ಆರ್‌ವಿ300 ಸ್ಥಾನಕ್ಕೆ ಹೊಸ ಆರ್‌ವಿ 1 ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿರುವ ರಿವೋಲ್ಟ್ ಕಂಪನಿಯು ಅತಿ ಕಡಿಮೆ ಅವಧಿಯಲ್ಲಿ ದಾಖಲೆ ಪ್ರಮಾಣದ ಇವಿ ಬೈಕ್ ಮಾರಾಟ ಮಾಡಿದ್ದು, ಕಂಪನಿಯು ಶೀಘ್ರದಲ್ಲೇ ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯೊಂದನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಆರ್‌ವಿ300 ಸ್ಥಾನಕ್ಕೆ ಹೊಸ ಆರ್‌ವಿ 1 ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ರಿವೋಲ್ಟ್ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ 2019ರಲ್ಲಿ ಆರ್‌ವಿ400 ಮತ್ತು ಆರ್‌ವಿ300 ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿತ್ತು. ಹೊಸ ಬೈಕ್‌ಗಳಲ್ಲಿ ಆರ್‌ವಿ400 ಮಾದರಿಯು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ಆರ್‌ವಿ300 ಬೈಕ್ ಮಾದರಿಯನ್ನು ಸ್ಥಗಿತಗೊಳಿಸಿ ಅದೇ ಬೈಕ್ ಮಾದರಿಯನ್ನೇ ಬಿಟುಬಿ ವಾಣಿಜ್ಯ ಬೈಕ್ ಮಾದರಿಯನ್ನಾಗಿ ಮರುಬಿಡುಗಡೆ ಮಾಡಲು ನಿರ್ಧರಿಸಿದೆ.

ಆರ್‌ವಿ300 ಸ್ಥಾನಕ್ಕೆ ಹೊಸ ಆರ್‌ವಿ 1 ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಆರ್‌ವಿ300 ಬೈಕಿನಲ್ಲಿ 2.7kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 1.5kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 65 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 180 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತದೆ.

ಆರ್‌ವಿ300 ಸ್ಥಾನಕ್ಕೆ ಹೊಸ ಆರ್‌ವಿ 1 ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಹಾಗೆಯೇ ಆರ್‌ವಿ400 ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ 156ಕಿ.ಮಿ ಮೈಲೇಜ್ ನೀಡುತ್ತದೆ.

ಆರ್‌ವಿ300 ಸ್ಥಾನಕ್ಕೆ ಹೊಸ ಆರ್‌ವಿ 1 ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಗ್ರಾಹಕರು ಆರ್300 ಮಾದರಿಗಿಂತಲೂ ಆರ್‌ವಿ400 ಮಾದರಿಯ ಬೆಲೆ ಹೆಚ್ಚಳವಿದ್ದರೂ ಕೂಡಾ ಆರ್‌ವಿ400 ಖರೀದಿಗೆ ಹೆಚ್ಚಿನ ಬೇಡಕೆ ಸಲ್ಲಿಸುತ್ತಿದ್ದು, ಆರ್‌ವಿ300 ಮಾದರಿಯ ಬೇಡಿಕೆಯನ್ನು ಸುಧಾರಿಸಲು ಹೊಸ ಯೋಜನೆಯೊಂದಿಗೆ ಬದಲಿ ಹೆಸರಿನೊಂದಿಗೆ ಮರುಬಿಡುಗಡೆಗೆ ಸಿದ್ದವಾಗಿದೆ.

ಆರ್‌ವಿ300 ಸ್ಥಾನಕ್ಕೆ ಹೊಸ ಆರ್‌ವಿ 1 ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಆರ್‌ವಿ300 ಮಾದರಿಯ ಹೆಸರನ್ನು ಬದಲಿಸಿ ಆರ್‌ವಿ 1 ಎಂದು ಮರುಬಿಡುಗಡೆ ಮಾಡಲಿರುವ ರಿವೋಲ್ಟ್ ಕಂಪನಿಯು ಹೊಸ ಬೈಕ್ ಅನ್ನು ಬಿಟುಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ಉದ್ದೇಶಗಳಿಗೆ ಮಾರಾಟ ಮಾಡಲು ಯೋಜಿಸಿದ್ದು, ಹೊಸ ಬೈಕ್ ಅನ್ನು ಡಾಮಿನಾರ್ ಪಿಜ್ಜಾ ಮಾರಾಟ ಮಳಿಗೆಗಳ ಫುಡ್ ಡೆಲಿವರಿ ವಾಹನವನ್ನಾಗಿ ಪರಿಚಯಿಸಲಿದೆ.

ಆರ್‌ವಿ300 ಸ್ಥಾನಕ್ಕೆ ಹೊಸ ಆರ್‌ವಿ 1 ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಡೊಮಿನೊಸ್ ಪಿಜ್ಜಾ ಕಂಪನಿಯು ಈ ವರ್ಷಾಂತ್ಯಕ್ಕೆ ಫುಡ್ ಡೆಲಿವರಿ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಪೆಟ್ರೋಲ್ ಬೈಕ್‌ಗಳ ಬದಲಾಗಿ ಎಲೆಕ್ಟ್ರಿಕ್ ಬೈಕ್ ಬಳಕೆ ಮಾಡಲು ಉದ್ದೇಶಿಸಿದ್ದು, ಡೊಮಿನೊಸ್ ಪಿಜ್ಜಾ ಕಂಪನಿಗೆ ರಿವೋಲ್ಟ್ ಆರ್‌ವಿ 1 ಮಾರಾಟಗೊಳ್ಳಲಿದೆ.

ಆರ್‌ವಿ300 ಸ್ಥಾನಕ್ಕೆ ಹೊಸ ಆರ್‌ವಿ 1 ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಫುಡ್ ಡೆಲಿವರಿ ಉದ್ದೇಶಕ್ಕಾಗಿ ಪ್ರತಿ ಗಂಟೆಗೆ 65 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 180 ಕಿ.ಮಿ ಮೈಲೇಜ್ ಹಿಂದಿರುಗಿಸಲಿರುವ ಆರ್‌ವಿ 1 ಬೈಕ್ ಮಾದರಿಯು ಉತ್ತಮ ಬೇಡಿಕೆ ಪಡೆದುಕೊಳ್ಳಲಿದ್ದು, ಫುಡ್ ಡೆಲಿವರಿಗಾಗಿ ವಿಶೇಷವಾದ ಲಗೇಜ್ ಬಾಕ್ಸ್ ಸೇರಿದಂತೆ ಹಲವಾರು ಹೊಸ ಫೀಚರ್ಸ್ ಪಡೆದುಕೊಳ್ಳಲಿದೆ.

ಆರ್‌ವಿ300 ಸ್ಥಾನಕ್ಕೆ ಹೊಸ ಆರ್‌ವಿ 1 ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಡೊಮಿನೊಸ್ ಪಿಜ್ಜಾ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಸಾವಿರಾರು ಮಾರಾಟ ಮಳಿಗೆಗಳನ್ನು ಹೊಂದಿದ್ದು, ಫುಡ್ ಡೆಲಿವರಿ ವಾಹನಗಳನ್ನು ಪೂರೈಕೆ ಮಾಡಲಿರುವ ರಿವೋಲ್ಟ್ ಕಂಪನಿಯೇ ಮಾರಾಟ ಮಳಿಗೆಗಳಲ್ಲಿ ಇವಿ ಬೈಕ್‌ಗಳಿಗೆ ಅಗತ್ಯವಾದ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ.

ಆರ್‌ವಿ300 ಸ್ಥಾನಕ್ಕೆ ಹೊಸ ಆರ್‌ವಿ 1 ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಹೊಸ ಆರ್‌ವಿ 1 ಬೈಕ್ ಮಾದರಿಯ ಬೆಲೆಯನ್ನು ರಿವೋಲ್ಟ್ ಕಂಪನಿಯು ರೂ.75 ಸಾವಿರಕ್ಕೆ ನಿಗದಿಪಡಿಸಲಿದ್ದು, ಹೊಸ ಬೈಕ್ ಆಕರ್ಷಕ ಬೆಲೆಯೊಂದಿಗೆ ಸಾಗಾಣಿಕೆ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲಿದೆ.

ಆರ್‌ವಿ300 ಸ್ಥಾನಕ್ಕೆ ಹೊಸ ಆರ್‌ವಿ 1 ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಇನ್ನು ಕೇಂದ್ರ ಸರ್ಕಾರದ ಫೇಮ್ 2 ತಿದ್ದುಪಡಿಯ ಪರಿಣಾಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿಯಾಗಿ ಇದೀಗ ರೂ. 10 ಸಾವಿರದಿಂದ ರೂ.30 ಸಾವಿರ ತನಕ ಹೆಚ್ಚುವರಿ ಸಬ್ಸಡಿ ದೊರೆಯುತ್ತಿದ್ದು, ಹೊಸ ಸಬ್ಸಡಿ ತಿದ್ದುಪಡಿ ಘೋಷಣೆ ಮಾಡುತ್ತಿದ್ದಂತೆ ರಿವೋಲ್ಟ್ ಕಂಪನಿಯು ತನ್ನ ಆರ್‌ವಿ400 ಬೆಲೆಯಲ್ಲಿ ಶೇ.20ರಷ್ಟು ಇಳಿಕೆ ಮಾಡಿದೆ.

ಆರ್‌ವಿ300 ಸ್ಥಾನಕ್ಕೆ ಹೊಸ ಆರ್‌ವಿ 1 ಇವಿ ಬೈಕ್ ಬಿಡುಗಡೆ ಮಾಡಲಿದೆ ರಿವೋಲ್ಟ್

ಹೊಸ ಸಬ್ಸಡಿ ಅನುಮೋದನೆಗೆ ಮೊದಲು ಆರ್‌ವಿ400 ಎಲೆಕ್ಟ್ರಿಕ್ ಬೈಕ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1,18,999 ಬೆಲೆ ಹೊಂದಿತ್ತು. ಇದೀಗ ಹೊಸ ಸಬ್ಸಡಿ ದರ ಸೇರಿದ ನಂತರ ಗ್ರಾಹಕರಿಗೆ ಹೊಸ ಬೈಕ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 90,799 ಕ್ಕೆ ಇಳಿಕೆಯಾಗಿದೆ.

Most Read Articles

Kannada
English summary
Revolt RV300 To Be Replaced By RV1 Electric Motorcycle.
Story first published: Monday, July 26, 2021, 18:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X