ಏರಿಕೆಯಾಯ್ತು Hero Lectro ಎಲೆಕ್ಟ್ರಿಕ್ ಸೈಕಲ್ ಬೆಲೆ

ಭಾರತದ ಆಟೋ ಮೊಬೈಲ್ ಉದ್ಯಮವು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನ ಹರಿಸುತ್ತಿದೆ. ಬಹುತೇಕ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ತಯಾರಿಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ. ಭಾರತೀಯ ಗ್ರಾಹಕರು ಸಹ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ.

ಏರಿಕೆಯಾಯ್ತು Hero Lectro ಎಲೆಕ್ಟ್ರಿಕ್ ಸೈಕಲ್ ಬೆಲೆ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು, ಖ್ಯಾತ ಸೈಕಲ್ ತಯಾರಕ ಕಂಪನಿಯಾದ ಹೀರೋ ತನ್ನ ಎಲೆಕ್ಟ್ರಿಕ್ ಸೈಕಲ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ಸೈಕಲ್ ಗಳನ್ನು ವಿಶ್ವ ಎಲೆಕ್ಟ್ರಿಕ್ ವಾಹನಗಳ ದಿನವಾದ ಸೆಪ್ಟೆಂಬರ್ 9ರಂದು ಬಿಡುಗಡೆಗೊಳಿಸಿತ್ತು. ಹೀರೋ ಕಂಪನಿಯು ತನ್ನ ಹೀರೋ ಲೆಕ್ಟ್ರೋ ಸೈಕಲ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಏರಿಕೆಯಾಯ್ತು Hero Lectro ಎಲೆಕ್ಟ್ರಿಕ್ ಸೈಕಲ್ ಬೆಲೆ

ಬಿಡುಗಡೆಯಾದಾಗ ಈ ಎಲೆಕ್ಟ್ರಿಕ್ ಸೈಕಲ್‌ಗಳ ಬೆಲೆ ರೂ.24,999ಗಳಿಂದ ರೂ.1,35,000 ಗಳಾಗಿತ್ತು. ಲೆಕ್ಟ್ರೋ (Lectro) ಹೀರೋ ಎಲೆಕ್ಟ್ರಿಕ್ ಸೈಕಲ್'ನ ಪ್ರಮುಖ ಮಾದರಿಯಾಗಿದೆ. ಕರೋನಾ ವೈರಸ್ ಅವಧಿಯಲ್ಲಿ ಭಾರತದ ಗ್ರಾಹಕರಲ್ಲಿ ಉಂಟಾದ ಬದಲಾವಣೆಯನ್ನು ಕಂಡು ಕೊಂಡ ನಂತರ ಹೀರೋ ಕಂಪನಿಯು ಇ-ಸೈಕಲ್ ಗಳನ್ನು ಅಭಿವೃದ್ಧಿಪಡಿಸಿದೆ.

ಏರಿಕೆಯಾಯ್ತು Hero Lectro ಎಲೆಕ್ಟ್ರಿಕ್ ಸೈಕಲ್ ಬೆಲೆ

ಕಂಪನಿಯು ಇದರಿಂದ ಲಾಭ ಪಡೆಯುವ ಭರವಸೆಯನ್ನು ಹೊಂದಿದೆ. ಹೀರೋದ ಈ ಎಲೆಕ್ಟ್ರಿಕ್ ಸೈಕಲ್ ಗಳ ಸರಣಿಯನ್ನು ಬ್ರಿಟನ್ ನ ಮ್ಯಾಂಚೆಸ್ಟರ್‌ನಲ್ಲಿರುವ ಗ್ಲೋಬಲ್ ಡಿಸೈನ್ ಸೆಂಟರ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಸೈಕಲ್ ಗಳ ಹೊಸ ಸರಣಿಯನ್ನು ಕಮ್ಯೂಟರ್ (ಪ್ರಯಾಣಿಕ), ಫಿಟ್‌ನೆಸ್ ಹಾಗೂ ಲೀಷರ್ (ವಿರಾಮ) ಎಂದು ಮೂರು ಭಾಗಗಳಾಗಿ ವರ್ಗೀಕರಿಸಲಾಗಿದೆ.

ಏರಿಕೆಯಾಯ್ತು Hero Lectro ಎಲೆಕ್ಟ್ರಿಕ್ ಸೈಕಲ್ ಬೆಲೆ

ಈ ಸೈಕಲ್‌ನಲ್ಲಿ ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಫೀಚರ್ ಅನ್ನು ಸಹ ನೀಡಲಾಗಿದೆ. ಹೀರೋ ಲೆಕ್ಟ್ರೊ ಸೈಕಲ್ ಗಳ ವ್ಯಾಪ್ತಿಯು ಸಣ್ಣ ಹಾಗೂ ಮಧ್ಯಮ ದೂರದ ಪ್ರಯಾಣಕ್ಕೆ ಸೂಕ್ತವಾಗಿದೆ. ಲೀಷರ್ ಸರಣಿಯ ಸೈಕಲ್ ಗಳನ್ನು ವಿರಾಮದ ಸವಾರಿಗಾಗಿ ಹಾಗೂ ಫಿಟ್‌ನೆಸ್ ಸರಣಿಯ ಸೈಕಲ್ ಗಳನ್ನು ದೂರ ಸಾಗುವ ಫಿಟ್‌ನೆಸ್ ಉತ್ಸಾಹಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಏರಿಕೆಯಾಯ್ತು Hero Lectro ಎಲೆಕ್ಟ್ರಿಕ್ ಸೈಕಲ್ ಬೆಲೆ

ಇನ್ನು ಹೀರೋ ಲೆಕ್ಟ್ರೋ ಬ್ರ್ಯಾಂಡ್, ಹೀರೋ ಸೈಕಲ್ಸ್'ನ ಉಪ ಬ್ರಾಂಡ್ ಆಗಿದ್ದು, ಕೇವಲ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಉತ್ಪಾದಿಸುತ್ತದೆ. ಹೀರೋ ಮೋಟಾರ್ ಹಾಗೂ ಯಮಹಾ ಕಂಪನಿಗಳು ಜಂಟಿಯಾಗಿ ಎಲೆಕ್ಟ್ರಿಕ್ ಡ್ರೈವ್ ಮೋಟರ್ ಅನ್ನು ತಯಾರಿಸುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಇದೀಗ ಹೀರೋ ಲೆಕ್ಟ್ರೋ ಕುರಿತ ಹೊಸ ಮಾಹಿತಿ ಹೊರ ಬಂದಿದೆ.

ಏರಿಕೆಯಾಯ್ತು Hero Lectro ಎಲೆಕ್ಟ್ರಿಕ್ ಸೈಕಲ್ ಬೆಲೆ

ಕಂಪನಿಯು ತನ್ನ ಹೀರೋ ಲೆಕ್ಟ್ರೋ ಸೈಕಲ್ ಸರಣಿಯ ಬೆಲೆಯನ್ನು ಹೆಚ್ಚಿಸಿದೆ. ಕಂಪನಿಯು ಈ ಸರಣಿಯ ಎಲ್ಲಾ ಎಲೆಕ್ಟ್ರಿಕ್ ಸೈಕಲ್‌ಗಳ ಬೆಲೆಯನ್ನು ರೂ. 5,000 ಗಳವರೆಗೆ ಹೆಚ್ಚಿಸಿದೆ. ಇನ್‌ಪುಟ್ ವಸ್ತು ಹಾಗೂ ಸರಕು ಸಾಗಣೆ ವೆಚ್ಚದ ಹೆಚ್ಚಳದಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

ಏರಿಕೆಯಾಯ್ತು Hero Lectro ಎಲೆಕ್ಟ್ರಿಕ್ ಸೈಕಲ್ ಬೆಲೆ

ಸಂಪೂರ್ಣ ಸರಣಿಯ ಬೆಲೆಗಳನ್ನು ಶೇಕಡಾ 7.5 ರಿಂದ ಶೇಕಡಾ 12.8 ರವರೆಗೂ ಏರಿಕೆ ಮಾಡಲಾಗಿದೆ ಎಂದು ಕಂಪನಿಯು ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಿದೆ. ಹೀರೋ ಲೆಕ್ಟ್ರೋ ಸಿ ಸರಣಿಯಂತಹ ಎಲೆಕ್ಟ್ರಿಕ್ ಸೈಕಲ್‌ಗಳ ಸರಣಿಯನ್ನು ಮಾರಾಟ ಮಾಡುತ್ತದೆ. ಈ ಸರಣಿಯು ಒಟ್ಟು 10 ಮಾದರಿಗಳನ್ನು ಒಳಗೊಂಡಿದೆ.

ಏರಿಕೆಯಾಯ್ತು Hero Lectro ಎಲೆಕ್ಟ್ರಿಕ್ ಸೈಕಲ್ ಬೆಲೆ

ಈ ಸರಣಿಯ ಆರಂಭಿಕ ಬೆಲೆ ಈಗ ರೂ. 28,999 ಗಳಿಗೆ ಏರಿಕೆಯಾಗಿದೆ. ಸುಧಾರಿತ ಎಫ್ 6i ಮಾದರಿಯ ಬೆಲೆ, ಬೆಲೆ ಏರಿಕೆಯ ನಂತರ ರೂ. 54,999 ಗಳಾಗಿದೆ. ಎಲೆಕ್ಟ್ರಿಕ್ ಸೈಕಲ್ ಬೆಲೆ ಏರಿಕೆ ಕುರಿತು ಹೀರೋ ಲೆಕ್ಟ್ರೋ ಸಿಇಒ ಆದಿತ್ಯ ಮುಂಜಾಲ್ ಮಾಹಿತಿ ನೀಡಿದ್ದಾರೆ.

ಏರಿಕೆಯಾಯ್ತು Hero Lectro ಎಲೆಕ್ಟ್ರಿಕ್ ಸೈಕಲ್ ಬೆಲೆ

ಈ ಬಗ್ಗೆ ಮಾತನಾಡಿರುವ ಅವರು, ಸರಕು ಹಾಗೂ ಇನ್‌ಪುಟ್ ಹೆಚ್ಚಳದಂತಹ ಮಾರುಕಟ್ಟೆ ಅಂಶಗಳಿಂದಾಗಿ ತಮ್ಮ ಉತ್ಪನ್ನಗಳ ಬೆಲೆ ಪರಿಷ್ಕರಣೆ ಅಗತ್ಯವಾಗಿದೆ. ನಮ್ಮ ಗುಣಮಟ್ಟವು ಗ್ರಾಹಕರ ನಿರೀಕ್ಷೆಗಳು ಹಾಗೂ ಜಾಗತಿಕ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸುತ್ತವೆ ಎಂದು ಹೇಳಿದರು.

ಏರಿಕೆಯಾಯ್ತು Hero Lectro ಎಲೆಕ್ಟ್ರಿಕ್ ಸೈಕಲ್ ಬೆಲೆ

ಹೀರೋ ಲೆಕ್ಟ್ರೋ ಭಾರತೀಯ ಇ-ಸೈಕಲ್ ವಿಭಾಗದಲ್ಲಿ ಅತ್ಯಂತ ತಾಂತ್ರಿಕವಾಗಿ ಮುಂದುವರಿದ ಹಾಗೂ ಘನ ಮೌಲ್ಯದ ಪ್ರತಿಪಾದನೆಗಳಲ್ಲಿ ಒಂದಾಗಿದೆ. ಈ ಸೈಕಲ್ ಸವಾರರಿಗೆ ವರ್ಚುವಲ್ ಪ್ರಯೋಜನಗಳು ದೊರೆಯುತ್ತವೆ. ಜೊತೆಗೆ ಗ್ರಾಹಕ ಸೇವಾ ನೆಟ್‌ವರ್ಕ್‌ಗಳನ್ನು ಬಲಪಡಿಸುತ್ತವೆ ಎಂದು ಆದಿತ್ಯ ಮುಂಜಾಲ್ ಹೇಳಿದರು.

ಏರಿಕೆಯಾಯ್ತು Hero Lectro ಎಲೆಕ್ಟ್ರಿಕ್ ಸೈಕಲ್ ಬೆಲೆ

ಹೀರೋ ಲೆಕ್ಟ್ರೋ ತನ್ನ ಉತ್ಪನ್ನಗಳನ್ನು ದೇಶಾದ್ಯಂತವಿರುವ 600 ಕ್ಕೂ ಹೆಚ್ಚು ಡೀಲರ್ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ನೀಡಿದೆ. ಹೀರೋ ಮೋಟಾರ್ಸ್ ಹಾಗೂ ಯಮಹಾ ಕಂಪನಿಗಳ ಸಹಭಾಗಿತ್ವದ ನಂತರ, ಪಂಜಾಬ್‌ನಲ್ಲಿ ಎಲೆಕ್ಟ್ರಿಕ್ ಡ್ರೈವ್ ಮೋಟಾರ್‌ಗಳ ತಯಾರಿಕೆಯ ಘಟಕವನ್ನು ಸ್ಥಾಪಿಸಲಾಗುವುದು.

ಏರಿಕೆಯಾಯ್ತು Hero Lectro ಎಲೆಕ್ಟ್ರಿಕ್ ಸೈಕಲ್ ಬೆಲೆ

ಈ ಘಟಕದಲ್ಲಿ ಉತ್ಪಾದನೆಯು 2020ರ ನವೆಂಬರ್ ನಿಂದ ಆರಂಭವಾಗುವ ಸಾಧ್ಯತೆಗಳಿವೆ. ಮಾಹಿತಿಯ ಪ್ರಕಾರ, ಈ ಘಟಕವು ವರ್ಷಕ್ಕೆ 10 ಲಕ್ಷ ಯುನಿಟ್ ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದಕ್ಕೆ ಎರಡೂ ಕಂಪನಿಗಳು ಅನುಮೋದನೆ ನೀಡಿವೆ. ಹೀರೋ ಮೋಟಾರ್ಸ್ ಗ್ರೂಪ್‌ನ ಉಪಕರಣ ತಯಾರಕ ಕಂಪನಿಯ ಭಾಗವಾಗಿರುವ ಹೀರೋ ಮೋಟಾರ್ಸ್, ಜಪಾನ್‌ನ ಯಮಹಾ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದೆ.

ಏರಿಕೆಯಾಯ್ತು Hero Lectro ಎಲೆಕ್ಟ್ರಿಕ್ ಸೈಕಲ್ ಬೆಲೆ

ಈ ಪಾಲುದಾರಿಕೆಯು ಎಲೆಕ್ಟ್ರಿಕ್ ಸೈಕಲ್ ವಿಭಾಗದಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಇದು 2019 ರಲ್ಲಿ ಮಾಡಲಾದ ಎರಡೂ ಕಂಪನಿಗಳ ಪಾಲುದಾರಿಕೆಯ ಮಹತ್ವದ ನಿರ್ಧಾರವಾಗಿದೆ. ಈ ಪಾಲುದಾರಿಕೆಯ ಮೂಲಕ ಜಾಗತಿಕ ಮಾರುಕಟ್ಟೆಗೆ ಉಪಕರಣಗಳನ್ನು ತಯಾರಿಸಲಾಗುವುದು.

Most Read Articles

Kannada
English summary
Hero lectro electric bicycle price increases up to rs 5000 details
Story first published: Thursday, November 11, 2021, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X