ಹೊಸ ವರ್ಷದಿಂದ ದುಬಾರಿಯಾಗಲಿವೆ ಕವಾಸಕಿ ಬೈಕ್‌ಗಳು

ಪ್ರತಿ ವರ್ಷದ ಕೊನೆಯಲ್ಲಿ ಭಾರತದಲ್ಲಿನ ವಾಹನ ತಯಾರಕರು ತಮ್ಮ ವಾಹನಗಳಿಗೆ ಬೆಲೆ ಏರಿಕೆಯನ್ನು ಘೋಷಿಸುತ್ತಾರೆ. ಕವಾಸಕಿ ಇಂಡಿಯಾ ಕಂಪನಿಯು ಅದೇ ರೀತಿ ತಮ್ಮ ಬೈಕ್‌ಗಳ ಬೆಲೆ ಏರಿಕೆಯನ್ನು ಘೋಷಿಸಿದೆ ಮತ್ತು ಹೊಸ ಬೆಲೆಗಳನ್ನು ಬಹಿರಂಗಪಡಿಸಲಾಗಿದೆ.

ಹೊಸ ವರ್ಷದಿಂದ ದುಬಾರಿಯಾಗಲಿವೆ ಕವಾಸಕಿ ಬೈಕ್‌ಗಳು

ಹೊಸ ಬೆಲೆ ಏರಿಕೆಯು 2022ರ ಜನವರಿ 1 ರಂದು ಜಾರಿಗೆ ಬರಲಿದೆ. ಕವಾಸಕಿ ಇಂಡಿಯಾದ ಅತಿ ಹೆಚ್ಚು ಮಾರಾಟವಾಗುವ ಮಾಡೆಲ್ ನಿಂಜಾ 300 ಬೈಕಿನ ಬೆಲೆಯು ರೂ.6,000 ದಷ್ಟು ದುಬಾರಿಯಾಗಲಿದೆ, ಪ್ರಸ್ತುತ ಈ ಬೈಕಿನ ಬೆಲೆಯು ರೂ,3,18,000 ಆಗಿದ್ದರೆ, ಬೆಲೆ ಏರಿಕೆಯ ಬಳಿಕ ರೂ,3,24,000 ಆಗುತ್ತದೆ. ಇನ್ನು ನಿಂಜಾ 650 ಬೈಕಿನ ಬೆಲೆಯು ರೂ,7,000 ಗಳಷ್ಟು ಹೆಚ್ಚಾಗಿದೆ. ಆದರೆ ಹೊಸದಾಗಿ ಬಿಡುಗಡೆಯಾದ ರೆಟ್ರೊ-ಪ್ರೇರಿತ ಝಡ್Z650 RS ಅನ್ನು ಹೆಚ್ಚಳದಿಂದ ಉಳಿಸಲಾಗಿದೆ.

ಹೊಸ ವರ್ಷದಿಂದ ದುಬಾರಿಯಾಗಲಿವೆ ಕವಾಸಕಿ ಬೈಕ್‌ಗಳು

ಕವಸಾಕಿ ವಲ್ಕನ್ ಎಸ್ ಕ್ರೂಸರ್ ಬೈಕಿನ ಬೆಲೆಯನ್ನು ರೂ.6,000 ಹೆಚ್ಚಿಸಿದರೆ, ಕವಾಸಕಿಯ ಅಡ್ವೆಂಚರ್ ಮಾದರಿಗಳಾದ ವರ್ಸಿಸ್ 650 ಮತ್ತು ವರ್ಸಿಸ್ 1000 ಬೈಕ್‌ಗಳ ಬೆಲೆಯನ್ನು ಕ್ರಮವಾಗಿ ರೂ.22,500 ಮತ್ತು ರೂ,17,000 ಆಗಿದೆ,

ಹೊಸ ವರ್ಷದಿಂದ ದುಬಾರಿಯಾಗಲಿವೆ ಕವಾಸಕಿ ಬೈಕ್‌ಗಳು

ಕವಾಸಕಿ ಡಬ್ಲ್ಯು800 ಬೈಕ್ ಹೆಚ್ಚು ದುಬಾರಿಯಾಗಿದ್ದು, ಈ ಬೈಕಿನ ಬೆಲೆಯು ರೂ.25,000 ವರೆಗೆ ಹೆಚ್ಚಿಸಲಾಗಿದೆ. ಇನ್ನು ಕವಸಾಕಿ ಝಡ್900 ಬೈಕಿನ ಬೆಲೆಯು ರೂ.8,000, ನಿಂಜಾ 1000 SX ಬೆಲೆಯು ರೂ.11,000 ಮತ್ತು ನಿಂಜಾ ZX-10R ಬೈಕಿನ ಬೆಲೆಯು ರೂ.23,000 ವರೆಗೆ ಹೆಚ್ಚಿಸಲಾಗಿದೆ.

ಹೊಸ ವರ್ಷದಿಂದ ದುಬಾರಿಯಾಗಲಿವೆ ಕವಾಸಕಿ ಬೈಕ್‌ಗಳು

ಕವಾಸಕಿಯ ಡರ್ಟ್ ಬೈಕ್ ಶ್ರೇಣಿ KX100, KX250, KX450, ಮತ್ತು KX450R ಮಾದರಿಗಳು ಮುಂಬರುವ ಬೆಲೆ ಏರಿಕೆಯಿಂದ ಪರಿಣಾಮ ಬೀರುವುದಿಲ್ಲ. ಕವಾಸಕಿಯ ಡರ್ಟ್ ಬೈಕ್‌ಗಳು ಕೇವಲ ರೇಸ್ ಟ್ರ್ಯಾಕ್ ಗಳಲ್ಲಿ ಬಳಸುವ ಮಾದರಿಗಳಾಗಿವೆ. ಸಾರ್ವಜನಿಕ ರಸ್ತೆಗಳಲ್ಲಿ ಬಳಸುವಂತಿಲ್ಲ.

ಹೊಸ ವರ್ಷದಿಂದ ದುಬಾರಿಯಾಗಲಿವೆ ಕವಾಸಕಿ ಬೈಕ್‌ಗಳು

ಕವಾಸಕಿ ತನ್ನ ಹೊಸ ಕೆಎಲ್‌ಎಕ್ಸ್‌450ಆರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಕವಾಸಕಿ ಕೆಎಲ್‌ಎಕ್ಸ್‌450ಆರ್( Kawasaki KLX450R) ಆಫ್-ರೋಡ್ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.99 ಲಕ್ಷವಾಗಿದೆ. ಈ ಹೊಸ ಕವಾಸಕಿ ಕೆಎಲ್‌ಎಕ್ಸ್‌450ಆರ್ ಬೈಕಿನ ಬೆಲೆಯು ಹಿಂದಿನ ಮಾದರಿಗಿಂತ ಸುಮಾರು ರೂ.50,000 ಹೆಚ್ಚು ದುಬಾರಿಯಾಗಿದೆ.

ಹೊಸ ವರ್ಷದಿಂದ ದುಬಾರಿಯಾಗಲಿವೆ ಕವಾಸಕಿ ಬೈಕ್‌ಗಳು

ಬೈಕ್‌ನ 2022 ಆವೃತ್ತಿಯು ಹೊಸ ಲೈಮ್ ಗ್ರೀನ್ ಕಲರ್ ಆಯ್ಕೆಯಲ್ಲಿ ಹೊಸ ಸೆಟ್ ಡೆಕಾಲ್‌ಗಳನ್ನು ಒಳಗೊಂಡಿದೆ. ಕವಾಸಕಿಯು ಮೊದಲಿಗಿಂತ ಉತ್ತಮವಾದ ಲೋ-ಲೆವೆಲ್ ಟಾರ್ಕ್‌ಗಾಗಿ ಎಂಜಿನ್ ಅನ್ನು ಟ್ವೀಕ್ ಮಾಡಿದೆ, ಇದು ಟ್ರಿಕಿ ಸನ್ನಿವೇಶಗಳಿಂದ ಹೊರಬರಲು ಸುಲಭವಾಗುತ್ತದೆ. ಇದಲ್ಲದೆ, ಹೆಚ್ಚಿನ ಒರಟಾದ ಭೂಪ್ರದೇಶವನ್ನು ನಿರ್ವಹಿಸಲು ಸಸ್ಪೆಂಕ್ಷನ್ ಸೆಟಪ್ ಅನ್ನು ಸಹ ಬದಲಾಯಿಸಲಾಗಿದೆ.

ಹೊಸ ವರ್ಷದಿಂದ ದುಬಾರಿಯಾಗಲಿವೆ ಕವಾಸಕಿ ಬೈಕ್‌ಗಳು

ಕವಾಸಕಿ ತನ್ನ 2022ರ ಕವಾಸಕಿ ಡಬ್ಲ್ಯೂ800(Kawasaki W800) ಬೈಕ್ ಅನ್ನು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ನವೀಕರಿಸಿದ 2022ರ ಕವಾಸಕಿ ಡಬ್ಲ್ಯೂ800 ಬೈಕ್ ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಹೊಸ ವರ್ಷದಿಂದ ದುಬಾರಿಯಾಗಲಿವೆ ಕವಾಸಕಿ ಬೈಕ್‌ಗಳು

ಕವಾಸಕಿ ಡಬ್ಲ್ಯೂ800 ಬೈಕ್ ಅನ್ನು ಕೆಲವು ವಾರಗಳ ಹಿಂದೆ, ಇದನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪರಿಚಯಿಸಲಾಯಿತು ಮತ್ತು ಈಗ ಈ ರೆಟ್ರೊ ಕ್ಲಾಸಿಕ್ ಮೋಟಾರ್‌ಸೈಕಲ್ ಅನ್ನು ಯುರೋಪಿಯನ್ ಮಾರುಕಟ್ಟೆಗಳಿಗೂ ಪರಿಚಯಿಸಿದೆ. ನವೀಕರಿಸಿದ 2022ರ ಕವಾಸಕಿ ಡಬ್ಲ್ಯೂ800 ಬೈಕ್ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯುತ್ತದೆ, ಇದರಲ್ಲಿ ಹೊಸ ಬಣ್ಣದ ಯೋಜನೆ, ಆಕರ್ಷಕ ದೇಹದ ಗ್ರಾಫಿಕ್ಸ್ ಮತ್ತು ಇತ್ಯಾದಿಗಳನ್ನು ಒಳಗೊಂಡಿದೆ, ಆದರೆ ಯಾಂತ್ರಿಕ ವಿಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ, ಅದೇ ರೀತಿ ಮುಂದುವರೆದಿದೆ.

ಹೊಸ ವರ್ಷದಿಂದ ದುಬಾರಿಯಾಗಲಿವೆ ಕವಾಸಕಿ ಬೈಕ್‌ಗಳು

ಕವಾಸಕಿ ತನ್ನ ಝಡ್650ಆರ್‌ಎಸ್ ರೆಟ್ರೊ ಶೈಲಿಯ ಬೈಕ್ ಅನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಳಿಸಿತು. ಈ ಹೊಸ ಕವಾಸಕಿ ಝಡ್650ಆರ್‌ಎಸ್ ನಿಯೋ-ರೆಟ್ರೊ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.65 ಲಕ್ಷಗಳಾಗಿದೆ. ರೆಟ್ರೊ ಶೈಲಿಯ ಝಡ್650ಆರ್‌ಎಸ್ ಬೈಕ್ ಬಿಡುಗಡೆಯೊಂದಿಗೆ ಕವಾಸಕಿ ಇಂಡಿಯಾ ತನ್ನ ಪೋರ್ಟ್‌ಫೋಲಿಯೊವನ್ನು ನವೀಕರಿಸಿದೆ. ಈ ಹೊಸ ಕವಾಸಕಿ ಝಡ್650ಆರ್‌ಎಸ್ ರೆಟ್ರೊ-ಥೀಮ್ ಬೈಕಿನ ವಿತರಣೆಯನ್ನು ಭಾರತದಲ್ಲಿ ಪ್ರಾರಂಭಿಸಿದೆ. ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಇದರ ಹಿರಿಯ ಸಹೋದರ ಮಾದರಿ ಝಡ್900ಆರ್‌ಎಸ್ ಮಾದರಿಯಿಂದ ವಿನ್ಯಾಸ ಸ್ಫೂರ್ತಿ ಪಡೆದಿದೆ ಮತ್ತು ಇದು ಸೊಗಸಾದ ರೆಟ್ರೊ ವಿನ್ಯಾಸವನ್ನು ಹೊಂದಿದೆ.

ಹೊಸ ವರ್ಷದಿಂದ ದುಬಾರಿಯಾಗಲಿವೆ ಕವಾಸಕಿ ಬೈಕ್‌ಗಳು

ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಕ್ಯಾಂಡಿ ಎಮರಾಲ್ಡ್ ಗ್ರೀನ್ ಮತ್ತು ಮೆಟಾಲಿಕ್ ಮೂಂಡಸ್ಟ್ ಗ್ರೇ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕವಾಸಕಿ ಝಡ್650ಆರ್‌ಎಸ್ ಬೈಕ್ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಈ ಹೊಸ ಕವಾಸಕಿ ಬೈಕ್ ಇತರ ಮುಖ್ಯಾಂಶಗಳು ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ, ಜೊತೆಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್, ಲಂಬವಾದ ಹ್ಯಾಂಡಲ್‌ಬಾರ್ ಪೊಸಿಶನಿಂಗ್, ಸ್ವಲ್ಪ ಹಿಂಭಾಗದಲ್ಲಿ ಸೆಟ್ ಫುಟ್‌ಪೆಗ್‌ಗಳು ಮತ್ತು ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.

ಹೊಸ ವರ್ಷದಿಂದ ದುಬಾರಿಯಾಗಲಿವೆ ಕವಾಸಕಿ ಬೈಕ್‌ಗಳು

ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಮಿಡ್ ಸೈಜ್ ಐಷಾರಾಮಿ ಬೈಕ್ ಪ್ರಿಯರನ್ನು ಸೆಳಯಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ನಿಯೋ-ರೆಟ್ರೊ ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ CB650R ಮತ್ತು ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಕವಾಸಕಿ ಬೈಕ್‌ಗಳ ಬೆಲೆ ಏರಿಕೆಯು ಮಾರಾಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಕಾದು ನೋಡಬೇಕಿದೆ.

Most Read Articles

Kannada
English summary
Kawasaki india to hike prices from 1st january 2022 new Updated price list details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X