ಮೆಟಿಯೊರ್ 350 ಬೈಕ್ ಪಡೆಯಲು ಇಷ್ಟು ತಿಂಗಳು ಕಾಯುವುದು ಅನಿವಾರ್ಯ

ಮೆಟಿಯೊರ್ 350 ಬೈಕ್ ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್ ಕಂಪನಿಯ ಹೊಸ ಬೈಕ್. ರೆಟ್ರೊ ಕ್ರೂಸರ್ ಮಾದರಿಯ ಈ ಬೈಕ್ ಕಳೆದ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಯಿತು. ಈ ಬೈಕ್ ಯುವಜನತೆಯಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಮೆಟಿಯೊರ್ 350 ಬೈಕ್ ಪಡೆಯಲು ಇಷ್ಟು ತಿಂಗಳು ಕಾಯುವುದು ಅನಿವಾರ್ಯ

ಬೇಡಿಕೆ ಹೆಚ್ಚಾದ ಕಾರಣಕ್ಕೆ ರಾಯಲ್ ಎನ್‌ಫೀಲ್ಡ್ ಕಂಪನಿಯು ಮೆಟಿಯೊರ್ ಬೈಕಿನ ಕಾಯುವ ಅವಧಿಯನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ. ಕಾಯುವ ಅವಧಿ ರಾಜ್ಯಗಳಿಂದ ರಾಜ್ಯಗಳಿಗೆ, ನಗರಗಳಿಂದ ನಗರಗಳಿಗೆ ಬದಲಾಗುತ್ತದೆ. ಈ ಬೈಕ್ ಪಡೆಯಲು ಐದು ತಿಂಗಳ ಕಾಲ ಕಾಯಬೇಕು ಎಂದು ಹೇಳಲಾಗಿದೆ.

ಮೆಟಿಯೊರ್ 350 ಬೈಕ್ ಪಡೆಯಲು ಇಷ್ಟು ತಿಂಗಳು ಕಾಯುವುದು ಅನಿವಾರ್ಯ

ವರದಿಗಳ ಪ್ರಕಾರ ರಾಯಲ್ ಎನ್‌ಫೀಲ್ಡ್ ಮೆಟಿಯೊರ್ ಬೈಕ್ ಪಡೆಯಲು ಗರಿಷ್ಠ 5 ತಿಂಗಳವರೆಗೆ ಕಾಯಬೇಕಾಗುತ್ತದೆ. ಮೆಟಿಯೊರ್ ಹೆಚ್ಚಿನ ಸಂಖ್ಯೆಯಲ್ಲಿಮಾರಾಟವಾಗುತ್ತಿರುವುದರಿಂದ ಈ ಪರಿಸ್ಥಿತಿ ಎದುರಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮೆಟಿಯೊರ್ 350 ಬೈಕ್ ಪಡೆಯಲು ಇಷ್ಟು ತಿಂಗಳು ಕಾಯುವುದು ಅನಿವಾರ್ಯ

ದೆಹಲಿ, ಪುಣೆ ಹಾಗೂ ಮುಂಬೈ ಸೇರಿದಂತೆ ಹಲವು ನಗರಗಳಲ್ಲಿರುವ ಡೀಲರ್'ಗಳ ಮೂಲಕ ಈ ಮಾಹಿತಿ ಹೊರ ಬಂದಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಮಾತ್ರವಲ್ಲದೆ ದೇಶದ ಬಹುತೇಕ ಎಲ್ಲಾ ಇತರ ರಾಜ್ಯಗಳಲ್ಲಿ ಈ ಪರಿಸ್ಥಿತಿ ಎದುರಾಗಿದೆ.

ಮೆಟಿಯೊರ್ 350 ಬೈಕ್ ಪಡೆಯಲು ಇಷ್ಟು ತಿಂಗಳು ಕಾಯುವುದು ಅನಿವಾರ್ಯ

ಇದರಿಂದಾಗಿ ತಮ್ಮ ನೆಚ್ಚಿನ ಬೈಕ್ ಪಡೆಯಲು ಯುವಕರು ತಿಂಗಳುಗಟ್ಟಲೇ ಕಾಯುವಂತಾಗಿದೆ. ಮೆಟಿಯೊರ್ ಬೈಕ್ ಅನ್ನು 350 ಸಿಸಿ ಸೆಗ್'ಮೆಂಟಿನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಹೈನೆಸ್ ಸಿಬಿ 350 ಬೈಕಿಗೆ ಪೈಪೋಟಿ ನೀಡುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮೆಟಿಯೊರ್ 350 ಬೈಕ್ ಪಡೆಯಲು ಇಷ್ಟು ತಿಂಗಳು ಕಾಯುವುದು ಅನಿವಾರ್ಯ

ಈ ಬೈಕಿನ ಆರಂಭಿಕ ಬೆಲೆ ಚೆನ್ನೈನ ಎಕ್ಸ್ ಶೋರೂಂ ದರದಂತೆ ರೂ. 2,02,388 ಲಕ್ಷಗಳಾಗಿದೆ. ಈ ಬೈಕ್ ಅನ್ನು ಫೈರ್ ಬಾಲ್, ಸ್ಟೆಲ್ಲಾರ್ ಹಾಗೂ ಸೂಪರ್ ನೋವಾ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಮೆಟಿಯೊರ್ 350 ಬೈಕ್ ಪಡೆಯಲು ಇಷ್ಟು ತಿಂಗಳು ಕಾಯುವುದು ಅನಿವಾರ್ಯ

ರಾಯಲ್ ಎನ್‌ಫೀಲ್ಡ್ ಕಂಪನಿಯು ಯುವಜನರನ್ನು ಆಕರ್ಷಿಸಲು ಈ ಬೈಕಿನಲ್ಲಿ ವಿಶೇಷ ಕಸ್ಟಮೈಸ್ ಸೌಲಭ್ಯಗಳನ್ನು ನೀಡುತ್ತದೆ. ಇದರನ್ವಯ ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ ಸೈಲೆನ್ಸರ್, ಮಿರರ್ ಸೇರಿದಂತೆ ಹಲವು ಬಿಡಿಭಾಗಗಳನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮೆಟಿಯೊರ್ 350 ಬೈಕ್ ಪಡೆಯಲು ಇಷ್ಟು ತಿಂಗಳು ಕಾಯುವುದು ಅನಿವಾರ್ಯ

ಇದಕ್ಕಾಗಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಮೇಕ್ ಇಟ್ ಯುವರ್ಸ್ ಎಂಬ ವಿಶೇಷ ಯೋಜನೆಯನ್ನು ಆಯೋಜಿಸಿದೆ. ಮೆಟಿಯೊರ್ 350 ಬೈಕಿನಲ್ಲಿ 350 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ಮೆಟಿಯೊರ್ 350 ಬೈಕ್ ಪಡೆಯಲು ಇಷ್ಟು ತಿಂಗಳು ಕಾಯುವುದು ಅನಿವಾರ್ಯ

ಈ ಎಂಜಿನ್ ಗರಿಷ್ಠ 20.2 ಬಿಹೆಚ್‌ಪಿ ಪವರ್ ಹಾಗೂ 27 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಬೈಕುಗಳನ್ನು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಮಾರಾಟ ಮಾಡುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮೆಟಿಯೊರ್ 350 ಬೈಕ್ ಪಡೆಯಲು ಇಷ್ಟು ತಿಂಗಳು ಕಾಯುವುದು ಅನಿವಾರ್ಯ

ಮೆಟಿಯೊರ್ 350 ಬೈಕ್‌ ಅನ್ನು ಸಹ ವಿಶ್ವದ ಹಲವು ದೇಶಗಳಿಗೆ ಮಾರಾಟ ಮಾಡಲಾಗುತ್ತದೆ. ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕ್‌ಗಳನ್ನು ಥೈಲ್ಯಾಂಡ್, ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Meteor 350 bike waiting period increased up to 5 months. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X