ಗಗನಕ್ಕೇರಿದ ಇಂಧನ ಬೆಲೆ: ದಾಖಲೆ ಮಟ್ಟದ ಮಾರಾಟ ಕಂಡ ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು

ಹೀರೋ ಎಲೆಕ್ಟ್ರಿಕ್ 2021ರ ಜುಲೈ ತಿಂಗಳಿನಲ್ಲಿ 4500 ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ ಎಂದು ಹೇಳಿಕೊಂಡಿದೆ. ಇಂಧನ ಬೆಲೆ ಏರಿಕೆ ಮತ್ತು ಫೇಮ್ 2 ಸಬ್ಸಡಿಗಳಿಂದ ಭಾರತದಲ್ಲಿ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ.

ಗಗನಕ್ಕೇರಿದ ಇಂಧನ ಬೆಲೆ: ದಾಖಲೆ ಮಟ್ಟದ ಮಾರಾಟ ಕಂಡ ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು

ಇನ್ನು 2021ರ ಮೊದಲ ಏಳು ತಿಂಗಳಲ್ಲಿ 15,000 ಗಿಂತ ಹೆಚ್ಚಿನ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ ಎಂದು ಇವಿ ಕಂಪನಿ ಹೇಳಿದೆ. ದೇಶಾದ್ಯಂತ ಆಪ್ಟಿಮಾ ಎಚ್‌ಎಕ್ಸ್ ಮತ್ತು ನೈಕ್ಸ್ ಎಚ್‌ಎಕ್ಸ್‌ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಬೇಡಿಕೆಗೆ ತಕ್ಕಂತೆ ಪೂರೈಸಲು ಮತ್ತು ಕಳೆದ ವರ್ಷಕ್ಕಿಂತ ಶೇ.100 ರಷ್ಟು ಬೆಳವಣಿಗೆಯನ್ನು ಸಾಧಿಸಲು ವರ್ಷಕ್ಕೆ 3 ಲಕ್ಷಕ್ಕೂ ಹೆಚ್ಚು ಇವಿಗಳನ್ನು ತಯಾರಿಸಲು ಈಗಿರುವ ಸೌಲಭ್ಯವನ್ನು ವಿಸ್ತರಿಸುವ ಯೋಜನೆಯನ್ನು ಕಂಪನಿ ಈಗಾಗಲೇ ಘೋಷಿಸಿದೆ. ಮಹಾರಾಷ್ಟ್ರ ಸೇರಿದಂತೆ ಹಲವು ಸರ್ಕಾರಗಳು ತನ್ನ ಹೊಸ ನೀತಿಯ ಮೂಲಕ ಸಾಕಷ್ಟು ಬೆಲೆ ಕಡಿತವನ್ನು ಘೋಷಿಸಿವೆ.

ಗಗನಕ್ಕೇರಿದ ಇಂಧನ ಬೆಲೆ: ದಾಖಲೆ ಮಟ್ಟದ ಮಾರಾಟ ಕಂಡ ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು

ಹೊಸ ಇವಿ ನೀತಿಯ ಭಾಗವಾಗಿ, ಸರ್ಕಾರವು ಮೊದಲ 100,000 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿದಾರರಿಗೆ ಪ್ರತಿ ಕಿಲೋವ್ಯಾಟ್ ಬ್ಯಾಟರಿ ಸಾಮರ್ಥ್ಯಕ್ಕೆ ರೂ.5,000 ಪ್ರೋತ್ಸಾಹಧನ ನೀಡುವ ಮೂಲಕ ಸಬ್ಸಿಡಿ ನೀಡುತ್ತದೆ. ವರ್ಗದ ಹಿಂದಿನ ಕ್ಯಾಪ್ ರೂ.5000 ಆಗಿತ್ತು. ಆದರೆ ಕುತೂಹಲಕಾರಿಯಾಗಿ, 31 ನೇ ಡಿಸೆಂಬರ್ 2021 ರ ಮೊದಲು ಇವಿ ಖರೀದಿಸುವ ಖರೀದಿದಾರರಿಗೆ ಹೆಚ್ಚುವರಿ ರೂ.5000 ಪ್ರೋತ್ಸಾಹವಿದೆ.

ಗಗನಕ್ಕೇರಿದ ಇಂಧನ ಬೆಲೆ: ದಾಖಲೆ ಮಟ್ಟದ ಮಾರಾಟ ಕಂಡ ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು

ಒಟ್ಟು ಪ್ರೋತ್ಸಾಹವನ್ನು ರೂ.15,000 ಕ್ಕೆ ತೆಗೆದುಕೊಳ್ಳುತ್ತದೆ. ರೋಡ್ ಟ್ಯಾಕ್ಸ್ ಮತ್ತು ನೋಂದಣಿ ವೆಚ್ಚವನ್ನು ಮನ್ನಾ ಮಾಡಲಾಗುವುದು ಎಂದು ನೀತಿಯಲ್ಲಿ ಹೇಳಲಾಗಿದೆ. ಇನ್ನು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯ ತಿದ್ದುಪಡಿ ತಂದಿದ್ದು, ಹೊಸ ಯೋಜನೆ ಅಡಿಯಲ್ಲಿ ಇವಿ ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿ ಸಬ್ಸಡಿ ನೀಡಲು ಒಪ್ಪಿಗೆ ಸೂಚಿಸಿದೆ.

ಗಗನಕ್ಕೇರಿದ ಇಂಧನ ಬೆಲೆ: ದಾಖಲೆ ಮಟ್ಟದ ಮಾರಾಟ ಕಂಡ ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು

ಇವಿ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸುವ ಫೇಮ್ 2 ಯೋಜನೆಯ ತಿದ್ದುಪಡಿಯ ಪರಿಣಾಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿಯಾಗಿ ಇದೀಗ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ರೂ.5 ಸಾವಿರದಿಂದ ರೂ.30 ಸಾವಿರ ತನಕ ಹೆಚ್ಚುವರಿ ಸಬ್ಸಡಿ ದೊರೆಯುತ್ತಿರುವುದು ಇವಿ ವಾಹನಗಳ ಮಾರಾಟ ಸುಧಾರಣೆಗೆ ನೆರವಾಗಲಿದೆ.

ಗಗನಕ್ಕೇರಿದ ಇಂಧನ ಬೆಲೆ: ದಾಖಲೆ ಮಟ್ಟದ ಮಾರಾಟ ಕಂಡ ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು

ಇನ್ನು ಇತ್ತೀಚೆಗೆ ಹೊಸ ಸಬ್ಸಡಿ ತಿದ್ದುಪಡಿಯನ್ನು ಘೋಷಣೆ ಮಾಡುತ್ತಿದ್ದಂತೆ ಪ್ರಮುಖ ವಾಹನ ಕಂಪನಿಗಳು ತಮ್ಮ ಇವಿ ಸ್ಕೂಟರ್‌ಗಳ ಬೆಲೆ ಕಡಿತ ಮಾಡಿದ್ದು, ಹೀರೋ ಎಲೆಕ್ಟ್ರಿಕ್ ಕಂಪನಿಯು ಸಹ ತನ್ನ ಅಪ್ಟಿಮಾ ಹೆಚ್ಎಕ್ಸ್ ಸ್ಕೂಟರ್ ಬೆಲೆಯಲ್ಲಿ ರೂ.8 ಸಾವಿರ ಇಳಿಕೆ ಮಾಡಿದೆ.

ಗಗನಕ್ಕೇರಿದ ಇಂಧನ ಬೆಲೆ: ದಾಖಲೆ ಮಟ್ಟದ ಮಾರಾಟ ಕಂಡ ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು

ಅಪ್ಟಿಮಾ ಹೆಚ್ಎಕ್ಸ್ ಇವಿ ಸ್ಕೂಟರ್ ಮಾದರಿಗೆ ಹೊಸ ಸಬ್ಸಡಿ ದರ ಸೇರಿದ ನಂತರ ಗ್ರಾಹಕರಿಗೆ ಹೊಸ ಸ್ಕೂಟರ್ ರೂ 53,600 ಬೆಲೆಯನ್ನು ಹೊಂದಿದೆ.ಇನ್ನು ಫೇಮ್ 2 ಸಬ್ಸಡಿ ತಿದ್ದುಪಡಿಯಲ್ಲಿ ಹೆಚ್ಚುವರಿ ಸಬ್ಸಡಿ ಪಡೆದುಕೊಳ್ಳುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕಡ್ಡಾಯವಾಗಿ ಪ್ರತಿ ಗಂಟೆಗೆ ಕನಿಷ್ಠ 40 ಕಿ.ಮೀ ಟಾಪ್ ಸ್ಪೀಡ್ ಜೊತೆಗೆ ಪ್ರತಿ ಚಾರ್ಜ್‌ಗೆ ಕನಿಷ್ಠ 80 ಕಿ.ಮೀ ಮೈಲೇಜ್ ಹಿಂದಿರುಗಿಸಬೇಕೆಂಬ ಮಾನದಂಡವನ್ನು ಜಾರಿಗೆ ತಂದಿದೆ.

ಗಗನಕ್ಕೇರಿದ ಇಂಧನ ಬೆಲೆ: ದಾಖಲೆ ಮಟ್ಟದ ಮಾರಾಟ ಕಂಡ ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು

ಹೊಸ ಮಾನದಂಡಗಳಿಗೂ ಪೂರಕವಾದ ವೈಶಿಷ್ಟ್ಯತೆ ಹೊಂದಿರುವ ಅಪ್ಟಿಮಾ ಹೆಚ್ಎಕ್ಸ್ ಮಾದರಿಯು 42 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 82 ಕಿಮೀ ಮೈಲೇಜ್ ಹಿಂದಿರುಗಿಸುತ್ತದೆ.ಅಪ್ಟಿಮಾ ಹೆಚ್ಎಕ್ಸ್ ಮಾದರಿಯಲ್ಲಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಎಕ್ಸೆಂಡ್ ಬ್ಯಾಟರಿ ರೇಂಜ್ ಮಾದರಿಯನ್ನು ಸಹ ಮಾರಾಟ ಮಾಡುತ್ತಿದೆ.

ಗಗನಕ್ಕೇರಿದ ಇಂಧನ ಬೆಲೆ: ದಾಖಲೆ ಮಟ್ಟದ ಮಾರಾಟ ಕಂಡ ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು

ಎಕ್ಸೆಂಡ್ ಬ್ಯಾಟರಿ ಹೊಂದಿರುವ ಅಪ್ಟಿಮಾ ಹೆಚ್ಎಕ್ಸ್ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ 122 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಸಿಂಗಲ್ ಬ್ಯಾಟರಿ ವರ್ಷನ್ ಅಥವಾ ಎಕ್ಸೆಂಡ್ ಬ್ಯಾಟರಿ ಹೊಂದಿರುವ ಅಪ್ಟಿಮಾ ಹೆಚ್ಎಕ್ಸ್ ಸ್ಕೂಟರ್ ಖರೀದಿ ಮಾಡಬಹುದಾಗಿದೆ

ಗಗನಕ್ಕೇರಿದ ಇಂಧನ ಬೆಲೆ: ದಾಖಲೆ ಮಟ್ಟದ ಮಾರಾಟ ಕಂಡ ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು

1200 ವ್ಯಾಟ್ ಎಲೆಕ್ಟ್ರಿಕ್ ಮೋಟರ್ ಹೊಂದಿರುವ ಅಪ್ಟಿಮಾ ಹೆಚ್ಎಸ್ ಮಾದರಿಯು 51.2 ವಿ/30 ಎಎಚ್ ಪೋರ್ಟಬಲ್ ಬ್ಯಾಟರಿ ಹೊಂದಿದೆ. ಈ ಎಲೆಕ್ಟ್ರಿಕ್ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು ಐದು ಗಂಟೆ ಕಾಲವಕಾಶ ತೆಗೆದುಕೊಳ್ಳುತ್ತದೆ.

ಗಗನಕ್ಕೇರಿದ ಇಂಧನ ಬೆಲೆ: ದಾಖಲೆ ಮಟ್ಟದ ಮಾರಾಟ ಕಂಡ ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು

ಅಪ್ಟಿಮಾ ಹೆಚ್ಎಕ್ಸ್ ಸ್ಕೂಟರ್‌ನಲ್ಲಿ ಏಪ್ರನ್-ಮೌಂಟೆಡ್ ಟರ್ನ್ ಇಂಡಿಕೇಟರ್ಸ್, ಯುಎಸ್‌ಬಿ ಪೋರ್ಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 12 ಇಂಚಿನ ಅಲಾಯ್ ವೀಲ್ಸ್, ರಿಮೋಟ್ ಲಾಕ್, ಎಲ್ಇಡಿ ಹೆಡ್‌ಲೈಟ್ ಮತ್ತು ಆಂಟಿ-ಥೆಫ್ಟ್ ಅಲಾರಂ ಸೇರಿದಂತೆ ಪ್ರಮುಖ ಫೀಚರ್ಸ್ ಗಳನ್ನು ಒಳಗೊಂಡಿದೆ. ಒಟ್ಟಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಗಣನೀಯವಾಗಿ ಏರಿಕೆಯಾಗಿದೆ.

Most Read Articles

Kannada
English summary
Hero electric sells over 15 000 electric two wheelers in first half of 2021 details
Story first published: Tuesday, August 10, 2021, 10:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X