ಅನಾವರಣವಾಯ್ತು ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಎಪ್ರಿಲಿಯಾ ತನ್ನ ಹೊಸ ಟುವಾರೆಗ್ 660 ಅಡ್ವೆಂಚರ್ ಬೈಕನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಾಗಿ ಅನಾವರಾಣಗೊಳಿಸಿದೆ. ಈ ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕ್ ಈ ವರ್ಷದ ಕೊನೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಯಾಗಲಿದೆ.

ಅನಾವರಣವಾಯ್ತು ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕ್

ಆದರೆ ಈ ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಇನ್ನು ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕ್ ಮುಂಭಾಗದಲ್ಲಿ ವಿಂಡ್‌ಸ್ಕ್ರೀನ್, ಟುವರೆಗ್ ಗ್ರಾಫಿಕ್ಸ್, ಅಂಡರ್‌ಬೆಲ್ಲಿ ಪ್ಯಾನ್, ಸಿಂಗಲ್ ಪೀಸ್ ಫ್ಲಾಟ್ ಸೀಟ್, ಎತ್ತರಿಸಿದ ಎಕ್ಸಾಸ್ಟ್ ಮತ್ತು ಕ್ರಾಸ್-ಸ್ಪೋಕ್ ವ್ಹೀಲ್‌ಗಳೊಂದಿಗೆ ಟ್ಯಾಂಕ್ ವಿಸ್ತರಣೆಗಳೊಂದಿಗೆ ಬರುತ್ತದೆ.

ಅನಾವರಣವಾಯ್ತು ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕ್

ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಡೇಟೈಮ್ ರನ್ನಿಂಗ್ ಎಲ್‌ಇಡಿ, ಐದು ಇಂಚಿನ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರಲ್ಲಿ ಹಲವಾರು ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಅನಾವರಣವಾಯ್ತು ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕ್

ಇನ್ನು ಈ ಹೊಸ ಅಡ್ವೆಂಚರ್ ಬೈಕಿನಲ್ಲಿ ಸ್ವಿಚ್ ಮಾಡಬಹುದಾದ ಎಬಿಎಸ್, ನಾಲ್ಕು ರೈಡಿಂಗ್ ಮೋಡ್‌ಗಳು ಮತ್ತು ಎಪಿಆರ್‌ಸಿ ಸೂಟ್‌ನಂತಹ ಎಡ್‌ಆರ್‌ಎಚ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಸಿಸ್ಟಂನಂತಹ ಹಲವು ಫೀಚರ್ಸ್ ಗಳನ್ನು ಕೂಡ ಒಳಗೊಂಡಿದೆ.

ಅನಾವರಣವಾಯ್ತು ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕ್

ಈ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕಿನಲ್ಲಿ 660ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಎಪ್ರಿಲಿಯಾ ಆರ್‍ಎಸ್ 660 ಮತ್ತು ಟುವೊನೊ 660 ಬೈಕುಗಳಲ್ಲಿಂದ ಎರವಲು ಪಡೆಯಲಾಗಿದೆ.

ಅನಾವರಣವಾಯ್ತು ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕ್

ಈ 660ಸಿಸಿ ಎಂಜಿನ್ 78.9 ಬಿಹೆಚ್‍ಪಿ ಪವರ್ ಮತ್ತು 70 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಟುವಾರೆಗ್ 660 ಮುಂಭಾಗದಲ್ಲಿ 21 ಇಂಚಿನ ರಿಮ್ ಮತ್ತು ಹಿಂಭಾಗದಲ್ಲಿ 18 ಇಂಚಿನ ರಿಮ್ ಅನ್ನು ಅಳವಡಿಸಲಾಗಿದೆ. ಇವುಗಳು ಡ್ಯುಯಲ್-ಸ್ಪೋರ್ಟ್ ಟೈರ್‌ಗಳಲ್ಲಿ ಸುತ್ತುವ ಕ್ರಾಸ್-ಸ್ಪೋಕ್ ವ್ಹಿಲ್ ಗಳಾಗಿವೆ,

ಅನಾವರಣವಾಯ್ತು ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕ್

ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 43 ಎಂಎಂ ವಿಲೋಮ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಲಿಂಕ್ ಮೊನೊ ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕ್

ಇನ್ನು ಈ ಅಡ್ವೆಂಚರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಬ್ರೆಂಬೊ ಕ್ಯಾಲಿಪರ್‌ಗಳ ಸಿಂಗಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಎಬಿಸ್ ಅನ್ನು ಕೂಡ ನೀಡಲಾಗಿದೆ.

ಅನಾವರಣವಾಯ್ತು ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕ್

ಹೊಸ ಎಪ್ರಿಲಿಯಾ ಟುವಾರೆಗ್ 660 ಅಡ್ವೆಂಚರ್ ಬೈಕಿನ ಸೀಟ್ ಎತ್ತರವು 860 ಎಂಎಂಗಿಂತ ಕಡಿಮೆಯಿದ್ದರೆ, ತೂಕವು 187 ಕೆಜಿ ಹೊಂದಿದೆ. ಈ ಹೊಸ ಅಡ್ವೆಂಚರ್ ಬೈಕ್ ಆಕರ್ಷಕ ಮತ್ತು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಅಡ್ವಂಚರ್ ಬೈಕ್ ಈ ವರ್ಷದ ಕೊನೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡಬಹುದು.

Most Read Articles

Kannada
English summary
Aprilia Tuareg 660 Revealed Read In Kannada.
Story first published: Monday, August 2, 2021, 19:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X