Electa ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ One Moto

ಭಾರತದಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ ರೂ. 100ರ ಗಡಿ ದಾಟಿದೆ. ಪೆಟ್ರೋಲ್ ಬೆಲೆ ಏರಿಕೆಯು ವಾಹನ ಸವಾರರನ್ನು ಪರದಾಡುವಂತೆ ಮಾಡಿದೆ. ಪೆಟ್ರೋಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

Electra ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ One Moto

ಭಾರತದಲ್ಲಿ ಸದ್ಯಕ್ಕೆ ಎರಡು ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಮಾತ್ರ ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಮಾರಾಟ ಮಾಡುತ್ತಿವೆ. ಇನ್ನುಳಿದಂತೆ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಮಾರಾಟ ಮಾಡುತ್ತವೆ. ಬ್ರಿಟಿಷ್ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಒನ್ ಮೋಟೋ (One Moto) ಭಾರತದಲ್ಲಿಯೂ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿದೆ.

Electra ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ One Moto

ಒನ್ ಮೋಟೋ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಒನ್ ಮೋಟೋ ಎಲೆಕ್ಟಾ (One Moto Electa) ಎಂಬ ಹೆಸರಿನ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಒನ್ ಮೋಟೋ ಎಲೆಕ್ಟಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರೀಮಿಯಂ ಸ್ಕೂಟರ್ ಸೆಗ್ ಮೆಂಟಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಒನ್ ಮೋಟೋ ಎಲೆಕ್ಟಾ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 2 ಲಕ್ಷಗಳಾಗಿದೆ.

Electra ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ One Moto

ಈ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಕಂಪನಿಯ ಮೂರನೇ ಉತ್ಪನ್ನವಾಗಿದೆ ಎಂಬುದು ಗಮನಾರ್ಹ. ಕಳೆದ ತಿಂಗಳು ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಮ್ಯುಟಾ ಹಾಗೂ ಬೈಕಾ ಎಂಬ ಹೆಸರಿನ ಎರಡು ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿತ್ತು. ಈ ಎರಡು ಸ್ಕೂಟರ್‌ಗಳ ನಂತರ ಎಲೆಕ್ಟಾ ಭಾರತದಲ್ಲಿ ಕಂಪನಿಯ ಮೂರನೇ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಆಗಲಿದೆ.

Electra ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ One Moto

ಈ ಎಲ್ಲಾ ಮೂರು ಎಲೆಕ್ಟ್ರಿಕ್ ಸ್ಕೂಟರ್'ಗಳು ಒನ್ ಮೋಟೋ ಕಂಪನಿಯ ಒನ್ ಅಪ್ಲಿಕೇಶನ್‌ ಹೊಂದಿರಲಿವೆ. ಈ ಅಪ್ಲಿಕೇಶನ್ ಜಿಯೋ ಫೆನ್ಸಿಂಗ್, ಐಒಟಿ ಹಾಗೂಬ್ಲೂಟೂತ್‌ನಂತಹ ಫೀಚರ್ ಗಳನ್ನು ಹೊಂದಿದೆ. ಆದರೆ ಇತರ ಎರಡು ಸ್ಕೂಟರ್‌ಗಳಿಂದ ಎಲೆಕ್ಟ್ರಾವನ್ನು ಪ್ರತ್ಯೇಕಿಸುವ ಫೀಚರ್ ಎಂದರೆ ಈ ಸ್ಕೂಟರಿನಲ್ಲಿರುವ ಬ್ಯಾಟರಿ.

Electra ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ One Moto

ಈ ಸ್ಕೂಟರಿನಲ್ಲಿರುವ 72 ವೋಲ್ಟ್ ಹಾಗೂ 45 ಎ ಡಿಟ್ಯಾಚೇಬಲ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ಕೇವಲ ನಾಲ್ಕು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಸಂಪೂರ್ಣವಾಗಿ ಚಾರ್ಜ್ ಆದ ನಂತರ ಈ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ 150 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ 4 ಕಿ.ವ್ಯಾ ಕ್ಯೂಎಸ್ ಬ್ರಶ್‌ಲೆಸ್ ಡಿಸಿ ಹಬ್ ಮೋಟರ್ ಅನ್ನು ಬಳಸುತ್ತದೆ.

Electra ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ One Moto

ಈ ಮೋಟಾರ್ ಸ್ಕೂಟರ್ ಅನ್ನು 100 ಕಿ.ಮೀ ಗರಿಷ್ಠ ವೇಗದಲ್ಲಿ ಚಲಿಸಲು ನೆರವಾಗುತ್ತದೆ. ಎಲೆಕ್ಟ್ರಾ ಎಲೆಕ್ಟ್ರಿಕ್ ಸ್ಕೂಟರಿನಲ್ಲಿರುವ ಫೀಚರ್ ಗಳ ಬಗ್ಗೆ ಹೇಳುವುದಾದರೆ, ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಅನಲಾಗ್ ಡಿಸ್ಪ್ಲೇಯನ್ನು ಅಳವಡಿಸಿದೆ. ಇದರ ಜೊತೆಗೆ ಹೈಡ್ರಾಲಿಕ್ ಡಿಸ್ಕ್ ಬ್ರೇಕ್‌ ಹಾಗೂ ಐಚ್ಛಿಕ ಕ್ರೋಮ್ ಅಪ್‌ಗ್ರೇಡ್‌ಗಳನ್ನು ಎರಡೂ ವ್ಹೀಲ್ ಗಳಲ್ಲಿ ನೀಡಲಾಗಿದೆ.

Electra ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ One Moto

ಈ ಫೀಚರ್'ಗಳು ಎಲೆಕ್ಟ್ರಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇನ್ನಷ್ಟು ಕ್ಲಾಸಿಕ್ ಹಾಗೂ ಪ್ರೀಮಿಯಂ ಆಗಿ ಮಾಡುತ್ತವೆ. ಒನ್ ಮೋಟೋ ಕಂಪನಿಯು ಎಲೆಕ್ಟಾ ಎಲೆಕ್ಟ್ರಿಕ್ ಸ್ಕೂಟರ್‌ನ ಎಲೆಕ್ಟ್ರಿಕ್ ಮೋಟರ್, ಕನ್ವರ್ಟರ್ ಹಾಗೂ ಬ್ಯಾಟರಿಯ ಮೇಲೆ ಮೂರು ವರ್ಷಗಳ ವಾರಂಟಿಯನ್ನು ನೀಡುತ್ತದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರಿನ ಗಾತ್ರದ ಬಗ್ಗೆ ಹೇಳುವುದಾದರೆ, ಕಂಪನಿಯು ಎಲೆಕ್ಟ್ರಾ ಸ್ಕೂಟರ್ 1,890 ಎಂಎಂ ಉದ್ದ, 720 ಎಂಎಂ ಅಗಲ, 1,090 ಎಂಎಂ ಎತ್ತರ ಹಾಗೂ 1,390 ಎಂಎಂ ವ್ಹೀಲ್‌ಬೇಸ್ ಹೊಂದಿದೆ.

Electra ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ One Moto

ಒನ್ ಮೋಟೋ ಎಲೆಕ್ಟಾ ಎಲೆಕ್ಟ್ರಿಕ್ ಸ್ಕೂಟರ್ ಒಟ್ಟು 115 ಕೆ.ಜಿ ತೂಕವನ್ನು ಹೊಂದಿದ್ದು, 150 ಕೆ.ಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮ್ಯಾಟ್ ಬ್ಲಾಕ್, ಶೈನಿ ಬ್ಲಾಕ್, ಬ್ಲೂ, ರೆಡ್ ಹಾಗೂ ಗ್ರೇ ಎಂಬ ಒಟ್ಟು ಐದು ಬಣ್ಣಗಳಲ್ಲಿ ಮಾರಾಟ ಮಾಡಲಿದೆ. ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಹೊಸ ವಾಹನ ತಯಾರಕ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

Electra ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ One Moto

ಒನ್ ಮೋಟೋ ಕಂಪನಿಯು ಈ ಅವಕಾಶಗಳನ್ನು ಹೆಚ್ಚು ಬಳಸಿಕೊಳ್ಳಲು ಮುಂದಾಗುತ್ತಿದೆ. ಒನ್ ಮೋಟೋ ಇಂಡಿಯಾ ಕಂಪನಿಯ ಸಿಇಒ ಶುಭಂಕರ್ ಚೌಧರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದನ್ನು ವೇಗಗೊಳಿಸಲು ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವತ್ತ ನಾವು ಗಮನಹರಿಸಿದ್ದೇವೆ.

Electra ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ One Moto

ನಮ್ಮ ದೃಷ್ಟಿಯು ಹೆಚ್ಚಿನ ವೇಗದ, ಗುಣಮಟ್ಟದ ಪ್ರೀಮಿಯಂ ಉತ್ಪನ್ನಗಳನ್ನು ಬಿಡುಗಡೆ ಮಾಡುವುದು. ಪ್ರಮುಖ ಮೆಟ್ರೋ ನಗರಗಳಿಂದ ನಮ್ಮ ವಾಹನ ವಿತರಣೆಯನ್ನು ಆರಂಭಿಸಲಾಗುವುದು. ನಾವು ನಮ್ಮ ಸ್ಕೂಟರ್‌ಗಳೊಂದಿಗೆ ಭಾರತೀಯ ಗ್ರಾಹಕರಿಗೆ ಸೇವೆ ಸಲ್ಲಿಸಲು ಬಯಸುತ್ತೇವೆ. ಪೆಟ್ರೋಲ್ ಎಂಜಿನ್ ವಾಹನಗಳನ್ನು ಚಾಲನೆ ಮಾಡುವಾಗ ಅವರಿಗೆ ಸಂಪೂರ್ಣ ಅನುಭವವನ್ನು ಒದಗಿಸಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

Electra ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ One Moto

ಒನ್ ಮೋಟೋ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿರುವ ಬೈಕಾ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.80 ಲಕ್ಷಗಳಾದರೆ, ಕಮ್ಯುಟಾ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.30 ಲಕ್ಷಗಳಾಗಿದೆ. ಭಾರತದಲ್ಲಿ ಪೆಟ್ರೋಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್'ಗಳ ಮಾರಾಟವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
One moto launches electra electric scooter in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X