ಹೊಸ ಕೆಟಿಎಂ 890 ಡ್ಯೂಕ್ ಟೆಕ್3 ಮೋಟೋ ಜಿಪಿ ಎಡಿಷನ್ ಬಿಡುಗಡೆ

ಆಸ್ಟ್ರಿಯಾದ ಬೈಕ್ ತಯಾರಕ ಕಂಪನಿಯಾದ ಕೆಟಿಎಂ ತನ್ನ 890 ಡ್ಯೂಕ್ ಟೆಕ್3 ಮೋಟೋ ಜಿಪಿ ಎಡಿಷನ್ ಅನ್ನು ಪರಿಚಯಿಸಿದೆ. ಕೆಟಿಎಂ 890 ಡ್ಯೂಕ್ ಟೆಕ್3 ಮೋಟೋ ಜಿಪಿ ಎಡಿಷನ್ ಕೇವಲ 100 ಯುನಿಟ್‌ಗಳಿಗೆ ಸೀಮಿತವಾಗಿರುತ್ತದೆ.

ಹೊಸ ಕೆಟಿಎಂ 890 ಡ್ಯೂಕ್ ಟೆಕ್3 ಮೋಟೋ ಜಿಪಿ ಎಡಿಷನ್ ಬಿಡುಗಡೆ

ಹೊಸ ಕೆಟಿಎಂ 890 ಡ್ಯೂಕ್ ಟೆಕ್3 ಮೋಟೋ ಜಿಪಿ ಎಡಿಷನ್ ಮಾದರಿಯ ಎಲ್ಲಾ 100 ಯುನಿಟ್‌ಗಳನ್ನು ಫ್ರಾನ್ಸ್‌ ಮಾರುಕಟ್ಟೆಯಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಈ ಹೊಸ ಬೈಕ್ ಇಕರ್ ಲೆಕುವಾನಾ ಮತ್ತು ಡ್ಯಾನಿಲೊ ಪೆಟ್ರೂಸಿ ಅವರು ಸವಾರಿ ಮಾಡಿದ ಟೆಕ್ 3 ಮೋಟೋ ಜಿಪಿ ಬೈಕ್‌ನ ಬಣ್ಣದಿಂದ ಸ್ಫೂರ್ತಿ ಪಡೆದುಕೊಂಡಿದೆ. ಇದರಿಂದ ಈ ಬೈಕ್ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ.

ಹೊಸ ಕೆಟಿಎಂ 890 ಡ್ಯೂಕ್ ಟೆಕ್3 ಮೋಟೋ ಜಿಪಿ ಎಡಿಷನ್ ಬಿಡುಗಡೆ

ಇನ್ನು ಈ ಹೊಸ ಕೆಟಿಎಂ 890 ಡ್ಯೂಕ್ ಟೆಕ್3 ಮೋಟೋ ಜಿಪಿ ಎಡಿಷನ್ ಬೆಲ್ಲಿ ಪ್ಯಾನ್, ಒಂದು ಪಿಲಿಯನ್ ಸೀಟ್ ಕೌಲ್ ಮತ್ತು ಸ್ಪೋರ್ಟಿಯರ್ ಭಾವನೆಗಾಗಿ ಅಕ್ರಪೋವಿಕ್ ಎಕ್ಸಾಸ್ಟ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಕೆಟಿಎಂ 890 ಡ್ಯೂಕ್ ಟೆಕ್3 ಮೋಟೋ ಜಿಪಿ ಎಡಿಷನ್ ಬಿಡುಗಡೆ

ಇನ್ನು ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದರ ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಹೆಚ್ಚಾಗಿ ಬದಲಾಗದೆ ಉಳಿದಿದೆ. ಇದರಲ್ಲಿ 889 ಸಿಸಿ, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 113.4 ಬಿಹೆಚ್‍ಪಿ ಪವರ್ ಮತ್ತು 92 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಕೆಟಿಎಂ 890 ಡ್ಯೂಕ್ ಟೆಕ್3 ಮೋಟೋ ಜಿಪಿ ಎಡಿಷನ್ ಬಿಡುಗಡೆ

ಕೆಟಿಎಂ ಡ್ಯೂಕ್ 890 ಬೈಕಿಗೆ ಆಧಾರವಾಗಿರುವ ಫ್ರೇಮ್ ಕ್ರೋಮಿಯಂ-ಮಾಲಿಬ್ಡಿನಮ್-ಸ್ಟೀಲ್ ನಿಂದ ಮಾಡಲ್ಪಟ್ಟಿದೆ. ಇದು ಡ್ಯೂಕ್ 890 ಬೈಕಿನ ತೂಕವನ್ನು ಕಡಿಮೆ ಮಾಡುತ್ತದೆ. ಆದರೆ ಅತ್ಯಂತ ತೀಕ್ಷ್ಣವಾದ ನಿರ್ವಹಣೆಗೆ ತುಂಬಾ ಕಠಿಣ ಮತ್ತು ಬಿಗಿಯಾಗಿರುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಕೆಟಿಎಂ 890 ಡ್ಯೂಕ್ ಟೆಕ್3 ಮೋಟೋ ಜಿಪಿ ಎಡಿಷನ್ ಬಿಡುಗಡೆ

ಕೆಟಿಎಂ ಡ್ಯೂಕ್ 890 ಹೆಚ್ಚಿಮ ಪವರ್ ಫುಲ್ ಬೈಕ್ ಆದರೂ ಉತ್ತಮ ಹ್ಯಾಂಡಲಿಂಗ್ ಗುಣವನ್ನು ಹೊಂದಿದೆ. ಕೆಟಿಎಂ ಡ್ಯೂಕ್ 890 ಮತ್ತು ಟೆಕ್ 3 ಮೋಟೋ ಜಿಪಿ ಎಡಿಷನ್ ಮತ್ತು ಕೆಟಿಎಂ ಡ್ಯೂಕ್ 890 ಒಂದೇ ಸಮಯದಲ್ಲಿ ಬಹಳ ತ್ವರಿತ ಮತ್ತು ಹೆಚ್ಚಿನ ಸುರಕ್ಷತೆಗಾಗಿ ಹಲವಾರು ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಗಳೊಂದಿಗೆ ಬರುತ್ತವೆ.

ಹೊಸ ಕೆಟಿಎಂ 890 ಡ್ಯೂಕ್ ಟೆಕ್3 ಮೋಟೋ ಜಿಪಿ ಎಡಿಷನ್ ಬಿಡುಗಡೆ

ಈ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್‌ನಲ್ಲಿ ಲೀನ್ ಆಂಗಲ್ ಸೆನ್ಸಿಟಿವ್ ಟ್ರ್ಯಾಕ್ಷನ್ ಕಂಟ್ರೋಲ್, ಮೋಟಾರ್ ಸ್ಲಿಪ್ ಕಂಟ್ರೋಲ್, ಸೂಪರ್‌ಮೊಟೊ ಮೋಡ್‌ನೊಂದಿಗೆ ಎಬಿಎಸ್ ಅನ್ನು ಹೊಂದಿದೆ. ಇದರೊಂದಿಗೆ ಇತರ ಅತ್ಯಾಧುನಿಕ ತಂತ್ರಜ್ಙಾನಗಳನ್ನು ಒಳಗೊಂಡಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ಕೆಟಿಎಂ 890 ಡ್ಯೂಕ್ ಟೆಕ್3 ಮೋಟೋ ಜಿಪಿ ಎಡಿಷನ್ ಬಿಡುಗಡೆ

ಇನ್ನು ಈ ಹೊಸ ಕೆಟಿಎಂ 890 ಡ್ಯೂಕ್ ಟೆಕ್3 ಮೋಟೋ ಜಿಪಿ ಎಡಿಷನ್ ನಲ್ಲಿ ರೈನ್, ರೋಡ್, ಸ್ಪೋರ್ಟ್ ಮತ್ತು ಟ್ರ್ಯಾಕ್ ಎಂಬ ನಾಲ್ಕು ಮೋಡ್‌ಗಳನ್ನು ನೀಡಿದ್ದಾರೆ. ಈ ನಾಲ್ಕು ಮೋಡ್‌ಗಳಲ್ಲಿ ವಿಭಿನ್ನವಾದ ರೈಡಿಂಗ್ ಅನುಭವವನ್ನು ಪಡೆಯಬಹುದು.

ಹೊಸ ಕೆಟಿಎಂ 890 ಡ್ಯೂಕ್ ಟೆಕ್3 ಮೋಟೋ ಜಿಪಿ ಎಡಿಷನ್ ಬಿಡುಗಡೆ

ಕೆಟಿಎಂ 890 ಡ್ಯೂಕ್‌ನ ಟೆಕ್ 3 ಮೋಟೋ ಜಿಪಿ ಆವೃತ್ತಿ ಫ್ರಾನ್ಸ್‌ನಲ್ಲಿ ಮಾತ್ರ ಲಭ್ಯವಿರುವುದು ಇತರ ದೇಶಗಳ ಕೆಟಿಎಂ ಅಭಿಮಾನಿಗಳಿಗೆ ಬೇಸರ ಮೂಡಿಸುವ ಸುದ್ದಿಯಾಗಿದೆ. ಆದರೆ ಫ್ರಾನ್ಸ್‌ನಲ್ಲಿ 100 ಯುನಿಟ್‌ಗಳು ಕೂಡ ಉತ್ತಮ ಬೇಡಿಕೆಯೊಂದಿಗೆ ಕಡಿಮೆ ಅವಧಿಯಲ್ಲಿ ಮಾರಾಟವಾಗಬಹುದು.

Most Read Articles

Kannada
Read more on ಕೆಟಿಎಂ ktm
English summary
KTM 890 Duke Tech3 MotoGP Edition Launched. Read In Kannada.
Story first published: Saturday, April 24, 2021, 19:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X