220 ಸಿಸಿ - 500 ಸಿಸಿಯಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಜಾಗತಿಕವಾಗಿ ಎದುರಾಗಿರುವ ಸೆಮಿಕಂಡಕ್ಟರ್ ಚಿಪ್ ಕೊರತೆಯಿಂದಾಗಿ ವಾಹನ ಮಾರಾಟವು ತೀವ್ರವಾಗಿ ಕುಸಿತ ದಾಖಲಿಸಿದೆ. ಅಕ್ಟೋಬರ್‌ ತಿಂಗಳಿನಲ್ಲಿ ಸಾಧಾರಣ ಬೆಳವಣಿಗೆಯನ್ನು ದಾಖಲಿಸಿದ್ದ ನಂತರ ನವೆಂಬರ್‌ ತಿಂಗಳಿನಲ್ಲಿ 200 ಸಿಸಿ - 500 ಸಿಸಿ ಸೆಗ್ ಮೆಂಟಿನ ಮೋಟಾರ್‌ಸೈಕಲ್‌ಗಳ ಮಾರಾಟದಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಇದರಿಂದ ಸಹಜವಾಗಿಯೇ ಬೈಕ್ ತಯಾರಕ ಕಂಪನಿಗಳಿಗೆ ನಷ್ಟ ಉಂಟಾಗಿದೆ.

220 ಸಿಸಿ - 500 ಸಿಸಿಯಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಈ ವರ್ಷದ ನವೆಂಬರ್ ತಿಂಗಳಿನಲ್ಲಿ ದೇಶಾದ್ಯಂತ 200 ಸಿಸಿ - 500 ಸಿಸಿ ವಿಭಾಗದಲ್ಲಿ ಒಟ್ಟು 50,140 ಬೈಕುಗಳನ್ನು ಮಾರಾಟ ಮಾಡಲಾಗಿದೆ. ಇನ್ನು ಈ ವರ್ಷದ ಅಕ್ಟೋಬರ್‌ನಲ್ಲಿ ಈ ವಿಭಾಗದಲ್ಲಿ 58,747 ಬೈಕುಗಳು ಮಾರಾಟವಾಗಿದ್ದವು. ಪ್ರತಿ ತಿಂಗಳ ಮಾರಾಟದ ಆಧಾರದಲ್ಲಿ ಹೇಳುವುದಾದರೆ ನವೆಂಬರ್ ತಿಂಗಳಿನ ಮಾರಾಟವು ಅಕ್ಟೋಬರ್ ತಿಂಗಳ ಮಾರಾಟಕ್ಕಿಂತ 14.65% ನಷ್ಟು ಕಡಿಮೆಯಾಗಿದೆ.

220 ಸಿಸಿ - 500 ಸಿಸಿಯಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಇನ್ನು 2020ರ ನವೆಂಬರ್‌ನಲ್ಲಿ ಈ ವಿಭಾಗದಲ್ಲಿ 75,574 ಬೈಕುಗಳು ಮಾರಾಟವಾಗಿದ್ದವು. ವರ್ಷದ ಮಾರಾಟಕ್ಕೆ ಹೋಲಿಸಿದರೆ ಈ ವಿಭಾಗದ ಮಾರಾಟವು ಕಳೆದ ವರ್ಷಕ್ಕಿಂತ ಈ ವರ್ಷ 33.65% ನಷ್ಟು ಕುಸಿತವನ್ನು ಕಂಡಿದೆ. 200 ಸಿಸಿ - 500 ಸಿಸಿ ವಿಭಾಗದಲ್ಲಿ ಕಳೆದ ತಿಂಗಳು ಹೆಚ್ಚು ಮಾರಾಟವಾದ ಟಾಪ್ 10 ಬೈಕುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

220 ಸಿಸಿ - 500 ಸಿಸಿಯಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಈ ಪಟ್ಟಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ ಕ್ಲಾಸಿಕ್ 350 ಬೈಕ್ ಮೊದಲ ಸ್ಥಾನದಲ್ಲಿದೆ. ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಈ ಬೈಕಿನ 19,601 ಯುನಿಟ್‌ಗಳು ಮಾರಾಟವಾಗಿದ್ದರೆ, ಕಳೆದ ವರ್ಷ ನವೆಂಬರ್‌ನಲ್ಲಿ ಈ ಬೈಕಿನ ಒಟ್ಟು 39,391 ಯುನಿಟ್‌ಗಳು ಮಾರಾಟವಾಗಿದ್ದವು. ಕ್ಲಾಸಿಕ್ 350 ಬೈಕಿನ ಮಾರಾಟ ಪ್ರಮಾಣವು ಈ ವರ್ಷ 50.24% ನಷ್ಟು ಕುಸಿದಿದೆ.

220 ಸಿಸಿ - 500 ಸಿಸಿಯಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಈ ಪಟ್ಟಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ ಬುಲೆಟ್ 350 ಎರಡನೇ ಸ್ಥಾನದಲ್ಲಿದೆ. ಕಂಪನಿಯು ನವೆಂಬರ್ ತಿಂಗಳಿನಲ್ಲಿ ಈ ಬೈಕಿನ ಒಟ್ಟು 8,733 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2020ರ ನವೆಂಬರ್ ತಿಂಗಳಿನಲ್ಲಿ ಈ ಬೈಕಿನ ಒಟ್ಟು 6,513 ಯುನಿಟ್‌ಗಳು ಮಾರಾಟವಾಗಿದ್ದವು. ಈ ವರ್ಷ ಈ ಬುಲೆಟ್ 350 ಬೈಕಿನ ಮಾರಾಟ ಪ್ರಮಾಣವು 34.09% ನಷ್ಟು ಹೆಚ್ಚಾಗಿದೆ.

220 ಸಿಸಿ - 500 ಸಿಸಿಯಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ರಾಯಲ್ ಎನ್‌ಫೀಲ್ಡ್‌ ಕಂಪನಿಯ ಮೆಟಿಯೊರ್ 350 ಕ್ರೂಸರ್ ಬೈಕ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ರಾಯಲ್ ಎನ್ ಫೀಲ್ಡ್ ಕಂಪನಿಯು ಕಳೆದ ತಿಂಗಳು ಈ ಬೈಕಿನ ಒಟ್ಟು 6,775 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಈ ಬೈಕಿನ 7,031 ಯುನಿಟ್‌ಗಳು ಮಾರಾಟವಾಗಿದ್ದವು. ಈ ಬೈಕಿನ ಮಾರಾಟ ಪ್ರಮಾಣವು ಈ ವರ್ಷ 3.64% ನಷ್ಟು ಕುಸಿತ ಕಂಡಿದೆ.

220 ಸಿಸಿ - 500 ಸಿಸಿಯಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ರಾಯಲ್ ಎನ್‌ಫೀಲ್ಡ್‌ ಕಂಪನಿಯ ಎಲೆಕ್ಟ್ರಾ 350 ಬೈಕ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ನವೆಂಬರ್ ತಿಂಗಳಿನಲ್ಲಿ ರಾಯಲ್ ಎನ್ ಫೀಲ್ಡ್ ಕಂಪನಿಯು ಈ ಬೈಕಿನ 4,257 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2020ರ ನವೆಂಬರ್‌ನಲ್ಲಿ ಈ ಬೈಕಿನ 3,490 ಯುನಿಟ್‌ಗಳು ಮಾರಾಟವಾಗಿದ್ದವು. ಈ ವರ್ಷ ಎಲೆಕ್ಟ್ರಾ 350 ಬೈಕಿನ ಮಾರಾಟದಲ್ಲಿ 21% ನಷ್ಟು ಹೆಚ್ಚಳ ಕಂಡು ಬಂದಿದೆ.

220 ಸಿಸಿ - 500 ಸಿಸಿಯಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ರಾಯಲ್ ಎನ್‌ಫೀಲ್ಡ್‌ ಕಂಪನಿಯ ಹಿಮಾಲಯನ್ ಬೈಕ್ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಕಂಪನಿಯು ಈ ಬೈಕಿನ ಒಟ್ಟು 3,310 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿಯು ಹಿಮಾಲಯನ್ ಬೈಕಿನ ಒಟ್ಟು 1,550 ಯೂನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ವರ್ಷ ಹಿಮಾಲಯನ್ ಬೈಕಿನ ಮಾರಾಟ ಪ್ರಮಾಣವು 113.55% ನಷ್ಟು ಹೆಚ್ಚಾಗಿದೆ.

220 ಸಿಸಿ - 500 ಸಿಸಿಯಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಹೋಂಡಾ ಮೋಟಾರ್‌ಸೈಕಲ್‌ ಕಂಪನಿಯ H'ness CB 350 ಬೈಕ್ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಈ ಬೈಕಿನ 4,067 ಯುನಿಟ್‌ಗಳು ಮಾರಾಟವಾಗಿದ್ದವು. ಈ ವರ್ಷದ ನವೆಂಬರ್‌ನಲ್ಲಿ ಈ ಬೈಕಿನ 2,322 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ವರ್ಷ H'ness CB 350 ಬೈಕಿನ ಮಾರಾಟ ಪ್ರಮಾಣವು 42% ನಷ್ಟು ಕುಸಿದಿದೆ.

220 ಸಿಸಿ - 500 ಸಿಸಿಯಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಬಜಾಜ್ ಆಟೋ ಕಂಪನಿಯ ಡೊಮಿನಾರ್ 250 ಬೈಕ್ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ನವೆಂಬರ್ ತಿಂಗಳಿನಲ್ಲಿ ಕಂಪನಿಯು ಈ ಬೈಕಿನ ಒಟ್ಟು 1,440 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿಯು ಡೊಮಿನಾರ್ 250 ಬೈಕಿನ 835 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ವರ್ಷ ಡೊಮಿನಾರ್ ಬೈಕಿನ ಮಾರಾಟವು 72.46% ನಷ್ಟು ಹೆಚ್ಚಾಗಿದೆ.

220 ಸಿಸಿ - 500 ಸಿಸಿಯಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

735 ಯುನಿಟ್‌ಗಳ ಮಾರಾಟದೊಂದಿಗೆ ಕೆಟಿಎಂ 250 ಬೈಕ್ 8ನೇ ಸ್ಥಾನದಲ್ಲಿದೆ. ಈ ಬೈಕಿನ ಮಾರಾಟ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 53.77% ನಷ್ಟು ಕುಸಿತವನ್ನು ದಾಖಲಿಸಿದೆ. ಪಲ್ಸರ್ 220/250 ಬೈಕ್ 644 ಯುನಿಟ್‌ಗಳೊಂದಿಗೆ 9 ನೇ ಸ್ಥಾನದಲ್ಲಿದೆ. ಈ ಬೈಕಿನ ಮಾರಾಟ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 90.95% ನಷ್ಟು ಕುಸಿತವನ್ನು ದಾಖಲಿಸಿದೆ.

220 ಸಿಸಿ - 500 ಸಿಸಿಯಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಇನ್ನು ಬಜಾಜ್ ಆಟೋ ಕಂಪನಿಯ ಅವೆಂಜರ್ 220 ಬೈಕ್ ಈ ಪಟ್ಟಿಯಲ್ಲಿ ಹತ್ತನೇಯ ಹಾಗೂ ಕೊನೆಯ ಸ್ಥಾನದಲ್ಲಿದೆ. ಕಳೆದ ತಿಂಗಳು ಅವೆಂಜರ್ 220 ಬೈಕಿನ 608 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಅವೆಂಬರ್ 220 ಬೈಕಿನ ಮಾರಾಟ ಪ್ರಮಾಣವು ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ನವೆಂಬರ್ ತಿಂಗಳಿನಲ್ಲಿ 40.91% ನಷ್ಟು ಕುಸಿತವನ್ನು ದಾಖಲಿಸಿದೆ.

Most Read Articles

Kannada
English summary
Most sold motorcycles in 200cc 500cc segment during november 2021 details
Story first published: Monday, December 27, 2021, 14:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X