ಇಂಡಿಯಾ ಬೈಕ್ ವೀಕ್ 2021: ಅನಾವರಣಗೊಂಡ ಹೊಸ ಬೈಕ್ ಮಾದರಿಗಳಿವು!

ಪ್ರಸಕ್ತ ವರ್ಷದ ಇಂಡಿಯಾ ಬೈಕ್ ವೀಕ್(India Bike Week) ಪುಣೆ ಬಳಿಯಿರುವ ಆ್ಯಂಬಿ ವ್ಯಾಲಿಯಲ್ಲಿ ಈ ಭರ್ಜರಿಯಾಗಿ ಪ್ರದರ್ಶನಗೊಂಡಿತು. 2021ರ ಇಂಡಿಯಾ ಬೈಕ್ ವೀಕ್‌ನಲ್ಲಿ ಈ ಬಾರಿ ಹಲವಾರು ಹೊಸ ಮಾದರಿಯ ಪ್ರೀಮಿಯಂ ಬೈಕ್ ಮಾದರಿಗಳು ಅನಾವರಣಗೊಳ್ಳುವುದರ ಜೊತೆಗೆ ಖರೀದಿಗೆ ಅಧಿಕೃತ ಚಾಲನೆ ಪಡೆದುಕೊಂಡವು. ಹಾಗಾದ್ರೆ ಐಬಿಡಬ್ಲ್ಯುನಲ್ಲಿ ಈ ಬಾರಿ ಅನಾವರಣಗೊಂಡ ಪ್ರಮುಖ ಬೈಕ್ ಮಾದರಿಗಳ ಮಾಹಿತಿಯನ್ನು ಇಲ್ಲಿ ನೋಡೋಣ.

ಇಂಡಿಯಾ ಬೈಕ್ ವೀಕ್ 2021: ಅನಾವರಣಗೊಂಡ ಹೊಸ ಬೈಕ್ ಮಾದರಿಗಳಿವು!

ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಭಾರತದಲ್ಲಿ ಕಳೆದ ವರ್ಷ ಬಿಡುಗಡೆಯಾಗಿದ್ದ ಹೈನೆಸ್ ಸಿಬಿ350 ಮಾದರಿಯು ಯಶಸ್ವಿ ಒಂದು ವರ್ಷ ಪೂರೈಸಿದ್ದು, ಕಂಪನಿಯು ಇದೀಗ ಮೊದಲ ಸಂಭ್ರಮಕ್ಕಾಗಿ ಹೆಚ್ಚುವರಿ ಫೀಚರ್ಸ್ ಹೊಂದಿರುವ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದೆ. ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 2.03 ಲಕ್ಷ ಬೆಲೆ ಹೊಂದಿದ್ದು, ಬೈಕ್ ಬಿಡುಗಡೆಯೊಂದಿಗೆ ಇಂದಿನಿಂದ ಅಧಿಕೃತ ಬುಕ್ಕಿಂಗ್ ಆರಂಭಿಸಿದೆ.

ಇಂಡಿಯಾ ಬೈಕ್ ವೀಕ್ 2021: ಅನಾವರಣಗೊಂಡ ಹೊಸ ಬೈಕ್ ಮಾದರಿಗಳಿವು!

ಹೈನೆಸ್ ಸಿಬಿ350 ಆ್ಯನಿವರ್ಸರಿ ಮಾದರಿಯು ಪರ್ಲ್ ಇಗ್ನಿಯಸ್ ಬ್ಲಾಕ್ ಮತ್ತು ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ಹೊಸ ಬಣ್ಣ ಮತ್ತು ಆ್ಯನಿವರ್ಸರಿ ಬ್ಯಾಡ್ಜ್ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದೆ.

ಇಂಡಿಯಾ ಬೈಕ್ ವೀಕ್ 2021: ಅನಾವರಣಗೊಂಡ ಹೊಸ ಬೈಕ್ ಮಾದರಿಗಳಿವು!

ಸ್ಟ್ಯಾಂಡರ್ಡ್ ಹೈನೆಸ್ ಸಿಬಿ350 ಮಾದರಿಗಿಂತಲೂ ಆ್ಯನಿವರ್ಸರಿ ಎಡಿಷನ್ ಬೆಲೆ ರೂ. 4 ಸಾವಿರದಷ್ಟು ಹೆಚ್ಚಳವಾಗಿದ್ದು, ವಿವಿಧ ಬಣ್ಣದ ಆಯ್ಕೆಗಳೊಂದಿಗೆ ಸಿಂಕ್ರೊನೈಸ್ ಮಾಡಲಾದ ಕ್ರೋಮ್ ಹ್ಯಾಂಡಲ್ ಹೊಸ ಬೈಕ್ ಆಕರ್ಷಣೆಗೆ ಕಾರಣವಾಗಿದೆ. ಹೈನೆಸ್ ಸಿಬಿ350 ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯ ನಂತರ ಇದುವರೆಗೆ ಸುಮಾರು 35 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿದೆ.

ಇಂಡಿಯಾ ಬೈಕ್ ವೀಕ್ 2021: ಅನಾವರಣಗೊಂಡ ಹೊಸ ಬೈಕ್ ಮಾದರಿಗಳಿವು!

ಹಾರ್ಲೆ ಡೇವಿಡ್ಸನ್ ಹೊಸ ಸ್ಪೋರ್ಟ್‌ಸ್ಟರ್ ಎಸ್ ಬಿಡುಗಡೆ

ಹಾರ್ಲೆ ಡೇವಿಡನ್ಸ್ ಕಂಪನಿಯು ಕೂಡಾ ತನ್ನ ಹೊಸ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಮಾದರಿಯನ್ನು 2021ರ ಐಬಿಡಬ್ಲ್ಯುನಲ್ಲಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 15.51 ಲಕ್ಷ ಬೆಲೆ ಹೊಂದಿದೆ.

ಇಂಡಿಯಾ ಬೈಕ್ ವೀಕ್ 2021: ಅನಾವರಣಗೊಂಡ ಹೊಸ ಬೈಕ್ ಮಾದರಿಗಳಿವು!

ಹೊಸ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಮಾದರಿಯು ಹಾರ್ಲೆ ಡೇವಿಡ್ಸನ್ ನಿರ್ಮಾಣದ ಅತ್ಯಾಧುನಿಕ ಪ್ರೀಮಿಯಂ ಕ್ರೂಸರ್ ಮಾದರಿಯಾಗಿದ್ದು, ಸ್ಪೋರ್ಟ್‌ಸ್ಟರ್ ಎಸ್ ಮಾದರಿಯು ಪ್ಯಾನ್ ಅಮೆರಿಕಾ 1250 ಅಡ್ವೆಂಚರ್ ಬೈಕ್‌ನ ನಂತರ ಹೊಸ ರೆವಲ್ಯೂಷನ್ ಮ್ಯಾಕ್ಸ್ 1250 ಪ್ಲಾಟ್‌ಫಾರ್ಮ್ ಆಧರಿಸಿ ಮಾರುಕಟ್ಟೆಗೆ ಬಂದ ಎರಡನೇ ಹಾರ್ಲೆ-ಡೇವಿಡ್ಸನ್ ಮಾದರಿಯಾಗಿದೆ.

ಇಂಡಿಯಾ ಬೈಕ್ ವೀಕ್ 2021: ಅನಾವರಣಗೊಂಡ ಹೊಸ ಬೈಕ್ ಮಾದರಿಗಳಿವು!

ಸ್ಪೋರ್ಟ್‌ಸ್ಟರ್ ಎಸ್‌ ಮಾದರಿಯಲ್ಲಿ ಪ್ಯಾನ್ ಅಮೆರಿಕಾ 1250 ಅಡ್ವೆಂಚರ್ ಟೂರರ್‌ನಲ್ಲಿರುವ ಕೌಂಟರ್‌ಬ್ಯಾಲೆನ್ಸ್ಡ್ ರೆವಲ್ಯೂಷನ್ ಮ್ಯಾಕ್ಸ್ 1250 ಸಿಸಿ ಲಿಕ್ವಿಡ್-ಕೂಲ್ಡ್ ವಿ-ಟ್ವಿನ್ ಎಂಜಿನ್ ನೀಡಲಾಗಿದ್ದು, ಇದು 60-ಡಿಗ್ರಿ ವಿ-ಟ್ವಿನ್ ಎಂಜಿನ್ ಮಾದರಿಯಾಗಿದೆ. ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ ಸಾಫ್ಟ್ ಶಿಫ್ಟ್‌ಗಳೊಂದಿಗೆ ಜೋಡಿಸಲಾಗಿದೆ.

ಇಂಡಿಯಾ ಬೈಕ್ ವೀಕ್ 2021: ಅನಾವರಣಗೊಂಡ ಹೊಸ ಬೈಕ್ ಮಾದರಿಗಳಿವು!

ಬಿಎಸ್6 ಹೋಂಡಾ ಸಿಬಿ300ಆರ್ ಬೈಕ್ ಅನಾವರಣ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಸಿಬಿ300ಆರ್ ಬೈಕ್ ಅನ್ನು 2021ರ ಇಂಡಿಯಾ ಬೈಕ್ ವೀಕ್‌ನಲ್ಲಿ ಅನಾವರಣಗೊಳಿಸಿತು. ಹೊಸ ಬೈಕ್ ಭಾರತದಲ್ಲಿ ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ 2022ರ ಹೋಂಡಾ ಸಿಬಿ300ಆರ್ ಬೈಕ್ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಇಂಡಿಯಾ ಬೈಕ್ ವೀಕ್ 2021: ಅನಾವರಣಗೊಂಡ ಹೊಸ ಬೈಕ್ ಮಾದರಿಗಳಿವು!

ಈ ಬೈಕ್ ಕ್ಲೀನರ್ ಎಂಜಿನ್‌ನ ಹೊರತಾಗಿ ಸೂಕ್ಷ್ಮವಾದ ನವೀಕರಣಗಳನ್ನು ಪಡೆಯುತ್ತದೆ. ಅತ್ಯಂತ ಪ್ರಮುಖವಾದ ಬದಲಾವಣೆಯು ಗೋಲ್ಡನ್ ಅಪ್ ಸೈಡ್ ಡೌನ್ ಫೋರ್ಕ್‌ಗಳ ರೂಪದಲ್ಲಿ ಬರುತ್ತದೆ, ಅದು ಸ್ವಲ್ಪ ಬೀಫಿಯರ್ ಆಗಿ ಕಾಣುವಂತೆ ಮಾಡುತ್ತದೆ. ಇದರೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಈಗ ಸಹಾಯ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಸಹ ಪಡೆಯುತ್ತದೆ. ಎಂಜಿನ್‌ಗೆ ಸಂಬಂಧಿಸಿದಂತೆ, ಹೋಂಡಾ ಸಂಪೂರ್ಣ ವಿಶೇಷಣಗಳನ್ನು ಬಹಿರಂಗಪಡಿಸದಿದ್ದರೂ, ಅದರ ಪವರ್ ಮತ್ತು ಟಾರ್ಕ್ ಔಟ್‌ಪುಟ್‌ನಲ್ಲಿ ಕನಿಷ್ಠ ಬದಲಾವಣೆಯನ್ನು ನಿರೀಕ್ಷಿಸುತ್ತೇವೆ.

ಇಂಡಿಯಾ ಬೈಕ್ ವೀಕ್ 2021: ಅನಾವರಣಗೊಂಡ ಹೊಸ ಬೈಕ್ ಮಾದರಿಗಳಿವು!

ಹಿಂದಿನ ಸಿಬಿ300ಆರ್ ಬಿಎಸ್4 ಮಾದರಿಯಲ್ಲಿ ಇದ್ದ ಅದೇ ಎಂಜಿನ್ ಅನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಮುಂದುವರೆಸಬಹುದು. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಇನ್ನು ಹೊಸ ಹೋಂಡಾ ಸಿಬಿ300ಆರ್ ಬೈಕಿನಲ್ಲಿ ನಿರೀಕ್ಷಿಸಬಹುದಾದ ಒಂದು ನವೀಕರಣವೆಂದರೆ ಸ್ಲಿಪ್-ಅಸಿಸ್ಟ್ ಕ್ಲಚ್ ಆಗಿದೆ.

ಇಂಡಿಯಾ ಬೈಕ್ ವೀಕ್ 2021: ಅನಾವರಣಗೊಂಡ ಹೊಸ ಬೈಕ್ ಮಾದರಿಗಳಿವು!

ಕವಾಸಕಿ ಜೆಡ್650ಆರ್‌ಎಸ್ ನಿಯೋ ರೆಟ್ರೋ ಬೈಕ್ ಪ್ರದರ್ಶನ

ಪ್ರೀಮಿಯಂ ಬೈಕ್ ಉತ್ಪಾದನಾ ಕಂಪನಿಯಾಗಿರುವ ಕವಾಸಕಿಯು ಭಾರತದಲ್ಲಿ ಈಗಾಗಲೇ ಹಲವಾರು ಸೂಪರ್ ಬೈಕ್ ಮಾದರಿಗಳ ಮಾರಾಟ ಹೊಂದಿದ್ದು, ಕಂಪನಿಯು ಇದೀಗ ಪ್ರೀಮಿಯಂ ಬೈಕ್ ಖರೀದಿದಾರರ ಬೇಡಿಕೆ ಅನುಸಾರವಾಗಿ ಹೊಸ ಜೆಡ್650ಆರ್‌ಎಸ್ ನಿಯೋ ರೆಟ್ರೋ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ. ಹೊಸ ಬೈಕ್ ಮಾದರಿಯು ಕಳೆದ ವಾರವಷ್ಟೇ ಬಿಡುಗಡೆಗೊಂಡಿದ್ದು, ಕಂಪನಿಯು ಇದೀಗ ಹೊಸ ಬೈಕ್ ಮಾದರಿಯನ್ನು ಇಂಡಿಯನ್ ಬೈಕ್ ವೀಕ್‌ನಲ್ಲಿ ಪ್ರದರ್ಶನಗೊಳಿಸುವ ಮೂಲಕ ಮಾರಾಟ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಿತು.

ಇಂಡಿಯಾ ಬೈಕ್ ವೀಕ್ 2021: ಅನಾವರಣಗೊಂಡ ಹೊಸ ಬೈಕ್ ಮಾದರಿಗಳಿವು!

ಹೊಸ ಜೆಡ್650ಆರ್‌ಎಸ್ ಬೈಕ್ ಮಾದರಿಯು ಕವಾಸಕಿ ನಿರ್ಮಾಣದ ಮತ್ತೊಂದು ಮಧ್ಯಮ ಕ್ರಮಾಂಕದ ಸೂಪರ್ ಬೈಕ್ ಮಾದರಿಯಾದ ಜೆಡ್900ಆರ್‌ಎಸ್ ಮಾದರಿಯ ವಿನ್ಯಾಸ ಸ್ಫೂರ್ತಿ ಪಡೆದುಕೊಂಡಿದ್ದು, ರೆಟ್ರೊ ವಿನ್ಯಾಸದೊಂದಿಗೆ ಹೊಸ ಬೈಕ್ ಮಾದರಿಯು ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ.

ಇಂಡಿಯಾ ಬೈಕ್ ವೀಕ್ 2021: ಅನಾವರಣಗೊಂಡ ಹೊಸ ಬೈಕ್ ಮಾದರಿಗಳಿವು!

ಕವಾಸಕಿ ಕಂಪನಿಯು ಹೊಸ ಜೆಡ್650ಆರ್‌ಎಸ್ ನಿಯೋ-ರೆಟ್ರೊ ಬೈಕ್ ಮಾದರಿಯನ್ನು ಎಕ್ಸ್ ಶೋರೂಂ ಪ್ರಕಾರ ರೂ. 6.65 ಲಕ್ಷಕ್ಕೆ ಬಿಡುಗಡೆ ಮಾಡಿದ್ದ, ಈ ರೆಟ್ರೊ-ಥೀಮ್ ಬೈಕಿನ ವಿತರಣೆಯು ಶೀಘ್ರದಲ್ಲಿಯೇ ಆರಂಭವಾಗಲಿದೆ.

Most Read Articles

Kannada
English summary
India bike week new bikes launched details
Story first published: Tuesday, December 7, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X