ಟೀ ಶರ್ಟ್ ಮೇಲೆ ಬೈಕ್ ನಂಬರ್ ಮುದ್ರಿಸಿಕೊಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಗ್ರಾಹಕರಿಗೆ ಬೈಕ್‌ಗಳಲ್ಲಿ ಆನ್‌ಲೈನ್ ಕಸ್ಟಮೈಸ್ ಆಯ್ಕೆಯನ್ನು ನೀಡಿದ ನಂತರ ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಉಡುಪುಗಳಲ್ಲಿಯೂ ಕಸ್ಟಮೈಸ್ ಸೌಲಭ್ಯವನ್ನು ನೀಡುತ್ತಿದೆ. ಇದಕ್ಕಾಗಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಮೇಕ್ ಇಟ್ ಯುವರ್ಸ್ ಯೋಜನೆಯನ್ನು ಆರಂಭಿಸಿದೆ.

ಟೀ ಶರ್ಟ್ ಮೇಲೆ ಬೈಕ್ ನಂಬರ್ ಮುದ್ರಿಸಿಕೊಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಈ ಯೋಜನೆಯಲ್ಲಿ ಗ್ರಾಹಕರು ಕಂಪನಿಯ ಉಡುಪುಗಳನ್ನು ಕಸ್ಟಮೈಸ್ ಮಾಡಿಕೊಂಡ ನಂತರ ವಿತರಣೆಯನ್ನು ಪಡೆಯಬಹುದು. ರಾಯಲ್ ಎನ್‌ಫೀಲ್ಡ್ ಉಡುಪುಗಳನ್ನು ರಾಯಲ್ ಎನ್‌ಫೀಲ್ಡ್ ಅಪ್ಯಾರಲ್ ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಖರೀದಿಸಬಹುದು.

ಟೀ ಶರ್ಟ್ ಮೇಲೆ ಬೈಕ್ ನಂಬರ್ ಮುದ್ರಿಸಿಕೊಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಲಭ್ಯವಿರುವ ಆಯ್ದ ಉತ್ಪನ್ನಗಳನ್ನು ಕಸ್ಟಮೈಸ್ ಮಾಡಬಹುದು. ಈ ಉತ್ಪನ್ನಗಳಲ್ಲಿ ಹೆಲ್ಮೆಟ್ ಹಾಗೂ ಟಿಶರ್ಟ್'ಗಳನ್ನು ಸಹ ಸೇರಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಟೀ ಶರ್ಟ್ ಮೇಲೆ ಬೈಕ್ ನಂಬರ್ ಮುದ್ರಿಸಿಕೊಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಟೀ ಶರ್ಟ್ ಹಾಗೂ ಹೆಲ್ಮೆಟ್‌ನ ಬಣ್ಣವನ್ನು ಮಾತ್ರವಲ್ಲದೇ ಅದರಲ್ಲಿರುವ ಗ್ರಾಫಿಕ್ಸ್ ಅನ್ನು ಸಹ ಬದಲಿಸಬಹುದು. ಟೀ ಶರ್ಟ್‌ನಲ್ಲಿರುವ ಪ್ರಿಂಟ್ ಅನ್ನು ಬದಲಿಸುವ ಆಯ್ಕೆಯನ್ನೂ ಸಹ ನೀಡಲಾಗಿದೆ.

ಟೀ ಶರ್ಟ್ ಮೇಲೆ ಬೈಕ್ ನಂಬರ್ ಮುದ್ರಿಸಿಕೊಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಈ ಅಪ್ಲಿಕೇಶನ್‌ನಲ್ಲಿ ಹೆಲ್ಮೆಟ್'ಗಾಗಿ ರೂ.3,200 ಹಾಗೂ ಟಿ-ಶರ್ಟ್'ಗಾಗಿ ರೂ. 1,250 ಆರಂಭಿಕ ಬೆಲೆಯನ್ನು ನಿಗದಿಪಡಿಸಲಾಗಿದೆ. ಈ ಅಪ್ಲಿಕೇಶನ್ ಮೂಲಕ ಖರೀದಿಸಲಾಗುವ ಉತ್ಪನ್ನಗಳನ್ನು 15-20 ದಿನಗಳಲ್ಲಿ ತಲುಪಿಸಲಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಟೀ ಶರ್ಟ್ ಮೇಲೆ ಬೈಕ್ ನಂಬರ್ ಮುದ್ರಿಸಿಕೊಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಮೇಕ್ ಇಟ್ ಯುವರ್ಸ್ ಯೋಜನೆಯನ್ನು ಕಳೆದ ವರ್ಷ ಮೆಟಿಯೊರ್ 350 ಹಾಗೂ 650 ಟ್ವಿನ್ ಬೈಕುಗಳೊಂದಿಗೆ ಆರಂಭಿಸಲಾಯಿತು. ರಾಯಲ್ ಎನ್‌ಫೀಲ್ಡ್‌ನ ಮೇಕ್ ಇಟ್ ಯುವರ್ಸ್ ಯೋಜನೆಯಡಿಯಲ್ಲಿ ಹೆಲ್ಮೆಟ್‌ಗಳಿಗಾಗಿ 7,000 ರೀತಿಯ ಕಸ್ಟಮೈಸ್ ಆಯ್ಕೆಗಳನ್ನು ನೀಡಲಾಗುತ್ತದೆ.

ಟೀ ಶರ್ಟ್ ಮೇಲೆ ಬೈಕ್ ನಂಬರ್ ಮುದ್ರಿಸಿಕೊಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಹೆಲ್ಮೆಟ್‌ನ ಬಣ್ಣವನ್ನು ಬದಲಿಸುವುದರ ಜೊತೆಗೆ, ಹೆಲ್ಮೆಟ್‌ನ ಸ್ಟಿಕ್ಕರ್ ಹಾಗೂ ಅದರಲ್ಲಿ ಬರೆಯಲಾದ ಸಂಖ್ಯೆಗಳನ್ನು ಸಹ ಬದಲಿಸಬಹುದು. ಕಂಪನಿಯು ಟಿ-ಶರ್ಟ್‌ನಲ್ಲಿ 15,000ಕ್ಕೂ ಹೆಚ್ಚು ಕಸ್ಟಮೈಸ್ ಆಯ್ಕೆಗಳನ್ನು ನೀಡುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಟೀ ಶರ್ಟ್ ಮೇಲೆ ಬೈಕ್ ನಂಬರ್ ಮುದ್ರಿಸಿಕೊಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಇವುಗಳಲ್ಲಿ ಟಿ-ಶರ್ಟ್‌ನಲ್ಲಿರುವ ಪ್ರಿಂಟ್, ಬರಹ, ಗ್ರಾಫಿಕ್ಸ್ ಹಾಗೂ ಬಣ್ಣ ಬದಲಾವಣೆಗಳು ಸೇರಿವೆ. ಬೈಕಿನ ಸಂಖ್ಯೆಯನ್ನು ಸಹ ಟಿ-ಶರ್ಟ್‌ನಲ್ಲಿ ಬರೆಸಬಹುದು. ಈ ಯೋಜನೆಯು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ ಎಂದು ಕಂಪನಿ ಹೇಳಿದೆ.

ಟೀ ಶರ್ಟ್ ಮೇಲೆ ಬೈಕ್ ನಂಬರ್ ಮುದ್ರಿಸಿಕೊಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ರಾಯಲ್ ಎನ್‌ಫೀಲ್ಡ್ ಕಂಪನಿಯು ಜನವರಿ ತಿಂಗಳಿನಿಂದ ತನ್ನ ಬೈಕುಗಳ ಬೆಲೆಯನ್ನು ರೂ.200ಗಳಿಂದ ರೂ.3,000ಗಳವರೆಗೆ ಹೆಚ್ಚಿಸಿದೆ. ಕಂಪನಿಯು ಮುಂಬರುವ ದಿನಗಳಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್, ಕ್ಲಾಸಿಕ್ 350 ಹಾಗೂ 650 ಟ್ವಿನ್ ಬೈಕುಗಳ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟೀ ಶರ್ಟ್ ಮೇಲೆ ಬೈಕ್ ನಂಬರ್ ಮುದ್ರಿಸಿಕೊಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಇತ್ತೀಚೆಗೆ ಕ್ಲಾಸಿಕ್ 350 ಹಾಗೂ ಕಾಂಟಿನೆಂಟಲ್ ಜಿಟಿ 650 ಬೈಕುಗಳ ಹೊಸ ಮಾದರಿಗಳನ್ನು ಪರೀಕ್ಷಿಸಲಾಗಿದೆ. 2020ರ ಡಿಸೆಂಬರ್‌ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 65,492 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ ಮಾರಾಟದಲ್ಲಿ 35%ನಷ್ಟು ಹೆಚ್ಚಳ ದಾಖಲಿಸಿದೆ.

Most Read Articles

Kannada
English summary
Royal Enfield introduces customizable apparel range under make it yours scheme. Read in Kannada.
Story first published: Friday, January 29, 2021, 11:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X