ಎಸ್1 ಮತ್ತು ಎಸ್1 ಪ್ರೊ ನಂತರ ಮತ್ತೊಂದು ಬಜೆಟ್ ಇವಿ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಓಲಾ

ಓಲಾ ಎಲೆಕ್ಟ್ರಿಕ್ ಕಂಪನಿಯು ಎಸ್1 ಮತ್ತು ಎಸ್1 ಪ್ರೊ ಮಾದರಿಗಳ ಬಿಡುಗಡೆಯೊಂದಿಗೆ ಇವಿ ವಾಹನ ಮಾರಾಟದಲ್ಲಿ ಹಲವು ಹೊಸ ದಾಖಲೆಗಳಿಗೆ ಕಾರಣವಾಗಿದ್ದು, ಕಂಪನಿಯು ಶೀಘ್ರದಲ್ಲೇ ಮತ್ತೊಂದು ಬಜೆಟ್ ಬೆಲೆಯ ಇವಿ ಸ್ಕೂಟರ್ ಮತ್ತು ಮೋಟಾರ್‌ಸೈಕಲ್ ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಎಸ್1 ಮತ್ತು ಎಸ್1 ಪ್ರೊ ನಂತರ ಮತ್ತೊಂದು ಬಜೆಟ್ ಇವಿ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಓಲಾ

ಭಾರತದಲ್ಲಿ ಸದ್ಯ ಹೊಸದಾಗಿ ಬಿಡುಗಡೆಯಾಗಿರುವ ಓಲಾ ಹೊಸ ಎಸ್1 ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ರೂ. 1,29,999 ಬೆಲೆ ಹೊಂದಿದ್ದು, ಎಸ್1 ಮತ್ತು ಎಸ್1 ಪ್ರೊ ಮಾದರಿಗಳಿಂತಲೂ ಕಡಿಮೆ ಬೆಲೆಯ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

ಎಸ್1 ಮತ್ತು ಎಸ್1 ಪ್ರೊ ನಂತರ ಮತ್ತೊಂದು ಬಜೆಟ್ ಇವಿ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಓಲಾ

ಹೊಸ ಇವಿ ದ್ವಿಚಕ್ರ ವಾಹನಗಳ ಬಿಡುಗಡೆಯ ಕುರಿತಾಗಿ ಟ್ವಿಟರ್ ಮೂಲಕ ಖಚಿತಪಡಿಸಿರುವ ಓಲಾ ಸಿಇಓ ಭಾವೀಶ್ ಅಗರವಾಲ್ ಅವರು ಹೊಸ ಬಜೆಟ್ ಇವಿ ಮಾದರಿಗಳನ್ನು 2022ರಲ್ಲಿ ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದ್ದಾರೆ.

ಎಸ್1 ಮತ್ತು ಎಸ್1 ಪ್ರೊ ನಂತರ ಮತ್ತೊಂದು ಬಜೆಟ್ ಇವಿ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಓಲಾ

ಬಜೆಟ್ ಬೆಲೆಯ ಇವಿ ದ್ವಿಚಕ್ರಗಳ ಬಿಡುಗಡೆಯ ಖಚಿತತೆಯ ಹೊರತಾಗಿ ಹೊಸ ಇವಿ ಸ್ಕೂಟರ್‌ಗಳ ತಾಂತ್ರಿಕ ಅಂಶಗಳ ಬಗೆಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಮಾಹಿತಿಗಳ ಪ್ರಕಾರ ಹೊಸ ಇವಿ ಸ್ಕೂಟರ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ 110ಸಿಸಿ ಪೆಟ್ರೋಲ್ ಸ್ಕೂಟರ್ ಬೆಲೆಗಳಿಗೆ ಸಮನಾಗಿರಲಿದೆ ಎನ್ನಲಾಗಿದೆ.

ಎಸ್1 ಮತ್ತು ಎಸ್1 ಪ್ರೊ ನಂತರ ಮತ್ತೊಂದು ಬಜೆಟ್ ಇವಿ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಓಲಾ

ಬಜೆಟ್ ಬೆಲೆಯಲ್ಲಿ ಸಿದ್ದಗೊಳ್ಳುತ್ತಿರುವ ಹೊಸ ಇವಿ ಸ್ಕೂಟರ್ ಮತ್ತು ಬೈಕ್ ಮಾದರಿಗಳು ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಗಳಿಂತಲೂ ತುಸು ಕಡಿಮೆ ಫೀಚರ್ಸ್ ಹೊಂದಿದ್ದರೂ ಮೈಲೇಜ್ ವಿಚಾರದಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿ ಮಾದರಿಗಳಂತಯೇ ಹೊಂದಿದ್ದು, ಮುಂದಿನ ವರ್ಷ ಮಧ್ಯಂತರದಲ್ಲಿ ಹೊಸ ಇವಿ ಸ್ಕೂಟರ್ ಬಿಡುಗಡೆಯ ನೀರಿಕ್ಷೆಯಿದೆ.

ಎಸ್1 ಮತ್ತು ಎಸ್1 ಪ್ರೊ ನಂತರ ಮತ್ತೊಂದು ಬಜೆಟ್ ಇವಿ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಓಲಾ

ಸದ್ಯ ಬಿಡುಗಡೆ ಮಾಡಲಾಗಿರುವ ಎಸ್1 ಮತ್ತು ಎಸ್1 ಪ್ರೊ ಮಾದರಿಗಳ ವಿತರಣೆ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತಿರುವ ಓಲಾ ಕಂಪನಿಯು ಇವಿ ವಾಹನ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಓಲಾ ಹೊಸ ಇವಿ ಸ್ಕೂಟರ್‌ಗಳ ಖರೀದಿಗಾಗಿ ದೇಶಾದ್ಯಂತ ಪ್ರಮುಖ ನಗರಗಳಿಂದ ಸುಮಾರು 1.50 ಲಕ್ಷಕ್ಕೂ ಅಧಿಕ ಗ್ರಾಹಕರು ಬುಕ್ಕಿಂಗ್ ದಾಖಲಿಸಿದೆ.

ಎಸ್1 ಮತ್ತು ಎಸ್1 ಪ್ರೊ ನಂತರ ಮತ್ತೊಂದು ಬಜೆಟ್ ಇವಿ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಓಲಾ

ಓಲಾ ಕಂಪನಿಯು ಹೊಸ ಇವಿ ಸ್ಕೂಟರ್ ಖರೀದಿ ಪ್ರಕ್ರಿಯೆಗಾಗಿ ಶೋರೂಂಗಳ ಬದಲಾಗಿ ಸಂಪೂರ್ಣವಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸ್ಕೂಟರ್ ಖರೀದಿ ಪ್ರಕ್ರಿಯೆ ಪ್ರಕ್ರಿಯೆ, ವಿತರಣೆ ಮತ್ತು ಮಾರಾಟ ನಂತರದ ಗ್ರಾಹಕರ ಸೇವೆಗಳು ಸಹ ಮನೆ ಬಾಗಿಲಿಗೆ ಒದಗಿಸುವ ಭರವಸೆ ನೀಡಿದೆ.

ಎಸ್1 ಮತ್ತು ಎಸ್1 ಪ್ರೊ ನಂತರ ಮತ್ತೊಂದು ಬಜೆಟ್ ಇವಿ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಓಲಾ

ಓಲಾ ಸ್ಕೂಟರ್‌ಗಳ ತಾಂತ್ರಿಕ ಸೌಲಭ್ಯಗಳ ಬಗೆಗೆ ಹೇಳುವುದಾದರೆ ಆರಂಭಿಕ ಮಾದರಿಯಾದ ಎಸ್1 ವೆರಿಯೆಂಟ್‌‌ನಲ್ಲಿ 2.98kWh ಮತ್ತು ಎಸ್1 ಪ್ರೊ ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ ಎಸ್1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಎಸ್1 ಮತ್ತು ಎಸ್1 ಪ್ರೊ ನಂತರ ಮತ್ತೊಂದು ಬಜೆಟ್ ಇವಿ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಓಲಾ

ಎಸ್1 ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ಪ್ರತಿ ಗಂಟೆಗೆ 115ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದು, ಎಸ್1 ಮಾದರಿಯಲ್ಲಿ ನಾರ್ಮಲ್ ಮತ್ತು ಸ್ಪೋರ್ಟ್ ರೈಡ್ ಮೋಡ್‌ಗಳಿದ್ದರೆ ಎಸ್1 ಪ್ರೊ ಮಾದರಿಯಲ್ಲಿ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಎಸ್1 ಮತ್ತು ಎಸ್1 ಪ್ರೊ ನಂತರ ಮತ್ತೊಂದು ಬಜೆಟ್ ಇವಿ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಓಲಾ

ಹಾಗೆಯೇ ಓಲಾ ಇವಿ ಸ್ಕೂಟರ್‌ಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ಎಸ್1 ಮತ್ತು ಎಸ್1 ಪ್ರೊ ನಂತರ ಮತ್ತೊಂದು ಬಜೆಟ್ ಇವಿ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಓಲಾ

ಹೊಸ ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಹೈಟ್, 125 ಕೆ.ಜಿ ತೂಕ ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿವೆ.

ಎಸ್1 ಮತ್ತು ಎಸ್1 ಪ್ರೊ ನಂತರ ಮತ್ತೊಂದು ಬಜೆಟ್ ಇವಿ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಓಲಾ

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

ಎಸ್1 ಮತ್ತು ಎಸ್1 ಪ್ರೊ ನಂತರ ಮತ್ತೊಂದು ಬಜೆಟ್ ಇವಿ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಓಲಾ

ಇದರೊಂದಿಗೆ ಓಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕುರಿತಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಉಪಯಕ್ತ ಮಾಹಿತಿಯುಳ್ಳ Ola Electric App ಅಭಿವೃದ್ದಿಪಡಿಸಿದ್ದು, ಹೊಸ ಆ್ಯಪ್ ಮೂಲಕ ವಾಹನ ಖರೀದಿ, ವಿತರಣೆ, ಗ್ರಾಹಕ ಸೇವೆ, ಇನ್ಸುರೆನ್ಸ್, ಮೌಲ್ಯ ವರ್ಧಿತ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

Most Read Articles

Kannada
English summary
Ola electric confirms new ev motorcycle and cheaper scooter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X