ಎಲೆಕ್ಟ್ರಿಕ್ ಸಮಸ್ಯೆಗಳನ್ನು ಆಟೋಮ್ಯಾಟಿಕ್ ಆಗಿ ಸರಿಪಡಿಸುತ್ತದೆ ಈ ಎಲೆಕ್ಟ್ರಿಕ್ ಸ್ಕೂಟರ್

ಭಾರತೀಯ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಕೋಮಕಿ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಕಂಪನಿಯು ಎಸ್‌ಇ ಎಂಬ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ.

ಎಲೆಕ್ಟ್ರಿಕ್ ಸಮಸ್ಯೆಗಳನ್ನು ಆಟೋಮ್ಯಾಟಿಕ್ ಆಗಿ ಸರಿಪಡಿಸುತ್ತದೆ ಈ ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್ ಎಲ್ಲಾ ವಯಸ್ಸಿನವರ ಬಳಕೆಗೂ ಸೂಕ್ತವಾಗಿದೆ ಎಂದು ಕೋಮಕಿ ಕಂಪನಿ ತಿಳಿಸಿದೆ. ಈ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಗಾರ್ನೆಟ್ ರೆಡ್, ಡಾರ್ಕ್ ಬ್ಲೂ, ಮೆಟಾಲಿಕ್ ಗೋಲ್ಡ್ ಹಾಗೂ ಜೆಟ್ ಬ್ಲ್ಯಾಕ್ ಎಂಬ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಕೋಮಕಿ ಎಸ್‌ಇ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ 96 ಸಾವಿರ ರೂಪಾಯಿಗಳಾಗಿದೆ.

ಎಲೆಕ್ಟ್ರಿಕ್ ಸಮಸ್ಯೆಗಳನ್ನು ಆಟೋಮ್ಯಾಟಿಕ್ ಆಗಿ ಸರಿಪಡಿಸುತ್ತದೆ ಈ ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕಂಪನಿಯು ಹಲವಾರು ವಿಶೇಷ ಫೀಚರ್'ಗಳನ್ನು ಅಳವಡಿಸಿದೆ. ಈ ಸ್ಕೂಟರಿನಲ್ಲಿ ಯಾವುದೇ ಸಮಸ್ಯೆಯನ್ನು ಆಟೋಮ್ಯಾಟಿಕ್ ಆಗಿ ಸರಿಪಡಿಸುವ ಫೀಚರ್ ಅನ್ನು ಅಳವಡಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎಲೆಕ್ಟ್ರಿಕ್ ಸಮಸ್ಯೆಗಳನ್ನು ಆಟೋಮ್ಯಾಟಿಕ್ ಆಗಿ ಸರಿಪಡಿಸುತ್ತದೆ ಈ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರ್ ತನ್ನೊಳಗೆ ಸಂಭವಿಸುವ ಎಲೆಕ್ಟ್ರಿಕ್ ಸಮಸ್ಯೆಗಳನ್ನು ಆಟೋಮ್ಯಾಟಿಕ್ ಆಗಿ ಪತ್ತೆಹಚ್ಚಿ, ಸರಿಪಡಿಸುವ ಫೀಚರ್ ಅನ್ನು ಹೊಂದಿದೆ. ಇದರಿಂದಾಗಿ ಸ್ಕೂಟರ್ ಅನ್ನು ಚಾಲನೆ ಮಾಡುವವರು ಎಲೆಕ್ಟ್ರಿಕ್ ಕಡಿತದ ಬಗ್ಗೆ ಚಿಂತಿಸದೆ ಪ್ರಯಾಣಿಸಬಹುದು.

ಎಲೆಕ್ಟ್ರಿಕ್ ಸಮಸ್ಯೆಗಳನ್ನು ಆಟೋಮ್ಯಾಟಿಕ್ ಆಗಿ ಸರಿಪಡಿಸುತ್ತದೆ ಈ ಎಲೆಕ್ಟ್ರಿಕ್ ಸ್ಕೂಟರ್

ಇದರ ಜೊತೆಗೆ ಈ ಸ್ಕೂಟರಿನಲ್ಲಿ ಮಲ್ಟಿಮೀಡಿಯಾ-ಎನೆಬಲ್ ಆದ ಬ್ಲೂಟೂತ್ ಸ್ಪೀಕರ್, ಎಲ್‌ಇಡಿ ಡಿಆರ್'ಎಲ್, ಸೆಲ್‌ಫೋನ್ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್, ಕ್ರೂಸ್ ಕಂಟ್ರೋಲ್, ತ್ರೀ-ವೇ ರೈಡಿಂಗ್ ಮೋಡ್‌, ರಿಮೋಟ್ ಲಾಕಿಂಗ್ ಹಾಗೂ ಕಳ್ಳತನವಾಗುವುದನ್ನು ತಡೆಯುವ ಹಲವಾರು ಫೀಚರ್'ಗಳನ್ನು ಅಳವಡಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎಲೆಕ್ಟ್ರಿಕ್ ಸಮಸ್ಯೆಗಳನ್ನು ಆಟೋಮ್ಯಾಟಿಕ್ ಆಗಿ ಸರಿಪಡಿಸುತ್ತದೆ ಈ ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್ ಇತರ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಹೆಚ್ಚು ವ್ಯಾಪ್ತಿಯನ್ನು ನೀಡುತ್ತದೆ. ಕೋಮಕಿ ಎಸ್‌ಇ ಎಲೆಕ್ಟ್ರಿಕ್ ಸ್ಕೂಟರ್ ಪೂರ್ತಿಯಾಗಿ ಚಾರ್ಜ್‌ ಆದ ನಂತರ 125 ಕಿ.ಮೀಗಳವರೆಗೆ ಚಲಿಸುತ್ತದೆ.

ಎಲೆಕ್ಟ್ರಿಕ್ ಸಮಸ್ಯೆಗಳನ್ನು ಆಟೋಮ್ಯಾಟಿಕ್ ಆಗಿ ಸರಿಪಡಿಸುತ್ತದೆ ಈ ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯು 3 ಸಾವಿರ ವ್ಯಾಟ್ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟರ್'ಗೆ ಅಗತ್ಯವಾದ ಎಲೆಕ್ಟ್ರಿಕ್ ಅನ್ನು ಒದಗಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎಲೆಕ್ಟ್ರಿಕ್ ಸಮಸ್ಯೆಗಳನ್ನು ಆಟೋಮ್ಯಾಟಿಕ್ ಆಗಿ ಸರಿಪಡಿಸುತ್ತದೆ ಈ ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಮೋಟಾರ್ 125 ಸಿಸಿಯ ಪೆಟ್ರೋಲ್ ಎಂಜಿನ್ ಸ್ಕೂಟರ್‌ನಂತೆಯೇ ಪರ್ಫಾಮೆನ್ಸ್ ನೀಡುತ್ತದೆ ಎಂಬುದು ಗಮನಾರ್ಹ. ಈ ಕಾರಣಕ್ಕೆ ಕೋಮಕಿ ಕಂಪನಿಯು ಈ ಸ್ಕೂಟರ್ ಅನ್ನು ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಎಂದು ಕರೆದಿದೆ.

Most Read Articles

Kannada
English summary
Komaki launches SE high speed e scooter with self repair feature. Read in Kannada.
Story first published: Wednesday, February 10, 2021, 9:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X