ಆಕರ್ಷಕ ಬೆಲೆಯ ಹಾಪ್ ಲಿಯೋ ಮತ್ತು ಲೈಫ್ ಇವಿ ಸ್ಕೂಟರ್ ಬಿಡುಗಡೆ

ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳ ಪರಿಣಾಮ ಇವಿ ವಾಹನ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗುತ್ತಿದೆ.

ಆಕರ್ಷಕ ಬೆಲೆಯ ಹಾಪ್ ಲಿಯೋ ಮತ್ತು ಲೈಫ್ ಇವಿ ಸ್ಕೂಟರ್ ಬಿಡುಗಡೆ

ಹೆಚ್ಚುತ್ತಿರುವ ಇಂಧನಗಳ ಬೆಲೆಗಳು ಮತ್ತು ಮಾಲಿನ್ಯವನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಕಳೆದ ಕೆಲ ಅವಧಿಯಲ್ಲಿ ಹಲವಾರು ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸಿವೆ.

ಆಕರ್ಷಕ ಬೆಲೆಯ ಹಾಪ್ ಲಿಯೋ ಮತ್ತು ಲೈಫ್ ಇವಿ ಸ್ಕೂಟರ್ ಬಿಡುಗಡೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹ ಯೋಜನೆಗಳಿಂದಾಗಿ ಸ್ಟಾರ್ಟ್ ಕಂಪನಿಗಳು ಇವಿ ವಾಹನ ಉದ್ಯಮ ಪ್ರವೇಶಿಸುತ್ತಿದ್ದು, ಜೈಪುರ್ ಮೂಲದ ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಎರಡು ಹೊಸ ಇವಿ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಆಕರ್ಷಕ ಬೆಲೆಯ ಹಾಪ್ ಲಿಯೋ ಮತ್ತು ಲೈಫ್ ಇವಿ ಸ್ಕೂಟರ್ ಬಿಡುಗಡೆ

ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾರ ವಿವಿಧ ಬ್ಯಾಟರಿ ರೇಂಜ್ ಹೊಂದಿರುವ ಲಿಯೋ ಮತ್ತು ಲೈಫ್ ಎನ್ನುವ ಎರಡು ಇವಿ ಸ್ಕೂಟರ್ ಪರಿಚಯಿಸಿದ್ದು, ಹೊಸ ಸ್ಕೂಟರ್ ಬೆಲೆಯು ಆರಂಭಿಕವಾಗಿ ರೂ. 65,500 ರಿಂದ ಪ್ರಾರಂಭಗೊಳ್ಳುತ್ತದೆ.

ಆಕರ್ಷಕ ಬೆಲೆಯ ಹಾಪ್ ಲಿಯೋ ಮತ್ತು ಲೈಫ್ ಇವಿ ಸ್ಕೂಟರ್ ಬಿಡುಗಡೆ

ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಬೇಸಿಕ್, ಸ್ಟ್ಯಾಂಡರ್ಡ್ ಮತ್ತು ಎಕ್ಸ್ಟೆಂಡ್ ವೆರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದು, ಎಕ್ಸ್ಟೆಂಡ್ ವೆರಿಯೆಂಟ್‌ ಮಾದರಿಗಳೇ ಹಾಪ್ ಇವಿ ಸ್ಕೂಟರ್‌ಗಳ ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳುತ್ತಿವೆ.

ಆಕರ್ಷಕ ಬೆಲೆಯ ಹಾಪ್ ಲಿಯೋ ಮತ್ತು ಲೈಫ್ ಇವಿ ಸ್ಕೂಟರ್ ಬಿಡುಗಡೆ

ಲಿಯೋ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 2.7kw ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಪ್ರತಿ ಗಂಟೆಗೆ 60 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಲೈಫ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 2.0kw ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಪ್ರತಿ ಗಂಟೆಗೆ 50 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದೆ.

ಆಕರ್ಷಕ ಬೆಲೆಯ ಹಾಪ್ ಲಿಯೋ ಮತ್ತು ಲೈಫ್ ಇವಿ ಸ್ಕೂಟರ್ ಬಿಡುಗಡೆ

ಈ ಮೂಲಕ ಎರಡು ಸ್ಕೂಟರ್‌ಗಳಲ್ಲಿ ಎಕ್ಸ್ಟೆಂಡ್ ಮಾದರಿಗಳು ಡ್ಯುಯಲ್ ಲೀ-ಅಯಾನ್ ಬ್ಯಾಟರಿ ಬ್ಯಾಕ್ ಹೊಂದಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 125 ಕಿ.ಮೀ ಮೈಲೇಜ್ ಹಿಂದಿರುಗಿಸಲಿವೆ.

ಆಕರ್ಷಕ ಬೆಲೆಯ ಹಾಪ್ ಲಿಯೋ ಮತ್ತು ಲೈಫ್ ಇವಿ ಸ್ಕೂಟರ್ ಬಿಡುಗಡೆ

ಹೊಸ ಸ್ಕೂಟರ್ ಪ್ರತಿ ಮಾದರಿಯು 72ವಿ ಆರ್ಕಿಟೆಕ್ಚರ್ ಬಾಡಿ ತಂತ್ರಜ್ಞಾನ ಹೊಂದಿದ್ದು, ಗರಿಷ್ಠು 180 ಕೆ.ಜಿ ಲೋಡಿಂಗ್ ಸಾಮಾರ್ಥ್ಯದೊಂದಿಗೆ 19.5-ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್ ಸ್ಪೇಸ್ ಪಡೆದುಕೊಂಡಿದೆ.

ಆಕರ್ಷಕ ಬೆಲೆಯ ಹಾಪ್ ಲಿಯೋ ಮತ್ತು ಲೈಫ್ ಇವಿ ಸ್ಕೂಟರ್ ಬಿಡುಗಡೆ

ಜೊತೆಗೆ ಹೊಸ ಸ್ಕೂಟರ್‌ಗಳಲ್ಲಿ ಎಲ್ಇಡಿ ಡಿಆರ್‌ಎಲ್ಎಸ್, ಡ್ಯುಯಲ್ ಟೋನ್ ಗ್ರಾಫಿಕ್ಸ್, ಜಿಪಿಎಸ್ ಕನೆಕ್ಟಿವಿಟಿ, ಸೈಡ್ ಸ್ಟ್ಯಾಂಡ್ ಸೆನ್ಸಾರ್, ವಿವಿಧ ರೈಡ್ ಮೋಡ್, ಎಲ್ಇಡಿ ಕನ್ಸೋಲ್, ರಿಮೋಟ್ ಕೀ, ಆ್ಯಂಟಿ ಥೇಫ್ಟ್ ಅಲಾರಾಂ, ವೀಲ್ಹ್ ಲಾಕ್ ಸಿಸ್ಟಂ ಸೌಲಭ್ಯಗಳಿವೆ.

ಆಕರ್ಷಕ ಬೆಲೆಯ ಹಾಪ್ ಲಿಯೋ ಮತ್ತು ಲೈಫ್ ಇವಿ ಸ್ಕೂಟರ್ ಬಿಡುಗಡೆ

ಈ ಮೂಲಕ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರತಿ ಕಿ.ಮೀ ಗೆ 20 ಪೈಸೆಗಿಂತಲೂ ಕಡಿಮೆ ರನ್ನೀಂಗ್ ಕಾಸ್ಟ್ ಹೊಂದಿದ್ದು, ಸದ್ಯಕ್ಕೆ ಕೆಲವೇ ನಗರಗಳಲ್ಲಿ ಮಾರಾಟ ಹೊಂದಿರುವ ಹಾಪ್ ಕಂಪನಿಯು ಮುಂದಿನ ಕೆಲವೇ ತಿಂಗಳಿನಲ್ಲಿ ವಿವಿಧ ನಗರಗಳಲ್ಲಿ ಮಾರಾಟ ಆರಂಭಿಸುತ್ತಿದೆ.

Most Read Articles

Kannada
English summary
HOP Leo & Lyf Electric Scooters Launched In India At Rs 65,500. Read in Kannada.
Story first published: Tuesday, June 15, 2021, 19:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X