Just In
Don't Miss!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- News
ಭಾರತದಲ್ಲಿ ಬೇಕಾದಷ್ಟು ಲಸಿಕೆಯಿದೆ, ಆದರೆ... ಸಮಸ್ಯೆ ಬೇರೆಯೇ ಆಗಿದೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪಯೋನೀರ್ ಏಷ್ಯಾ ಗ್ರೂಪ್‌ಗೆ 12 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವಿತರಿಸಿದ ಹೀರೋ ಎಲೆಕ್ಟ್ರಿಕ್
ಹೀರೋ ಎಲೆಕ್ಟ್ರಿಕ್ ಕಂಪನಿಯು ಬುಧವಾರ 12 ಆಪ್ಟಿಮಾ ಹೆಚ್‌ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಶಿವಕಾಸಿ ಮೂಲದ ಪಯೋನೀರ್ ಏಷ್ಯಾ ಗ್ರೂಪ್‌ಗೆ ವಿತರಿಸಿದೆ. ಆಪ್ಟಿಮಾ ಹೆಚ್‌ಎಕ್ಸ್ ಅನ್ನು ಇತ್ತೀಚೆಗೆ ಸಿಟಿ ಸ್ಪೀಡ್ ಮಾದರಿಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಪಯೋನೀರ್ ಏಷ್ಯಾ ತನ್ನ ಉದ್ಯೋಗಿಗಳ ಸಂಚಾರಕ್ಕಾಗಿ ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡಲಿದೆ. ಪಯೋನೀರ್ ಏಷ್ಯಾ ಗ್ರೂಪ್ ಕಾರ್ಖಾನೆಯ ಕಾರ್ಮಿಕರು ಸೇರಿದಂತೆ 400ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಸಹಭಾಗಿತ್ವದಲ್ಲಿ ಕಂಪನಿಯು ಭವಿಷ್ಯದಲ್ಲಿ ಹೆಚ್ಚಿನ ಸ್ಕೂಟರ್‌ಗಳನ್ನು ವಿತರಿಸಲಿದೆ ಎಂದು ಹೀರೋ ಎಲೆಕ್ಟ್ರಿಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪಯೋನೀರ್ ಏಷ್ಯಾ ಗ್ರೂಪ್‌ನೊಂದಿಗೆ ಪಾಲುದಾರಿಕೆ ಹೊಂದಲು ಸಂತೋಷವಾಗಿದೆ ಎಂದು ಹೀರೋ ಎಲೆಕ್ಟ್ರಿಕ್ ಸಿಇಒ ಸೊಹಿಂದರ್ ಗಿಲ್ ಹೇಳಿದ್ದಾರೆ. ಪಯೋನೀರ್ ಏಷ್ಯಾ ತನ್ನ ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಹೆಚ್‌ಎಕ್ಸ್ ಸ್ಕೂಟರ್ ಕಂಪನಿಯ ಉದ್ಯೋಗಿಗಳಿಗೆ ಆರಾಮದಾಯಕವಾದ ಚಾಲನಾ ಅನುಭವವನ್ನು ನೀಡುತ್ತದೆ ಎಂದು ಅವರು ಹೇಳಿದರು. ಈ ಯೋಜನೆಯಡಿಯಲ್ಲಿ ಉಳಿದ ಉದ್ಯೋಗಿಗಳಿಗೂ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಾಗಲಿ ಎಂಬುದನ್ನು ಆಶಿಸುತ್ತೇವೆ ಎಂದು ಅವರು ಹೇಳಿದರು.

ಹೀರೋ ಎಲೆಕ್ಟ್ರಿಕ್ - ಹೀರೋ ಆಪ್ಟಿಮಾ ಹೆಚ್‌ಎಕ್ಸ್, ಫೋಟಾನ್ ಹೆಚ್‌ಎಕ್ಸ್ ಹಾಗೂ ಎನ್‌ವೈಎಕ್ಸ್ ಹೆಚ್‌ಎಕ್ಸ್ - ಎಂಬ ಮೂರು ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ. ಈ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.57,560ಗಳಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೀರೋ ಎಲೆಕ್ಟ್ರಿಕ್ ಈ ಮೂರು ಸ್ಕೂಟರ್‌ಗಳನ್ನು ಸಿಟಿ ಸ್ಪೀಡ್ ಸರಣಿಯಲ್ಲಿ ಬಿಡುಗಡೆಗೊಳಿಸಿದೆ. ಈ ಸ್ಕೂಟರ್‌ಗಳ ವೇಗ ಪ್ರತಿ ಗಂಟೆಗೆ 30 ಕಿ.ಮೀಗಳಿಗಿಂತ ಹೆಚ್ಚು. ಈ ಸ್ಕೂಟರ್‌ಗಳ ವಿಶೇಷತೆಯೆಂದರೆ ಅವುಗಳನ್ನು ನಗರ ಪ್ರದೇಶಗಳಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಫ್ಲೈಓವರ್ ಹಾಗೂ ಎತ್ತರದ ಪ್ರದೇಶಗಳಲ್ಲಿಯೂ ಈ ಸ್ಕೂಟರ್‌ಗಳನ್ನು ಸುಲಭವಾಗಿ ಚಾಲನೆ ಮಾಡಬಹುದು. ಕಂಪನಿಯು ಈ ಸ್ಕೂಟರ್‌ಗಳಲ್ಲಿ ಪವರ್ ಹಾಗೂ ಪರ್ಫಾಮೆನ್ಸ್ ಸಂಯೋಜನೆಯನ್ನು ನೀಡಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೀರೋ ಆಪ್ಟಿಮಾ ಹೆಚ್‌ಎಕ್ಸ್, ಫೋಟಾನ್ ಹೆಚ್‌ಎಕ್ಸ್ ಹಾಗೂ ಎನ್‌ವೈಎಕ್ಸ್-ಹೆಚ್‌ಎಕ್ಸ್ ಸ್ಕೂಟರ್‌ಗಳು 25 ರಾಜ್ಯಗಳಲ್ಲಿರುವ ಕಂಪನಿಯ 500ಕ್ಕೂ ಹೆಚ್ಚು ಶೋರೂಂಗಳಲ್ಲಿ ಮಾರಾಟವಾಗುತ್ತವೆ.

ಈ ಎಲ್ಲಾ ಮೂರು ಸ್ಕೂಟರ್‌ಗಳು ಈ ಬೆಲೆಯೊಂದಿಗೆ ದೇಶದ ಅತ್ಯುತ್ತಮ ಪರ್ಫಾಮೆನ್ಸ್ ಆಧಾರಿತ ಎಲೆಕ್ಟ್ರಿಕ್ ಸ್ಕೂಟರ್ ಗಳಾಗಿ ಮಾರ್ಪಟ್ಟಿವೆ. ಈ ಸ್ಕೂಟರ್‌ಗಳು ಪೂರ್ತಿಯಾಗಿ ಚಾರ್ಜ್ ಆದ ನಂತರ 70ರಿಂದ 200 ಕಿ.ಮೀಗಳವರೆಗೆ ಚಲಿಸುತ್ತವೆ ಎಂದು ಕಂಪನಿ ಹೇಳಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ವ್ಯಾಪ್ತಿಯು ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಹೆಚ್ಚು. ಈ ಸ್ಕೂಟರ್‌ಗಳಲ್ಲಿ ಹೆಚ್ಚಿನ ಶ್ರೇಣಿಯ ದೀರ್ಘಾವಧಿಯ ಬ್ಯಾಟರಿಗಳನ್ನು ಬಳಸಲಾಗಿದೆ. ಆಪ್ಟಿಮಾ ಹೆಚ್‌ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಹೀರೋ ಎಲೆಕ್ಟ್ರಿಕ್ ಕಂಪನಿಯು 51.2 ವೋಲ್ಟ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ 550 ವ್ಯಾಟ್'ನ ಎಲೆಕ್ಟ್ರಿಕ್ ಮೋಟರ್ ಹೊಂದಿದೆ. ಪ್ರತಿ ಗಂಟೆಗೆ 42 ಕಿ.ಮೀಗಳ ಟಾಪ್ ಸ್ಪೀಡ್ ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿರುವ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ 82 ಕಿ.ಮೀಗಳವರೆಗೆ ಚಲಿಸುತ್ತದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಸ್ಕೂಟರಿನಲ್ಲಿರುವ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆಗಲು ಐದು ಗಂಟೆ ಬೇಕಾಗುತ್ತದೆ. ಗ್ರಾಹಕರಿಗೆ ಚಂದಾದಾರಿಕೆ ಆಧಾರಿತ ಯೋಜನೆಗಳನ್ನು ನೀಡಲು ಹೀರೋ ಎಲೆಕ್ಟ್ರಿಕ್ ಆಟೊವರ್ಟ್ ಟೆಕ್ನಾಲಜಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಈ ಹೊಸ ಯೋಜನೆಯಡಿ ಹಲವಾರು ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸಲಾಗಿದೆ. ಹೀರೋ ಎಲೆಕ್ಟ್ರಿಕ್ ಕಂಪನಿಯು ತಿಂಗಳಿಗೆ ರೂ.2,999 ದರದಲ್ಲಿ ಚಂದಾದಾರಿಕೆ ಯೋಜನೆಯನ್ನು ಆರಂಭಿಸಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

2020-21ರ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಕಂಪನಿಯು 3,088 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಅಂಕಿಅಂಶಗಳ ಪ್ರಕಾರ, ಓಕಿನಾವಾ ಹಾಗೂ ಎಥೆರ್ ಕಂಪನಿಗಳ ನಂತರ ಹೀರೋ ಎಲೆಕ್ಟ್ರಿಕ್ ಕಂಪನಿಯು ಅತಿದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿಯಾಗಿದೆ.