ನಮ್ಮ ಬೆಂಗಳೂರಿನಲ್ಲಿ ಉತ್ಪಾದನೆಗೊಂಡ ಹಿನ್ನಲೆ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ ವಿಶೇಷ ಬಣ್ಣದ ಆಯ್ಕೆ!

ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ಮೂಲದ ಸಿಂಪಲ್ ಎನರ್ಜಿ ಕಂಪನಿಯು ತನ್ನ ಬಹುನೀರಿಕ್ಷಿತ 'ಸಿಂಪಲ್ ಒನ್' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ವಿಶ್ವದಲ್ಲೇ ಅತಿ ಹೆಚ್ಚು ಮೈಲೇಜ್ ಹೊಂದಿರುವ ಇವಿ ಸ್ಕೂಟರ್ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಿದೆ.

ನಮ್ಮ ಬೆಂಗಳೂರಿನಲ್ಲಿ ಉತ್ಪಾದನೆಗೊಂಡ ಹಿನ್ನಲೆ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ ವಿಶೇಷ ಬಣ್ಣದ ಆಯ್ಕೆ!

ಭಾರತ ಸ್ವಾತಂತ್ರ್ಯ ದಿನಾಚರಣೆಯೆಂದೆ ಸಿಂಪಲ್ ಒನ್ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಓಲಾ ಎಸ್ ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪ್ರಬಲ ಪೈಪೋಟಿಯಾಗಿದೆ. ಹೊಸ ಇವಿ ಸ್ಕೂಟರ್ ಮಾದರಿಯು ತಾಂತ್ರಿಕ ಅಂಶಗಳಲ್ಲಿ, ಬ್ಯಾಟರಿ ರೇಂಜ್ ಮತ್ತು ಬೆಲೆ ವಿಚಾರವಾಗಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆ ಹೊಂದಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಇತರೆ ಎಲ್ಲಾ ಇವಿ ಸ್ಕೂಟರ್‌ಗಳಿಗೂ ಉತ್ತಮ ಪೈಪೋಟಿ ನೀಡಲಿದೆ.

ನಮ್ಮ ಬೆಂಗಳೂರಿನಲ್ಲಿ ಉತ್ಪಾದನೆಗೊಂಡ ಹಿನ್ನಲೆ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ ವಿಶೇಷ ಬಣ್ಣದ ಆಯ್ಕೆ!

ಒಂದೇ ವೆರಿಯೆಂಟ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಸಿಂಪಲ್ ಸ್ಕೂಟರ್ ಮಾದರಿಯು ಹೊಸ ಸ್ಕೂಟರ್ ಬೆಲೆಯನ್ನು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1,09,999ಕ್ಕೆ ನಿಗದಿಪಡಿಸಿದ್ದು, ನಮ್ಮ ಬೆಂಗಳೂರಿನಲ್ಲಿಯೇ ನಿರ್ಮಾಣವಾಗಿರುವ ಹೊಸ ಸ್ಕೂಟರ್ ಶೇ.90ರಷ್ಟು ಸ್ವದೇಶಿ ನಿರ್ಮಿತ ಬಿಡಿಭಾಗಗಳೊಂದಿಗೆ ಅಭಿವೃದ್ದಿ ಹೊಂದಿದೆ.

ನಮ್ಮ ಬೆಂಗಳೂರಿನಲ್ಲಿ ಉತ್ಪಾದನೆಗೊಂಡ ಹಿನ್ನಲೆ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ ವಿಶೇಷ ಬಣ್ಣದ ಆಯ್ಕೆ!

ಸ್ಟಾರ್ಟ್ಅಪ್ ಕಂಪನಿಯಾಗಿರುವ ಸಿಂಪಲ್ ಎನರ್ಜಿ ಕಂಪನಿಯು ಹಲವು ವರ್ಷಗಳ ಪ್ರಯತ್ನದ ನಂತರ ಸಿಂಪಲ್ ಒನ್ ಮಾದರಿಯನ್ನು ಹೊರತಂದಿದ್ದು, ಹೊಸ ಸ್ಕೂಟರ್ ಮಾದರಿಯನ್ನು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಅತ್ಯುತ್ತಮ ಮೈಲೇಜ್ ಪ್ರೇರಿತ ಬ್ಯಾಟರಿ ರೇಂಜ್ ಮತ್ತು ಕೈಗೆಟುವ ಬೆಲೆಯಲ್ಲಿ ಹೊಸ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.

ನಮ್ಮ ಬೆಂಗಳೂರಿನಲ್ಲಿ ಉತ್ಪಾದನೆಗೊಂಡ ಹಿನ್ನಲೆ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ ವಿಶೇಷ ಬಣ್ಣದ ಆಯ್ಕೆ!

ಇನ್ನೊಂದು ವಿಶೇಷ ಅಂದರೆ ಸಿಂಪಲ್ ಎನರ್ಜಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಮ್ಮ ಬೆಂಗಳೂರಿನಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದ ಸಂಭ್ರಮಕ್ಕಾಗಿ ಹೊಸ ಸ್ಕೂಟರ್‌ನಲ್ಲಿ 'ನಮ್ಮ ರೆಡ್' ಎನ್ನುವ ವಿಶೇಷ ಬಣ್ಣದ ಆಯ್ಕೆ ನೀಡಿದೆ.

ನಮ್ಮ ಬೆಂಗಳೂರಿನಲ್ಲಿ ಉತ್ಪಾದನೆಗೊಂಡ ಹಿನ್ನಲೆ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ ವಿಶೇಷ ಬಣ್ಣದ ಆಯ್ಕೆ!

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಗ್ರೆಸ್ ವೈಟ್, ಅಜ್ಯುರ್ ಬ್ಲ್ಯೂ, ಬ್ರೆನೆಜ್ ಬ್ಲ್ಯಾಕ್ ಮತ್ತು ನಮ್ಮ ರೆಡ್ ಬಣ್ಣಗಳ ಆಯ್ಕೆ ನೀಡಿದ್ದು, ಹೊಸ ಸ್ಕೂಟರ್‌ನಲ್ಲಿ ಬೆಲೆಗೆ ತಕ್ಕಂತೆ ಅತ್ಯುತ್ತಮ ಫೀಚರ್ಸ್‌, ಬ್ಯಾಟರಿ ರೇಂಜ್ ನೀಡಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಉತ್ಪಾದನೆಗೊಂಡ ಹಿನ್ನಲೆ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ ವಿಶೇಷ ಬಣ್ಣದ ಆಯ್ಕೆ!

ಸ್ವಾತಂತ್ರ್ಯ ಸಂಭ್ರಮದಲ್ಲಿ ಹೊಸ ಸ್ಕೂಟರ್ ಖರೀದಿಗಾಗಿ ರೂ.1947 ಮುಂಗಡ ಹಣದೊಂದಿಗೆ ಬುಕ್ಕಿಂಗ್ ಆರಂಭಿಸಿದ್ದು, ಹೊಸ ಸ್ಕೂಟರ್ ಮಾದರಿಯು ಮುಂಬರುವ ಅಕ್ಟೋಬರ್ ಮಧ್ಯಂತರದಲ್ಲಿ ಇಲ್ಲವೇ ನವೆಂಬರ್ ಆರಂಭದಲ್ಲಿ ವಿತರಣೆ ಆರಂಭವಾಗಲಿದೆ.

ನಮ್ಮ ಬೆಂಗಳೂರಿನಲ್ಲಿ ಉತ್ಪಾದನೆಗೊಂಡ ಹಿನ್ನಲೆ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ ವಿಶೇಷ ಬಣ್ಣದ ಆಯ್ಕೆ!

ಸಿಂಪಲ್ ಎನರ್ಜಿ ಕಂಪನಿಯು ದೇಶದ 13 ರಾಜ್ಯಗಳ ಪ್ರಮುಖ ನಗರಗಳಲ್ಲಿ ಸದ್ಯ ಮಾರಾಟ ಸೌಲಭ್ಯವನ್ನು ಆರಂಭಿಸುತ್ತಿದ್ದು, ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿದಂತೆ ಇವಿ ಸ್ಕೂಟರ್ ಮಾರಾಟ ಸೌಲಭ್ಯವು ಹಂತ-ಹಂತವಾಗಿ ದೇಶದ ಪ್ರಮುಖ ದೇಶಗಳಲ್ಲಿ ವಿಸ್ತರಣೆಯಾಗಲಿದೆ.

ನಮ್ಮ ಬೆಂಗಳೂರಿನಲ್ಲಿ ಉತ್ಪಾದನೆಗೊಂಡ ಹಿನ್ನಲೆ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ ವಿಶೇಷ ಬಣ್ಣದ ಆಯ್ಕೆ!

ಇನ್ನು ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಸ್ಕೂಟರ್‌ನಲ್ಲಿ ತ್ರಿಕೊನಾಕಾರದ ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಹೆಡ್‌‌ಲ್ಯಾಂಪ್, ಸೈಡ್ ಬೈ ಟರ್ನ್ ಸಿಗ್ನಲ್ ಇಂಡಿಕೇಟರ್, ಫ್ಲ್ಯಾಟ್ ಫುಟ್‌ಬೋರ್ಡ್, ಅಯಾಲ್ ವ್ಹೀಲ್, ಸ್ಪೋರ್ಟಿ ರಿಯರ್ ವ್ಯೂ ಮಿರರ್, 30-ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಹೊಂದಿದೆ.

ನಮ್ಮ ಬೆಂಗಳೂರಿನಲ್ಲಿ ಉತ್ಪಾದನೆಗೊಂಡ ಹಿನ್ನಲೆ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ ವಿಶೇಷ ಬಣ್ಣದ ಆಯ್ಕೆ!

ಹೊಸ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ 4.5KW ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 4.8kWh ಲೀಥಿಯಂ ಅಯಾನ್ ಬ್ಯಾಟರಿ(ಡ್ಯುಯಲ್ ಬ್ಯಾಟರಿ) ಜೋಡಣೆ ಮಾಡಿದ್ದು, ಪ್ರತಿ ಚಾರ್ಚ್‌ಗೆ ವಿವಿಧ ರೈಡ್ ಮೋಡ್‌ಗಳ ಚಾಲನಾ ಶೈಲಿ ಆಧಾರದ ಮೇಲೆ ಕನಿಷ್ಠ 203 ಕಿ.ಮೀ ನಿಂದ ಗರಿಷ್ಠ 236 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ನಮ್ಮ ಬೆಂಗಳೂರಿನಲ್ಲಿ ಉತ್ಪಾದನೆಗೊಂಡ ಹಿನ್ನಲೆ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ ವಿಶೇಷ ಬಣ್ಣದ ಆಯ್ಕೆ!

ಪ್ರತಿ ಗಂಟೆಗೆ 105 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ಸಿಂಪಲ್ ಒನ್ ಸ್ಕೂಟರ್ 72 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 2.95 ಸೆಕೆಂಡುಗಳಲ್ಲಿ ಸೊನ್ನೆಯಿಂದ 40ಕಿ.ಮೀ ಕ್ವಿಕ್ ಸ್ಪೀಡ್ ಪಡೆದುಕೊಳ್ಳಲಿದ್ದು, ಹೊಸ ಸ್ಕೂಟರ್ ಅನ್ನು ಸಿಂಪಲ್ ಕಂಪನಿಯು ಟ್ಯೂಬಲರ್ ಫ್ರೆಮ್ ಬಳಕೆ ಮಾಡಿದೆ.

ನಮ್ಮ ಬೆಂಗಳೂರಿನಲ್ಲಿ ಉತ್ಪಾದನೆಗೊಂಡ ಹಿನ್ನಲೆ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ ವಿಶೇಷ ಬಣ್ಣದ ಆಯ್ಕೆ!

ಜೊತೆಗೆ ಸಿಂಪಲ್ ಒನ್ ಸ್ಕೂಟರ್ ಮಾದರಿಯಲ್ಲಿ 1024x600 ಫಿಕ್ಸೆಲ್ ಹೊಂದಿರುವ 7 ಇಂಚಿನ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂಥ್ ಮತ್ತು 4ಜಿ ಇಂಟರ್‌ನೆಟ್ ಸಂಪರ್ಕಕ್ಕಾಗಿ ಕನೆಕ್ಟೆಡ್ ಟೆಕ್ನಾಲಜಿ ನೀಡಲಾಗಿದೆ. ಕನೆಕ್ಟೆಡ್ ಫೀಚರ್ಸ್‌ನಲ್ಲಿ ಜಿಯೋ ಫೆನ್ಸಿಂಗ್, ಮ್ಯೂಜಿಕ್ ಕಂಟ್ರೋಲ್, ಎಸ್ಒಎಸ್ ಮೆಸೇಜ್, ವೆಹಿಕಲ್ ಟ್ರ್ಯಾಕಿಂಗ್, ಡ್ಯಾಕುಮೆಂಟ್ ಸ್ಟೋರೇಜ್, ಫೈಂಡ್ ಮೈ ಬೈಕ್ ಸೌಲಭ್ಯಗಳಿವೆ.

ನಮ್ಮ ಬೆಂಗಳೂರಿನಲ್ಲಿ ಉತ್ಪಾದನೆಗೊಂಡ ಹಿನ್ನಲೆ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ ವಿಶೇಷ ಬಣ್ಣದ ಆಯ್ಕೆ!

ಇನ್ನು ಹೊಸ ಸ್ಕೂಟರಿನಲ್ಲಿರುವ ಡ್ಯುಯಲ್ ಬ್ಯಾಟರಿ ಸೌಲಭ್ಯವು ಪೂರ್ತಿಯಾಗಿ ಚಾರ್ಜ್ ಆಗಲು ಒಟ್ಟು 225 ನಿಮಿಷಗಳನ್ನು(3 ಗಂಟೆ 45 ನಿಮಿಷ) ತೆಗೆದುಕೊಳ್ಳಲಿದ್ದು, ಸಿಂಪಲ್ ಎನರ್ಜಿ ಕಂಪನಿಯು ಸಿಂಪಲ್ ಲೂಪ್ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯೊಂದಿಗೆ ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದು.

ನಮ್ಮ ಬೆಂಗಳೂರಿನಲ್ಲಿ ಉತ್ಪಾದನೆಗೊಂಡ ಹಿನ್ನಲೆ ಸಿಂಪಲ್ ಒನ್ ಇವಿ ಸ್ಕೂಟರ್‌ನಲ್ಲಿ ವಿಶೇಷ ಬಣ್ಣದ ಆಯ್ಕೆ!

ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕಾಗಿ ಕಂಪನಿಯು ದೇಶದ ಪ್ರಮುಖ 300 ನಗರಗಳಲ್ಲಿ ಸಿಂಪಲ್ ಲೂಪ್ ಟೆಕ್ನಾಲಜಿ ಪ್ರೇರಿತ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪನೆ ಮಾಡುತ್ತಿದ್ದು, ರೆಸ್ಟೊರೆಂಟ್‌ಗಳು, ಮಾಲ್, ಶಾಂಪಿಂಗ್ ಕಾಪ್ಲೆಕ್ಸ್‌‌ಗಳ ಪಾರ್ಕಿಂಗ್ ಸ್ಥಳಗಳಲ್ಲಿ ಸಹಭಾಗಿತ್ವದೊಂದಿಗೆ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲಿದೆ.

Most Read Articles

Kannada
English summary
Simple one electric scooter specification and namma red colors details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X