ಬಿಡುಗಡೆಗಾಗಿ ಸಿದ್ದವಾಗಿರುವ 2022ರ ಹೋಂಡಾ ಸಿಬಿ300ಆರ್ ಬೈಕ್ ವಿಡಿಯೋ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಶೀಘ್ರದಲ್ಲಿಯೇ ತನ್ನ ಹೊಸ ಸಿಬಿ300ಆರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಬಿಡುಗಡೆಗೂ ಮುನ್ನ ಹೊಸ ಆವೃತ್ತಿಯು 2021ರ ಇಂಡಿಯಾ ಬೈಕ್ ವೀಕ್‌ನಲ್ಲಿ ಅನಾವರಣಗೊಳಿಸಿದೆ.

ಭಾರತದಲ್ಲಿ ಹೊಸ ಎಮಿಷನ್ ಜಾರಿ ನಂತರ ಸಿಬಿ300ಆರ್ ಬೈಕ್ ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಿದ್ದ ಹೋಂಡಾ ಕಂಪನಿಯು ಇದೀಗ ಹೊಸ ಬೈಕ್ ಮಾದರಿಯನ್ನು ಬಿಎಸ್ 6 ಎಂಜಿನ್‌ನೊಂದಿಗೆ ಅಭಿವೃದ್ದಿಗೊಳಿಸಿದ್ದು, ಹೊಸ ಬೈಕ್ ಮಾದರಿಯು ಹಲವಾರು ಹೊಸ ಬದಲಾವಣೆಗಳೊಂದಿಗೆ ಮುಂಬರುವ ಜನವರಿ ಮಧ್ಯಂತರದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಹೊಂಡಾ ಕಂಪನಿಯು ಹೊಸ ಬೈಕಿನಲ್ಲಿ ಈ ಹಿಂದಿನ ಎಂಜಿನ್ ಆಯ್ಕೆಯನ್ನೇ ಬಿಎಸ್-6 ನಿಯಮಾನುಸಾರವಾಗಿ ಉನ್ನತೀಕರಿಸಿದ್ದು, 6-ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ ಸ್ಲಿಪ್-ಅಸಿಸ್ಟ್ ಕ್ಲಚ್ ಹೊಂದಿರುವ ಹೊಸ ಬೈಕ್ 286 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ನ ಅನ್ನು ಹೊಂದಿರಲಿದೆ.

286 ಸಿಸಿ ಎಂಜಿನ್ ಮಾದರಿಯು 30 ಬಿಹೆಚ್‍ಪಿ ಪವರ್ ಮತ್ತು 27.4 ಎನ್ಎಂ ಟಾರ್ಕ್ ಅನ್ನು ಉತ್ಪಾದನಾ ಗುಣಹೊಂದಿದ್ದು, ಹೋಂಡಾ ಕಂಪನಿಯು ಹೊಸ ಸಿಬಿ300ಆರ್ ಬೈಕ್ ಮಾದರಿಯನ್ನು ತನ್ನ ಪ್ರೀಮಿಯಂ ಬೈಕ್ ಮಾರಾಟ ಮಳಿಗೆಗಳಲ್ಲಿ ಮಾರಾಟಗೊಳಿಸಲಿದೆ.

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸದ್ಯ ಭಾರತದಲ್ಲಿ ಎರಡು ಮಾದರಿ ಮಾರಾಟ ಮಳಿಗೆಗಳನ್ನು ಹೊಂದಿದ್ದು, ಸಾಮಾನ್ಯ ಶೋರೂಂಗಳಲ್ಲಿ 350ಸಿಸಿಗಿಂತ ಕಡಿಮೆ ಬೈಕ್ ಮತ್ತು ಸ್ಕೂಟರ್‌ಗಳನ್ನು ಮತ್ತು 350 ಸಿಸಿ ಮೇಲ್ಪಟ್ಟ ಬೈಕ್ ಮಾದರಿಗಳನ್ನು ಬಿಗ್‌ವಿಂಗ್ ಮೂಲಕ ಮಾರಾಟಗೊಳಿಸುತ್ತದೆ.

Most Read Articles

Kannada
English summary
Honda cb300r bs6 unveiled kannada video
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X