ಬಜಾಜ್ ಚೇತಕ್ ಇವಿ ಆಧರಿತ ಹಸ್ಕ್‌ವರ್ನಾ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಹಸ್ಕ್‌ವರ್ನಾ ಕಂಪನಿಯು ತನ್ನ ಬಹುನೀರಿಕ್ಷಿತ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಅನಾವರಣಗೊಳಿಸಿದ್ದು, ಇ-01 ಕಾನ್ಸೆಪ್ಟ್ ಮಾದರಿಯನ್ನೇ ಕಂಪನಿಯು ಇದೀಗ ವೆಕ್ಟೋರ್ ಹೆಸರಿನೊಂದಿಗೆ ಮಾರುಕಟ್ಟೆ ಪರಿಚಯಿಸುತ್ತಿದೆ.

ಹಸ್ಕ್‌ವರ್ನಾ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಇವಿ ಸಬ್ಸಡಿ ಯೋಜನೆಗಳ ಪರಿಣಾಮವಾಗಿ ಎಲೆಕ್ಟ್ರಿಕ್ ವಾಹನ ಮಾರಾಟವು ಸಾಕಷ್ಟು ಏರಿಕೆಯಾಗಿದೆ.

ಹಸ್ಕ್‌ವರ್ನಾ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಬ್ಸಡಿ ಪ್ರೋತ್ಸಾಹ ಯೋಜನೆಗಳಿಂದಾಗಿ ಹಲವಾರು ಸ್ಟಾರ್ಟ್ ಕಂಪನಿಗಳು ಇವಿ ವಾಹನ ಉದ್ಯಮ ಪ್ರವೇಶಿಸುತ್ತಿದ್ದು, ಕೆಟಿಎಂ ಸಹಭಾಗಿತ್ವ ಸಂಸ್ಥೆಯಾದ ಹಸ್ಕವರ್ನಾ ಕೂಡಾ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾಗಿದೆ.

ಹಸ್ಕ್‌ವರ್ನಾ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಪ್ರೀಮಿಯಂ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ವೀಡಿಷ್ ಆಟೋ ಕಂಪನಿಯಾಗಿರುವ ಹಸ್ಕವರ್ನಾ ಸದ್ಯ ಕೆಟಿಎಂ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹೊಸ ಬ್ರಾಂಡ್ ಬೈಕ್ ಇತ್ತೀಚೆಗೆ ಭಾರತದಲ್ಲೂ ಬಿಡುಗಡೆಗೊಂಡಿವೆ.

ಹಸ್ಕ್‌ವರ್ನಾ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಪ್ರೀಮಿಯಂ ಬೈಕ್ ಮಾದರಿಯೊಂದಿಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಸಹ ಬಿಡುಗಡೆಗೊಳಿಸುವ ಸಿದ್ದತೆಯಲ್ಲಿರುವ ಹಸ್ಕ್‌ವರ್ನಾ ಕಂಪನಿಯು ಕಳೆದ ವರ್ಷ ಇ-01 ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿತ್ತು. ಇದೀಗ ಕಾನ್ಸೆಪ್ಟ್ ಮಾದರಿಯಲ್ಲಿಯೇ ಉತ್ಪಾದನಾ ಮಾದರಿಯನ್ನು ಸಹ ಅಭಿವೃದ್ದಿಗೊಳಿಸಿದ್ದು, ಹೊಸ ಸ್ಕೂಟರ್ ಮಾದರಿಯು ಭಾರತದಲ್ಲಿ ಬಜಾಜ್ ಚೇತಕ್ ಇವಿ ಆಧರಿಸಿ ನಿರ್ಮಾಣಗೊಳ್ಳಲಿದೆ.

ಹಸ್ಕ್‌ವರ್ನಾ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಸ್ವೀಡಿಷ್ ಡಿಸೈನ್ ಹೊಂದಿದ್ದರೂ ಬಹುತೇಕ ತಾಂತ್ರಿಕ ಅಂಶಗಳನ್ನು ಬಜಾಜ್ ಚೇತಕ್ ಇವಿ ಮಾದರಿಯೊಂದಿಗೆ ಪ್ರೀಮಿಯಂ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಹೊಸ ಸ್ಕೂಟರ್ ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಬೇಕಿದ್ದ ಕಂಪನಿಯು ಕೋವಿಡ್ ಕಾರಣಕ್ಕೆ ಮುಂದೂಡಿಕೆ ಮಾಡಲು ನಿರ್ಧರಿಸಿದೆ.

ಹಸ್ಕ್‌ವರ್ನಾ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಪರಿಸ್ಥಿತಿ ತುಸು ಸಹಜಸ್ಥಿತಿಯತ್ತ ಬಂದ ನಂತರವೇ ಹೊಸ ಇವಿ ಸ್ಕೂಟರ್ ಬಿಡುಗಡೆ ಯೋಜನೆ ಪ್ರಕ್ರಿಯೆಗಳನ್ನು ಮುಂದುವರಿಸಲು ನಿರ್ಧರಿಸಲಾಗಿದ್ದು, ಹಸ್ಕ್​ವರ್ನಾ ಕಂಪನಿಯು ಹೊಸ ಇವಿ ಸ್ಕೂಟರ್ ಅನ್ನು ಪುಣೆಯಲ್ಲಿರುವ ಬಜಾಜ್‌ ಕಂಪನಿಯ ಚಾಕನ್ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಿದೆ.

ಹಸ್ಕ್‌ವರ್ನಾ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಭಾರತದಲ್ಲಿ ಹಸ್ಕ್‌ವರ್ನಾ ಕಂಪನಿಯು ಕಂಪನಿಯು ತನ್ನ ಉದ್ಯಮ ವ್ಯವಹಾರಕ್ಕಾಗಿ ಬಜಾಜ್ ಆಟೋ ಜೊತೆ ಸಹಭಾಗಿತ್ವ ಹೊಂದಿದ್ದು, ಬಜಾಜ್ ಕಂಪನಿಯ ಜೊತೆಗೆ ಹಸ್ಕ್‌ವರ್ನಾ ಮಾತ್ರವಲ್ಲ ಕೆಟಿಎಂ ಸಹಭಾಗಿತ್ವ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹಸ್ಕ್‌ವರ್ನಾ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಜಾಜ್ ಕಂಪನಿಯು ತನ್ನ ಚೇತಕ್ ಇವಿ ಆಧರಿಸಿ ಅಭಿವೃದ್ದಿ ಮಾರಾಟ ಮಾಡಲಿದ್ದು,ಹೊಸ ಸ್ಕೂಟರ್ ಅನ್ನು ಕೆಟಿಎಂ ಬೈಕ್ ಮಾರಾಟ ಮಳಿಗೆಗಳ ಮೂಲಕ ಮಾರಾಟ ಮಾಡಲಿವೆ.

ಹಸ್ಕ್‌ವರ್ನಾ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಬಜಾಜ್ ಚೇತಕ್ ಇವಿ ಸ್ಕೂಟರ್ ಸಹ ಸದ್ಯ ಕೆಟಿಎಂ ಶೋರೂಂಗಳ ಮೂಲಕವೇ ಮಾರಾಟಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆ ಹೆಚ್ಚಿದಂತೆ ಬಜಾಜ್ ಸಾಮಾನ್ಯ ಬೈಕ್ ಶೋರೂಂಗಳಲ್ಲಿಯೇ ಹೊಸ ಚೇತಕ್ ಇವಿ ಮತ್ತು ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಗೊಳ್ಳಲಿವೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹಸ್ಕ್‌ವರ್ನಾ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಸದ್ಯಕ್ಕೆ ವೆಕ್ಟೋರ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ ಉತ್ಪಾದನಾ ಆವೃತ್ತಿಯ ಚಿತ್ರಗಳ ಅನಾವರಣ ಹೊರತುಪಡಿಸಿ ಹಸ್ಕ್‌ವರ್ನಾ ಕಂಪನಿಯು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಹೊಸ ಸ್ಕೂಟರ್ ಪ್ರೀಮಿಯಂ ವಿನ್ಯಾಸದೊಂದಿಗೆ 2022ರ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

Most Read Articles

Kannada
English summary
Husqvarna Vektorr Electric Scooter Revealed. Read in Kannada.
Story first published: Saturday, May 8, 2021, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X