ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ಹೀರೋ ಎಲೆಕ್ಟ್ರಿಕ್(Hero Electric) ಕಂಪನಿಯು ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ಗ್ರಾಹಕರಿಗೆ ಹೊಸ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ನೀಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ದಸರಾ ಮತ್ತು ದೀಪಾವಳಿ ಆಫರ್‌ನಲ್ಲಿ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ವಾರಂಟಿ ಆಫರ್‌ಗಳೊಂದಿಗೆ ಸ್ಕೂಟರ್ ಗೆಲ್ಲುವ ಅವಕಾಶ ನೀಡಲಾಗುತ್ತಿದ್ದು, ಹೀರೋ ಎಲೆಕ್ಟ್ರಿಕ್ ನಿರ್ಮಾಣದ ಎಲ್ಲಾ ಮಾದರಿಗಳಿಗೂ ಹೊಸ ವಾರಂಟಿ ಆಫರ್ ಅನ್ವಯಿಸಲಿದೆ. ಹೀರೋ ಎಲೆಕ್ಟ್ರಿಕ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಫ್ಯಾಂಥನ್ ಹೆಚ್ಎಕ್ಸ್ ಮಾದರಿಯೊಂದಿಗೆ ಪ್ರಮುಖ 9 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಅತಿ ಕಡಿಮೆ ಬೆಲೆಯೊಂದಿಗೆ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿವೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ಇವಿ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇವಿ ಸ್ಕೂಟರ್ ಮಾದರಿಗಳಿಗಾಗಿ ಸ್ಟ್ಯಾಂಡರ್ಡ್ ವಾರಂಟಿಯನ್ನು 3 ವರ್ಷಗಳಿಂದ 5 ವರ್ಷಗಳಿಗೆ ಆಫರ್ ನೀಡುತ್ತಿದ್ದು, ಹೊಸ ಆಫರ್ ಅಕ್ಟೋಬರ್ 7ರಿಂದ ನವೆಂಬರ್ 7ರ ತನಕ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಹೊಸ ಆಫರ್ ಲಭ್ಯವಿರಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ಅಕ್ಟೋಬರ್ 7ರಿಂದ ನವೆಂಬರ್ 7ರ ತನಕ ಇವಿ ಸ್ಕೂಟರ್ ಖರೀದಿಯ ದಿನಂಪ್ರತಿಯು ಲಕ್ಕಿ ಡ್ರಾ ಮೂಲಕ ವಿಜೇತ ಗ್ರಾಹಕರಿಗೆ ಉಚಿತವಾಗಿ ಸ್ಕೂಟರ್ ವಿತರಣೆಸಲಿದ್ದು, ಖರೀದಿಗಾಗಿ ನಿಗದಿಪಡಿಸಿರುವ ಪ್ರತಿ ದಿನವು ಕೂಡಾ ಲಕ್ಕಿ ಡ್ರಾ ಮಾಡಲಾಗುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ಹೊಸ ಆಫರ್‌ನಲ್ಲಿ ಕೆಲವು ಷರತ್ತುಗಳನ್ನು ವಿಧಿಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಹೊಸ ಆಫರ್‌ ಅನ್ನು ಸ್ಟ್ಯಾಂಡರ್ಡ್ ಆಗಿ ಮೂರು ವರ್ಷಗಳಲ್ಲಿ ಬ್ಯಾಟಿರಿ ಮತ್ತು ಚಾರ್ಜರ್ ಒಳಗೊಂಡು ವಾರಂಟಿ ನೀಡುತ್ತಿದ್ದು, ಹೊಸ ಆಫರ್‌ನಲ್ಲಿ ವಿಸ್ತರಣೆ ಮಾಡಲಾಗಿರುವ ವಿಸ್ತರಿತ ವಾರಂಟಿ ಆಫರ್‌ನಲ್ಲಿ ಈ ಬ್ಯಾಟರಿ ಮತ್ತು ಚಾರ್ಜರ್ ಮೇಲೆ ಆಫರ್ ಅನ್ವಯಸುವುದಿಲ್ಲ ಎಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ಹೀರೋ ಎಲೆಕ್ಟ್ರಿಕ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಫ್ಯಾಂಥನ್ ಹೆಚ್ಎಕ್ಸ್, ಆಪ್ಟಿಮಾ ಹೆಚ್ಎಕ್ಸ್, ಎನ್‌ವೈಎಕ್ಸ್ ಹೆಚ್‌ಎಕ್ಸ್, ಆಪ್ಟಿಮಾ ಎಲ್ಎಕ್ಸ್, ಫ್ಲ್ಯಾಶ್ ಎಲ್ಎಕ್ಸ್, ಆಟ್ರಿಯಾ ಎಲ್ಎಕ್ಸ್ ಸೇರಿದಂತೆ ಒಟ್ಟು ಒಂಬತ್ತು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಅತಿ ಕಡಿಮೆ ಬೆಲೆಯೊಂದಿಗೆ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿವೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ಹೀರೋ ಹೊಸ ಸೆಗ್ಮೆಂಟ್ ಸ್ಕೂಟರ್‌ಗಳು ರೂ. 46,640ರಿಂದ ಆರಂಭಗೊಳ್ಳಲಿದ್ದು, ಬಜೆಟ್ ಬೆಲೆಯೊಂದಿಗೆ ಉತ್ತಮ ಫೀಚರ್ಸ್‌ ಹೀರೋ ಸ್ಕೂಟರ್‌ಗಳು ಮಾರಾಟ ಮಾರಾಟಗೊಳ್ಳುತ್ತಿವೆ. ಸಿಟಿ ಸೆಗ್ಮೆಂಟ್‌ನಲ್ಲಿರುವ ಇವಿ ಸ್ಕೂಟರ್‌ಗಳು 70 ಕಿ.ಮೀ ನಿಂದ 210 ಕಿ.ಮೀ ಮೈಲೇಜ್ ಹೊಂದಿರಲಿದ್ದು, ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಸ್ಕೂಟರ್ ಸಿಂಗಲ್ ಮತ್ತು ಡ್ಯುಯಲ್ ಬ್ಯಾಟರಿ ಪ್ಯಾಕ್ ನೀಡಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ಹೊಸ ಸಿಟಿ ಸೆಗ್ಮೆಂಟ್ ಸ್ಕೂಟರ್‌ಗಳನ್ನು ಹೀರೋ ಕಂಪನಿಯು ಟ್ರಾಫಿಕ್ ದಟ್ಟಣೆಯ ನಗರ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಸುಲಭವಾಗಿ ರೈಡ್‌ ಒದಗಿಸಲು ಎಂಜಿನ್ ದಕ್ಷತೆಯನ್ನು ಹೆಚ್ಚಿಸಲಾಗಿದ್ದು, ಇವು ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರ ಪ್ರಮುಖ ಆಕರ್ಷಣೆಯಾಗಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ಹೀರೋ ಎಲೆಕ್ಟ್ರಿಕ್ ಕಂಪನಿಯು ಅಭಿವೃದ್ದಿಪಡಿಸಿರುವ ಹೊಸ ಸಿಟಿ ಸೆಗ್ಮೆಂಟ್ ಮಾದರಿಗಳು ಇದೀಗ ದೇಶದ ಪ್ರಮುಖ ನಗರಗಳಲ್ಲಿ 200ಕ್ಕೂ ಡೀಲರ್ಸ್ ಬಳಿ ಖರೀದಿಗೆ ಲಭ್ಯವಿದ್ದು, ಬಜೆಟ್ ಬೆಲೆಯಲ್ಲಿ ಉತ್ತಮ ಫೀಚರ್ಸ್‌ಗಳೊಂದಿಗೆ ಹೆಚ್ಚು ಮೈಲೇಜ್ ರೇಂಜ್ ಮಾದರಿಗಳನ್ನು ಬಯಸುವ ಗ್ರಾಹಕರಿಗೆ ಇವು ಅತ್ಯುತ್ತಮ ಆಯ್ಕೆ ಎನ್ನಬಹುದು.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ಇನ್ನು ಹೆಚ್ಚುತ್ತಿರುವ ಇಂಧನ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ವಿವಿಧ ರಾಜ್ಯಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಸಬ್ಸಡಿ ಜೊತೆಗೆ ರಾಜ್ಯ ಮಟ್ಟದಲ್ಲೂ ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ಕಳೆದ ಕೆಲ ತಿಂಗಳಿನಿಂದ ವಿವಿಧ ರಾಜ್ಯಗಳಲ್ಲಿ ಇವಿ ವಾಹನಗಳ ನೋಂದಣಿ ಸಂಖ್ಯೆಯಲ್ಲಿ ಸಾಕಷ್ಟು ಏರಿಕೆಯಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದರೂ ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಘೋಷಣೆ ಮಾಡಿದ Hero Electric

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಉತ್ಪಾದಕ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಯೋಜನೆ ಜಾರಿಗೆ ತರಲಾಗಿದೆ.

Most Read Articles

Kannada
English summary
Hero electric introduced new festive season offers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X