ಅಧಿಕ ರೇಂಜ್ ಹೊಂದಿರುವ ಪವರ್‌ಫುಲ್ ಇ-ಬೈಕ್ ಬಿಡುಗಡೆಗೊಳಿಸಿದ ರಿಸ್ಟ್ರೆಟ್ಟೊ
ಡೆನ್ವರ್ ಮೂಲದ ಕಂಪನಿಯು ಹೊಸ ರಿಸ್ಟ್ರೆಟ್ಟೊ 303 ಎಫ್ಎಸ್ (ಫುಲ್ ಸಸ್ಪೆಂಕ್ಷನ್) ಫೌಂಡರ್ ಎಡಿಷನ್ ಇ-ಬೈಕ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ರಿಸ್ಟ್ರೆಟ್ಟೊ 303 ಎಫ್ಎಸ್ ಫೌಂಡರ್ ಎಡಿಷನ್ ಇ-ಬೈಕ್ 10 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಈ ಹೊಸ ಇ-ಬೈಕ್ ಅನ್ನು ರಿಸ್ಟ್ರೆಟ್ಟೊ ಕೇವಲ 500 ಯುನಿಟ್ ಗಳಿಗೆ ಸಿಮೀತಗೊಳಿಸಿ ಬಿಡುಗಡೆಗೊಳಿಸಲಾಗಿದೆ.

ಹೆಚ್ಚಿನ ಇ-ಬೈಕ್‌ಗಳಲ್ಲಿ ಹಬ್ ಮೋಟರ್ ಅಳವಡಿಸಲಾಗಿದ್ದರೆ, ರಿಸ್ಟ್ರೆಟ್ಟೊ 303 ಮಿಡ್-ಮೌಂಟೆಡ್ 3.5 ಕಿ.ವ್ಯಾಟ್ ಮೋಟರ್ ಅನ್ನು ಅಳವಡಿಸಲಾಗಿದೆ. ಇದು ಇ-ಬೈಕ್‌ನಲ್ಲಿ ಅತ್ಯಂತ ಶಕ್ತಿಶಾಲಿ ಮೋಟರ್ ಎಂದು ಕಂಪನಿ ಹೇಳಿಕೊಂಡಿದೆ. ಈ ಹೊಸ ಇ-ಬೈಕ್ 64 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇದು ಇ-ಬೈಕ್‌ಗಳಲ್ಲಿ ಅತಿ ಹೆಚ್ಚು ವೇಗವಾಗಿದೆ. ಆದರೆ ಸಾಮಾನ್ಯ ರಸ್ತೆಗಳಲ್ಲಿ ಇಷ್ಟು ವೇಗದ ಇ-ಬೈಕ್ ಕಾನೂನು ಬಾಹಿರವಾಗಿದೆ.

ಆದರೆ ಸಾಮಾನ್ಯ ರಸ್ತೆಗಳಲ್ಲಿ ಇದನ್ನು ಓಡಿಸಲು ರೋಡ್ ಮೋಡ್ ಎಂಬ ಆಯ್ಕೆಯನ್ನು ಇದರಲ್ಲಿ ನೀಡಲಾಗಿದೆ. ಇದು 45 ಕಿ.ಮೀ ಗರಿಷ್ಠ ವೇಗವಾಗಿರುತ್ತದೆ. ಇದರಿಂದ ಈ ಹೊಸ ಇ-ಬೈಕ್ ಅನ್ನು ಡೆನ್ವರ್ ರಸ್ತೆಗಳಲ್ಲಿ ಓಡಿಸಬಹುದಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಹೊಸ ರಿಸ್ಟ್ರೆಟ್ಟೊ 303 ಎಫ್ಎಸ್ ಇ-ಬೈಕಿನ ಮೋಟರ್ ಅನ್ನು 17.5ಎಹೆಚ್ ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಜೋಡಿಸಲಾಗಿದ್ದು, ಇದು 88 ಕಿ.ಮೀ ರೇಂಜ್ ಅನ್ನು ಹೊಂದಿದೆ. ಇದು 450 ಎಕ್ಸ್ ನಷ್ಟು ಮತ್ತು ಹೋಂಡಾ ಪಿಸಿಎಕ್ಸ್ ಎಲೆಕ್ಟ್ರಿಕ್ ಗಿಂತ ಎರಡು ಪಟ್ಟು ಹೆಚ್ಚಾಗಿದೆ.

ಇನ್ನು ರಿಸ್ಟ್ರೆಟ್ಟೊ 303 ಎಫ್ಎಸ್ ಇ-ಬೈಕನ್ನು ಚಾರ್ಜಿಂಗ್ ಮಾಡಲು ಸರಿಸುಮಾರು 5-6 ಗಂಟೆಗಳ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ. ಆದರೆ ಇದಕ್ಕಿಂತ ವೇಗವಾಗಿ ಚಾರ್ಜ್ ಮಾಡಲು ಅವಕಾಶವಿಲ್ಲ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಈ ಹೊಸ ಇ ಬೈಕಿನಲ್ಲಿ ಉತ್ತಮ ಬ್ರೇಕಿಂಗ್ ಸಿಸ್ಟಂ ಮತ್ತು ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇದರ ಸಸ್ಪೆಂಕ್ಷನ್ ಸೆಟ್ಪ್ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಬೀಫಿ ಟೆಲಿಸ್ಕೋಪಿಕ್ ಫೋರ್ಕ್‌ಗಳೊಂದಿಗೆ ಮತ್ತು ಹಿಂಭಾಗದಲ್ಲಿ ವಿಶಿಷ್ಟ ಡ್ಯುಯಲ್ ಶಾಕ್ ಸೆಟಪ್ ಅನ್ನು ಹೊಂದಿದೆ.

ಪ್ರಮುಖವಾಗಿ ಇದು ಅಧಿಕ ಪವರ್ ಹೊಂದಿರುವ ಇ-ಬೈಕ್ ಆಗಿರುವುದರಿಂದ ಅಷ್ಟೇ ಉತ್ತಮವಾದ ಬ್ರೇಕಿಂಗ್ ಸೆಟಪ್ ಅನ್ನು ಹೊಂದಿದೆ. ಮುಂಭಾಗದಲ್ಲಿ 203 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಕೂಡ 203 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.
MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ರಿಸ್ಟ್ರೆಟ್ಟೊ 303 ಎಫ್ಎಸ್ ಫೌಂಡರ್ ಎಡಿಷನ್ ಇ-ಬೈಕ್ ನಲ್ಲಿ ಡ್ಯುಯಲ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಿದ್ದಾರೆ, ನಂತರ ಎಲ್ಲಾ ಅಗತ್ಯ ಮಾಹಿತಿಯನ್ನು ಪ್ರದರ್ಶಿಸುವ ಬಣ್ಣದ ಎಲ್ಸಿಡಿ ಕನ್ಸೋಲ್ ಅನ್ನು ಹೊಂದಿದೆ,

ಇದರಲ್ಲಿ ಬ್ರ್ಯಾಂಡ್‌ನ ಅಪ್ಲಿಕೇಶನ್ ಅನ್ನು ಜೋಡಿಸಲು ಬ್ಲೂಟೂತ್ ಕನೆಕ್ಟಿವಿಟಿ ಪಡೆಯುವುದು ಮಾತ್ರವಲ್ಲ, ಗ್ರಾಹಕರು ತಮ್ಮ ಇ-ಬೈಕ್‌ಗಳಲ್ಲಿ ಜಿಪಿಎಸ್ / ಆಂಟಿ-ಥೆಫ್ಟ್ ಸಿಸ್ಟಮ್ ಅನ್ನು ಸಹ ಆರಿಸಿಕೊಳ್ಳಬಹುದು. ಆದರೆ ರಿಸ್ಟ್ರೆಟ್ಟೊ 303 ಎಫ್ಎಸ್ ಇ-ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.


Click it and Unblock the Notifications








