ಭಾರತದಲ್ಲಿ ಬಿಡುಗಡೆಯಾಗಲಿದೆ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕ್

ಜನಪ್ರಿಯ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾದ ಬಜಾಜ್ ತನ್ನ ಪಲ್ಸರ್ 180 ರೋಡ್‌ಸ್ಟರ್ ಆಟೋ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಮೂಲಕ ಬಜಾಜ್ ಆಟೋ ಭಾರತದಲ್ಲಿ ತನ್ನ ದ್ವಿಚಕ್ರ ವಾಹನದ ಪೋರ್ಟ್ಫೋಲಿಯೊವನ್ನು ವಿಸ್ತರಿಸಲಿದೆ.

ಭಾರತದಲ್ಲಿ ಬಿಡುಗಡಯಾಗಲಿದೆ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕ್

ಹೊಸ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕ್ 150-200 ಸಿಸಿ ವಿಭಾಗದಲ್ಲಿ ಸೆಮಿ-ಫೇರ್ಡ್ ಪಲ್ಸರ್ 180ಎಫ್ ನಿಯಾನ್ ಮದರಿಯೊಂದಿಗೆ ಸೇರ್ಪಡೆಗೊಳ್ಳಲಿದ್ದು, ಹೊಸ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ಸರಿಸುಮಾರು ರೂ.1.5 ಲಕ್ಷಗಳಾಗಿರಬಹುದು. ಆದರೆ ಕಂಪನಿಯು ಪಲ್ಸರ್ 180 ರೋಡ್‌ಸ್ಟರ್ ಬೈಕಿನ ಬಿಡುಗಡೆಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

ಭಾರತದಲ್ಲಿ ಬಿಡುಗಡಯಾಗಲಿದೆ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ನೇಕೆಡ್ ಲುಕ್ ಅನ್ನು ಹೊಂದಿರುತ್ತದೆ. ಇದು ಹೆಚ್ಚಾಗಿ ಪಲ್ಸರ್ 125 ಮತ್ತು ಪಲ್ಸರ್ 150 ಸರಣಿಯನ್ನು ಹೋಲುತ್ತದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಭಾರತದಲ್ಲಿ ಬಿಡುಗಡಯಾಗಲಿದೆ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕ್

ಹೊಸ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಟ್ವಿನ್ ಡಿಆರ್‌ಎಲ್‌ಗಳು, ಬಿಕಿನಿ ಫೇರಿಂಗ್, ಟಿಂಟೆಡ್ ವಿಸರ್, ಮಸ್ಕ್ಲರ್ ಫ್ಯೂಯಲ್ ಟ್ಯಾಂಕ್, ಎಂಜಿನ್ ಕೌಲ್, ಸ್ಪ್ಲಿಟ್-ಸ್ಟೈಲ್ ಸೀಟುಗಳು ಮತ್ತು ಸ್ಪೋರ್ಟಿ ಪಿಲಿಯನ್ ಗ್ರ್ಯಾಬ್ ರೈಲ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡಯಾಗಲಿದೆ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕ್

ಇನ್ನು ಹೊಸ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ರಿಯರ್ ಸ್ಪ್ರಿಂಗ್‌ಗಳನ್ನು ಹೊಂದಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಭಾರತದಲ್ಲಿ ಬಿಡುಗಡಯಾಗಲಿದೆ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕ್

ಪ್ರಮುಖವಾಗಿ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಕೂಡ ನೀಡಿದೆ.

ಭಾರತದಲ್ಲಿ ಬಿಡುಗಡಯಾಗಲಿದೆ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕ್

ಹೊಸ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕ್ 178.6 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 16.6 ಬಿಹೆಚ್‌ಪಿ ಪವರ್ ಮತ್ತು 14.52 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಬಿಡುಗಡಯಾಗಲಿದೆ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕ್

ಆದರೆ ಬಜಾಜ್ ಆಟೋ ಕಂಪನಿಯು ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕ್ ಭಾರತದಲ್ಲಿ ಬಿಡುಗಡೆಗೊಳಿಸುವ ದಿನಾಂಕದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ಹೊಸ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕ್ ಇದೇ ವರ್ಷ ಭಾರತದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡಯಾಗಲಿದೆ ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಬೈಕ್

ಇನ್ನು ಬಜಾಜ್ ಪಲ್ಸರ್ 180 ರೋಡ್‌ಸ್ಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಹಾರ್ನೆಟ್ 2.0, ಟಿವಿಎಸ್ ಅಪಾಚೆ ಆರ್‌ಟಿಆರ್ 160, ಮತ್ತು ಸುಜುಕಿ ಜಿಕ್ಸರ್ 155ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Bajaj Pulsar 180 Naked Roadster To Be Launched Soon In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X