇತರೆ ಹಂತಗಳಲ್ಲಿ ಉತ್ತಮ ಸ್ಥಾನ ಕಾಯ್ದುಕೊಂಡಿದ್ದು, ತದನಂತರದಲ್ಲಿ ಮಾನ್ಸ್ಟರ್ ಎನರ್ಜಿ ಹೋಂಡಾ ರೈಡರ್‌ಗಳು ಭಾರೀ ಪೈಪೋಟಿ ನಡೆಸುತ್ತಿದ್ದಾರೆ.

ಅಬ್ಬರಿಸಿದ ಹರಿತ್ ನೋವಾ
2021ರ ಡಕಾರ್ ರ‍್ಯಾಲಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಹೀರೋ ಮೋಟೋಸ್ಪೋರ್ಟ್, ಶೆರ್ಕೊ ಪ್ಯಾಕ್ಟರಿ ಮತ್ತು ಟಿವಿಎಸ್ ರೇಸಿಂಗ್ ತಂಡದಿಂದ ಪ್ರಾಯೋಜಕತ್ವ ಪಡೆದಿರುವ ರೈಡರ್‌ಗಳು ಒಂಬತ್ತನೇ ಹಂತದ ರ‍್ಯಾಲಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಹೀರೋ ಮೋಟೋಸ್ಪೋರ್ಟ್ ಪ್ರತಿನಿಧಿಸಿದ್ದ ಸಿಎಸ್ ಸಂತೋಷ್ ಅಲಭ್ಯತೆ ನಡುವೆಯೂ ತಂಡದ ಇತರೆ ರೈಡರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹೀರೋ ಮೋಟೋಸ್ಪೋರ್ಟ್ ತಂಡದ ಜೊಕ್ವಿಮ್ ರೋಡ್ರಿಗೊಸ್ ಇಂದಿನ ರ‍್ಯಾಲಿಯಲ್ಲಿ 13ನೇ ಸ್ಥಾನಕ್ಕೆ ಮತ್ತು ಸ್ಟೆಬಾಸ್ಟಿನ್ ಬ್ರುಲೆರ್ 24ನೇ ಸ್ಥಾನವನ್ನು ಪಡೆದುಕೊಂಡರು. ಶೆರ್ಕೊ ಫಾಕ್ಟರಿ ತಂಡವನ್ನು ಪ್ರತಿನಿಧಿಸುತ್ತಿರುವ ಲೊರೆಂಜೊ ಸ್ಯಾಂಟೊಲಿನೊ 7ನೇ ಸ್ಥಾನ ಪಡೆದುಕೊಂಡಿದರೆ ಇನ್ನಿಬ್ಬರು ರೈಡರ್‌ಗಳಾದಹರಿತ್ ನೋವಾ 17ನೇ ಸ್ಥಾನಕ್ಕೆ ಮತ್ತು ರುಯಿ ಗೊನ್ಕಾಲ್ವ್ಸ್ 39ನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

ಇನ್ನುಳಿದಂತೆ ಡಕಾರ್ ರ‍್ಯಾಲಿಯಲ್ಲಿ ಭಾಗಿಯಾಗಿರುವ ಕ್ವಾರ್ಡ್ರಿಸೈಕಲ್ ವಿಭಾಗದಲ್ಲಿ 7240 ತಂಡದ ಮ್ಯಾನುಯೆಲ್ ಆಂಡೂಜರ್, ಕಾರು ವಿಭಾಗದಲ್ಲಿ ಎಕ್ಸ್-ರೈಡ್ ಮಿನಿ ಜೆಸಿಡಬ್ಲ್ಯೂ ತಂಡದ ಸ್ಟೀಫನ್ ಪೀಟರ್‌ಹ್ಯಾನ್ಸೆಲ್ ಮತ್ತು ಎಡ್ವರ್ಡ್ ಬೌಲಂಜರ್, ಹಗುರ ವಾಹನ ವಿಭಾಗದಲ್ಲಿ ಸೌತ್ ರೇಸಿಂಗ್ ತಂಡದ ಫ್ರಾನ್ಸಿಸ್ಕೊ ಲೋಪೆಜ್ ಕಾಂಟಾರ್ಡೊ ಮತ್ತು ಜುವಾನ್ ಪ್ಯಾಬ್ಲೊ ಲಾಟ್ರಾಚ್ ವಿನಾಗ್ರೆ ಮುನ್ನಡೆಯಲ್ಲಿದ್ದಾರೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಟ್ರಕ್ ವಿಭಾಗದಲ್ಲಿ ಕಾಮಜ್ - ಮಾಸ್ಟರ್ ತಂಡದ ಡಿಮಿಟ್ರಿ ಸೊಟ್ನಿಕೋವ್, ರುಸ್ಲಾನ್ ಅಖ್ಮದೇವ್ ಮತ್ತು ಇಲ್ಗಿಜ್ ಅಖ್ಮೆಟ್ಜಿಯಾನೋವ್ ಹಾಗೂ ಕ್ಲಾಸಿಕ್ ವಿಭಾಗದಲ್ಲಿ ಟೀಂ ಸನ್‌ಹಿಲ್ ತಂಡದ ಡೌಟನ್ ಮತ್ತು ಎಮಿಲಿಯನ್ ಎಟಿಯೆನ್ನೆ ಮುನ್ನಡೆ ಕಾಯ್ದುಕೊಂಡಿದ್ದಾರೆ.