Just In
Don't Miss!
- News
13 ವರ್ಷದ ಬಾಲಕಿಯನ್ನು ಎರಡು ಬಾರಿ ಅಪಹರಿಸಿ 9 ಮಂದಿಯಿಂದ ಸಾಮೂಹಿಕ ಅತ್ಯಾಚಾರ
- Sports
ಭಾರತ vs ಆಸ್ಟ್ರೇಲಿಯಾ: ಬ್ರಿಸ್ಬೇನ್ನಲ್ಲಿ ದಾಖಲೆಯ ಜೊತೆಯಾಟವಾಡಿದ ಶಾರ್ದೂಲ್- ಸುಂದರ್
- Movies
ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಯಶ್, ಸುದೀಪ್ ಸುಮಲತಾ; ಫೋಟೋ ವೈರಲ್
- Finance
ಈ 6 ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ 1,13,018.94 ಕೋಟಿ ರು. ಹೆಚ್ಚಳ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಾರ್ನೆಟ್ 2.0 ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ಸರಣಿಯಲ್ಲಿರುವ ದ್ವಿಚಕ್ರ ವಾಹನಗಳ ಬೆಲೆಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಷ್ಕರಿಸಿದೆ. ಇದರ ಪರಿಣಾಮವಾಗಿ ಜನಪ್ರಿಯ ಹಾರ್ನೆಟ್ 2.0 ಮಾದರಿಯು ದುಬಾರಿಯಾಗಿದೆ.

ಈ ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನ ಬೆಲೆಯು ರೂ.1,268 ಗಳವರೆಗೆ ಹೆಚ್ಚಿಸಿದೆ. ಇನ್ನು ಬೆಲೆ ಏರಿಕೆಯ ಬಳಿಕ, ಹೋಂಡಾ ಹಾರ್ನೆಟ್ 2.0 ಸ್ಟ್ಯಾಂಡರ್ಡ್ ವೆರಿಯೆಂಟ್ ಬೆಲೆ ರೂ.128,195 ಗಳಾಗಿದ್ದರೆ, ರೆಪ್ಸೊಲ್ ಎಡಿಷನ್ ಬೆಲೆಯು ರೂ.130,195 ಗಳಾಗಿದೆ. ಎಲ್ಲಾ ಬೆಲೆಗಳು ದೆಹಲಿಯು ಎಕ್ಸ್ ಶೋರೂಂ ಪ್ರಕಾರವಾಗಿದೆ. ಹೋಂಡಾ ಸರಣಿಯಲ್ಲಿ ಹಾರ್ನೆಟ್ 2.0 ಮಾದರಿಯು ಪ್ರೀಮಿಯಂ ಬೈಕ್ ಆಗಿದೆ.

ಹೋಂಡಾ ಹಾರ್ನೆಟ್ 2.0 ಬೈಕ್ ಪಿಜಿಎಂ-ಫೈ ತಂತ್ರಜ್ಞಾನದೊಂದಿಗೆ ಬ್ರಾಂಡ್‌ನ ಹೊಸ ಬಿಎಸ್-6 ಪ್ರೇರಿತ 184 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 17 ಬಿಹೆಚ್‌ಪಿ ಮತ್ತು 6000 ಆರ್‌ಪಿಎಂನಲ್ಲಿ 16.1 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಗೋಲ್ಡನ್ ಯುಎಸ್ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 276 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅನ್ನು ಒಳಗೊಂಡಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಆಗಿ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ನೀಡಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಈ ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನಲ್ಲಿ 17 ಇಂಚಿನ ವ್ಹೀಲ್ ಗಳಲ್ಲಿ ಮುಂಭಾಗದಲ್ಲಿ 110/70 ಮತ್ತು ಹಿಂಭಾಗದಲ್ಲಿ 140/70 ಪ್ರೊಫೈಲ್‌ಗಳನ್ನು ಒಳಗೊಂಡಿದೆ.

ಹೊಸ ಹೋಂಡಾ ಹಾರ್ನೆಟ್ 2.0 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಬೈಕಿನಲ್ಲಿ ಅಗ್ರೇಸಿವ್ ಕ್ರೀಸ್‌ಗಳು, ಬಾಡಿ ಲೈನ್ಸ್ ಮತ್ತು ಗ್ರಾಫಿಕ್ಸ್‌ನೊಂದಿಗೆ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಈ ಹೊಸ ಬೈಕಿನಲ್ಲಿ ಅಲಾಯ್ ವ್ಹೀಲ್, ಅಲಾಯ್ ಫುಟ್‌ಪೆಗ್ಸ್, ಎಂಜಿನ್ ಸ್ಟಾಪ್ ಸ್ವಿಚ್, ಹಝರ್ಡ್ ಲೈಟ್, ಎಲ್ಇಡಿ ಹೆಡ್‌ಲ್ಯಾಂಪ್, ಎಕ್ಸ್ ಆಕಾರದ ಎಲ್ಇಡಿ ಟೈಲ್‌ಲೈಟ್, ಎಲ್ಇಡಿ ಇಂಡಿಕೇಟರ್ ಮತ್ತು ಸಂಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಹೊಸ ಹೋಂಡಾ ಹಾರ್ನೆಟ್ 2.0 ಬೈಕ್ ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮತ್ತು ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಹೋಂಡಾ ಹಾರ್ನೆಟ್ 2.0 ಭಾರತೀಯ ಮಾರುಕಟ್ಟೆಯ 180-200 ಸಿಸಿ ವಿಭಾಗದಲ್ಲಿ ಹೋಂಡಾ ಕಂಪನಿಯ ಮೊದಲ ಬೈಕ್ ಆಗಿದೆ. ಉತ್ತಮ ಫೀಚರ್ ಗಳೊಂದಿಗೆ ಸ್ಪೋರ್ಟಿ ಲುಕ್ ಹೊಂದಿರುವ ಈ ಹೋಂಡಾ ಹಾರ್ನೆಟ್ 2.0 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ 180 ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 200 ಬೈಕುಗಳಿಗೆ ಪೈಪೋಟಿ ನೀಡುತ್ತದೆ.