ಬೆಂಗಳೂರು ತಲುಪಿದ ಬಹುನಿರೀಕ್ಷಿತ Aprilia RS 660 ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ Aprilia India ತನ್ನ ಬಹುನಿರೀಕ್ಷಿತ RS 660 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ, ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿರುವ ಈ ಹೊಸ ಎಪ್ರಿಲಿಯಾ ಆರ್‍ಎಸ್ 660 ಈಗಾಗಲೇ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ.

ಬೆಂಗಳೂರು ತಲುಪಿದ ಬಹುನಿರೀಕ್ಷಿತ Aprilia RS 660 ಬೈಕ್

ಈ ಬಹುನಿರೀಕ್ಷಿತ ಮಿಡಲ್‌ವೇಟ್ ಬೈಕ್ ಭಾರತದ ಡೀಲರ್‌ಶಿಪ್‌ಗಳ ಬಳಿ ತಲುಪಲು ಪ್ರಾರಂಭವಾಗಿದೆ. ಬೆಂಗಳೂರಿನ ಬ್ರ್ಯಾಂಡ್‌ನ ಡೀಲರ್‌ಶಿಪ್‌ ತಲುಪಿದ ಚಿತ್ರಗಳು ಬಹಿರಂಗವಾಗಿದೆ. ಇನ್ನು ಬ್ರ್ಯಾಂಡ್‌ನ ಮೋಟೋಪ್ಲೆಕ್ಸ್ ಡೀಲರ್‌ಶಿಪ್‌ಗಳು ಈ ವರ್ಷ ಮಾರ್ಚ್‌ನಲ್ಲಿ Aprilia RS 660 ಮತ್ತು Tuono 660 ಬೈಕ್ ಗಳ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿವೆ. ಎರಡೂ ಬೈಕ್‌ಗಳು ಹಲವು ಅಂಶಗಳನ್ನು ಹಂಚಿಕೊಳ್ಳುತ್ತವೆ ಮತ್ತು ಒಟ್ಟಿಗೆ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ಹೊಸ Aprilia RS 660 ಬೈಕಿನ ಹೆಸರನ್ನು ಎಪ್ರಿಲಿಯಾ ಇಂಡಿಯಾ ವೆಬ್‌ಸೈಟ್‌ನಲ್ಲಿ Tuono 66 ಜೊತೆಗೆ ಈಗಾಗಲೇ ಪಟ್ಟಿ ಮಾಡಲಾಗಿದೆ.

ಬೆಂಗಳೂರು ತಲುಪಿದ ಬಹುನಿರೀಕ್ಷಿತ Aprilia RS 660 ಬೈಕ್

ಆದರೆ ಅವುಗಳ ಬಿಡುಗಡೆಯ ಬಗ್ಗೆ ಇನ್ನು ಮಾಹಿತಿಗಳು ಲಭ್ಯವಿಲ್ಲ. ಈ ಬೈಕುಗಳು ಸ್ಪೋರ್ಟಿ ವಿನ್ಯಾಸ, ಹೊಸ ತಂತ್ರಜ್ಞಾನ ಮತ್ತು ಉತ್ತಮ ಪರ್ಫಾಮೆನ್ಸ್ ಅನ್ನು ಹೊಂದಿದೆ. ಈ ಹೊಸ ಎಪ್ರಿಲಿಯಾ ಆರ್‍ಎಸ್ 660 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಬೆಂಗಳೂರು ತಲುಪಿದ ಬಹುನಿರೀಕ್ಷಿತ Aprilia RS 660 ಬೈಕ್

ಹೊಸ Aprilia RS 660 ಬೈಕಿನ ಬಗ್ಗೆ ಹೇಳುವುದಾದರೆ, ಇದು ತನ್ನದೆ ಸರಣಿಯಲ್ಲಿರುವ ಆರ್‌ಎಸ್‌ಟಿ 4 ಮಾದರಿಯ ವಿನ್ಯಾಸದಿಂದ ಸ್ಪೂರ್ತಿಯನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ಆರ್‌ಎಸ್‌ಟಿ 4 ಮಾದರಿಯಲ್ಲಿರುವ ಆಗ್ರೇಸಿವ್ ಆಗಿ ಕಾಣುವ ಫೇರಿಂಗ್ ಮತ್ತು ಏರೋ ವಿಂಗ್ಲೆಟ್ಗಳನ್ನು ಒಳಗೊಂಡಿದೆ. ರೇಸ್-ಸ್ಪೆಕ್ ಶೈಲಿಯ ವಿಂಗ್ಲೆಟ್‌ಗಳು ಹೆಚ್ಚಿನ ವೇಗದಲ್ಲಿ ಉತ್ತಮ ಕಂಟ್ರೋಲ್ ಅನ್ನು ನೀಡುತ್ತದೆ.

ಬೆಂಗಳೂರು ತಲುಪಿದ ಬಹುನಿರೀಕ್ಷಿತ Aprilia RS 660 ಬೈಕ್

ಈ ಮಿಡಲ್‌ವೇಟ್ ಬ್ರ್ಯಾಂಡ್‌ನ ಸಿಗ್ನೇಚರ್ ಎಲ್ಇಡಿ ಹೆಡ್ ಲೈಟ್ ಅನ್ನು ಹೊಂದಿದೆ. ಮುಂಭಾಗದ ಎರಡೂ ಬದಿಯಲ್ಲಿ ಕಾರ್ನರಿಂಗ್ ಲ್ಯಾಂಪ್ ಅನ್ನು ಒಳಗೊಂಡಿದೆ. ಇನ್ನು ಈ ಬೈಕಿನಲ್ಲಿ ಸ್ಪೋರ್ಟಿ ಲುಕ್ ಹೊಂದಿರುವ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಆರ್‍ಎಸ್660 ಬೈಕಿನ ಹಿಂಭಾಗವು ಕೂಡ ಆರ್‌ಎಸ್‌ಟಿ 4 ಮಾದರಿಯಂತೆ ಕಾಣುತ್ತದೆ. ಒಟ್ಟಾರೆಯಾಗಿ ಈ ಎಪ್ರಿಲಿಯಾ ಆರ್‍ಎಸ್ 660 ಬೈಕ್ ಆಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಬೆಂಗಳೂರು ತಲುಪಿದ ಬಹುನಿರೀಕ್ಷಿತ Aprilia RS 660 ಬೈಕ್

Aprilia RS 660 ಬೈಕಿನಲ್ಲಿ ವ್ಹೀಲ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಕ್ರೂಸ್ ಕಂಟ್ರೋಲ್, ಐದು ವಿಭಿನ್ನ ರೈಡ್ ಮೋಡ್‌ಗಳು ಮತ್ತು ಎರಡು-ಹಂತದ ಕ್ವಿಕ್-ಶಿಫ್ಟರ್ ಹೊಂದಿದೆ. ಈ ಬೈಕಿನಲ್ಲಿ 5 ಇಂಚಿನ ಟಿಎಫ್‌ಟಿ ಸ್ಪ್ಲಿಟ್-ಸ್ಕ್ರೀನ್ ಅನ್ನು ಒಳಗೊಂಡಿದೆ. ಈ ಡಿಸ್ ಪ್ಲೇಯನ್ನು ಹಲವಾರು ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಬೆಂಗಳೂರು ತಲುಪಿದ ಬಹುನಿರೀಕ್ಷಿತ Aprilia RS 660 ಬೈಕ್

ಇನ್ನು ಈ ಹೊಸ Aprilia RS 660 ಬೈಕಿನಲ್ಲಿ 660ಸಿಸಿ ಪ್ಯಾರೆಲೆಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಬೆಂಗಳೂರು ತಲುಪಿದ ಬಹುನಿರೀಕ್ಷಿತ Aprilia RS 660 ಬೈಕ್

ಇನ್ನು Aprilia Tuono 660 ಮಿಡಲ್-ವೈಟ್ ನೇಕೆಡ್ ಬೈಕ್ ಆರ್‍ಎಸ್660 ಮಾದರಿಯನ್ನು ಆಧರಿಸಿದೆ. ಆದರೆ ವಿನ್ಯಾಸವನ್ನು ಟುವೊನೊ ವಿ4 ಮಾದರಿಯಿಂದ ಸ್ಫೂರ್ತಿ ಪಡೆದಿದೆ. ಈ ಹೊಸ ಎಪ್ರಿಲಿಯಾ ಟುವೊನೊ 660 ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಬೈಕ್ ಅನ್ನು ಆರ್‌ಎಸ್ 660 ಬೈಕಿನ ರೀತಿಯಲ್ಲಿಯೇ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಸೂಟ್ ಹಾಗೂ ಅದೇ ರೀತಿಯ ಎಂಜಿನ್ ಪ್ಯಾಕ್'ನೊಂದಿಗೆ ನೀಡಲಾಗುತ್ತದೆ.

ಬೆಂಗಳೂರು ತಲುಪಿದ ಬಹುನಿರೀಕ್ಷಿತ Aprilia RS 660 ಬೈಕ್

ಆದರೆ ಈ ಬೈಕಿನಲ್ಲಿರುವ ಎಂಜಿನ್ ಅನ್ನು ಡಿ-ಟ್ಯೂನ್ ಮಾಡಲಾಗುತ್ತದೆ. Aprilia Tuono 660 ಬೈಕ್ ಸಸ್ಪೆಂಷನ್, ಚಾಸಿಸ್, ಬ್ರೇಕ್ ಹಾಗೂ ಸ್ವಿಂಗ್ ಆರ್ಮ್'ಗಳನ್ನು RS 660 ಬೈಕಿನಿಂದ ಎರವಲು ಪಡೆದುಕೊಳ್ಳಲಿದೆ. ಇನ್ನು ಈ Aprilia Tuono 660 ಬೈಕಿನ ಮುಂಭಾಗದ ಫೇರಿಂಗ್ RS 660 ಹಾಗೂ Aprilia RS 4 ಗಳನ್ನು ಹೋಲುತ್ತದೆ.

ಬೆಂಗಳೂರು ತಲುಪಿದ ಬಹುನಿರೀಕ್ಷಿತ Aprilia RS 660 ಬೈಕ್

ಇನ್ನು Aprilia ಕಂಪನಿಯು ತನ್ನ ಹೊಸ ಟುವಾರೆಗ್ 660 ಅಡ್ವೆಂಚರ್ ಬೈಕನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಾಗಿ ಇತ್ತೀಚೆಗೆ ಅನಾವರಾಣಗೊಳಿಸಿದೆ. ಈ ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕ್ ಈ ವರ್ಷದ ಕೊನೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಯಾಗಲಿದೆ. ಆದರೆ ಈ ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.

ಬೆಂಗಳೂರು ತಲುಪಿದ ಬಹುನಿರೀಕ್ಷಿತ Aprilia RS 660 ಬೈಕ್

ಬಿಡುಗಡೆಗೆ ಸಜ್ಜಾದ ಈ ಹೊಸ ಹೊಸ Aprilia RS 660 ಬೈಕಿನ ಸಸ್ಪೆಂಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಕಯಾಬಾದ ಯುಎಸ್ಡಿ ಫೋರ್ಕ್ಸ್ ಯುನಿಟ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಅದೇ ಸ್ಪೆಕ್ ನಂತೆ ಇರುತ್ತದೆ.

ಬೆಂಗಳೂರು ತಲುಪಿದ ಬಹುನಿರೀಕ್ಷಿತ Aprilia RS 660 ಬೈಕ್

ಇನ್ನು ಪ್ರಮುಖವಾಗಿ ಈ ಹೊಸ ಪರ್ಫಾಮೆನ್ಸ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ, ಮುಂಭಾಗದಲ್ಲಿ ಡ್ಯುಯಲ್-ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್-ಬ್ರೇಕ್ ಅನ್ನು ನೀಡಲಾಗಿದೆ. ಈ Aprilia RS 660 ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ. ಈ ಹೊಸ Aprilia RS 660 ಮತ್ತು Tuono 660 ಬೈಕ್ ಗಳು ಇದೇ ವರ್ಷದ ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Image Courtsy: APRILIA RIDERS CLUB BENGALURU

Most Read Articles

Kannada
English summary
New aprilia rs 660 bike start reaching dealerships launch soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X