ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2021ರ 'ರೆಡ್ ಬುಲ್ ಏಸ್ ಆಫ್ ಡರ್ಟ್' ರೇಸ್

ಆಫ್ ರೋಡ್ ಬೈಕ್ ಸವಾರಿಯ ಕೌಶಲ್ಯ ಪ್ರದರ್ಶನಕ್ಕಾಗಿ ದೇಶಾದ್ಯಂತ ಹಲವಾರು ಬೈಕ್ ರ‍್ಯಾಲಿಗಳು ಮತ್ತು ಆಫ್ ರೋಡ್ ಚಾಲೆಂಜ್ ಸ್ಪರ್ಧೆಗಳು ತಮ್ಮದೆ ಆದ ಜನಪ್ರಿಯತೆಯನ್ನು ಹೊಂದಿದ್ದು, ರೆಡ್ ಬುಲ್ ಏಸ್ ಆಫ್ ಡರ್ಟ್ ಆಯೋಜನೆಯ ಆಫ್ ರೋಡ್ ರೇಸಿಂಗ್ ಕೂಡಾ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2021ರ 'ರೆಡ್ ಬುಲ್ ಏಸ್ ಆಫ್ ಡರ್ಟ್' ರೇಸ್

2019ರಿಂದಲೇ ರೆಡ್ ಬುಲ್ ಏಸ್ ಆಫ್ ಡರ್ಟ್ ರೇಸ್ ಅಧಿಕೃತವಾಗಿ ಆರಂಭಗೊಂಡಿದ್ದು, ಇದೀಗ ಎರಡನೇ ಆವೃತ್ತಿಯು ಸಹ ಪೂರ್ಣಗೊಂಡಿದೆ. ಕಳೆದ ವರ್ಷ ಕರೋನಾ ವೈರಸ್ ಹಿನ್ನಲೆ ಜನಪ್ರಿಯ ಆಫ್ ರೋಡ್ ರ‍್ಯಾಲಿಯನ್ನು ಮುಂದೂಡಿಕೆ ಮಾಡುತ್ತಾ ಬಂದಿದ್ದ ಆಯೋಜಕರು ಇದೀಗ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ 2ನೇ ಆವೃತ್ತಿಯನ್ನು ಆರಂಭಿಸಿದ್ದು, ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಬಿಗ್‌ರಾಕ್ ಡರ್ಟ್‌ಪಾರ್ಕ್ ಆಫ್ ರೋಡ್ ಟ್ರ್ಯಾಕ್‌ನಲ್ಲಿ ಆಯೋಜಿಸಲಾಗಿತ್ತು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2021ರ 'ರೆಡ್ ಬುಲ್ ಏಸ್ ಆಫ್ ಡರ್ಟ್' ರೇಸ್

ಈ ತಿಂಗಳು 18 ಮತ್ತು 19ರಂದು ನಡೆದ ಎರಡು ದಿನಗಳ ನಡೆದ ಆಫ್ ರೋಡಿಂಗ್ ಸ್ಪರ್ಧೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಸ್ಪರ್ಧಿಗಳು ದೇಶದ ನಾನಾ ಭಾಗಗಳಿಂದ ಭಾಗಿಯಾಗಿದ್ದರು. ಒಟ್ಟು ಏಳು ವಿಭಾಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಮೊದಲ ದಿನಗಳ ಆರಂಭಿಕ ಸ್ಪರ್ಧೆಗಳು ಮತ್ತು ಎರಡನೇ ದಿನದಂದು ಸಂಪೂರ್ಣವಾಗಿ ಕೌಶಲ್ಯ ಪ್ರದರ್ಶನದೊಂದಿಗೆ ಗುರಿತಲುಪಬೇಕಿತ್ತು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2021ರ 'ರೆಡ್ ಬುಲ್ ಏಸ್ ಆಫ್ ಡರ್ಟ್' ರೇಸ್

ಆಫ್ ರೋಡ್ ಸ್ಪರ್ಧೆಯಲ್ಲಿ ವೇಬ್ರಿಜ್ಡ್, ಬ್ಲಿಪ್ಪರ್ಸ್ ಲಾಗ್, ಬ್ಯಾರೆಲ್ ಮೆಜ್, ರಾಕ್ ಗಾರ್ಡನ್, ಮಡ್ ಪೈ, ಹ್ಯೂಮ್ ರೋಲ್ಸ್, ಲಾಗ್ ಟರ್ನ್ ಪ್ರಮುಖವಾಗಿದ್ದು, ರೇಸ್ ಗುರಿ ತಲಪಲು ವೇಗದ ಚಾಲನೆ ಒಂದೇ ಅಲ್ಲದೆ ಕಠಿಣ ಭೂ ಪ್ರದೇಶಗಳಲ್ಲೂ ಯಾವುದೇ ಅಡೆತಡೆಗಳಿಗೆ ಸಿಲುಕದೆ ಮುನ್ನಗ್ಗಲು ಕೌಶಲ್ಯ ಪ್ರದರ್ಶನ ಮಾಡುವುದೇ ಇಂತಹ ರ್‍ಯಾಲಿಗಳ ಪ್ರಮುಖ ಉದ್ದೇಶವಾಗಿರುತ್ತದೆ.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2021ರ 'ರೆಡ್ ಬುಲ್ ಏಸ್ ಆಫ್ ಡರ್ಟ್' ರೇಸ್

ರೆಡ್ ಬುಲ್ ಏಸ್ ಆಫ್ ಡರ್ಟ್‌ ರೇಸ್‌ ಕೂಡಾ ಹಲವಾರು ಹೊಸ ಮಾದರಿಯ ಟ್ರ್ಯಾಕ್ ಪ್ರದರ್ಶಗಳೊಂದಿಗೆ ರೈಡರ್‌ಗಳಿಗೆ ಕಠಿಣ ಸವಾಲುಗಳನ್ನು ನೀಡಿತು. ಮೊದಲ ದಿನದ ರೇಸ್‌ನಲ್ಲಿ ಟ್ರ್ಯಾಕ್ ಟೆಸ್ಟಿಂಗ್, ಫಿಟ್‌ನೆಸ್ ಪರೀಕ್ಷೆಯೊಂದಿಗೆ ಆರಂಭಿಕ ಹಂತದ ಸ್ಪರ್ಧೆಗಳನ್ನು ನಡೆಸಲಾಯ್ತು. ಎರಡನೇ ದಿನದ ಆರಂಭದೊಂದಿಗೆ ವಿವಿಧ ಹಂತದ ಅರ್ಹತಾ ಸುತ್ತಗಳೊಂದಿಗೆ ಒಟ್ಟು 8 ಹೀಟ್ ಸೆಷನ್‌ಗಳನ್ನು ನಡೆಸಿದ ಆಯೋಜಕರು ಅರ್ಹತಾ ಹಂತ ಪೂರ್ಣಗೊಳಿಸಲು ಸ್ಪರ್ಧಿಗಳು ನಿಗದಿತ ಸಮಯದಲ್ಲಿ 3 ಲ್ಯಾಪ್ಸ್ ಪೂರ್ಣಗೊಳಿಸಬೇಕಿತ್ತು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2021ರ 'ರೆಡ್ ಬುಲ್ ಏಸ್ ಆಫ್ ಡರ್ಟ್' ರೇಸ್

ಪ್ರತಿ ಸುತ್ತಿನಲ್ಲೂ ಒಟ್ಟು 16 ವಿಜೇತ ಮತ್ತು ರನ್ನರ್ ಅಪ್ ಸ್ಪರ್ಧಿಗಳನ್ನು ಕ್ವಾರ್ಟರ್-ಫೈನಲ್‌ಗೆ ಆಯ್ಕೆ ಮಾಡಿದ ಆಯೋಜಕರು ಕ್ವಾರ್ಟರ್-ಫೈನಲ್ಸ್‌ನಲ್ಲಿ ನೀಡಲಾಗಿದ್ದ ಸಂಖ್ಯೆಯ ಲ್ಯಾಪ್‌ಗಳೊಂದಿಗೆ ಹೀಟ್ ಸೆಷನ್‌ಗಳಂತೆಯೇ ನಿಯಮಗಳನ್ನು ಸೂಚಿಸಲಾಗಿತ್ತು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2021ರ 'ರೆಡ್ ಬುಲ್ ಏಸ್ ಆಫ್ ಡರ್ಟ್' ರೇಸ್

ಎರಡನೇ ಹಂತದ ಕ್ವಾರ್ಟರ್-ಫೈನಲ್‌ ಸುತ್ತಿನಲ್ಲಿ 16 ಸವಾರರು ಮತ್ತು 4 ಸೆಟ್‌ಗಳೊಂದಿಗೆ ಸೆಮಿಫೈನಲ್‌‌ ಗೆಲ್ಲಲು ರೋಚಕ ಸ್ಪರ್ಧೆ ಏರ್ಪಟ್ಟು 8 ಜನ ಸ್ಪರ್ಧಿಗಳು ಅಂತಿಮ ಘಟ್ಟಕ್ಕೆ ಲಗ್ಗೆಯಿಟ್ಟರು. 8 ಸ್ಪರ್ಧಿಗಳ ನಡುವೆ ನಡೆದ ಫೈನಲ್ ಸ್ಪರ್ಧೆಯಲ್ಲಿ ಅದ್ಬುತ ಪ್ರದರ್ಶನ ನೀಡಿದ ವಿ.ಎಂ.ಮಹೇಶ್ ವಿಜಯಿಶಾಲಿಯಾಗಿ ಹೊರಹೊಮ್ಮಿದರು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2021ರ 'ರೆಡ್ ಬುಲ್ ಏಸ್ ಆಫ್ ಡರ್ಟ್' ರೇಸ್

ವಿ.ಎಂ.ಮಹೇಶ್ ಮೊದಲ ಸ್ಥಾನದಲ್ಲಿ ಮಿಂಚಿದರೆ ಎ. ಸತ್ಯರಾಜ್ (1ನೇ ರನ್ನರ್ ಅಪ್), ಡಿ. ಸಚಿನ್ (2ನೇ ರನ್ನರ್ ಅಪ್), ಮತ್ತು ಬಿ. ಗಿಡಿಯಾನ್ (3ನೇ ರನ್ನರ್ ಅಪ್) ಆಗಿ ಸ್ಪರ್ಧೆಯಲ್ಲಿ ಮಿಂಚಿದರು. ಆಫ್ ರೋಡ್ ರೇಸ್‌ನ ಪ್ರತಿ ಹಂತದಲ್ಲೂ ಉತ್ತಮ ಪ್ರದರ್ಶನ ನೀಡಿದ ಕೇರಳ ಮೂಲದ ವಿ.ಎಂ.ಮಹೇಶ್ ಪೂರ್ಣ ಟ್ರ್ಯಾಕ್ ಅನ್ನು ಕೇವಲ 20 ನಿಮಿಷ 29 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2021ರ 'ರೆಡ್ ಬುಲ್ ಏಸ್ ಆಫ್ ಡರ್ಟ್' ರೇಸ್

1ನೇ ರನ್ನರ್ ಅಪ್ ಎ. ಸತ್ಯರಾಜ್ 20 ನಿಮಿಷ 39 ಸೆಕೆಂಡುಗಳಲ್ಲಿ, 2ನೇ ರನ್ನರ್ ಅಪ್ ಡಿ. ಸಚಿನ್ 20 ನಿಮಿಷ 50 ಸೆಕೆಂಡುಗಳಲ್ಲಿ ಮತ್ತು 3ನೇ ರನ್ನರ್ ಅಪ್ ಬಿ. ಗಿಡಿಯಾನ್ ಡಿ.ಸಚಿನ್‌ಗಿಂತಲೂ ಸುಮಾರು 5 ನಿಮಿಷ, 52 ಸೇಕೆಂಡುಗಳ ಕಾಲ ತಡವಾಗಿ ಗುರಿತಲುಪಿದರೂ ನಾಲ್ಕನೇ ಸ್ಥಾನ ಪಡೆದುಕೊಂಡರು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2021ರ 'ರೆಡ್ ಬುಲ್ ಏಸ್ ಆಫ್ ಡರ್ಟ್' ರೇಸ್

ವಿಜೇತ ಸ್ಪರ್ಧಿ ವಿ.ಎಂ.ಮಹೇಶ್‌ಗೆ ಆಯೋಜಕ ತಂಡವು ಹೀರೋ ನಿರ್ಮಾಣದ ಎಕ್ಸ್‌ಪಲ್ಸ್ 200 ಮಾದರಿಯ ಉಡುಗೊರೆಯೊಂದಿಗೆ ರೆಡ್ ಬುಲ್ ಏಸ್ ಆಫ್ ಡರ್ಟ್ ತಂಡದ ರೂವಾರಿ ಸಿ.ಎಸ್.ಸಂತೋಷ್ ಅವರೊಂದಿಗೆ ಆಫ್ ರೋಡ್ ತರಬೇತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2021ರ 'ರೆಡ್ ಬುಲ್ ಏಸ್ ಆಫ್ ಡರ್ಟ್' ರೇಸ್

ಇನ್ನು 'ರೆಡ್ ಬುಲ್ ಏಸ್ ಆಫ್ ಡರ್ಟ್' 2ನೇ ಆವೃತ್ತಿಯ ರೇಸ್ ಗೆದ್ದ ವಿ.ಎಂ.ಮಹೇಶ್‌ ಈಗಾಗಲೇ ರಾಷ್ಟ್ರೀಯ ಮಟ್ಟದ ಹಲವಾರು ಆಫ್ ರೋಡ್ ರೇಸ್‌ಗಳಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದು, ರಾಷ್ಟ್ರೀಯ ಮಟ್ಟದ ಸೂಪರ್ ಕ್ರಾಸ್ ಚಾಂಪಿಯನ್‌ಶಿಷ್‌ನಲ್ಲಿ ಮೂರು ಬಾರಿಗೆ ಪ್ರಶಸ್ತಿಯನ್ನು ತಮ್ಮದಾಸಿಕೊಂಡಿದ್ದಾರೆ.

Most Read Articles

Kannada
English summary
2021 Red Bull Ace Of Dirt Highlights & Results. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X