ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

Ola Electric ಕಂಪನಿಯು ತನ್ನ ಬಹುನೀರಿಕ್ಷಿತ S1 ಮತ್ತು S1 Pro ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ವಿತರಣೆಗೆ ಸಿದ್ದಗೊಳ್ಳುತ್ತಿದ್ದು, ಹೊಸ ಸ್ಕೂಟರ್‌ ಮಾರಾಟ ನಂತರ ಗ್ರಾಹಕರ ಸೇವೆಗಳ ಕುರಿತಾದ ಪ್ರಶ್ನೆಗಳಿಗೆ ಇದೀಗ ಸ್ಪಷ್ಟನೆ ನೀಡಿದೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಬದಲಾವಣೆ ತರಲು ತರಲು ಸಿದ್ದವಾಗಿರುವ Ola Electric ಕಂಪನಿಯು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಏಕಕಾಲಕ್ಕೆ ವಾಹನ ವಿತರಣೆಯನ್ನು ಆರಂಭಿಸುತ್ತಿದ್ದು, ವಾಹನ ಖರೀದಿಗಾಗಿ ಶೋರೂಂಗಳ ಬದಲಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

ಗ್ರಾಹಕರೊಂದಿಗೆ ಕನಿಷ್ಠ ಭೇಟಿ ಮೂಲಕ ವಾಹನ ಖರೀದಿ ಪ್ರಕ್ರಿಯೆಗೆ ಸಿದ್ದವಾಗಿರುವ Ola Electric ಕಂಪನಿಯು ಹೊಸ ಇವಿ ಸ್ಕೂಟರ್‌ಗಳನ್ನು ನೇರವಾಗಿ ಗ್ರಾಹಕರ ಮನೆಬಾಗಿಲಿಗೆ ತಲುಪಿಸಲಿದ್ದು, ಸ್ಕೂಟರ್ ಮಾರಾಟ ನಂತರ ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ಒದಗಿಸುವಾಗಿ ಹೇಳಿಕೊಂಡಿದೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

ಹೊಸ ಸ್ಕೂಟರ್‌ಗಳ ವಿಕ್ಷಣೆಗಾಗಿ ಮತ್ತು ಟೆಸ್ಟ್ ರೈಡ್ ಮಾಡಲು ವಿವಿಧ ನಗರಗಳಲ್ಲಿ ಎಕ್ಸ್‌ಪಿರೆನ್ಸ್ ಸೆಂಟರ್‌ಗಳನ್ನು ತೆರೆಯಲಿದ್ದು, ಇಲ್ಲಿ ವಾಹನಗಳ ವೀಕ್ಷಣೆ, ಮಾಹಿತಿ ಸಂಗ್ರಹ ಮತ್ತು ಟೆಸ್ಟ್ ರೈಡ್‌ಗಳಿಗೆ ಮಾತ್ರ ಅವಕಾಶವಿರಲಿದೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

ಎಕ್ಸ್‌ಪಿರೆನ್ಸ್ ಸೆಂಟರ್‌ಗಳಲ್ಲಿ ವಾಹನ ವೀಕ್ಷಣೆ ಮಾಡಿದ ನಂತರ ನಿಮಗೆ ವಾಹನ ಇಷ್ಟವಾದಲ್ಲಿ ಮುಂದಿನ ಖರೀದಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಪ್ಲ್ಯಾಟ್ ಮೂಲಕವೇ ನಡೆಯಲಿದೆ. ಜೊತೆಗೆ ವಾಹನ ವಿತರಣೆ ಕೂಡಾ ಮನೆ ಬಾಗಿಲಿಗೆ ತಲುಪಿಸಲಿದ್ದು, ಗ್ರಾಹಕರ ಸೇವೆಗಳನ್ನು ಸಹ ಗ್ರಾಹಕರ ಬೇಡಿಕೆಯೆಂತೆ ಮನೆಬಾಗಿಲಿಗೆ ಒದಗಿಸಲಿದ್ದಾರೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

ವಾಹನ ವಿತರಣೆಯು ಮನೆ ಬಾಗಿಲಿಗೆ ಒದಗಿಸುವುದು ಸುಲಭವಾಗಿದ್ದರೂ ಗ್ರಾಹಕರ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸುವುದು ಒಂದು ಸವಾಲಾಗಿದ್ದು, ಇದಕ್ಕಾಗಿ Ola Electric ಬೃಹತ್ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ಗ್ರಾಹಕರ ಸೇವೆಗಳ ಅವಧಿಗಿಂತಲೂ ಕಡಿಮೆ ಅವಧಿಯಲ್ಲಿ ಮನೆಬಾಗಿಲಿಗೆ ಸೇವೆಗಳನ್ನು ಒದಗಿಸುವುದಾಗಿ ಭರವಸೆ ನೀಡಿರುವ Ola Electric ಕಂಪನಿಯು ಗ್ರಾಹಕ ಸೇವೆಗಾಗಿ ಪ್ರತ್ಯೇಕ ಆ್ಯಪ್ ಅಭಿವೃದ್ದಿಪಡಿಸಿದೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

ಆ್ಯಪ್ ಮೂಲಕ ಗ್ರಾಹಕರು ಸೇವೆಗಳ ಮಾಹಿತಿಗಳನ್ನು ನಮೂದಿಸುವ ಮೂಲಕ ಸ್ಥಳ ಗುರುತಿಸಿದರೆ ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಸೇವೆಗಳು ದೊರೆಯಲಿದ್ದು, ಸಣ್ಣಪುಟ್ಟ ತಾಂತ್ರಿಕ ಸೇವೆಗಳಿದ್ದಲ್ಲಿ ಮನೆಬಾಗಿಲ ಬಳಿಯಲ್ಲಿಯೇ ಸೇವೆ ಪೂರೈಸಲಿದೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

ಒಂದು ವೇಳೆ ಹೆಚ್ಚುವರಿ ತಾಂತ್ರಿಕ ಅಂಶಗಳ ಸೇವೆಗಳ ಅವಶ್ಯವಿದ್ದಲ್ಲಿಎಕ್ಸ್‌ಪಿರೆನ್ಸ್ ಸೆಂಟರ್‌ಗಳಿಗೆ ತೆಗೆದುಕೊಂಡು ಹೋಗಲಿರುವ ಸೇವಾ ಕೇಂದ್ರದ ಪ್ರತಿನಿಧಿಗಳು ನಿದಗಿತ ಅವಧಿಯಲ್ಲಿ ನಿಮ್ಮ ವಾಹನದ ಸೇವೆಗಳನ್ನು ಪೂರ್ಣಗೊಳಿಸಲಿದ್ದಾರೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

ಸೇವಾ ಪ್ರತಿನಿಧಿಗಳನ್ನು Ola ಕಂಪನಿಯು Ola ಚಾಂಪಿಯನ್ ಎಂದು ಕರೆಯಲಿದ್ದು, ಆ್ಯಪ್ ಮೂಲಕ ಗ್ರಾಹಕರು ತಮ್ಮ ಸ್ಕೂಟರ್ ಸರ್ವಿಸ್ ಸ್ಟೆಟಸ್ ಅನ್ನು ವೀಕ್ಷಣೆ ಮಾಡಬಹುದಾಗಿದೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

ಇನ್ನು Ola ಹೊಸ S1 ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ S1 Pro ಮಾದರಿಯು ರೂ. 1,29,999 ಬೆಲೆ ಹೊಂದಿದ್ದು, ಹೊಸ ಸ್ಕೂಟರ್ ಬೆಲೆಯು ಕೆಲವು ರಾಜ್ಯಗಳಲ್ಲಿ ಹೆಚ್ಚುವರಿ ಸಬ್ಸಡಿ ನೀಡುತ್ತಿರುವ ಹಿನ್ನಲೆಯಲ್ಲಿ ಸಬ್ಸಡಿ ಹೊಂದಿರದ ರಾಜ್ಯಗಳಿಂತೂ ತುಸು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

S1 ವೆರಿಯೆಂಟ್‌ನಲ್ಲಿ ಕಂಪನಿಯು 2.98kWh ಮತ್ತು S1 Pro ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ S1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ S1 Pro ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ನೀಡಲಿದೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

ಎರಡು ಮಾದರಿಗಳಲ್ಲೂ Ola ಕಂಪನಿಯು 750 ವೊಲ್ಟ್ ಆನ್ ಬೋರ್ಡ್ ಚಾರ್ಜರ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಪೂರ್ತಿಯಾಗಿ ಚಾರ್ಜ್ ಮಾಡಲು 6.50 ಗಂಟೆ ಕಾಲಾವಕಾಶ ತೆಗೆದುಕೊಳ್ಳುತ್ತದೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

ಹೊಸ ಸ್ಕೂಟರ್‌ಗಳ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಚಾರ್ಜ್ ಮಾಡಿದರೆ ಕೇವಲ 18 ನಿಮಿಷಗಳಲ್ಲಿ ಶೇ. 50 ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲು ದೇಶಾದ್ಯಂತ ಪ್ರಮುಖ 400 ನಗರಗಳಲ್ಲಿ 1 ಲಕ್ಷ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡುತ್ತಿದೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

Ola Electric ಸ್ಕೂಟರ್‌ಗಳ ಡಿಸೈನ್ ಮತ್ತು ಫೀಚರ್ಸ್ ಬಗೆಗೆ ಹೇಳುವುದಾದರೆ ಅತ್ಯುತ್ತಮ ಡಿಸೈನ್‌ನೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

ಹೊಸ ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಹೈಟ್, 125 ಕೆ.ಜಿ ತೂಕ ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿವೆ.

ಗ್ರಾಹಕರ ಸೇವೆಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಲಿದೆ Ola Electric

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

Most Read Articles

Kannada
English summary
Ola electric reveals s1 s1 pro ev scooter service and maintainance plans
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X