ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ರಿವೋಲ್ಟ್(Revolt) ಕಂಪನಿಯು ತನ್ನ ಜನಪ್ರಿಯ ಆರ್‌ವಿ400(RV400) ಇವಿ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ನೀಡುವುದಾಗಿ ಖಚಿತಪಡಿಸಿದ್ದು, ಹೊಸ ಬಣ್ಣದ ಆಯ್ಕೆ ಹೊಂದಿರುವ ಆರ್‌ವಿ400 ಇವಿ ಬೈಕ್ ಖರೀದಿಗೆ ಶೀಘ್ರದಲ್ಲೇ ಬುಕ್ಕಿಂಗ್ ಆರಂಭವಾಗಲಿದೆ.

ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ವಿನೂತನ ಫೀಚರ್ಸ್, ಅಧಿಕ ಮಟ್ಟದ ಬ್ಯಾಟರಿ ರೇಂಜ್, ಬಜೆಟ್ ಬೆಲೆ ಮತ್ತು ಅತಿ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಸದ್ಯ ಮಾರುಕಟ್ಟೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಇವಿ ಬೈಕ್ ಮಾದರಿಯಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಈಗಾಗಲೇ ಹಲವಾರು ತಾಂತ್ರಿಕ ಅಂಶಗಳನ್ನು ಬದಲಾವಣೆಗೊಳಿಸಿದೆ.

ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ರಿವೋಲ್ಟ್ ಕಂಪನಿಯು ಇದೀಗ ಹೊಸ ಇವಿ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆಯೊಂದನ್ನು ನೀಡುತ್ತಿದ್ದು, ಸಿಲ್ವರ್ ಸ್ಮೊಕ್ ಹೊಂದಿರುವ ಹೊಸ ಬಣ್ಣದ ಆಯ್ಕೆಯು ಹೊಸ ಬೈಕ್ ಪ್ರೀಮಿಯಂ ಲುಕ್ ನೀಡಲಿದೆ.

ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ಪ್ರಸ್ತುತ ಮಾರುಕಟ್ಟೆಯಲ್ಲಿ ಆರ್‌ವಿ400 ಬೈಕ್ ಮಾದರಿಯು ರೆಬೆಲ್ ರೆಡ್ ಮತ್ತು ಕಾಸ್ಮಿಕ್ ಬ್ಲಾಕ್ ಬಣ್ಣಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಶೀಘ್ರದಲ್ಲೇ ಹೊಸ ಬಣ್ಣದ ಆಯ್ಕೆಯೊಂದಿಗೆ ಬುಕ್ಕಿಂಗ್ ಪುನಾರಂಭ ಮಾಡುವ ಯೋಜನೆಯಲ್ಲಿದೆ.

ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ಹೊಸ ಬಣ್ಣದ ಆಯ್ಕೆ ಮತ್ತು ಬುಕ್ಕಿಂಗ್ ಪುನಾರಂಭದ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ರಿವೋಲ್ಟ್ ಕಂಪನಿಯ ಸಿಇಒ ರಾಹುಲ್ ಶರ್ಮಾ ಅವರು ಮುಂಬರುವ ಹಬ್ಬದ ಋುತುಗಳಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದ್ದಾರೆ.

ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ಸದ್ಯ ರಿವೋಲ್ಟ್ ಕಂಪನಿಯು ಉತ್ಪಾದನಾ ಸಾಮರ್ಥ್ಯದ ಮೇಲೆ ಎಲೆಕ್ಟ್ರಿಕ್ ಬೈಕ್ ವಿತರಣೆಯನ್ನು ಹಂತ-ಹಂತವಾಗಿ ಹೆಚ್ಚಿಸುತ್ತಿದ್ದು, ಕಳೆದ ಜುಲೈ‌ನಲ್ಲಿ ಪುನಾರಂಭಿಸಲಾಗಿದ್ದ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಸುಮಾರು 10 ಸಾವಿರ ಇವಿ ಬೈಕ್‌ಗಳಿಗೆ ಬೇಡಿಕೆ ಬಂದಿದೆ. ಹೀಗಾಗಿ ಬೇಡಿಕೆಗೆ ತಕ್ಕಂತೆ ಅಲ್ಪ ಪ್ರಮಾಣದಲ್ಲಿರುವ ಉತ್ಪಾದನಾ ಸಾಮಾರ್ಥ್ಯವನ್ನು ಹೆಚ್ಚಿಸಲಾಗುತ್ತಿದ್ದು, ಉತ್ಪಾದನಾ ಘಟಕವು ವಿಸ್ತರಣೆಯಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಉತ್ಪಾದನೆ ಹೆಚ್ಚಳವಾಗುವ ನೀರಿಕ್ಷೆಯಿದೆ.

ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ಉತ್ಪಾದನೆಗಿಂತ ಬೇಡಿಕೆಯು ಅಧಿಕವಾಗಿರುವ ಹಿನ್ನಲೆಯಲ್ಲಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಸದ್ಯ ಸ್ಥಗಿತಗೊಳಿಸಿರುವ ರಿವೋಲ್ಟ್ ಕಂಪನಿಯು ಶೀಘ್ರದಲ್ಲೇ ಹೊಸ ಬೈಕ್ ಮಾದರಿಯೊಂದಿಗೆ ಪುನಾರಂಭಿಸಲಿದ್ದು, ಹೊಸ ಇವಿ ಬೈಕ್ ಮಾದರಿಯ ಮೂಲಕ ರಿವೋಲ್ಟ್ ಕಂಪನಿಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ಇನ್ನು ಹೊಸ ಸ್ಟಾಕ್ ವಿತರಣೆಗೆ ಸಿದ್ದವಾಗುತ್ತಿರುವ ರಿವೋಲ್ಟ್ ಕಂಪನಿಯು ಹೊಸ ಬೈಕಿನಲ್ಲಿ ಮೊದಲ ಬಾರಿಗೆ ಕೀ ಲೆಸ್ ಎಂಟ್ರಿ ಫೀಚರ್ಸ್ ಸಹ ಅಳವಡಿಸಿದ್ದು, ಅಪ್ಲಿಕೇಷನ್‌ ಆಧರಿತ ಸ್ಮಾರ್ಟ್ ಕೀ ಸೌಲಭ್ಯವಾಗಿದೆ.

ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ಹೊಸ ಕೀ ಲೆಸ್ ಎಂಟ್ರಿ ಫೀಚರ್ಸ್ ಮೂಲಕ ಬೈಕ್ ಮಾಲೀಕರು ಕೀ ಇಲ್ಲದೆಯೇ ರಿವೋಲ್ಟ್ ಮೊಬೈಲ್ ಅಪ್ಲಿಕೇಷನ್‌ನಲ್ಲಿ 'ಸ್ವೈಪ್ ಟು ಸ್ಮಾರ್ಟ್' ಬಳಸಿ ಬೈಕ್ ಚಾಲನೆ ಮಾಡಬಹುದಾಗಿದ್ದು, ಹೊಸ ಫೀಚರ್ಸ್ ಹೊಂದಿರುವ ಆರ್‌ವಿ400 ಬೈಕ್ ಹೊಸ ರೈಡಿಂಗ್ ಅನುಭವ ನೀಡಲಿದೆ.

ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ರಿವೋಲ್ಟ್ ಮೊಬೈಲ್ ಅಪ್ಲಿಕೇಷನ್‌ 'ಸ್ವೈಪ್ ಟು ಸ್ಮಾರ್ಟ್' ಮೂಲಕ ಲಾಕ್/ಅನ್‌ಲಾಕ್, ಬ್ಯಾಟರಿ ಲಭ್ಯತೆ, ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ರಿವೋಲ್ಟ್ ಕಂಪನಿಯು ಹಲವು ಹೊಸ ದಾಖಲೆಗಳಿಗೆ ಕಾರಣವಾಗುತ್ತಿದ್ದು, ಇತ್ತೀಚೆಗೆ ಕಂಪನಿಯು ತನ್ನ ಆರ್‌ವಿ400 ಬೈಕ್ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ಮೂಲಕ ಆಟೋ ಉದ್ಯಮದಲ್ಲಿ ಅಚ್ಚರಿ ಮೂಡಿಸಿದೆ.

ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಹೊಸ ವಾಹನ ಖರೀದಿದಾರರು ಇವಿ ವಾಹನಗಳತ್ತ ಆಕರ್ಷಿತರಾಗುತ್ತಿದ್ದು, ಹೊಸ ತಂತ್ರಜ್ಞಾನ ಪ್ರೇರಿತ ರಿವೋಲ್ಟ್ ಇವಿ ಬೈಕ್‌ಗಳು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ಹೊಸ ಬೈಕ್ ಖರೀದಿಸುವ ಗ್ರಾಹಕರಿಗೆ ಕೇಂದ್ರ ಸರ್ಕಾರದ ಫೇಮ್ 2 ತಿದ್ದುಪಡಿಯಲ್ಲಿ ರೂ. 10 ಸಾವಿರದಿಂದ ರೂ.30 ಸಾವಿರ ತನಕ ಹೆಚ್ಚುವರಿ ಸಬ್ಸಡಿ ದೊರೆಯುತ್ತಿದ್ದು, ಹೊಸ ಸಬ್ಸಡಿ ತಿದ್ದುಪಡಿ ಘೋಷಣೆಯ ನಂತರ ರಿವೋಲ್ಟ್ ಬೈಕ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿರುವುಗದರಿಂದ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ಕೇಂದ್ರ ಸರ್ಕಾರದ ಹೊಸ ಸಬ್ಸಡಿ ನಂತರ ರಿವೋಲ್ಟ್ ಕಂಪನಿಯು ತನ್ನ ಆರ್‌ವಿ400 ಬೆಲೆಯಲ್ಲಿ ಶೇ.20ರಷ್ಟು ಇಳಿಕೆ ಮಾಡಿದ್ದು, ರೂ. 1,18,999 ಬೆಲೆ ಹೊಂದಿದ್ದ ಬೈಕ್ ಇದೀಗ ಹೊಸ ಸಬ್ಸಡಿ ದರ ಸೇರಿದ ನಂತರ ಗ್ರಾಹಕರಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 90,799 ಕ್ಕೆ ಖರೀದಿಗೆ ಲಭ್ಯವಾಗಿದೆ.

ಶೀಘ್ರದಲ್ಲೇ RV400 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಹೊಸ ಬಣ್ಣದ ಆಯ್ಕೆ ಪರಿಚಯಿಸಲಿದೆ Revolt

ಆರ್‌ವಿ400 ಬೈಕಿನಲ್ಲಿ ಕಂಪನಿಯು 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತದೆ.

Most Read Articles

Kannada
English summary
Revolt will introduced new colour options for rv400 ev motorcycle details
Story first published: Wednesday, September 15, 2021, 9:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X