ಹೊಸ ದ್ವಿಚಕ್ರ ವಾಹನಗಳು ಕಿಲ್ ಸ್ವಿಚ್ ಹೊಂದಿರಲು ಕಾರಣಗಳಿವು

ಭಾರತದಲ್ಲಿ ದ್ವಿಚಕ್ರ ವಾಹನಗಳು ನಾಲ್ಕು ಚಕ್ರ ವಾಹನಗಳಿಗಿಂತ ಹೆಚ್ಚು ಜನಪ್ರಿಯವಾಗಿವೆ. ಭಾರತದ ಯುವ ಜನರು ಕಾರಿನಲ್ಲಿ ಪ್ರಯಾಣಿಸುವುದಕ್ಕಿಂತ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಲು ಬಯಸುತ್ತಾರೆ. ಹಲವರಿಗೆ ಕಾರುಗಳ ಬಗ್ಗೆ ಕ್ರೇಜ್ ಇರುವುದು ನಿಜವಾದರೂ ಜಾಲಿ ರೈಡ್ ಮಾಡಲು ಬಯಸುವವರು ದ್ವಿಚಕ್ರ ವಾಹನಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಹೊಸ ದ್ವಿಚಕ್ರ ವಾಹನಗಳು ಕಿಲ್ ಸ್ವಿಚ್ ಹೊಂದಿರಲು ಕಾರಣಗಳಿವು

ದ್ವಿಚಕ್ರ ವಾಹನಗಳು ಚಿಕ್ಕ ಚಿಕ್ಕ ರಸ್ತೆಗಳಲ್ಲಿ ಸುಲಭವಾಗಿ ಸಾಗಲು ಹಾಗೂ ನಿಗದಿತ ಸಮಯಕ್ಕೆ ತಲುಪಲು ನೆರವಾಗುತ್ತವೆ. ಇದೇ ವೇಳೆ ದ್ವಿಚಕ್ರ ವಾಹನಗಳಲ್ಲಿ ಸ್ಟಂಟ್ ಮಾಡುವಂತಹ ಘಟನೆಗಳು ನಡೆಯುತ್ತಿವೆ. ಇದು ಕಾನೂನಿನ ಪ್ರಕಾರ ಅಪರಾಧ. ದ್ವಿಚಕ್ರ ವಾಹನಗಳು ಭಾರತದ ಸಂಚಾರ ದಟ್ಟಣೆಗೆ ಸೂಕ್ತ ವಾಹನವಾಗಿವೆ. ಈ ಕಾರಣಕ್ಕಾಗಿಯೇ ಅನೇಕ ಭಾರತೀಯರು ದ್ವಿಚಕ್ರ ವಾಹನಗಳ ಖರೀದಿಗೆ ಆದ್ಯತೆ ನೀಡುತ್ತಾರೆ.

ಹೊಸ ದ್ವಿಚಕ್ರ ವಾಹನಗಳು ಕಿಲ್ ಸ್ವಿಚ್ ಹೊಂದಿರಲು ಕಾರಣಗಳಿವು

ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು, ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಹೊಸ ಹೊಸ ತಂತ್ರಜ್ಞಾನಗಳನ್ನು ದ್ವಿಚಕ್ರ ವಾಹನಗಳಲ್ಲಿ ಪರಿಚಯಿಸುತ್ತಿವೆ. ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ದ್ವಿಚಕ್ರ ವಾಹನಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ನ್ಯಾವಿಗೇಷನ್ ನಂತಹ ವಿವಿಧ ತಂತ್ರಜ್ಞಾನಗಳನ್ನು ನೀಡಲಾಗುತ್ತಿದೆ. ಇವುಗಳ ಜೊತೆಗೆ ನೀಡಲಾಗುತ್ತಿರುವ ಮತ್ತೊಂದು ವಿಶೇಷ ಫೀಚರ್ ಎಂದರೆ ಕಿಲ್ ಸ್ವಿಚ್.

ಹೊಸ ದ್ವಿಚಕ್ರ ವಾಹನಗಳು ಕಿಲ್ ಸ್ವಿಚ್ ಹೊಂದಿರಲು ಕಾರಣಗಳಿವು

ವಾಹನ ಸವಾರರು ಎಂಜಿನ್ ಆಫ್ ಮಾಡಲು ಈ ಸ್ವಿಚ್ ಬಳಸುತ್ತಾರೆ. ಈ ಸ್ವಿಚ್ ಟ್ಯಾಪ್ ಮಾಡಿದ ನಂತರ ಎಂಜಿನ್ ಆಫ್ ಆಗುತ್ತದೆ. ಈ ಮೂಲಕ ಕಿಲ್ ಸ್ವಿಚ್ ಸರಳವಾಗಿ ಹಾಗೂ ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತದೆ. ಈ ರೀತಿ ಎಂಜಿನ್ ಆಫ್ ಮಾಡುವುದರಿಂದ ದ್ವಿಚಕ್ರ ವಾಹನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ಗಮನಾರ್ಹ. ಸವಾರರು ಕೀ ಬಳಸಿ ದ್ವಿಚಕ್ರ ವಾಹನದ ಎಂಜಿನ್ ಆಫ್ ಮಾಡುವ ಬದಲು ಕಿಲ್ ಸ್ವಿಚ್ ಮೂಲಕವೇ ಎಂಜಿನ್ ಆಫ್ ಮಾಡಬಹುದು.

ಹೊಸ ದ್ವಿಚಕ್ರ ವಾಹನಗಳು ಕಿಲ್ ಸ್ವಿಚ್ ಹೊಂದಿರಲು ಕಾರಣಗಳಿವು

ಕೀ ಗಳನ್ನು ನಿರಂತರವಾಗಿ ಬಳಸುವುದರಿಂದ ಕೀ ಸೆಟ್ ಸಮಸ್ಯೆ ಉಂಟಾಗಬಹುದು. ಸವಕಳಿಯಿಂದಾಗಿ ಕೀ ಸೆಟ್ ಬೇಗ ನಿಷ್ಕ್ರಿಯವಾಗುವ ಸಾಧ್ಯತೆಗಳಿರುತ್ತವೆ. ಅವುಗಳನ್ನು ಬದಲಿಸಲು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಈ ತೊಂದರೆಯನ್ನು ತಪ್ಪಿಸಲು ಎಂಜಿನ್ ಅನ್ನು ಆಫ್ ಮಾಡಲು ಕಿಲ್ ಸ್ವಿಚ್ ನೀಡಲಾಗಿದೆ. ಇದೇ ವೇಳೆ ಬೈಕ್ ಚಾಲನೆಯಲ್ಲಿರುವಾಗ ಕಿಲ್ ಸ್ವಿಚ್ ಬಳಸದಂತೆ ಬೈಕ್ ತಯಾರಕ ಕಂಪನಿಗಳು ಶಿಫಾರಸು ಮಾಡುತ್ತವೆ.

ಹೊಸ ದ್ವಿಚಕ್ರ ವಾಹನಗಳು ಕಿಲ್ ಸ್ವಿಚ್ ಹೊಂದಿರಲು ಕಾರಣಗಳಿವು

ಬೈಕ್ ಚಾಲನೆಯಲ್ಲಿರುವಾಗ ಕಿಲ್ ಸ್ವಿಚ್ ಬಳಸುವುದರಿಂದ ಹಲವು ಸಮಸ್ಯೆಗಳು ಉಂಟಾಗುತ್ತವೆ. ಸಿಗ್ನಲ್ ನಲ್ಲಿ ನಿಂತಿರುವಾಗ ಹಾಗೂ ಅನಗತ್ಯ ಸಮಯದಲ್ಲಿ ಎಂಜಿನ್ ಆಫ್ ಮಾಡಲು ಕಿಲ್ ಸ್ವಿಚ್ ಬಳಸಬಹುದು ಎಂದು ಹೇಳಲಾಗಿದೆ. ಕಿಲ್ ಸ್ವಿಚ್ ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಅನ್ನು ಇತ್ತೀಚಿಗೆ ದೇಶಿಯ ದ್ವಿಚಕ್ರ ವಾಹನ ಮಾರುಕಟ್ಟೆ ಬಿಡುಗಡೆಯಾಗುತ್ತಿರುವ ಹಲವು ವಾಹನಗಳಲ್ಲಿ ನೀಡಲಾಗುತ್ತಿದೆ.

ಹೊಸ ದ್ವಿಚಕ್ರ ವಾಹನಗಳು ಕಿಲ್ ಸ್ವಿಚ್ ಹೊಂದಿರಲು ಕಾರಣಗಳಿವು

ಈ ಫೀಚರ್ ಅನ್ನು ಕೆಲವು ವರ್ಷಗಳ ಹಿಂದಷ್ಟೇ ಪರಿಚಯಿಸಲಾಗಿತ್ತು. ಮೊದಲು ಈ ಫೀಚರ್ ಅನ್ನು ಕೆಲವೇ ಕೆಲವು ಬೈಕ್ ಹಾಗೂ ಸ್ಕೂಟರ್‌ಗಳಲ್ಲಿ ಮಾತ್ರ ನೀಡಲಾಗುತ್ತಿತ್ತು. ಆದರೆ ಈಗ ಈ ಫೀಚರ್ ಅನ್ನು ಹೀರೋ ಮೊಟೊಕಾರ್ಪ್, ಟಿವಿಎಸ್, ಯಮಹಾ, ಸುಜುಕಿಯಂತಹ ಕಂಪನಿಗಳ ಬೈಕ್ ಹಾಗೂ ಸ್ಕೂಟರ್‌ಗಳಲ್ಲಿ ನೀಡಲಾಗುತ್ತಿದೆ.

ಹೊಸ ದ್ವಿಚಕ್ರ ವಾಹನಗಳು ಕಿಲ್ ಸ್ವಿಚ್ ಹೊಂದಿರಲು ಕಾರಣಗಳಿವು

ಹೀರೋ ಮೋಟೊಕಾರ್ಪ್ ಕಂಪನಿಯ ಹೀರೋ ಎಕ್ಟ್ರೀಮ್ 200 ಎಸ್, ಎಕ್ಸ್‌ಪಲ್ಸ್ 200, ಎಕ್ಸ್‌ಪಲ್ಸ್ 200 ಟಿ ಬೈಕ್‌ಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ನೀಡಲಾಗುತ್ತದೆ. ಇದರ ಜೊತೆಗೆ ಎಲ್ಇಡಿ ಡಿಸ್ ಪ್ಲೇ ಕೂಡ ನೀಡಲಾಗುತ್ತದೆ. ಬೈಕ್ ಸವಾರರು ತಮ್ಮ ಮೊಬೈಲ್ ಫೋನ್ ಮೂಲಕ ಬೈಕ್‌ ಅನ್ನು ಬ್ಲೂಟೂತ್‌ಗೆ ಕನೆಕ್ಟ್ ಮಾಡಬಹುದು. ಈ ಫೀಚರ್ ಮೂಲಕ ಫೋನ್ ಕಾಲ್ ಹಾಗೂ ಎಸ್‌ಎಂಎಸ್'ಗಳನ್ನು ನಿರ್ವಹಿಸುವುದು ಮಾತ್ರವಲ್ಲದೇ ನ್ಯಾವಿಗೇಷನ್ ಹಾಗೂ ಗೇರ್ ಸಂಖ್ಯೆಯ ಬಗ್ಗೆಯೂ ಮಾಹಿತಿ ಪಡೆಯಬಹುದು.

ಹೊಸ ದ್ವಿಚಕ್ರ ವಾಹನಗಳು ಕಿಲ್ ಸ್ವಿಚ್ ಹೊಂದಿರಲು ಕಾರಣಗಳಿವು

ಟಿವಿಎಸ್ ಮೋಟಾರ್ ಕಂಪನಿಯ ಅಪಾಚೆ ಆರ್‌ಟಿಆರ್ 200 4 ವಿ ಬೈಕಿನಲ್ಲಿಯೂ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ನೀಡಲಾಗಿದೆ. ಈ ಬೈಕ್‌ನಲ್ಲಿ ಬ್ಲೂಟೂತ್ ಅನ್ನು ಇನ್ಸ್'ಟ್ರೂಮೆಂಟ್ ಕ್ಲಸ್ಟರ್‌ನೊಂದಿಗೆ ಜೋಡಿಸಬಹುದು. ಇದರ ಮೂಲಕ ಫೋನ್ ಕಾಲ್, ಬೈಕ್ ಸ್ಪೀಡ್ ಹಾಗೂ ಲ್ಯಾಪ್ ಸಮಯವನ್ನು ನಿಯಂತ್ರಿಸಬಹುದು. ಟಿವಿಎಸ್ ಕಂಪನಿಯು ಈ ಬೈಕ್‌ನೊಂದಿಗೆ ಫೋನ್ ಅಪ್ಲಿಕೇಶನ್ ಅನ್ನು ಸಹ ಒದಗಿಸುತ್ತಿದೆ. ಇದರ ಸಹಾಯದಿಂದ ಬೈಕ್ ಸವಾರರು ತಮ್ಮ ಮಾರ್ಗವನ್ನು ಟ್ರ್ಯಾಕ್ ಮಾಡಬಹುದು.

ಹೊಸ ದ್ವಿಚಕ್ರ ವಾಹನಗಳು ಕಿಲ್ ಸ್ವಿಚ್ ಹೊಂದಿರಲು ಕಾರಣಗಳಿವು

ಟಿವಿಎಸ್ ಎನ್ ಟಾರ್ಕ್ 125 ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿದ ಮೊದಲ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಎನ್ ಟಾರ್ಕ್, 125 ಸಿಸಿ ಸ್ಕೂಟರ್ ಸೆಗ್ ಮೆಂಟಿನಲ್ಲಿ ಹಲವಾರು ಫೀಚರ್'ಗಳನ್ನು ಹೊಂದಿದೆ. ಈ ಸ್ಕೂಟರ್‌ನಲ್ಲಿ ಬ್ಲೂಟೂತ್‌ಗೆ ಸಂಪರ್ಕ ಕಲ್ಪಿಸಲು ಸ್ಮಾರ್ಟ್ ಕನೆಕ್ಟ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ನೀಡಲಾಗಿದೆ. ಈ ಅಪ್ಲಿಕೇಶನ್ ಸವಾರರಿಗೆ ಫೋನ್ ನೋಟಿಫಿಕೇಶನ್, ನ್ಯಾವಿಗೇಷನ್ ಸೇರಿದಂತೆ ಹಲವಾರು ಮಾಹಿತಿಗಳನ್ನು ಒದಗಿಸುತ್ತದೆ.

ಹೊಸ ದ್ವಿಚಕ್ರ ವಾಹನಗಳು ಕಿಲ್ ಸ್ವಿಚ್ ಹೊಂದಿರಲು ಕಾರಣಗಳಿವು

ಸುಜುಕಿ ಕಂಪನಿಯು ತನ್ನ ಆಕ್ಸೆಸ್ 125 ಹಾಗೂ ಬರ್ಗ್‌ಮನ್ ಸ್ಟ್ರೀಟ್ ಸ್ಕೂಟರ್'ಗಳನ್ನು 2020 ರಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್'ನೊಂದಿಗೆ ಅಪ್ ಡೇಟ್ ಮಾಡಿದೆ. ಈ ಎರಡೂ ಸ್ಕೂಟರ್‌ಗಳು ಹಲವಾರು ಫೀಚರ್'ಗಳನ್ನು ಹೊಂದಿವೆ. ಇವುಗಳಲ್ಲಿ ಹೊಸ ಎಲ್‌ಸಿಡಿ ಡಿಸ್‌ಪ್ಲೇ ಸ್ಕ್ರೀನ್ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ವಾಟ್ಸಾಪ್ ಅಲರ್ಟ್‌, ಮಿಸ್ಡ್ ಕಾಲ್ ಅಲರ್ಟ್‌, ಕಾಲರ್ ಐಡಿ, ಓವರ್-ಸ್ಪೀಡ್ ವಾರ್ನಿಂಗ್ ಫೋನ್ ಬ್ಯಾಟರಿ ಲೆವೆಲ್ ಫೀಚರ್'ಗಳು ಸೇರಿವೆ. ಕನೆಕ್ಟಿವಿಟಿಗಾಗಿ ಈ ಸ್ಕೂಟರ್‌ಗಳಲ್ಲಿ ಸುಜುಕಿ ರೈಡ್ ಕನೆಕ್ಟ್ ಸ್ಮಾರ್ಟ್ ಫೋನ್ ಅಪ್ಲಿಕೇಶನ್ ನೀಡಲಾಗಿದೆ.

Most Read Articles

Kannada
English summary
Reasons for two wheelers having kill switch features details
Story first published: Wednesday, October 20, 2021, 18:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X